Headlines

ಹಂತಕರನ್ನು ಕೂಡಲೇ ಬಂಧಿಸಿ: ಸಿ.ಎಂ * ಎದೆಭಾಗಕ್ಕೆ 2;ಹಣೆಗೆ1ಗುಂಡು * ಪರ್ತಕರ್ತೆ ಗೌರಿ ಲಂಕೇಶ್ ಹತ್ಯೆ * ಎಂಟು ಮಂದಿ ಶಿಕ್ಷಕರಿಗೆ ಸನ್ಮಾನ * ಸಾಧಕರಿಗೆ ಸನ್ಮಾನ * ಶಾಲೆ ಶಾಲೆಯಲ್ಲಿ ಗೆಜ್ಜೆಯ ನಿನಾದ! * ಋಣ ತೀರಿಸುವ ಕಾರ್ಯವಾಗಲಿ: ದೇವಿಪ್ರಸಾದ್ ಶೆಟ್ಟಿ * ಸಾರ್ವಜನಿಕ ಗಣೇಶೋತ್ಸವ * ಶ್ರೀ ಸೂರ್ಯನಾರಾಯಣ ಕ್ಷೇತ್ರದಲ್ಲಿ ಗಣೇಶೋತ್ಸವ * ಗ್ರಾಮ-ಪಟ್ಟಣಕ್ಕೆ ಒಂದೇ ಗಣೇಶನಿರಲಿ-ಟಿ.ಆರ್.ಸುರೇಶ್ * 54ನೇ ವರ್ಷದ ಮೂಡಬಿದಿರೆಯ ಗಣೇಶ * ಪೆರಿಂಜೆಯಲ್ಲಿ ಸಂಭ್ರಮದ ಗಣೇಶೋತ್ಸವ * ಕಲ್ಲಬೆಟ್ಟಿನಲ್ಲಿ ಪೂಜಿಸಿದ ವಿಘ್ನವಿನಾಯಕ * ಮೂಡುಬಿದಿರೆಯಲ್ಲಿ ರಕ್ಷಾಂಬಂಧನ * ಪ್ರೊ. ಕೆ.ಇ.ರಾಧಾಕೃಷ್ಣ ಮತ್ತು ಸತ್ಯಮಂಗಲ ಆರ್ ಮಹಾದೇವ ಅವರಿಗೆ ವರ್ಧಮಾನ ಪ್ರಶಸ್ತಿ ಘೋಷಣೆನ * ಇದು ಅತ್ಯಾಧುನಿಕ `ಪಾರಂಪರಿಕ’ಮಾದರಿಯ ಶ್ಯಾವಿಗೆ ಮಣೆ! * ವಿಂಶತಿ ಯಕ್ಷಕಲೋತ್ಸವಕ್ಕೆ ತೆರೆ * ಸಿ.ಐ.ಟಿ.ಯು: 9ನೇ ಬೀಡಿ ಕಾರ್ಮಿಕರ ರಾಜ್ಯ ಸಮ್ಮೇಳನ * ಪದ್ಮಪ್ರಸಾದ್ ಜೈನ್ ನೇಮಕ * ವಿಶೇಷ ಪೂಜೆ-ಅಭಿಷೇಕ *

ಶಾಲೆ ಶಾಲೆಯಲ್ಲಿ ಗೆಜ್ಜೆಯ ನಿನಾದ!

ಜ್ಞಾನವಾಹಿನಿ ನಿರ್ದೇಶಕಿ ರಾಧಿಕಾ ಶೆಟ್ಟಿ ಅವರೊಂದಿಗೆ ವಿದ್ಯಾರ್ಥಿ ಸಮುದಾಯ

ವಾರ್ತೆ.ಕಾಂ ವಿಶೇಷ-  ಹರೀಶ್ ಕೆ.ಆದೂರು.

ಹಲವು ಒತ್ತಡಗಳ ನಡುವೆ ಆಧುನಿಕತೆಯ ಭರಾಟೆಯಲ್ಲಿ ಸಾಂಪ್ರದಾಯಿಕ ಕಲೆಗಳಿಗೆ ಮಹತ್ವ ಕಡಿಮೆಯಾಗುತ್ತಿರುವ ಪ್ರಸ್ತುತ ಕಾಲ ಘಟ್ಟದಲ್ಲಿ ದೇಸೀ ಕಲೆಯ ಬಗ್ಗೆ ಜಾಗೃತಿ ಮೂಡಿಸುವ, ತನ್ಮೂಲಕ ಪಾರಂಪರಿಕ ಕಲೆಗಳನ್ನು ಉಳಿಸಿ ಬೆಳೆಸುವ ಮಹತ್ಕಾರ್ಯವೊಂದು ನಡೆಯುತ್ತಿದೆ.ಎಳೆಯ ಮನಸ್ಸಿನಲ್ಲಿ ಕಲೆಯ ಬಗ್ಗೆ ಆಸಕ್ತಿ ಮೂಡಬೇಕು, ಕಲಾಸ್ವಾದನೆಯ ಜ್ಞಾನ ಮಕ್ಕಳಲ್ಲಿ ಮೂಡಿಸುವ ನಿಟ್ಟಿನಲ್ಲಿ ಅಭಿಯಾನವೊಂದು ಆರಂಭಗೊಂಡಿದೆ.

ವಿದ್ಯಾರ್ಥಿಗಳ ಸಮ್ಮುಖದಲ್ಲಿ ಕಾರ್ಯಕ್ರಮ

ವಿದ್ಯಾರ್ಥಿಗಳ ಸಮ್ಮುಖದಲ್ಲಿ ಕಾರ್ಯಕ್ರಮ

ದಕ್ಷಿಣ ಭಾರತದಲ್ಲಿ ಹೆಚ್ಚು ಪ್ರಚಲಿತದಲ್ಲಿದ್ದ ಭರತನಾಟ್ಯ ಒಂದು ಶಾಸ್ತ್ರೀಯ ನೃತ್ಯ ಪ್ರಕಾರ.ಈ ದೇಸೀ ಕಲೆಯ ಬಗ್ಗೆ ಯುವಜನತೆ ಆಕರ್ಷತರಾಗಬೇಕು, ಈ ಶಾಸ್ತ್ರೀಯ ನೃತ್ಯಪ್ರಕಾರ ಉಳಿದು ಬೆಳೆಯಬೇಕೆಂಬ ಪ್ರಮುಖ ಧ್ಯೇಯವನ್ನಿರಿಸಿ ಹಿರಿಯ ನೃತ್ಯ ಕಲಾವಿದೆ ಮಂಗಳೂರಿನ ರಾಧಿಕಾ ಶೆಟ್ಟಿ ದೊಡ್ಡ ಸಾಹಸಕ್ಕೆ ಕೈಯಿಕ್ಕಿದ್ದಾರೆ. ಕರಾವಳೀ ಭಾಗದ ಹಲವು ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಮ್ಮುಖದಲ್ಲಿ ನೃತ್ಯ-ಪ್ರಾತ್ಯಕ್ಷಿಕೆಗಳನ್ನು ಪ್ರಸ್ತುತಪಡಿಸಿ ಅವರಿಗೆ ಕಲೆಯ ಸ್ಥೂಲ ಪರಿಚಯ ನೀಡುವ ಕಾರ್ಯವನ್ನು ಸದ್ದಿಲ್ಲದೆ ನಡೆಸುತ್ತಿದ್ದಾರೆ. ಮಂಗಳೂರಿನ ನೃತ್ಯಾಂಗನ್ ಸಂಸ್ಥೆಯ ಆಶ್ರಯದಲ್ಲಿ `ಜ್ಞಾನವಾಹಿನಿ’ಅಭಿಯಾನದ ಮೂಲಕ ಜಾಗೃತಿ ಕಾರ್ಯ ನಡೆಯುತ್ತಿದೆ.

ಜ್ಞಾನವಾಹಿನಿ ನಿರ್ದೇಶಕಿ ರಾಧಿಕಾ ಶೆಟ್ಟಿ ಅವರೊಂದಿಗೆ ವಿದ್ಯಾರ್ಥಿ ಸಮುದಾಯ

ಜ್ಞಾನವಾಹಿನಿ ನಿರ್ದೇಶಕಿ ರಾಧಿಕಾ ಶೆಟ್ಟಿ ಅವರೊಂದಿಗೆ ವಿದ್ಯಾರ್ಥಿ ಸಮುದಾಯ

ಹಳೆಯ ನೃತ್ಯಪ್ರಕಾರವಾದ ಭರತನಾಟ್ಯದಲ್ಲಿ ಪ್ರಸ್ತುತ ಘಟನಾವಳಿಗಳನ್ನೂ ಅತ್ಯಂತ ಪರಿಣಾಮಕಾರಿಯಾಗಿ ಪ್ರದರ್ಶನಗೊಳಿಸಲು ಸಾಧ್ಯವಿದೆ ಎಂಬುದನ್ನು ಸಾಧಿಸಿ ಜನತೆಯೆದರು ಪ್ರದರ್ಶಿಸುತ್ತಿದ್ದಾರೆ ರಾಧಿಕಾ ಶೆಟ್ಟಿ. ಆರಂಭದ ಮೊದಲಾರ್ಧದಲ್ಲಿ ಭರತನಾಟ್ಯದ ಸೂಕ್ಷ್ಮ ಪರಿಚಯ,ಪ್ರಾತ್ಯಕ್ಷಿಕೆ, ಆನಂತರದಲ್ಲಿ ಭರತನಾಟ್ಯ ಪ್ರದರ್ಶನ, ತದನಂತರ ವಿದ್ಯಾರ್ಥಿಗಳೊಂದಿಗೆ ಸಂವಾದ ಹೀಗೆ ಅತ್ಯಂತ ಪರಿಣಾಮಕಾರಿಯಾಗಿ ವಿದ್ಯಾರ್ಥಿಗಳ ಮನ ಮುಟ್ಟುವ ಕಾರ್ಯವನ್ನು ಯಶಸ್ವಿಯಾಗಿಸುತ್ತಿದ್ದಾರೆ. ಮಂಗಳೂರು, ಕಾಸರಗೋಡು, ಉಡುಪಿ,ಕುಂದಾಪುರ ಹೀಗೆ ಹಲವು ಗ್ರಾಮೀಣ ಭಾಗದ ಶಾಲೆಗಳಿಗೆ ತೆರಳಿ ಸಂಪೂರ್ಣ ಉಚಿತವಾಗಿ ಕಾರ್ಯಾಗಾರವನ್ನು ನಡೆಸಿಕೊಡುತ್ತಾ ಕಲಾಜಾಗೃತಿ ಮೂಡಿಸುವ ರಾಧಿಕಾ ಶೆಟ್ಟಿ ನಿಜಾರ್ಥದಲ್ಲಿ ಕಲಾಸೇವೆಗೈಯುತ್ತಿದ್ದಾರೆ.

ಜ್ಞಾನವಾಹಿನಿಯ ರೂವಾರಿ, ರಾಧಿಕಾ ಶೆಟ್ಟಿ

ಜ್ಞಾನವಾಹಿನಿಯ ರೂವಾರಿ, ರಾಧಿಕಾ ಶೆಟ್ಟಿ

“ಶಾಸ್ತ್ರೀಯ ಕಲೆಗಳಿಗೆ ಪ್ರೇಕ್ಷಕ ವರ್ಗ ಕಡಿಮೆಯಾಗುತ್ತಿದೆ. ಮಕ್ಕಳಲ್ಲಿ ಶಾಸ್ತ್ರೀಯ ನೃತ್ಯದ ಅರಿವು ಮೂಡಬೇಕು.ಮಕ್ಕಳಿಂದಲೇ ಕಲೆಯ ಆಸ್ವಾದನೆ ಆರಂಭವಾಗಬೇಕೆಂಬ ದೃಷ್ಠಿಯಿಂದ ಈ ಕಾರ್ಯ ಮಾಡುತ್ತಿದ್ದೇವೆ.”

-ರಾಧಿಕಾ ಶೆಟ್ಟಿ
ಸ್ಥಾಪಕ ನಿರ್ದೇಶಕಿ,ನೃತ್ಯಾಂಗನ್ ಮಂಗಳೂರು.

  • ಒಂದು ಗಂಟೆಯ ಅವಧಿ
  •  ಗ್ರಾಮೀಣ ವಿದ್ಯಾರ್ಥಿಗಳಲ್ಲಿ ಕಲಾಸ್ವಾದನೆಯ ಕಾರ್ಯ
  •  ಏಕವ್ಯಕ್ತೀ ಪ್ರದರ್ಶನ – ಕಾರ್ಯಾಗಾರ
  • ಅವಿಭಜಿತ ದಕ್ಷಿಣ ಕನ್ನಡ, ಕಾಸರಗೋಡು ಜಿಲ್ಲೆಗಳಲ್ಲಿ ಅಭಿಯಾನ

ಇದೊಂದು ಉತ್ತಮ ಕಾರ್ಯ
ಗ್ರಾಮೀಣ ಮಕ್ಕಳಿಗೆ ಇಂತಹ ಅಪೂರ್ವ ಅವಕಾಶ ಲಭಿಸುತ್ತಿರುವುದು ಅತ್ಯಂತ ಸಂತೋಷದ ಸಂಗತಿ. ಇದರಿಂದ ಉತ್ತಮ ಪ್ರೇಕ್ಷಕ ವರ್ಗ ನಿರ್ಮಾಣವಾಗುತ್ತದೆ. ಮಕ್ಕಳಿಗೆ ಕಲೆಯ ಬಗ್ಗೆ ಆಸಕ್ತಿ ಮೂಡಲು ಸಾಧ್ಯವಾಗುತ್ತದೆ.
– ವೆಂಕಟೇಶ್
ಶಿಕ್ಷಕರು, ಪೆರಿಂಜೆ.