Headlines

ಆಳ್ವಾಸ್ ವಿದ್ಯಾರ್ಥಿಸಿರಿಯ ಹೈಲೈಟ್ಸ್… * ಬಾಲಪ್ರತಿಭೆ ಪ್ರದರ್ಶನ * ಬಸದಿಗಳ ನಾಡಲ್ಲಿ ಕನ್ನಡದ ಬಾವುಟ… ಹೊತ್ತಿತೋ…ಹೊತ್ತಿತು ಕನ್ನಡದ ದೀಪ… * ನುಡಿಸಿರಿಯ ಸರ್ವಾಧ್ಯಕ್ಷರ ಎಕ್ಸ್ ಕ್ಲೂಸಿವ್ ಸಂದರ್ಶನ * ಹನ್ನೆರಡು ಸಾಧಕರಿಗೆ 2018ರ ಆಳ್ವಾಸ್ ನುಡಿಸಿರಿ ಪುರಸ್ಕಾರ * ನುಡಿಸಿರಿಯ ಅಂಗಳದಲ್ಲಿ ಅಚ್ಚರಿಯ ಮೇಲೊಂದಚ್ಚರಿ! * ನುಡಿಸಿರಿಯ ಅಂಗಳದಲ್ಲೊಂದು ಸುದ್ದಿಮನೆ! * ಆಳ್ವಾಸ್ ವಿದ್ಯಾರ್ಥಿಸಿರಿ 2018 ಆರಂಭ * ಕಣ್ಣುತೆರೆಸಿದ ಜವನೆರ್ ಬೆದ್ರ ಸಂಘಟನೆ * ಯೋಧರ ಮನೆಯಲ್ಲಿ ಬೆಳಗಿದ ದೀಪ! * ಯಶಸ್ವೀ 36ನೇವಾರ ಪೂರೈಸಿದ ಕ್ಲೀನ್ ಅಪ್ ಮೂಡಬಿದಿರೆ * ರಾಜ್ಯಮಟ್ಟದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟ ಆರಂಭ * ಅಳಿಯೂರಿನಲ್ಲಿ ಮೇಳೈಸಲಿದೆ ಕ್ರೀಡಾಹಬ್ಬ.! * ರಾಷ್ಟ್ರಮಟ್ಟಕ್ಕೆ ಆಯ್ಕೆಯಾಯ್ತು ಹಳ್ಳಿ ಹುಡುಗರ ಅನ್ವೇಷಣೆ! * ಶಿರ್ಲಾಲು: ಹೊಸ ಶಾಸನ ಪತ್ತೆ * ಸಾವಿರ ಕಂಬದ ಬಸದಿಯ ಸ್ವಚ್ಛತೆ * ಪುರಸಭೆಯ ಕಣ್ಣುತೆರೆಸಿದ ಜವನೆರ್ ಬೆದ್ರ! * ಪುರಸಭೆಗೆ ಸಾರ್ವಜನಿಕರಿಂದ ಹಿಡಿಶಾಪ * ಕಾರ್ಯಾಂಗ,ನ್ಯಾಯಾಂಗ,ಶಾಸಕಾಂಗದ ವೈಫಲ್ಯದ ವಿರುದ್ಧ ಹೋರಾಟ: ಸುದರ್ಶನ್ * ಬೆಸ್ಟ್ ಡ್ರಾಮೇಬಾಜ್ ಖ್ಯಾತಿಯ ಶ್ರೀಶ ಬೆಂಗಳೂರು ಅವರಿಗೆ ಗೌರವ ಸನ್ಮಾನ *

ಶಿರ್ಲಾಲು: ಹೊಸ ಶಾಸನ ಪತ್ತೆ

shasana

ನಮ್ಮ ಪ್ರತಿನಿಧಿ ವರದಿ
ಕಾರ್ಕಳ: ತಾಲ್ಲೂಕಿನ  ಶಿರ್ಲಾಲು ಗ್ರಾಮ ಪಂಚಾಯತಿಗೆ ಸೇರುವ ಹಾಡಿಯಂಗಡಿ ಪ್ರದೇಶದಲ್ಲಿ 14ನೇ ಶತಮಾನದ ಹೊಸ ಶಾಸನವನ್ನು ಇತಿಹಾಸ ಮತ್ತು ಪುರಾತತ್ವ ವಿದ್ಯಾರ್ಥಿ ಗಳಾದ ಶ್ರುತೇಶ್ ಆಚಾರ್ಯ ಮೂಡುಬೆಳ್ಳೆ ಹಾಗೂ ಸುಭಾಸ್ ನಾಯಕ್ ಬಂಟಕಲ್ಲು ಅವರು ಪತ್ತೆ ಮಾಡಿರುತ್ತಾರೆ. ಈ ಕ್ಷೇತ್ರಕಾರ್ಯ ಅನ್ವೇಷಣೆಗೆ ಶಿರ್ಲಾಲು ಗ್ರಾಮ ಪಂಚಾಯತ್ ಮಾಜಿ ಸದಸ್ಯ ವಿಠಲ ಆಚಾರ್ಯ ಹಾಗೂ  ಹರೀಶ್ ಆಚಾರ್ಯ ಪಡಿಬೆಟ್ಟು-ಶಿರ್ಲಾಲು ಇವರು ಸಹಕಾರವನ್ನು ನೀಡಿರುತ್ತಾರೆ. ಶಾಸನ ಪಡಿಯಚ್ಚಿನ ಮೊದಲ ಪ್ರತಿಯನ್ನು ಪ್ರಾಚ್ಯಸಂಚಯ ಸಂಶೋಧನ ಕೇಂದ್ರ-ಉಡುಪಿ ಇಲ್ಲಿ ಸಂರಕ್ಷಣೆಗೆ ನೀಡಲಾಗಿದೆ.
ಈ ಶಾಸನವು ಅಪ್ಪು ಶೇರಿಗಾರ ಇವರ ಗದ್ದೆಯ ಬದುವಿನಲ್ಲಿ ಸಂಪೂರ್ಣವಾಗಿ ಭೂಗತವಾಗಿದ್ದು, ಮಣ್ಣನ್ನು ತೆರವುಗೊಳಿಸಿ ನಂತರ ಶಾಸನದ ಪಡಿಯಚ್ಚು ತೆಗೆಯುವುದರ ಮೂಲಕ ಓದಲಾಗಿದೆ. ಶಾಸನವು 71 ಸೆಂ. ಮೀ ಉದ್ದ, 42 ಸೆಂ. ಮೀ ಅಗಲ ಹಾಗೂ 8 ಸೆಂ. ಮೀ ದಪ್ಪವನ್ನು ಹೊಂದಿದೆ. 22 ಸಾಲುಗಳನ್ನು ಹೊಂದಿರುವ ಶಾಸನವು ಕನ್ನಡ ಲಿಪಿಯಲ್ಲಿದ್ದು, ಸಂಸ್ಕೃತ ಭಾಷೆ ಮತ್ತು ಕನ್ನಡ ಭಾಷೆಯನ್ನು ಒಳಗೊಂಡಿದೆನ.
ಬಳಪದ ಕಲ್ಲಿನಿಂದ ಮಾಡಲ್ಪಟ್ಟಿರುವ ಈ ದಾನ ಶಾಸನವು ಮೇಲ್ಭಾಗದಲ್ಲಿ ಸೂರ್ಯ-ಚಂದ್ರ, ಖಡ್ಗ, ಕಾಲುದೀಪ, ಶಿವಲಿಂಗ ಮತ್ತು ನಂದಿಯ ಕೆತ್ತನೆಯನ್ನು ಹೊಂದಿದೆ. ನಂತರದಲ್ಲಿ ಶಾಸನದ ಪಾಠವನ್ನು ಕಾಣಬಹುದು. ಶಾಸನದಲ್ಲಿ ಶಕವರುಷ 1312, (ಕ್ರಿಸ್ತ ಶಕೆಗೆ ಪರಿವರ್ತಿಸಿದಾಗ 1390 ಕ್ಕೆ ಸರಿ ಹೊಂದುತ್ತದೆ) ಅರಸ, ಸ್ಥಳನಾಮ ಹಾಗೂ ದಾನದ ಮಾಹಿತಿಯನ್ನು ಒಳಗೊಂಡಿದೆ.
ಶಕವರುಷ 1312 ರ ಕಾರ್ತಿಕ ಶುದ್ದ 15 ಗುರುವಾರದಂದು ಅರಿರಾಯ ಗಂಡರ ದಾವಣಿ ಶ್ರೀ ವೀರ ಚೆನ್ನರಸ (ಚೆಂನರಸ) ಒಡೆಯರು ಹಾಗೂ ಭಾರದ್ವಾಜ ಗೋತ್ರದ ತಮ್ಮಣ್ಣ (ತಂಮ್ಮಂಣ್ನ) ಸಿನಬಾವರ ಮಗ ಪಾಂಡ್ಯಪ್ಪ ಅರಸರು ‘ಸಿರುವಳಲ’ (ಶಿರ್ಲಾಲು?) ಒಳಗೆ ಬಾರಕೂರ ಹೊರಗಣ ಸೋಮೇಶ್ವರ ದೇವರ ನಂದಾದೀವಿಗೆ ಮೂರು ‘ಕಾಟಿ ಗದ್ಯಾಣ’ವನ್ನು ದಾನ ನೀಡಿರುವ ವಿವರವನ್ನು ಶಾಸನದಲ್ಲಿ ಕಾಣಬಹುದು.
ವಿಜಯನಗರ ಅರಸರ ಪ್ರಾಬಲ್ಯ ಬಾರಕೂರು ಪ್ರದೇಶದಲ್ಲಿ ಹೆಚ್ಚು ಕಂಡು ಬಂದ ಹಾಗೆ ಈ ಸ್ಥಳಗಳಲ್ಲಿ ಇಲ್ಲಿನ ಸ್ಥಳೀಯ ಅರಸರ ಪ್ರಾಬಲ್ಯ ಹೆಚ್ಚಾಗಿತ್ತು ಎನ್ನುವುದು ಇತಿಹಾಸಕಾರರಾದ ಡಾ. ಜಗದೀಶ್ ಶೆಟ್ಟಿ (ಪ್ರಾಂಶುಪಾಲರು, ಪೂರ್ಣ ಪ್ರಜ್ಞ ಕಾಲೇಜು-ಉಡುಪಿ) ಅವರ ಅಭಿಪ್ರಾಯವಾಗಿದೆ. ಶಾಸನದಲ್ಲಿ ಉಲ್ಲೇಖಿತವಾಗಿರುವ ‘ಸಿರುವಳಲು’ ಎಂಬ ಸ್ಥಳವು ಇಂದು ‘ಶಿರ್ಲಾಲು’ ಆಗಿ ಪರಿವರ್ತನೆ ಆಗಿರಬಹುದೆಂದು ಶ್ರುತೇಶ್ ಆಚಾರ್ಯ ಮೂಡುಬೆಳ್ಳೆ ಹಾಗೂ ಸುಭಾಸ್ ನಾಯಕ್ ಬಂಟಕಲ್ಲು ಅವರು ಶಾಸನದ ಆಧಾರದ ಮೇಲೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.