Headlines

ಕಂಬಳಸಮಿತಿ ಸಭೆ * 30ನೇವಾರದ ಕ್ಲೀನ್ ಅಪ್ ಮೂಡಬಿದಿರೆ * ಸ್ವಚ್ಛತಾ ದಿನಾಚರಣರೆ * ಶಾಸಕ ಉಮಾನಾಥ್ ಎ.ಕೋಟ್ಯಾನ್ ವಿಶೇಷ ಸಂದರ್ಶನ * ಸಮ್ಮೇಳನದ ಸರ್ವಾಧ್ಯಕ್ಷರಾಗಿ ಡಾ. ಮಲ್ಲಿಕಾ ಎಸ್.ಘಂಟಿ, ಉದ್ಘಾಟಕರಾಗಿ ಡಾ.ಷ. ಶೆಟ್ಟರ್ * ಫಲವಿತರಿಸಿ ಹುಟ್ಟುಹಬ್ಬ ಆಚರಣೆ * ನುಡಿಸಿರಿಯಲ್ಲೊಂದು ಕೃಷಿಸಿರಿ:ಡಾ.ಆಳ್ವ * ಹುಲಿ-ಸ್ವಚ್ಛತೆಯೂ -ಗಣೇಶೋತ್ಸವವೂ-ಪುರಸಭೆಯೂ! * ಗಣೇಶ ದರ್ಶನ… * ಮೂಡಬಿದಿರೆಯಲ್ಲಿ ಗಣೇಶೋತ್ಸವದ ಗೌಜಿ ಶುರು… * 28ನೇ ವಾರದ ಸ್ವಚ್ಛತಾ ಅಭಿಯಾನ * ಈ ಕರ್ಮಕಾಂಡಕ್ಕೆ ಯಾರು ಬಲಿ…? * `ಗುಣಮಟ್ಟದ ಶಿಕ್ಷಣ-ಸೂಕ್ತ ಉದ್ಯೋಗಕ್ಕೆ ಒತ್ತು’ * 27ನೇ ವಾರದ ಕ್ಲೀನ್ ಅಪ್ ಮೂಡಬಿದಿರೆ ಸಂಪನ್ನ * ನಮ್ಮ ಹೆಮ್ಮಕ್ಕಳು ಅದೆಷ್ಟು ಸುರಕ್ಷಿತ…? * ಮನಮೋಹಕ ನೃತ್ಯ ಸಿಂಚನ * ಸ್ವಚ್ಛ ಸರ್ವೇಕ್ಷಣ ಗ್ರಾಮೀಣ 2018 * ಆಧುನಿಕತೆಯೇ ಮುಳುವಾಯಿತೇ…? * ನಾಟ್ಯ ಮಯೂರಿ… * ನವೆಂಬರ್ 16-18: ಆಳ್ವಾಸ್ ನುಡಿಸಿರಿ *

ಶಾಸಕ v/s ಸಚೇತಕ…?!

#congress#vaarte#news

ಕುತೂಹಲಕ್ಕೆ ಕಾರಣವಾಗಿದೆ ಮೂಡಬಿದಿರೆ ವಿಧಾನ ಸಭಾ ಕ್ಷೇತ್ರ

 ಹರೀಶ್ ಕೆ.ಆದೂರು
ಪ್ರತಿಷ್ಠಿತ ವಿಧಾನ ಸಭಾ ಕ್ಷೇತ್ರವೆಂದೇ ಖ್ಯಾತಿ ಪಡೆದ ಮುಲ್ಕಿ ಮೂಡಬಿದಿರೆ ಕ್ಷೇತ್ರ ಇದೀಗ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ಹಾಲಿ ಶಾಸಕ ಕೆ.ಅಭಯಚಂದ್ರ ಜೈನ್ ಈ ಕ್ಷೇತ್ರದಿಂದ ಸ್ಪರ್ಥಿಸಿ ಗೆದ್ದು ಮೂಲ್ಕಿ ಮೂಡಬಿದಿರೆ ಕ್ಷೇತ್ರದ ಶಾಸಕರಾಗಿ ಮುಂದುವರಿಯುತ್ತಿದ್ದಾರೆ. 1992 ಡಿಸೆಂಬರ್ 24ರಂದು ಅಧಿಕೃತವಾಗಿ ಜನಪ್ರತಿನಿಧಿಯಾಗಿ ವಿಧಾನ ಸೌಧಕ್ಕೆ ಪ್ರವೇಶಿಸಿದ ಅಭಯಚಂದ್ರ ಜೈನ್ 2017ರ ಡಿಸೆಂಬರ್ 24ಕ್ಕೆ ತಮ್ಮ ರಾಜಕೀಯ ಜೀವನದಲ್ಲಿ ಅಮೋಘ 25ವರ್ಷಗಳನ್ನು ಪೂರೈಸಿದರು. 4ಬಾರಿ ಎಂ.ಎಲ್.ಎ, 2ಬಾರಿ ಎಂ.ಎಲ್.ಸಿ.ಯಾಗಿ ಕ್ಷೇತ್ರವನ್ನು ಪ್ರತಿನಿಧಿಸಿ ಜನಮನ್ನಣೆಗೆ ಪಾತ್ರರಾಗಿದ್ದಾರೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಈ ಕ್ಷೇತ್ರದಲ್ಲಿ ಯಾರು ಅಭ್ಯರ್ಥಿಯಾಗಿ ಚುನಾವಣೆ ಎದುರಿಸಲಿದ್ದಾರೆ ಎಂಬ ಕುತೂಹಲ ಸಹಜವಾಗಿಯೇ ಮೂಡತೊಡಗಿದೆ.
ಏನೀ ಕುತೂಹಲ…?
ಮೂಲ್ಕಿ ಮೂಡಬಿದಿರೆ ವಿಧಾನ ಸಭಾ ಕ್ಷೇತ್ರ ಕಾಂಗ್ರೆಸ್ ಪಕ್ಷದ ಭದ್ರಕೋಟೆಯೆಂದೇ ಬಿಂಭಿಸಲ್ಪಟ್ಟಿದೆ. ಜೆ.ಡಿ.ಎಸ್ ಪಕ್ಷದ ಹಿರಿಯ ನಾಯಕ ಕೆ.ಅಮರನಾಥ ಶೆಟ್ಟಿವರ ತೆಕ್ಕೆಯೊಳಗಿದ್ದ ಈ ಕ್ಷೇತ್ರವನ್ನು ಕಾಂಗ್ರೆಸ್ ತನ್ನ ತೆಕ್ಕೆಗೆ ಹಾಕಿಕೊಂಡು ಮುಂದೆ ಕಾಂಗ್ರೆಸ್ನ ಭದ್ರಕೋಟೆಯಾಗಿಯೇ ಮುಂದುವರಿಸಿಕೊಂಡು ಬಂದಿದೆ.
ಏತನ್ಮಧ್ಯೆ ಹಲವು ಕಾರಣಗಳನ್ನು ಮುಂದಿಟ್ಟು ಹಾಲಿ ಶಾಸಕ ಕೆ.ಅಭಯಚಂದ್ರ ಜೈನ್ `ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಮೂಡಬಿದಿರೆ ಕ್ಷೇತ್ರದಿಂದ ನಾನು ಸ್ಪರ್ಧಿಸುವುದಿಲ್ಲ’ ಎಂಬ ಬಹಿರಂಗ ಹೇಳಿಕೆಯೊಂದನ್ನು ಹೊರಡಿಸಿದ್ದೂ ಅಲ್ಲದೆ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಅವರನ್ನು ಈ ಕ್ಷೇತ್ರದಿಂದ ಕಣಕ್ಕಿಳಿಸುವ ಮಾಹಿತಿಯನ್ನೂ ಬಹಿರಂಗ ಪಡಿಸಿದರು. ಇದುವೇ ಈ ಎಲ್ಲಾ ಕುತೂಹಲಕ್ಕೆ ಮೂಲ ಕಾರಣವಾಯಿತು…
ಐವನ್ ಎಂಟ್ರಿ:
ಶಾಸಕ ಅಭಯಚಂದ್ರ ಜೈನ್ ಅವರ ಹೇಳಿಕೆ ಹೊರಬೀಳುತ್ತಲೇ ಸರಕಾರದ ಮುಖ್ಯ ಸಚೇತಕ ಐವನ್ ಡಿ’ಸೋಜ ಮೂಡಬಿದಿರೆ ಕ್ಷೇತ್ರದತ್ತ ಕಣ್ಣು ನೆಟ್ಟರು. ಮೂಡಬಿದಿರೆಯಲ್ಲಿ ದೊಡ್ಡ ಸಭಾ ಭವನ ಹೊಂದಿರುವ ತನ್ನ ಅಧಿಕೃತ ಕಚೇರಿಯನ್ನು ತೆರೆದು ವಾರಕ್ಕೆ ಎರಡೋ ಮೂರೋ ದಿನ ಮೊಕ್ಕಾಂ ಹೂಡತೊಡಗಿದರು. `ಜನಸ್ಪಂದನಾ’ಕಚೇರಿಯ ಮೂಲಕ ಮೂಡಬಿದಿರೆಯಲ್ಲಿ ತನ್ನ ಛಾಪು ಮೂಡಿಸಲು ಪ್ರಯತ್ನ ಆರಂಭಿಸಿದರು. ಸರಕಾರದ ವಿವಿಧ ಸವಲತ್ತುಗಳನ್ನು ಜನತೆಗೆ ತಲುಪಿಸುವ ಉದ್ದೇಶದಿಂದ ಕಚೇರಿ ತೆರೆಯಲಾಗಿದೆ ಎಂಬ ಹೇಳಿಕೆಯನ್ನು ನೀಡಲಾರಂಭಿಸಿದರು. ಇಷ್ಟೇ ಅಲ್ಲದೆ ಪತ್ರಿಕಾ ಗೋಷ್ಠಿಯನ್ನೂ ಕರೆದು ತಾನೂ ಈ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಎಂದು ಸಾರಿದರು…!
ಕಾಂಗ್ರೆಸ್ ಒಳಗೆ ಭಿನ್ನಮತ:
ಇದೇ ವೇಳೆ ಕಾಂಗ್ರೆಸ್ ಪಕ್ಷದೊಳಗೆ `ಬಣ ರಾಜಕೀಯ’ ಕಾಣಿಸತೊಡಗಿದೆ. ಮೂಡಬಿದಿರೆಯಲ್ಲಿ ಶಾಸಕ ಕೆ.ಅಭಯಚಂದ್ರ ಜೈನ್ ಅವರ ಬೆಂಬಲಿಗರ ಬಣವೊಂದಿದ್ದರೆ, ಇತ್ತ ಈ ಕ್ಷೇತ್ರದತ್ತ ದೃಷ್ಠಿನೆಟ್ಟ ಐವನ್ ಡಿ’ಸೋಜ ಅವರ ಬೆಂಬಲಿಗರ ಬಣವೊಂದು ಕಾರ್ಯಪ್ರವೃತ್ತವಾಯಿತು. ಕಳೆದ ಕೆಲ ಸಮಯಗಳಿಂದ ಶಾಸಕ ಕೆ.ಅಭಯಚಂದ್ರ ಜೈನ್ ಹಲವು ಪ್ರದೇಶಗಳಲ್ಲಿ ಮಿಂಚಿನ ಸಂಚಾರ ನಡೆಸಿ ಗ್ರಾಮೀಣ ರಸ್ತೆಗಳ ಕಾಂಕ್ರಿಟೀಕರಣ,ಡಾಮರೀಕರಣಕ್ಕೆ ಒತ್ತು ನೀಡಿ ಕೆಲಸ ಪ್ರಾರಂಭಿಸಿದರೆ, ಐವನ್ ಡಿ’ಸೋಜ ತನ್ನ ಪ್ರಯತ್ನದಿಂದ ಹಲವು ಕಡೆಗಳಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾರಂಬಿಸಿದರು. ಒಟ್ಟಿನಲ್ಲಿ ಶಾಸಕ ಕೆ.ಅಭಯಚಂದ್ರ ಜೈನ್ ರಿಗೆ ಶುಭಾಶಯ ನೀಡುವ ಫ್ಲೆಕ್ಸ್ ಒಂದೆಡೆಯಿದ್ದರೆ,ಐವನ್ ಡಿ’ಸೋಜಾರನ್ನು ಬೆಂಬಲಿಸಿ ಅಭಿನಂದಿಸುವ ಫ್ಲೆಕ್ಸ್ ಹಲವು ಕಡೆ ರಾರಾಜಿಸಲಾರಂಭಿಸಿದವು!
ರಿಕ್ಷಾ ಪಾರ್ಕ್ ನಿರ್ಮಾಣ
ಈ ತನಕ ಮೂಡಬಿದಿರೆ ನಗರವೂ ಸೇರಿದಂತೆ ಬಹುತೇಕ ಕಡೆಗಳಲ್ಲಿ ಮರದ ಕೆಳಗೆಯೋ, ಬಿಸಿಲಲ್ಲೂ ನಿಲ್ಲಿಸುತ್ತಿದ್ದ ರಿಕ್ಷಾ ಚಾಲಕ, ಮಾಲಕರು `ಕಾಂಗ್ರೆಸ್ ರಾಜಕೀಯ’ದಿಂದಾಗಿ ಸೂರು ಕಂಡುಕೊಳ್ಳುವಂತಾದರು. ಮೂಡಬಿದಿರೆ ಪಟ್ಟಣವೂ ಸೇರಿದಂತೆ ಹಲವು ಕಡೆಗಳಲ್ಲಿ ಶಾಸಕ ಕೆ.ಅಭಯಚಂದ್ರ ಜೈನ್, ಮುಖ್ಯ ಸಚೇತಕ ಐವನ್ ಡಿ’ಸೋಜ ತಾಮುಂದು ನಾಮುಂದು ಎಂದು ರಿಕ್ಷಾ ಪಾಕರ್್ಗಳ ಸೂರು ನಿಮರ್ಿಸಿ ದೊಡ್ಡದಾಗಿ ಫಲಕ ಹಾಕಿಕೊಳ್ಳಲಾರಂಬಿಸಿದರು.
ಸಮೀಕ್ಷೆ ಏನೆನ್ನುತ್ತಿದೆ..?
ಚುನಾವಣಾ ಪೂರ್ವ ಸಮೀಕ್ಷೆಯೊಂದು ಈಗಾಗಲೇ ನಡೆದಿದ್ದು ಈ ಪ್ರದೇಶದಲ್ಲಿ ಅಭ್ಯರ್ಥಿಯ ಬದಲಾವಣೆಗೆ ಸೂಚಿಸಲಾಗಿದೆ ಎಂಬ ಮಾಹಿತಿಯೊಂದು ಕೇಳಿಬಂದಿದೆ. ಇದರ ಲೆಕ್ಕಾ ಚಾರವನ್ನು ಮುಂದಿಟ್ಟುಕೊಂಡು ಐವನ್ ಡಿ’ಸೋಜ ಈ ಕ್ಷೇತ್ರದತ್ತ ತನ್ನ ಚಿತ್ತವನ್ನು ನೆಟ್ಟಿದ್ದಾರೆ. ಇಷ್ಟೇ ಅಲ್ಲದೆ ಇಲ್ಲಿರುವ ಕ್ರೈಸ್ತ ಸಮುದಾಯದ ಮತಗಳನ್ನು ತನ್ನತ್ತ ಸೆಳೆಯುವ ಲೆಕ್ಕಾಚಾರವೂ ಅವರಿಗಿದೆ. ಈಗಾಗಲೇ ಕ್ರೈಸ್ತ ಸಮುದಾಯವೊಂದು ಕಾಂಗ್ರೆಸ್ ಹೈಕಮಾಂಡ್ ಮುಂದೆ ಐವನ್ ಡಿ’ಸೋಜ ಅವರಿಗೆ ಟಿಕೆಟ್ ನೀಡುವಂತೆ ವಿನಂತಿಸಿದೆ ಎಂಬ ಮಾಹಿತಿಯೂ ಲಭ್ಯವಾಗಿದೆ. ಒಟ್ಟಿನಲ್ಲಿ ಮುಲ್ಕಿ ಮೂಡಬಿದಿರೆ ಕ್ಷೇತ್ರ ಕಾಂಗ್ರೆಸ್ ಪಕ್ಷದ ಪ್ರತಿಷ್ಠಿತ ಕ್ಷೇತ್ರವಾಗಿದ್ದು ಯಾರ ಪಾಲಿಗೆ `ಟಿಕೆಟ್’ಲಭ್ಯವಾಗುತ್ತದೆ ಎಂಬ ಕುತೂಹಲ ಮೂಡಿಸಿದೆ.

ಮುಖ್ಯಮಂತ್ರಿ ಆಗಮನ
ಇದೇ 7ರಂದು ಮುಖ್ಯಮಂತ್ರಿಗಳ ಆಗಮನ ಮೂಡಬಿದಿರೆಗಾಗಲಿದ್ದು ಅದರ ಸಂಪೂರ್ಣ ಉಸ್ತುವಾರಿಯನ್ನು ಶಾಸಕ ಕೆ.ಅಭಯಚಂದ್ರ ಜೈನ್ ವಹಿಸಿಕೊಂಡು ಮುನ್ನಡೆಸುತ್ತಿದ್ದಾರೆ. ಈಗಾಗಲೇ ಬಹುಕೋಟಿ ಅಭಿವೃದ್ಧಿ ಕಾರ್ಯಗಳ ಶಂಕುಸ್ಥಾಪನೆ, ಉದ್ಘಾಟನೆಗೆ ವ್ಯವಸ್ಥೆಮಾಡಿದ್ದಾರೆ. ಮುಖ್ಯಮಂತ್ರಿಗಳು ಸ್ವತಃ ಕ್ಷೇತ್ರಕ್ಕಾಮಿಸಿ ಮೂಡಬಿದಿರೆಯ ಕ್ಷೇತ್ರದರ್ಶನ ಮಾಡಿ ತೀರ್ಮಾನ ಕೈಗೊಳ್ಳುತ್ತಾರೆಯೋ ಎಂಬ ಅಂಶವೂ ಪ್ರಾಮುಖ್ಯವಾದದ್ದು.