Headlines

ಕಣ್ಣುತೆರೆಸಿದ ಜವನೆರ್ ಬೆದ್ರ ಸಂಘಟನೆ * ಯೋಧರ ಮನೆಯಲ್ಲಿ ಬೆಳಗಿದ ದೀಪ! * ಯಶಸ್ವೀ 36ನೇವಾರ ಪೂರೈಸಿದ ಕ್ಲೀನ್ ಅಪ್ ಮೂಡಬಿದಿರೆ * ರಾಜ್ಯಮಟ್ಟದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟ ಆರಂಭ * ಅಳಿಯೂರಿನಲ್ಲಿ ಮೇಳೈಸಲಿದೆ ಕ್ರೀಡಾಹಬ್ಬ.! * ರಾಷ್ಟ್ರಮಟ್ಟಕ್ಕೆ ಆಯ್ಕೆಯಾಯ್ತು ಹಳ್ಳಿ ಹುಡುಗರ ಅನ್ವೇಷಣೆ! * ಶಿರ್ಲಾಲು: ಹೊಸ ಶಾಸನ ಪತ್ತೆ * ಸಾವಿರ ಕಂಬದ ಬಸದಿಯ ಸ್ವಚ್ಛತೆ * ಪುರಸಭೆಯ ಕಣ್ಣುತೆರೆಸಿದ ಜವನೆರ್ ಬೆದ್ರ! * ಪುರಸಭೆಗೆ ಸಾರ್ವಜನಿಕರಿಂದ ಹಿಡಿಶಾಪ * ಕಾರ್ಯಾಂಗ,ನ್ಯಾಯಾಂಗ,ಶಾಸಕಾಂಗದ ವೈಫಲ್ಯದ ವಿರುದ್ಧ ಹೋರಾಟ: ಸುದರ್ಶನ್ * ಬೆಸ್ಟ್ ಡ್ರಾಮೇಬಾಜ್ ಖ್ಯಾತಿಯ ಶ್ರೀಶ ಬೆಂಗಳೂರು ಅವರಿಗೆ ಗೌರವ ಸನ್ಮಾನ * ಮಾನವೀಯ ಸ್ಪಂದನೆ ಆಗಲೇಬೇಕಾಗಿದೆ… * 33ನೇ ವಾರ ಪೂರೈಸಿದ ಜವನೆರ್ ಬೆದ್ರದ ಸಾಧನೆ * ಆಧುನಿಕತೆಯಿಂದ ಆಶಾದಾಯಕ ಸ್ಥಿತಿ ಬಂದೊದಗಿದೆ: ಹರೀಶ್ ಶೆಣೈ * ಮೂಡಬಿದಿರೆಯಲ್ಲಿ ಸದ್ಭಾವನಾ ಗೋಷ್ಠಿ * ಭಾರತೀಯ ಜನತಾ ಪಾರ್ಟಿಯಿಂದ ಸ್ವಚ್ಛತೆಯ ಮಂತ್ರ * ಬಸದಿಗಳ ಬೀಡಲ್ಲಿ ಬಸದಿಗಳ ಸ್ವಚ್ಛತೆ * ಕಂಬಳಸಮಿತಿ ಸಭೆ * 30ನೇವಾರದ ಕ್ಲೀನ್ ಅಪ್ ಮೂಡಬಿದಿರೆ *

ವಿನಾಶಕ್ಕೆ ಪಕೃತಿ ನೀಡುತ್ತಿದೆಯೇ ಪ್ರತ್ಯುತ್ತರ?

#earth#vaarte
 ಸ್ಟೂಡೆಂಟ್ ರಿಪೋರ್ಟ್: ವಿಶೇಷ ವರದಿ
ಹಚ್ಚ ಹಸಿರಿನ ಸೌಂದರ್ಯ…  ಹೂವು, ಹಣ್ಣು ,ಬಳ್ಳಿಗಳ ಸಮ್ಮಿಲನ… ಮೃಗ, ಪಕ್ಷಿಗಳ ಆಶ್ರಯ ತಾಣ ಈ ಪ್ರಕೃತಿ. ಜೋಗ ಜಲಪಾತ, ನದಿ ತೊರೆಗಳನ್ನು ಹೊಂದಿರುವ ಹಚ್ಚ ಹಸಿರಿನ ಪರಿಸರ ನೋಡಲು ಕಣ್ಣಿಗೆ ಖುಷಿ ನೀಡುತ್ತದೆ. ಸಮೃದ್ಧ ಜೀವರಾಶಿಯಿಂದ ತುಂಬಿದ ಸುಂದರ ಪ್ರಕೃತಿಯಿಂದಾಗಿ ಕಾಲ ಕಾಲಕ್ಕೆ ಮಳೆಯಾಗುತ್ತಿದೆ.
ದುರದೃಷ್ಠವಶಾತ್ ಅಪಾರ ಸೌಂದರ್ಯ ತುಂಬಿಕೊಂಡು ಹಸಿರಿನ ಸೀರೆಯನ್ನುಟ್ಟಂತೆ ಕಾಣುವ ಭೂಮಿ ತಾಯಿಯನ್ನು ಜನರು ಶೋಷಣೆ ಮಾಡುತ್ತಿದ್ದಾರೆ. ಗಿಡ ಮರ ಬಳ್ಳಿಗಳನ್ನು ಕಡಿದು ದೊಡ್ಡ ದೊಡ್ಡ ಕಟ್ಟಡವನ್ನು ನಿರ್ಮಾಣ ಮಾಡಲಾಗುತ್ತಿದೆ. ಹಸಿರಿನ ತಾಣವಾಗಿದ್ದ ಭೂಮಿ ಇಂದು ಕಾಂಕ್ರೀಟ್ ಕಾಡಾಗಿ ಪರಿವರ್ತಿತವಾಗುತ್ತಿದೆ.
ಪರಿಸರ ಮಮತೆಯಿಂದ ನೀಡಿದ ಶುದ್ಧಗಾಳಿ ಇಂದು ಮಾಲಿನ್ಯಕ್ಕೊಳಗಾಗುತ್ತಿದೆ. ಮಾನವ ತನ್ನ ಧನದಾಸೆಗೆ ಪರಿಸರವನ್ನು ಕಗ್ಗೊಲೆಮಾಡುತ್ತಿದ್ದಾನೆ.ಅಪಾರ ಸಂಪತ್ತು ಕಳೆದುಕೊಂಡು ಮೌನವಾಗಿರುವ ಭೂಮಿಯ ಪರವಾಗಿ ವರುಣ ಇಂದು ತನ್ನ ಆರ್ಭಟವನ್ನು ಪ್ರಾರಂಭಿಸಿದ್ದಾನೆ. ಜನಸಂಖ್ಯೆಯ ಹೆಚ್ಚಳದಿಂದ ಪ್ರಕೃತಿ ನಾಶವಾಗುತ್ತಿದೆ. ವಾತಾವರಣದ ಏರಿಳಿತದ ಪರಿಣಾಮವಾಗಿ ವರುಣ ಅಪಾರ ಜನರನ್ನು ಬಲಿ ಪಡೆದುಕೊಂಡಿತು. ಮರು ಸೃಷ್ಟಿಯತ್ತ ಭೂಮಿ ಸಾಗುತ್ತಿದೆಯೋ ಎಂಬ ಭಾವನೆ ಮೂಡತೊಡಗಿದೆ. ವರುಣನ ತಾಂಡವ  ನೃತ್ಯಕ್ಕೆ ವಾಯು ಮೃದಂಗ ಬಾರಿಸಿ ಮಾನವ ಕುಲವನ್ನೇ ನಾಶ ಮಾಡುತ್ತಿವೆ. ಈ ಮನುಕುಲದ ನಾಶಕ್ಕೆ ಮನುಷ್ಯನ ಸ್ವಾರ್ಥವೇ ಕಾರಣ. ಗಿಡ ಮರ ಬಳ್ಳಿಗಳನ್ನು ಕಡಿಯುವುದರ ಬದಲಾಗಿ ಗಿಡ ನೆಟ್ಟು ಬೆಳೆಸಿ ಸುಂದರ ಪ್ರಕೃತಿಯನ್ನು ಮುಂದಿನ ಜನಾಂಗಕ್ಕೆ ನಿರ್ಮಿಸೋಣ.ಯುವ ಜನತೆ ಇದರತ್ತ ಚಿತ್ತ ವಹಿಸಬೇಕಾಗಿದೆ.

ಜಯಾನಂದ 
ಸರ್ಕಾರಿ ಪ್ರಥಮ ದರ್ಜೆ ಕಾಲೇಜು ,ಸಿದ್ಧಕಟ್ಟೆ