Headlines

ವಿಶ್ವ ಜೂನಿಯರ್ ಅಥ್ಲೆಟಿಕ್ಸ್ ಗೆ ಆಳ್ವಾಸ್ ಕ್ರೀಡಾಳುಗಳು * ಜಾಗೃತಿ ಪ್ರಜ್ಞೆ ಮೂಡಿಸಿದ ಜವನೆರ್ ಬೆದ್ರ * ಶಾಸಕರ ಮಾನವೀಯ ಸ್ಪಂದನೆ * ಜವನೆರ್ ಬೆದ್ರದ ಸಾಧನೆ ಇತರರಿಗೂ ಮಾದರಿ * ಕರಾವಳಿಯಲ್ಲಿ ಮತ್ತೆ ಮಳೆಯಾರ್ಭಟ * ಗದ್ದೆಯಲ್ಲಿ ಕುಣಿದು ಕುಪ್ಪಳಿಸಿದರು!! * ಸರ್ಕಾರ ಉಳಿಸಲು ವಿಶೇಷ ಪೂಜೆ! * `ನಾಡ ಪ್ರೇಮಿ’ಖ್ಯಾತಿಯ ಬಳ್ಳುಳ್ಳಾಯ ಇನ್ನಿಲ್ಲ * ಇಳೆಯು ಕಾದಿದೆ ಮಳೆಗಾಗಿ… * ಒತ್ತಡ ನಿರ್ವಹಣೆಗೆ ಆದ್ಯತೆ ಅವಶ್ಯ * ಬೆಳದಿಂಗಳ ಸಮ್ಮೇಳನಾಧ್ಯಕ್ಷತೆಗೆ ಬನ್ನಂಜೆ ಆಯ್ಕೆ * ಕಥೋಲಿಕ್ ಸಮಾಜೋತ್ಸವ * ಅಶ್ವತ್ಥಪುರದಲ್ಲಿ ಡಾ.ಸುಧೀರ್ ಹೆಗ್ಡೆ ನೇತೃತ್ವದಲ್ಲಿ ನೇತ್ರ ಚಿಕಿತ್ಸೆ ಶಿಬಿರ * ರೋಟರಿಯಿಂದ ಗಣರಾಜ್ಯೋತ್ಸವ ಆಚರಣೆ * ರಾಷ್ಟ್ರೀಯ ಐಕ್ಯತೆಗೆ ಯುವಪಡೆ ಸಿದ್ಧವಾಗಲಿ: ವಿನಯ ಹೆಗ್ಡೆ * ಮಹಾಮಜ್ಜನಕ್ಕೆ ಸಿದ್ದತೆ ಪೂರ್ಣ * ಶ್ರೀಬಾಹುಬಲಿ ಅಹಿಂಸಾದಿಗ್ವಿಜಯಂ ಲೋಕಾರ್ಪಣೆ * ಲೋಕಾಯುಕ್ತ ಪ್ರವಾಸ * ರೋಟರಿಯಿಂದ ಸಾಧಕರಿಗೆ ಸನ್ಮಾನ * ಸ್ವರಾಜ್ಯ ಮೈದಾನದ ಮೇಲೆ ತೂಗುಗತ್ತಿ…! *

ವಿಶ್ವ ಜೂನಿಯರ್ ಅಥ್ಲೆಟಿಕ್ಸ್ ಗೆ ಆಳ್ವಾಸ್ ಕ್ರೀಡಾಳುಗಳು

#alvas#achivement#national

ಕ್ರೀಡಾ ವಿಭಾಗ ವಾರ್ತೆ.ಕಾಂ
ಮೂಡಬಿದಿರೆ: ಫಿನ್ಲಂಡ್ನ ಟೆಂಪರ್ ಸಿಟಿಯಲ್ಲಿ ಜುಲೈ 10ರಿಂದ 15ರವರೆಗೆ ನಡೆಯಲಿರುವ ಐಎಎಎಫ್ ವಿಶ್ವ ಜೂನಿಯರ್ ಅಥ್ಲೆಟಿಕ್ ಚಾಂಪಿಯನ್ಶಿಪ್ನಲ್ಲಿ ಭಾಗವಹಿಸಲಿರುವ ಭಾರತ ತಂಡದಲ್ಲಿ ಮೂಡಬಿದಿರೆಯ ಆಳ್ವಾಸ್ನ ಮೂವರು ವಿದ್ಯಾರ್ಥಿಗಳು ಆಯ್ಕೆಯಾಗಿರುತ್ತಾರೆ. ಬಾಲಕರ ಶಾಟ್ಪುಟ್ನಲ್ಲಿ ಆಶೀಶ್, 4×100 ಮೀಟರ್ ರಿಲೆಯಲ್ಲಿ ಪ್ರಜ್ವಲ್ ಮಂದಣ್ಣ ಹಾಗೂ ಬಾಲಕಿಯರ ವಿಭಾಗದ 4×400 ಮೀಟರ್ ರಿಲೆಯಲ್ಲಿ ಶುಭ ವಿ ಭಾರತ ತಂಡವನ್ನು ಪ್ರತಿನಿಧಿಸಲಿದ್ದಾರೆ.
ಈ ಮೂವರು ಕ್ರೀಡಾಪಟುಗಳು ಈ ಹಿಂದೆ ಶ್ರೀಲಂಕಾದ ಕೊಲಂಬೊದಲ್ಲಿ ನಡೆದ ದಕ್ಷಿಣ ಏಷ್ಯನ್ ಜೂನಿಯರ್ ಅಥ್ಲೆಟಿಕ್ಸ್ನಲ್ಲಿ ಹಾಗೂ ಜಪಾನಿನ ಗಿಫುವಿನಲ್ಲಿ ನಡೆದ ಏಷ್ಯನ್ ಜೂನಿಯರ್ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ರಾಷ್ಟ್ರವನ್ನು ಪ್ರತಿನಿಧಿಸಿ ಪ್ರಶಸ್ತಿ ಪಡೆದಿದ್ದರು. ಇದೇ ಮೊದಲ ಬಾರಿಗೆ ವಿಶ್ವ ಜೂನಿಯರ್ ಅಥ್ಲೆಟಿಕ್ಸ್ಗೆ ಸಂಸ್ಥೆಯಿಂದ ಮೂವರು ಕ್ರೀಡಾಪಟುಗಳು ಆಯ್ಕೆಯಾಗಿದ್ದು, ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ| ಎಂ.ಮೋಹನ ಆಳ್ವ ಇವರು ಸಂತಸ ಹಾಗೂ ಅಭಿನಂದನೆ ವ್ಯಕ್ತಪಡಿಸಿರುತ್ತಾರೆ. ವಿಶ್ವ ಜೂನಿಯರ್ ಅಥ್ಲೆಟಿಕ್ಸ್ಗೆ ಭಾಗವಹಿಸಲಿರುವ ಆಳ್ವಾಸ್ನ ಮೂವರು ವಿದ್ಯಾರ್ಥಿಗಳು.