Headlines

ವಿಶ್ವ ಜೂನಿಯರ್ ಅಥ್ಲೆಟಿಕ್ಸ್ ಗೆ ಆಳ್ವಾಸ್ ಕ್ರೀಡಾಳುಗಳು * ಜಾಗೃತಿ ಪ್ರಜ್ಞೆ ಮೂಡಿಸಿದ ಜವನೆರ್ ಬೆದ್ರ * ಶಾಸಕರ ಮಾನವೀಯ ಸ್ಪಂದನೆ * ಜವನೆರ್ ಬೆದ್ರದ ಸಾಧನೆ ಇತರರಿಗೂ ಮಾದರಿ * ಕರಾವಳಿಯಲ್ಲಿ ಮತ್ತೆ ಮಳೆಯಾರ್ಭಟ * ಗದ್ದೆಯಲ್ಲಿ ಕುಣಿದು ಕುಪ್ಪಳಿಸಿದರು!! * ಸರ್ಕಾರ ಉಳಿಸಲು ವಿಶೇಷ ಪೂಜೆ! * `ನಾಡ ಪ್ರೇಮಿ’ಖ್ಯಾತಿಯ ಬಳ್ಳುಳ್ಳಾಯ ಇನ್ನಿಲ್ಲ * ಇಳೆಯು ಕಾದಿದೆ ಮಳೆಗಾಗಿ… * ಒತ್ತಡ ನಿರ್ವಹಣೆಗೆ ಆದ್ಯತೆ ಅವಶ್ಯ * ಬೆಳದಿಂಗಳ ಸಮ್ಮೇಳನಾಧ್ಯಕ್ಷತೆಗೆ ಬನ್ನಂಜೆ ಆಯ್ಕೆ * ಕಥೋಲಿಕ್ ಸಮಾಜೋತ್ಸವ * ಅಶ್ವತ್ಥಪುರದಲ್ಲಿ ಡಾ.ಸುಧೀರ್ ಹೆಗ್ಡೆ ನೇತೃತ್ವದಲ್ಲಿ ನೇತ್ರ ಚಿಕಿತ್ಸೆ ಶಿಬಿರ * ರೋಟರಿಯಿಂದ ಗಣರಾಜ್ಯೋತ್ಸವ ಆಚರಣೆ * ರಾಷ್ಟ್ರೀಯ ಐಕ್ಯತೆಗೆ ಯುವಪಡೆ ಸಿದ್ಧವಾಗಲಿ: ವಿನಯ ಹೆಗ್ಡೆ * ಮಹಾಮಜ್ಜನಕ್ಕೆ ಸಿದ್ದತೆ ಪೂರ್ಣ * ಶ್ರೀಬಾಹುಬಲಿ ಅಹಿಂಸಾದಿಗ್ವಿಜಯಂ ಲೋಕಾರ್ಪಣೆ * ಲೋಕಾಯುಕ್ತ ಪ್ರವಾಸ * ರೋಟರಿಯಿಂದ ಸಾಧಕರಿಗೆ ಸನ್ಮಾನ * ಸ್ವರಾಜ್ಯ ಮೈದಾನದ ಮೇಲೆ ತೂಗುಗತ್ತಿ…! *

ಶಾಸಕರ ಮಾನವೀಯ ಸ್ಪಂದನೆ

#mla#umanth1!!!!!!#kotiyan

ನಮ್ಮ ಪ್ರತಿನಿಧಿ ವರದಿ
ಮೂಡಬಿದಿರೆ: ನಿರಾಶ್ರಿತೆ ಜಯಲಕ್ಷ್ಮೀ ಕಡಂದಲೆಯ ಸಮಸ್ಯೆಗೆ ಶಾಸಕ ಉಮಾನಾಥ್ ಕೋಟ್ಯಾನ್ ಸೂಕ್ತ ಸ್ಪಂದನೆ ನೀಡಿದ್ದಾರೆ. ಕಡಂದಲೆ ಬಿ.ಟಿ.ರೋಡ್ ನಲ್ಲಿ ವಾಸವಾಗಿರುವ ಜಯಲಕ್ಷ್ಮೀಪೂಜಾರಿ ಅವರಿಗೆ ಸ್ವಂತ ಸೂರು ಹಾಗೂ ಇತರ ವ್ಯವಸ್ಥೆಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡುವುದರೊಂದಿಗೆ ಸ್ಥಳ ಸಂಬಂಧೀ ದಾಖಲಾತಿ ಕಾರ್ಯವನ್ನು ನಡೆಸುವ ಜವಾಬ್ದಾರಿಯನ್ನು ವಕೀಲ ಕೆ.ಆರ್.ಪಂಡಿತ್ಗೆ ನೀಡಿದ್ದಾರೆ. ಭಾನುವಾರ ಸ್ಥಳಕ್ಕೆ ಭೇಟಿನೀಡಿದ ಶಾಸಕರು ಅಧಿಕಾರಿಗಳಿಗೆ ಖಡಕ್ ಆದೇಶ ನೀಡಿದ್ದಲ್ಲದೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಸ್ಥಳೀಯರ ಸಹಕಾರದೊಂದಿಗೆ ನಿರಾಶ್ರಿತೆಗೆ ಮನೆ ನಿರ್ಮಿಸುವ ಕಾರ್ಯಕ್ಕೆ ಶಾಸಕರು ಸ್ಪಂದಿಸಿದ್ದು ಈ ಭಾಗದ ಜನತೆಯ ಮುಖದಲ್ಲಿ ಮಂದಹಾಸ ಮೂಡಿಸಿದೆ. ಈ ಸಂದರ್ಭ ಕೆ.ಆರ್.ಪಂಡಿತ್, ಅರುಣ್ ಭಟ್, ಪಂಚಾಯತ್ ಸದಸ್ಯ ದಿನೇಶ್ , ಮಾಜಿ ಸದಸ್ಯ ಸುಕೇಶ್, ಪುರಂದರ ಆಚಾರ್ಯ, ಬಿಲ್ಲವ ಸಂಘದ ಕಾರ್ಯಕರ್ತರು ಉಪಸ್ಥಿತರಿದ್ದರು.