Headlines

ರೋಟರಿಯಿಂದ ಸಾಧಕರಿಗೆ ಸನ್ಮಾನ * ಸ್ವರಾಜ್ಯ ಮೈದಾನದ ಮೇಲೆ ತೂಗುಗತ್ತಿ…! * ಡಾ.ಸುಧೀರ್ ಹೆಗ್ಡೆ ನೇತೃತ್ವದಲ್ಲಿಕಣ್ಣಿನತಪಾಸಣಾ ಶಿಬಿರ * ಯುವಶಕ್ತಿಗೆ ಪರಿಸರಪ್ರಜ್ಞೆಯ ಅರಿವು ಮೂಡಿಸಿದ ಮಹಾಕಾರ್ಯ * ಮೂಡಬಿದಿರೆ ಶಿಕ್ಷಣ ಪ್ರೇಮಿಗಳ ನಾಡು: ಅಭಯಚಂದ್ರ ಜೈನ್ * 50ನೇ ವೈದ್ಯಕೀಯ ತಪಾಸಣಾ ಶಿಬಿರ * ಜ.21-25: ಮೂಡಬಿದಿರೆಯಲ್ಲಿ ರಾಷ್ಟ್ರೀಯ ವೈಯ್ಟ್ ಲಿಫ್ಟಿಂಗ್ * ರಾಜ್ಯಮಟ್ಟದ ಟಿ-20 ಕ್ರಿಕೆಟ್ ಟೂರ್ನಿ: ಆಳ್ವಾಸ್‍ಗೆ ಪ್ರಶಸ್ತಿ * ಕವಿಕುಲಗುರು ಕುಮಾರವ್ಯಾಸ * ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳಿಂದ ಒಡ್ಡು ನಿರ್ಮಾಣ * ಕಣ್ಣಿನ ಉಚಿತ ತಪಾಸಣೆಹಾಗೂ ಚಿಕಿತ್ಸಾ ಶಿಬಿರ * ಅಂತರ್ ಕಾಲೇಜು ಸಾಫ್ಟ್ ಬಾಲ್ ಟೂರ್ನಮೆಂಟ್ ಆರಂಭ * ವಿಶೇಷ ವಿದ್ಯಾರ್ಥಿಗಳ ಗಮನಾರ್ಹ ಸಾಧನೆ * ವರ್ಣವೈವಿಧ್ಯ ಚಿತ್ತಾಕರ್ಷದ ಆಳ್ವಾಸ್ ವಿರಾಸತ್ * ವಿರಾಸತ್ ಗೌರವ * ಬೇಲಾಡಿ ರಾಮಚಂದ್ರ ಆಚಾರ್ಯ ನಿಧನ * ವಿವೇಕಾನಂದ ಜಯಂತಿ * 79.5ಕೋಟಿ ಅಭಿವೃದ್ಧಿ ಕಾರ್ಯಗಳ ಲೋಕಾರ್ಪಣೆ, ಶಂಕುಸ್ಥಾಪನೆ * ಆಳ್ವಾಸ್ ರೋಟರಿ ಬ್ಲಡ್ ಬ್ಯಾಂಕ್ ಉದ್ಘಾಟನೆ * ಸೇವೆಯಲ್ಲಿ ಬದಲಾವಣೆ ತಂದ ಹೆಗ್ಗಳಿಕೆ ರೋಟರಿಯದ್ದು – ಡಾ.ಹೆಗ್ಗಡೆ *

ವರ್ಣವೈವಿಧ್ಯ ಚಿತ್ತಾಕರ್ಷದ ಆಳ್ವಾಸ್ ವಿರಾಸತ್

ಬೃಹತ್ ವೇದಿಕೆಯಲ್ಲಿ ವಿರಾಸತ್ ವೈಭವ

ಪುತ್ತಿಗೆ ವಿವೇಕಾನಂದ ನಗರ,ಶ್ರೀಮತಿ ವನಜಾಕ್ಷಿ ಕೆ.ಶ್ರೀಪತಿ ಭಟ್ ವೇದಿಕೆ, ಮೂಡಬಿದಿರೆ:
ಹಸಿರ ರಾಶಿಗಳಮಧ್ಯೆ ಮಿನುಗುವ ಲಕ್ಷಾಂತರ ಪುಟಾಣಿವಿದ್ಯುತ್ ದೀಪಗಳ ಮಂದ ಬೆಳಕಿನಲ್ಲಿ,ಸಾಲಂಕೃತ ಗೂಡುದೀಪಗಳ ಶೃಂಗಾರದೊಂದಿಗೆ ಮನಕ್ಕೆಮುದನೀಡುವ ಆಹ್ಲಾದದ ವಾತಾವರಣದಲ್ಲಿ 24ನೇ ವರ್ಷದ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ `ಆಳ್ವಾಸ್ ವಿರಾಸತ್ – 2018’ವಿದ್ಯುಕ್ತವಾಗಿ ಆರಂಭಗೊಂಡಿತು.
ದೇಶದ ಕಲೆ,ಸಂಸ್ಕೃತಿಯನ್ನು ಪರಿಚಯಿಸುವ ವೈವಿಧ್ಯಮಯ ನೃತ್ಯಪ್ರಕಾರಗಳ ಅನಾವರಣದೊಂದಿಗೆ,ಮಹೋನ್ನತ ಕಲಾವಿದರ, ಐವತ್ತು ಸಹಸ್ರಕ್ಕೂ ಮಿಕ್ಕಿದ ಆಸಕ್ತ ಪ್ರೇಕ್ಷಕರ ಉಪಸ್ಥಿತಿಯಲ್ಲಿ `ನಭೂತೋ’ಎಂಬಂತೆ ಆಳ್ವಾಸ್ ವಿರಾಸತ್ ತೆರೆದುಕೊಂಡಿತು.ಎಂಟೆಕ್ಕರೆ ಪ್ರದೇಶದಲ್ಲಿ ಸುಸಜ್ಜಿತ ಆಸನವ್ಯವಸ್ಥೆಯೊಂದಿಗೆ ಅಂತಾರಾಷ್ಟ್ರೀಯ ಖ್ಯಾತಿಯ ಕಲಾವಿದರ ಕಲಾಪ್ರಕಾರಗಳನ್ನು ಕಣ್ತುಂಬಿಕೊಳ್ಳುವ ಸದಾವಕಾಶ ಮೂಡಬಿದಿರೆ ಹಾಗೂ ಸುತ್ತಮುತ್ತಲಿನ ಅಪಾರ ಪ್ರೇಕ್ಷಕವರ್ಗಕ್ಕಾಗುವಂತಾಯಿತು.
ಹೊತ್ತುಕಂತುವ ಹೊತ್ತಿಗೆ ನಿಗಧಿತ ಸಮಯಕ್ಕೆ ಒಂದಿನಿತೂ ಚ್ಯುತಿಯಾಗದಂತೆ ಆರಂಭಕಂಡ ಕಲಾವಿದರ ಮೆರವಣಿಗೆ, ರಾಷ್ಟ್ರೀಯ ಉತ್ಸವದ ಉದ್ಘಾಟನೆ ಸರ್ವರ ಪ್ರಶಂಸೆಗೆ ಪಾತ್ರವಾಯಿತು. ಕಲಾಪ್ರದರ್ಶನಕ್ಕೆ ಕಿಂಚಿತ್ತೂ ತೊಂದರೆಯಾಗದಂತೆ, ಕಲಾಸಕ್ತರ ಮನಮುಟ್ಟುವ,ಇನ್ನೊಮ್ಮೆ,ಮತ್ತೊಮ್ಮೆ `ಇಲ್ಲಿಗೆ ಬರೋಣ’ ಎಂಬಂತಹ ಭಾವ ಮೂಡಿಸುವು ಮಾದರಿಯ ಅಲಂಕಾರ ಪ್ರತಿಯೊಬ್ಬರನ್ನೂ ಆಕರ್ಷಿಸುತ್ತಿತ್ತು. ಈಗಾಗಲೇ ವಿವಿಧ ಮಾಧ್ಯಮಗಳ ಮೂಲಕ ಅವರ ಕಲಾ ಪ್ರಕಾರಗಳನ್ನು ಕೇಳಿ, ವೀಕ್ಷಿಸಿ ಮೆಚ್ಚುಗೆ ಪಡೆದ ಪ್ರೇಕ್ಷಕರು ತಮ್ಮಿಷ್ಟದ ಹೆಸರಾಂತ ಕಲಾವಿದರನ್ನು ಸನಿಹದಲ್ಲೇ ನೋಡುವ ಭಾಗ್ಯವನ್ನು ಆಳ್ವಾಸ್ ವಿರಾಸತ್ ಮೂಲಕ ಪಡಕೊಂಡರು.
ಶನಿವಾರ ವಿರಾಸತ್ನಲ್ಲಿ…
ಶನಿವಾರ ಸಂಜೆ 6.00 ರಿಂದ ದೀಪ ಪ್ರಜ್ವಲನ ಮಂಗಳೂರಿನ ಪೊಲೀಸ್ ಆಯುಕ್ತರು ಟಿ.ಆರ್ ಸುರೇಶ್, ಮಂಗಳೂರಿನ ಅಪರ ಜಿಲ್ಲಾಧಿಕಾರಿಗಳಾದ ಕುಮಾರ್, ಕರ್ನಾಟಕ ಬ್ಯಾಂಕ್ ಲಿ. ನ ಅಧ್ಯಕ್ಷರಾದ ಜಯರಾಮ್ ಭಟ್, ಮಂಗಳೂರಿನ ಶ್ರೀದೇವಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಸದಾನಂದ ಶೆಟ್ಟಿ, 6.10ಕ್ಕೆ ಕಲಾವಿದರಿಗೆ ಸಾಂಪ್ರಾದಯಿಕ ಸ್ವಾಗತ, ಹಿಂದಿ ಚಿತ್ರರಂಗದ ಪ್ರಖ್ಯಾತ ಸಂಗೀತ ನಿರ್ದೇಶಕರು ಮತ್ತು ಹಿನ್ನೆಲೆ ಗಾಯಕರಾದ ಶಂಕರ್ ಮಹದೇವನ್-ಎಹಸಾನ್- ಲೋಯ್ ಸಿದ್ಧಾರ್ಥ ಮಹದೇವನ್ ಮತ್ತು ಮುಂಬೈ ಇವರಿಂದ ಸುಮಧುರ ಸಂಗೀತ ಸಂಜೆ 6.15 ರಿಂದ 8.30 ತನಕ, ರಾತ್ರಿ 8.35ರಿಂದ 8.55 ತನಕ ಮೃದಂಗತರಂಗ. ಮೃದಂಗ: ಬಿ.ಎಸ್. ಆನಂದ್, ಪನ್ನಗ ಶರ್ಮಾ, ಕೃಷ್ಣ ಪವನ್ ಕುಮಾರ್ ಸುಮುಖ ಕಾರಂತ ವಯೋಲಿನ್: ಧನಶ್ರೀ ಶಬರಾಯ, ಮಾ| ಸುಮೇಧ್, ಉಪಾಸನಾ ಸೆಂಟರ್ ಫಾರ್ ಡ್ಯಾನ್ಸ್ ಕೋಲ್ಕತ್ತಾ ಇವರಿಂದ ಪ್ರತಿಬಿಂಬ- ಕಥಕ್ ನೃತ್ಯ ರಾತ್ರಿ 9.45ರಿಂದ 9.55, ರಾತ್ರಿ 10.ರಿಂದ ಆಳ್ವಾಸ್ ಸಾಂಸ್ಕೃತಿಕ ವೈಭವ.

ತಿಲಕಿವಟ್ಟು ಸ್ವಾಗತ!
ಕಲಾವಿದರಿಗೆ ಸಾಂಪ್ರದಾಯಿಕ ರೀತಿಯ ಸ್ವಾಗತ ಕೋರಲಾಯಿತು. ಸುವಾಸಿನಿಯರು ತಿಲಕವಿಟ್ಟು, ಪನ್ನೀರು ಚಿಮುಕಿಸಿ,ಆರತಿಬೆಳಗಿ ಕಲಾವಿದರಿಗೆ ಸಂಪ್ರದಾಯದ ರೀತಿಯ ಸ್ವಾಗತಕೋರಿದರು. ತನ್ಮೂಲಕ ಸಂಸ್ಕೃತಿಯ ಅನಾವರಣವಾದಂತೆ ಭಾಸವಾಯಿತು.

ಬೃಹತ್ ವೇದಿಕೆ
160ಅಡಿ ಉದ್ದ 60ಅಡಿ ಅಗಲದ ಬೃಹತ್ ವೇದಿಕೆಯಲ್ಲಿ ಅಂತಾರಾಷ್ಟ್ರೀಯ ಖ್ಯಾತಿಯ ಕಲಾವಿದರು ಕಲಾ ಪ್ರದರ್ಶನ ನಡೆಸಿದರು. ನೆರೆದಿದ್ದ ಸಹಸ್ರಾರು ಸಂಖ್ಯೆಯ ಅಭಿಮಾನೀ ಪ್ರೇಕ್ಷಕರು ಕಲಾಸ್ವಾದನೆ ಮಾಡಿದರು.
24ನೇ ವರ್ಷದ ಆಳ್ವಾಸ್ ವಿರಾಸತ್ – 2018 ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ ಮೂಡಬಿದಿರೆಯ ಪುತ್ತಿಗೆ ವಿವೇಕಾನಂದ ನಗರದ ಶ್ರೀಮತಿ ವನಜಾಕ್ಷಿ ಕೆ.ಶ್ರೀಪತಿ ಭಟ್ ವೇದಿಕೆಯಲ್ಲಿ ಶುಭಾರಂಭಗೊಂಡಿತು. ನಾಗಾಲ್ಯಾಂಡ್ನ ರಾಜ್ಯಪಾಲ ಪಿ.ಬಿ.ಆಚಾರ್ಯ ಉದ್ಘಾಟಿಸಿದರು. ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ, ಆಳ್ವಾಸ್ ಎಜುಕೇಷನ್ ಫೌಂಡೇಷನ್ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಸೇರಿದಂತೆ ವಿವಿಧ ಗಣ್ಯರು ಉಪಸ್ಥಿತರಿದ್ದರು.

ಆಕರ್ಷಕ ಮೆರವಣಿಗೆ
ಸಭಾ ಕಾರ್ಯಕ್ರಮಕ್ಕೂ ಮುನ್ನ ಸನ್ಮಾನಿತರು,ಉದ್ಘಾಟಕರನ್ನೊಳಗೊಂಡ ಸಾಂಪ್ರದಾಯಿಕ ಮೆರವಣಿಗೆ ಆಕರ್ಷಕವಾಗಿತ್ತು. ಶಂಖ,ಜಾಗಟೆ, ಚೆಂಡೆ,ಕೇರಳದ ತಾಯಂಬಕ್, ಈಶಾನ್ಯ ರಾಜ್ಯಗಳ ಕಲಾ ಪ್ರಕಾರಗಳು, ಕಲಶ ಕನ್ನಿಕೆಯರನ್ನೊಳಗೊಂಡ ಅತಿಥಿ ಅಭ್ಯಾಗತರ ಆಕರ್ಷಕ ಮೆರಣಿಗೆ ಜನಾಕರ್ಷಣೆಗೆ ಪಾತ್ರವಾಯಿತು.
ಚಿತ್ರ: ಅನಿತ್ ಡಿಜಿಟಲ್ಸ್ ಮಾರೂರು