Headlines

ಕಂಬಳಸಮಿತಿ ಸಭೆ * 30ನೇವಾರದ ಕ್ಲೀನ್ ಅಪ್ ಮೂಡಬಿದಿರೆ * ಸ್ವಚ್ಛತಾ ದಿನಾಚರಣರೆ * ಶಾಸಕ ಉಮಾನಾಥ್ ಎ.ಕೋಟ್ಯಾನ್ ವಿಶೇಷ ಸಂದರ್ಶನ * ಸಮ್ಮೇಳನದ ಸರ್ವಾಧ್ಯಕ್ಷರಾಗಿ ಡಾ. ಮಲ್ಲಿಕಾ ಎಸ್.ಘಂಟಿ, ಉದ್ಘಾಟಕರಾಗಿ ಡಾ.ಷ. ಶೆಟ್ಟರ್ * ಫಲವಿತರಿಸಿ ಹುಟ್ಟುಹಬ್ಬ ಆಚರಣೆ * ನುಡಿಸಿರಿಯಲ್ಲೊಂದು ಕೃಷಿಸಿರಿ:ಡಾ.ಆಳ್ವ * ಹುಲಿ-ಸ್ವಚ್ಛತೆಯೂ -ಗಣೇಶೋತ್ಸವವೂ-ಪುರಸಭೆಯೂ! * ಗಣೇಶ ದರ್ಶನ… * ಮೂಡಬಿದಿರೆಯಲ್ಲಿ ಗಣೇಶೋತ್ಸವದ ಗೌಜಿ ಶುರು… * 28ನೇ ವಾರದ ಸ್ವಚ್ಛತಾ ಅಭಿಯಾನ * ಈ ಕರ್ಮಕಾಂಡಕ್ಕೆ ಯಾರು ಬಲಿ…? * `ಗುಣಮಟ್ಟದ ಶಿಕ್ಷಣ-ಸೂಕ್ತ ಉದ್ಯೋಗಕ್ಕೆ ಒತ್ತು’ * 27ನೇ ವಾರದ ಕ್ಲೀನ್ ಅಪ್ ಮೂಡಬಿದಿರೆ ಸಂಪನ್ನ * ನಮ್ಮ ಹೆಮ್ಮಕ್ಕಳು ಅದೆಷ್ಟು ಸುರಕ್ಷಿತ…? * ಮನಮೋಹಕ ನೃತ್ಯ ಸಿಂಚನ * ಸ್ವಚ್ಛ ಸರ್ವೇಕ್ಷಣ ಗ್ರಾಮೀಣ 2018 * ಆಧುನಿಕತೆಯೇ ಮುಳುವಾಯಿತೇ…? * ನಾಟ್ಯ ಮಯೂರಿ… * ನವೆಂಬರ್ 16-18: ಆಳ್ವಾಸ್ ನುಡಿಸಿರಿ *

“ವ್ಯವಹಾರವಾಯಿತೇ ವಿವಾಹ ಸಂಸ್ಕಾರ”

#indian#wedding#culture

ಸ್ಟೂಡೆಂಟ್ ರಿಪೋರ್ಟ್ : ಅಂಕಣ

ಮದುವೆಯ  ಈ ಬಂಧಾ…ಅನುರಾಗದ ಅನುಬಂಧ…ಹೌದು ಮದುವೆಯೆಂದರೆ ಹಾಗೆ. ಅದೊಂದು ಜೀವನದ ಪ್ರಮುಖ ಅಂಗವೂ ಹೌದು. ಯೋಗ್ಯ ವಯಸ್ಸಿನಲ್ಲಿ ಯೋಗ್ಯ ಪುರಷ/ಕನ್ಯೆ ವಿವಾಹ ಬಂಧನಕ್ಕೆ ಒಳಗಾಗಲೇ ಬೇಕು. ಹಾಗಾದರೆ ಮಾತ್ರ ಮನುಷ್ಯ ಜೀವನದಲ್ಲಿ ಒಂದು ಸಾರ್ಥಕ್ಯತೆಯನ್ನು ಅನುಭವಿಸಿದಂತಾಗುತ್ತದೆ. ವಿವಾಹಕ್ಕೆ ತನ್ನದೇ ಆದಂತಹ ಪ್ರಮುಖ ಮೌಲ್ಯವನ್ನು ಭಾರತೀಯ ಜೀವನ ಪದ್ಧತಿಯಲ್ಲಿ ನೀಡಲಾಗಿದೆ. ಮಾಂಗಲ್ಯ ಎಂಬ ವಿಚಾರ ಮಂಗಳಕರವಾದುದು ಎಂದರ್ಥ ನೀಡುತ್ತದೆ.
‘ವಿವಾಹ’ ಗಂಡು ಹೆಣ್ಣಿನ ಜೀವನದ ತಿರುವಿನ ಹಂತವಾಗಿದ್ದು, ಮುತ್ತೈದೆಗೆ ಮಾಂಗಲ್ಯದ ಸಂಕೇತವಾಗಿದೆ. ಪಂಚ ಶಕ್ತಿಗಳ ಸಾಕ್ಷಿಯಾದ ಮಾಂಗಲ್ಯಕ್ಕೆ ಇಂದು ವ್ಯವಹಾರದ ಪ್ರಭಾವ ಕಾಣುತ್ತಿರುವುದು ಸೋಜಿಗದ ವಿಚಾರ. “ಹೂವಿನ ಮಕರಂದವನ್ನು ಜೇನು ನೊಣ ಹೀರುವಂತೆ ವಿವಾಹದ ಸಂಸ್ಕಾರವನ್ನು ವ್ಯವಹಾರಗಳು ಆಕ್ರಮಿಸುತ್ತಿದೆ”.

Special-Indian-Wedding-Traditions
ಭಾರತೀಯ ಸಂಸ್ಕೃತಿ ವರ್ಣಿಸಲಾಗದ ವೇದಾಂತ, ಆಚಾರ ವಿಚಾರಗಳ ಅಧ್ಯಾಯವನ್ನೊಳಗೊಂಡಿದೆ. ಹೌದು ಭಾರತೀಯ ಸಂಸ್ಕೃತಿಯನ್ನು ವರ್ಣಿಸಲು ಸಾಧ್ಯವಿಲ್ಲ. ಮದುವೆ ಎಂದರೆ ಗಂಡು ಹೆಣ್ಣಿನ ಸಾಮರಸ್ಯ ಜೀವನದ ಆರಂಭ. ಮನೆಯ ಅಂದಕ್ಕೊಂದು ಚಪ್ಪರ, ಹಿರಿಯರ ಸೋಬಾನೆ ಹಾಡುಗಳು,ಬಂಧು ಬಳಗ ಗಳೊಂದಿಗೆ ಸಡಗರ ಸಂಭ್ರಮದಿಂದ ನಡೆಯುವುದೇ ಮದುವೆ. ಇಂತಹ ಮದುವೆಗಳು ಹಿಂದಿನ  ಕಾಲದಲ್ಲಿ ಮೌಲ್ಯಯುತವಾಗಿ ನಡೆಯುತ್ತಿದ್ದವು. ಆದರೆ ಇಂದು ಕಾಲ ಬದಲಾಗಿದೆ.  ಮದುವೆಯ ತಿರುಳನ್ನೇ ಮರೆತ ಸಮಾಜ ಇಂದು ವ್ಯವಹಾರದ ಕೂಪಕ್ಕೆ ತಳ್ಳುತ್ತಿದ್ದಾರೆ. ಸಾಲವಾಗಿಯಾದರೂ ವರದಕ್ಷಿಣೆಯನ್ನು ನೀಡಿ ವಧು ವರರ ಅನ್ಯೋನ್ಯ  ಮದುವೆಯ ಬಂಧಕ್ಕೆ ವ್ಯವಹಾರಿಕ ಪಟ್ಟವನ್ನು ಕಟ್ಟುತ್ತಿದ್ದಾರೆ.

ವಿವಾಹ ಎಂಬುದು ಕಪಟ ಮುಖವಾಡದ ಹಿಂದಿನ ಅಸಲಿಯತ್ತಿನ ದರುಶನನೀಡುವ ಅದೆಷ್ಟೋ ಉದಾಹರಣೆಗಳು ನಮ್ಮ ಸಮಾಜದಲ್ಲಿ ಕಾಣಸಿಗುತ್ತಿವೆ. ಮದುವೆಯೆಂದರೆ ಆಡಂಬರ,ಅಬ್ಬರಗಳಿಗೆ ವೇದಿಕೆಯಾಗಿ ಪರಿಣಮಿಸತೊಡಗಿದೆ. ಮಂಗಳ  ಸೂತ್ರವು ಗ್ರಾಂಗಳ ಹಾಗೇ ಚಿನ್ನದ ಸರವಾಗುತ್ತಿದೆ. ಆರತಕ್ಷತೆ, ಮದರಂಗಿ, ಸಪ್ತಪದಿ, ಮಾಂಗಲ್ಯಧಾರಣೆ, ಹೋಮಹವನಗಳು ಆಡಂಬರವಾಗುತ್ತಿದೆ. ಲಗ್ನಕ್ಕಾಗಿ ಹಲವಾರು ಕೇಂದ್ರಗಳು ನಿರ್ಮಾಣವಾಗಿದೆ. ಜನಜಂಗುಳಿಯ ಜಾತ್ರೆಯಾಗಿ ಉಡುಗೊರೆ ಕೊಡುಕೊಳ್ಳುವ  ಪ್ರಕ್ರಿಯೆಯಾಗಿ ಬದಲಾಗುತ್ತಿವೆ.

ಆಡಂಭರದ ಮದುವೆಗೆ ಫೋಟೋ,ವಿಡಿಯೋಗಳ ಅಬ್ಬರದ ಒಡ್ಡೋಲಗವೂ ಆಗತೊಡಗಿವೆ. ಫ್ಯಾಶನ್ ಹೆಸರಲ್ಲಿ ಆಹಾರಗಳ ದುರ್ಬಳಕೆಯೂ ಹೇರಳವಾಗುತ್ತಿವೆ.ಒಟ್ಟಿನಲ್ಲಿ ಭಾರತೀಯ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ವಿವಾಹ ನಡೆಯುತ್ತಿರುವುದು ವಿರಳವಾಗುತ್ತಿವೆ. ಸಂಪ್ರದಾಯವನ್ನು ತಿರುಚಿ, ಮದುವೆಯೂ ಒಂದು `ಉದ್ಯಮ’ದ ರೂಪ ಪಡೆಯುತ್ತಿರುವ ಸತ್ಯವನ್ನು ಒಪ್ಪಿಕೊಳ್ಳುವಂತಾಗಿದೆ.

ಜಯಾನಂದ
ಪ್ರಥಮ ದರ್ಜೆ ಕಾಲೇಜು ಸಿದ್ಧಕಟ್ಟೆ