Headlines

ಹಂತಕರನ್ನು ಕೂಡಲೇ ಬಂಧಿಸಿ: ಸಿ.ಎಂ * ಎದೆಭಾಗಕ್ಕೆ 2;ಹಣೆಗೆ1ಗುಂಡು * ಪರ್ತಕರ್ತೆ ಗೌರಿ ಲಂಕೇಶ್ ಹತ್ಯೆ * ಎಂಟು ಮಂದಿ ಶಿಕ್ಷಕರಿಗೆ ಸನ್ಮಾನ * ಸಾಧಕರಿಗೆ ಸನ್ಮಾನ * ಶಾಲೆ ಶಾಲೆಯಲ್ಲಿ ಗೆಜ್ಜೆಯ ನಿನಾದ! * ಋಣ ತೀರಿಸುವ ಕಾರ್ಯವಾಗಲಿ: ದೇವಿಪ್ರಸಾದ್ ಶೆಟ್ಟಿ * ಸಾರ್ವಜನಿಕ ಗಣೇಶೋತ್ಸವ * ಶ್ರೀ ಸೂರ್ಯನಾರಾಯಣ ಕ್ಷೇತ್ರದಲ್ಲಿ ಗಣೇಶೋತ್ಸವ * ಗ್ರಾಮ-ಪಟ್ಟಣಕ್ಕೆ ಒಂದೇ ಗಣೇಶನಿರಲಿ-ಟಿ.ಆರ್.ಸುರೇಶ್ * 54ನೇ ವರ್ಷದ ಮೂಡಬಿದಿರೆಯ ಗಣೇಶ * ಪೆರಿಂಜೆಯಲ್ಲಿ ಸಂಭ್ರಮದ ಗಣೇಶೋತ್ಸವ * ಕಲ್ಲಬೆಟ್ಟಿನಲ್ಲಿ ಪೂಜಿಸಿದ ವಿಘ್ನವಿನಾಯಕ * ಮೂಡುಬಿದಿರೆಯಲ್ಲಿ ರಕ್ಷಾಂಬಂಧನ * ಪ್ರೊ. ಕೆ.ಇ.ರಾಧಾಕೃಷ್ಣ ಮತ್ತು ಸತ್ಯಮಂಗಲ ಆರ್ ಮಹಾದೇವ ಅವರಿಗೆ ವರ್ಧಮಾನ ಪ್ರಶಸ್ತಿ ಘೋಷಣೆನ * ಇದು ಅತ್ಯಾಧುನಿಕ `ಪಾರಂಪರಿಕ’ಮಾದರಿಯ ಶ್ಯಾವಿಗೆ ಮಣೆ! * ವಿಂಶತಿ ಯಕ್ಷಕಲೋತ್ಸವಕ್ಕೆ ತೆರೆ * ಸಿ.ಐ.ಟಿ.ಯು: 9ನೇ ಬೀಡಿ ಕಾರ್ಮಿಕರ ರಾಜ್ಯ ಸಮ್ಮೇಳನ * ಪದ್ಮಪ್ರಸಾದ್ ಜೈನ್ ನೇಮಕ * ವಿಶೇಷ ಪೂಜೆ-ಅಭಿಷೇಕ *

ವ್ಯಕ್ತಿತ್ವ ನಿರ್ಮಾಣದಲ್ಲಿ ಸೂಚನೆಗಳ ಪಾತ್ರ

shikshana chinthane vaarte logo

ಶಿಕ್ಷಣ ಚಿಂತನೆ: ಅರವಿಂದ ಚೊಕ್ಕಾಡಿ

ಸ್ವಾಮಿ ವಿವೇಕಾನಂದರು ವ್ಯಕ್ತಿತ್ವ ನಿರ್ಮಾಣದ ಮೂಲಕವೇ ರಾಷ್ಟ್ರದ ನಿರ್ಮಾಣವಾಗಲು ಸಾಧ್ಯವೆಂದು ಹೇಳಿದ್ದರು. ನೇಪೋಲಿಯನ್ ಬೋನೋಪಾರ್ಟಿ ತನ್ನ ದೇಶದ ಯುವಜನಾಂಗದಲ್ಲಿ ದುರಭ್ಯಾಸಗಳು ಕಂಡುಬಂದಲ್ಲೇ ತಾನು ಸೋತು ಹೋಗಿದ್ದೆ ಎಂದು ಹೇಳಿದ್ದ. ಯಾವುದೆ ಸಾಮ್ರಾಜ್ಯ ನಾಶವಾದದ್ದೂ ಕೂಡ ಸಮಾಜದಲ್ಲಿ ಕೆಟ್ಟು ನಡೆವಳಿಕೆಗಳು ಕಂಡುಬಂದಾಗ, ಆದ್ದರಿಂದ ವ್ಯಕ್ತಿಯ ವ್ಯಕ್ತಿತ್ವವು ವ್ಯಕ್ತಿಗೆ ಮಾತ್ರವಲ್ಲ; ಇಡೀ ರಾಷ್ಟ್ರಕ್ಕೆ ಮಹತ್ವದ್ದಾಗಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ನಾವು ಅತ್ಯುತ್ತಮ ವ್ಯಕ್ತಿತ್ವದವರಾಗುವುದೇ ರಾಷ್ಟ್ರಕ್ಕೆ ಸಲ್ಲಿಸುವ ಬಹಳ ದೊಡ್ಡ ಕೊಡುಗೆಯಾಗಿದೆ.

 

 

ವ್ಯಕ್ತಿತ್ವ ನಿರ್ಮಾಣದಲ್ಲಿ ಸೂಚನೆಗಳನ್ನು ಸ್ವೀಕರಿಸುವುದು ಮುಖ್ಯಭಾಗಗಳಲ್ಲಿ ಒಂದಾಗಿದೆ. ಸೂಚನೆಗಳಲ್ಲಿ ಹಲವು ವಿಧಗಳಿವೆ.
ಅವುಗಳಲ್ಲಿ ಮೊದಲನೆಯದು ಘನತೆಯ ಸೂಚನೆ.

ಘನತೆಯ ಸೂಚನೆ ಎಂದರೆ ಹೆಚ್ಚು ಘನತೆ ಉಳ್ಳವರು ಹೇಳಿದ ಮಾತನ್ನು ಇತರರು ಬಹಳ ಬೇಗ ಒಪ್ಪಿಕೊಳ್ಳುವುದು. ದೊಡ್ಡ ವ್ಯಕ್ತಿಗಳ ನಡೆಯನ್ನು ಜನರು ಬೇಗ ಒಪ್ಪಿಕೊಳ್ಳುವುದು. ದೊಡ್ಡ ವ್ಯಕ್ತಿಗಳ ನಡೆಯನ್ನು ಜನರು ಬೇಗ ಒಪ್ಪಿಕೊಂಡಿರುತ್ತಾರೆ. ಉದಾಹರಣೆಗೆ ಚರ್ಕವರ್ತಿ ಆಶೋಕ ಸಾಲು ಮರಗಳನ್ನು ನೆಡಿಸಿದ್ದನು ಎನ್ನುವುದು. ನಿಜವಾಗಿ ಸಾಲು ಮರಗಳನ್ನು ನೆಡಿಸಿದವನು ಅಶೋಕ ಮಾತ್ರ ಅಲ್ಲ. ಅನೇಕ ಜನರು ನೆಡಿಸಿರುತ್ತಾರೆ. ಆದರೆ ಅವರೆಲ್ಲರೂ ಅಶೋಕನನ್ನು ಘನತೆಯವರಾಗಿರುವುದಿಲ್ಲ. ಆದ್ದರಿಂದ ಘನತೆ ಉಳ್ಳವರು ಹೆಚ್ಚು ಜವಾಬ್ದಾರಿಯಿಂದ ನಡೆದುಕೊಳ್ಳಬೇಕಾಗುತ್ತದೆ. ಹಾಗೆಯೇ ನಾವು ಹೇಳುವುದನ್ನು ಬೇರೆಯವರು ಒಪ್ಪಿಕೊಳ್ಳಬೇಕಾದರೆ ಅವರ ದೃಷ್ಠಿಯಲ್ಲಿ ನಾವು ಗೌರವಾನ್ವಿತ ವ್ಯಕ್ತಿಗಳಾಗಿರಬೇಕಾಗುತ್ತದೆ.

 

ಎರಡನೆಯ ಸಮೂಹ ಸೂಚನೆ:
ಹಲವು ಜನರು ಸೇರಿ ಒಂದು ಸೂಚನೆಯನನ್ಉ ನೀಡಿದರೆ ವ್ಯಕ್ತಿಯ ಅದನ್ನು ಬೇಗನೆ ಒಪ್ಪಿಕೊಳಳುತ್ತಾನೆ. ಇದೇ ಸಮೂಹ ಸೂಚನೆ.

 

 
ಮೂರನೆಯದು ಸ್ವಸೂಚನೆ:
ಯಾವುದಾದರೊಂದು ವಿಚಾರದ ಬಗ್ಗೆ ತನ್ನೊಳಗೆ ಯೋಚಿಸುತ್ತಿದ್ದರೆ ಅವನಿ/ಳಿಗೆ ಬೇಕಾದ ಸೂಚನೆಯ ಒಳಗಿನಿಂದಲೇ ಹುಟ್ಟಿಕೊಳ್ಳುತ್ತದೆ. ಇದೇ ಸ್ವಸೂಚನೆ.

 

 
ನಾಲ್ಕನೆಯದು ವಿರೋಧಾಭ್ಯಾಸ:
ವ್ಯಕ್ತಿಗೆ ಒಂದು ಸೂಚನೆಯನ್ನು ಕೊಟ್ಟಾಗ ಅವನು/ಳು ಸೂಚನೆಗೆ ವಿರುದ್ಧವಾಗಿ ಏನನ್ನಾದರೂ ಮಾಡಿದರೆ ಅದು ವಿರೋಧಾಭಾಸದ ಸೂಚನೆಯಾಗಿದೆ. ಚಿಕ್ಕಮಕ್ಕಳಲ್ಲಿ ಈ ರೀತಿಯ ಪ್ರವೃತ್ತಿ ಜಾಸ್ತಿ ಇರುತ್ತದೆ.

 

 
ಐದನೆಯದು ನಿಷೇಧಾತ್ಮಕ ಸೂಚನೆ:
ಯಾವುದನ್ನು ಮಾಡಬಾರದು ಎಂದು ನೀಡುವ ಸೂಚನೆಗಳೆಲ್ಲವೂ ನಿಷೇಧಾತ್ಮಕ ಸೂಚನೆಯಾಗಿದೆ. ಇದು ಒಮದು ರೀತಿಯ ಯಾಂತ್ರಿಕ ನಡೆವಳಿಕೆಗೆ ಪ್ರೇರೇಪಿಸುತ್ತದೆ.

 

 

ವ್ಯಕ್ತಿತ್ವದ ನಿರ್ಮಾಣವು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಮುಡಿಬರುವ ಇಂತಹ ಸೂಚನೆಗಳನ್ನು ಆಧರಿಸಿರುತ್ತದೆ. ಆದ್ದರಿಂದ ತನ್ನ ವ್ಯಕ್ತಿತ್ವ ವಿಕಾಸ ಆಗಬೇಕೆಂದು ಬಯಸುವವರೆಲ್ಲರೂ ಸೂಚನೆಗಳನ್ನು ಧಾರಾಳವಾಗಿ ಸ್ವೀಕರಿಸುವ ಪ್ರವೃತ್ತಿಯನ್ನು ರೂಢಿಸಿಕೊಳ್ಳಬೇಕು. ಸ್ವೀಕರಿಸಿದ ಮಾತ್ರಕ್ಕೆ ಪಾಲಿಸಬೇಕೆಂದಿಲ್ಲ. ಪಾಲನೆಯು ಯಾವಾಗಲೂ ಸ್ವಸೂಚನೆಯಿಂದಲೇ ನಡೆಯಬೇಕು. ಸ್ವಸೂಚನೆಯಾಗಿ ಮಾರ್ಪಾಡಿಸಿಕೊಳ್ಳುವಾಗ ಸಾಕಷ್ಟು ಯೋಚಿಸಬೇಕು.

ಅರವಿಂದ ಚೊಕ್ಕಾಡಿ

response@vaarte.com