Headlines

ಆಳ್ವಾಸ್ ವಿದ್ಯಾರ್ಥಿಸಿರಿಯ ಹೈಲೈಟ್ಸ್… * ಬಾಲಪ್ರತಿಭೆ ಪ್ರದರ್ಶನ * ಬಸದಿಗಳ ನಾಡಲ್ಲಿ ಕನ್ನಡದ ಬಾವುಟ… ಹೊತ್ತಿತೋ…ಹೊತ್ತಿತು ಕನ್ನಡದ ದೀಪ… * ನುಡಿಸಿರಿಯ ಸರ್ವಾಧ್ಯಕ್ಷರ ಎಕ್ಸ್ ಕ್ಲೂಸಿವ್ ಸಂದರ್ಶನ * ಹನ್ನೆರಡು ಸಾಧಕರಿಗೆ 2018ರ ಆಳ್ವಾಸ್ ನುಡಿಸಿರಿ ಪುರಸ್ಕಾರ * ನುಡಿಸಿರಿಯ ಅಂಗಳದಲ್ಲಿ ಅಚ್ಚರಿಯ ಮೇಲೊಂದಚ್ಚರಿ! * ನುಡಿಸಿರಿಯ ಅಂಗಳದಲ್ಲೊಂದು ಸುದ್ದಿಮನೆ! * ಆಳ್ವಾಸ್ ವಿದ್ಯಾರ್ಥಿಸಿರಿ 2018 ಆರಂಭ * ಕಣ್ಣುತೆರೆಸಿದ ಜವನೆರ್ ಬೆದ್ರ ಸಂಘಟನೆ * ಯೋಧರ ಮನೆಯಲ್ಲಿ ಬೆಳಗಿದ ದೀಪ! * ಯಶಸ್ವೀ 36ನೇವಾರ ಪೂರೈಸಿದ ಕ್ಲೀನ್ ಅಪ್ ಮೂಡಬಿದಿರೆ * ರಾಜ್ಯಮಟ್ಟದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟ ಆರಂಭ * ಅಳಿಯೂರಿನಲ್ಲಿ ಮೇಳೈಸಲಿದೆ ಕ್ರೀಡಾಹಬ್ಬ.! * ರಾಷ್ಟ್ರಮಟ್ಟಕ್ಕೆ ಆಯ್ಕೆಯಾಯ್ತು ಹಳ್ಳಿ ಹುಡುಗರ ಅನ್ವೇಷಣೆ! * ಶಿರ್ಲಾಲು: ಹೊಸ ಶಾಸನ ಪತ್ತೆ * ಸಾವಿರ ಕಂಬದ ಬಸದಿಯ ಸ್ವಚ್ಛತೆ * ಪುರಸಭೆಯ ಕಣ್ಣುತೆರೆಸಿದ ಜವನೆರ್ ಬೆದ್ರ! * ಪುರಸಭೆಗೆ ಸಾರ್ವಜನಿಕರಿಂದ ಹಿಡಿಶಾಪ * ಕಾರ್ಯಾಂಗ,ನ್ಯಾಯಾಂಗ,ಶಾಸಕಾಂಗದ ವೈಫಲ್ಯದ ವಿರುದ್ಧ ಹೋರಾಟ: ಸುದರ್ಶನ್ * ಬೆಸ್ಟ್ ಡ್ರಾಮೇಬಾಜ್ ಖ್ಯಾತಿಯ ಶ್ರೀಶ ಬೆಂಗಳೂರು ಅವರಿಗೆ ಗೌರವ ಸನ್ಮಾನ *

ರಾಷ್ಟ್ರಮಟ್ಟಕ್ಕೆ ಆಯ್ಕೆಯಾಯ್ತು ಹಳ್ಳಿ ಹುಡುಗರ ಅನ್ವೇಷಣೆ!

snmp moodbidri

ಕೃಷಿಕರಿಗಿನ್ನು `ನೋವರಿ…’ ಕಾಡು ಪ್ರಾಣಿಗಳಿಂದ ಆಗಲಿವೆ ಮುಕ್ತಿ!
ವಿಶೇಷ ವರದಿ: ಹರೀಶ್ ಕೆ.ಆದೂರು
ಮೂಡಬಿದಿರೆ: ಹೌದು…ಮೂಡಬಿದಿರೆಯ ಎಸ್.ಎನ್.ಎಂ.ಪಾಲಿಟೆಕ್ನಿಕ್ ಕಾಲೇಜಿನ ವಿದ್ಯಾರ್ಥಿಗಳು ಆವಿಷ್ಕರಿಸಿದ ಮಾದರಿಗಳು ಇದೀಗ ರಾಷ್ಟ್ರಮಟ್ಟಕ್ಕೆ ಆಯ್ಕೆಗೊಂಡಿವೆ. ಆಲ್ ಇಂಡಿಯಾ ಕೌನ್ಸಿಲ್ ಫಾರ್ ಟೆಕ್ನಿಕಲ್ ಎಜುಕೇಷನ್, ಮಿನಿಸ್ಟ್ರಿ ಆಫ್ ಹ್ಯೂಮನ್ ರಿಸೋರ್ಸ್ಸ ಡೆವಲಪ್ ಮೆಂಟ್ ,ಗವರ್ನೆಂಟ್ ಆಫ್ ಇಂಡಿಯಾ, ಇಂಜಿನಿಯರಿಂಗ್ ಕೌನ್ಸಿಲ್ ಆಫ್ ಇಂಡಿಯಾ ಮತ್ತು ಇಂಡಿಯನ್ ಸೊಸೈಟಿ ಫಾರ್ ಟೆಕ್ನಿಕಲ್ ಎಜುಕೇಷನ್ ಸಂಸ್ಥೆಗಳು ಜಂಟಿಯಾಗಿ ಛಾತ್ರ ವಿಶ್ವಕರ್ಮ ಅವಾರ್ಡ್ – 2018 ಎಂಬ ರಾಷ್ಟ್ರೀಯ ಪ್ರಶಸ್ತಿಗಾಗಿ ಎ.ಐ.ಸಿ.ಟಿ ಅನುಮೋದಿತ ಡಿಗ್ರಿ ಹಾಗೂ ತತ್ಸಮಾನದ ಟೆಕ್ನಿಕಲ್ ಎಜುಕೇಷನ್ ಸಂಸ್ಥೆಗಳು ಹಾಗೂ ಇಂಜಿನಿಯರಿಂಗ್ ಸಂಸ್ಥೆಗಳಿಂದ ನೂತನ ಆವಿಷ್ಕಾರಕ ಮಾದರಿಗಳನ್ನು ಆಹ್ವಾನಿಸಿದ್ದವು.

ಕೇರಳ ಹಾಗೂ ಕರ್ನಾಟಕ ಸೇರಿದಂತೆ ಉಭಯ ರಾಜ್ಯಗಳನ್ನೊಳಗೊಂಡ `ಸೌತ್ ಝೋನ್’ನಲ್ಲಿರುವ ಎಲ್ಲಾ ತಾಂತ್ರಿಕ ತರಬೇತು ಸಂಸ್ಥೆಗಳಿಂದ ಆವಿಷ್ಕರಿಸಲ್ಪಟ್ಟ ಮಾದರಿಗಳ ಪೈಕಿ ಆಯ್ಕೆಗೊಂಡ 40ಮಾದರಿಗಳಿಗೆ ಬೆಂಗಳೂರಿನ ಟೆಕ್ನಿಕಲ್ ಇನ್ಸ್ಟಿಟ್ಯೂಟ್ ಆಫ್ ಆಚಾರ್ಯ ಇನ್ಸ್ಟಿಟ್ಯೂನ್ನಲ್ಲಿ ಅಕ್ಟೋಬರ್ 31ರಂದು ಸ್ಪರ್ಧೆ ನಡೆದಿದ್ದು ಇದರಲ್ಲಿ ಮೂಡಬಿದಿರೆಯ ಎಸ್.ಎನ್.ಎಂ.ಪಾಲಿಟೆಕ್ನಿಕ್ನ ಐದು ಮಾದರಿಗಳ ಪೈಕಿ ಎರಡು ಮಾದರಿಗಳು ಪ್ರಥಮ ಹಾಗೂ 5ನೇ ಪ್ರಶಸ್ತಿಗೆ ಪಾತ್ರವಾಗಿದ್ದು ರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ಆಯ್ಕೆಗೊಂಡಿದೆ.
ರೈತರಿಗೆ ವರದಾನ: ಎಸ್.ಎನ್.ಎಂ.ಪಾಲಿಟೆಕ್ನಿಕ್ನ ಮೆಕಟ್ರಾನಿಕ್ಸ್ ವಿಭಾಗದ ನೀಲ್ ಡಿ’ಸೋಜ ಹಾಗೂ ತಂಡ ಅಭಿವೃದ್ಧಿ ಪಡಿಸಿದ ಇಳುವರಿ ರಕ್ಷಕ ಯಂತ್ರ ಸರ್ವರ ಪ್ರಶಂಸೆಗೆ ಪಾತ್ರವಾಯಿತು. ಕೃಷಿ ಮತ್ತು ಆಹಾರ ವಿಭಾಗದಲ್ಲಿ ನಡೆದ ಈ ಸ್ಪರ್ಧೆಯಲ್ಲಿ ಇಳುವರಿ ರಕ್ಷಕ ಯಂತ್ರ ಆಯ್ಕೆಗೊಂಡಿತು. ಸುದರ್ಶನ ಕಿಣಿಯವರ ಮಾರ್ಗದರ್ಶನದಲ್ಲಿ ಈ ತಂಡ ಈ ಸಾಧನೆಯನ್ನು ಮಾಡಿದೆ.
ಕೃಷಿಕ ಬೆಳೆದ ಬೆಳೆಗಳಿಗೆ ತೊಂದರೆ ನೀಡುವ ಕಾಡುಪ್ರಾಣಿಗಳಾದ ಹಂದಿ,ಮಂಗ,ಸೇರಿದಂತೆ ಇತರ ಪ್ರಾಣಿಗಳಿಂದ ಮುಕ್ತಿ ಪಡೆಯಲು ಈ ಯಂತ್ರ ಸಹಕಾರಿಯಾಗಿದೆ. ಸೋಲಾರ್ ಹಾಗೂ ಬ್ಯಾಟರೀ ಚಾಲಿತ ವ್ಯವಸ್ಥೆಯ ಮೂಲಕ ಈ ಯಂತ್ರ ದಿನದ 24ಗಂಟೆಗಳ ಕಾಲವೂ ಕಾರ್ಯನಿರ್ವಹಿಸಲಿದೆ. ಸಿವಿಲ್ ವಿಭಾಗದ ಪ್ರಖ್ಯಾತ್ ಪಿ ನೇತೃತ್ವದ ತಂಡ ಅಭಿವೃದ್ಧಿ ಪಡಿಸಿದ ಮಾದರಿ ಐದನೇ ಬಹುಮಾನ ಪಡೆದುಕೊಂಡಿದೆ. ಒಟ್ಟಿನಲ್ಲಿ ಹಳ್ಳಿ ಹುಡುಗರ ಸಾಧನೆ ಸರ್ವರ ಪ್ರಶಂಸೆಗೆ ಪಾತ್ರವಾಗಿದೆ.
ಅಭಿನಂದನೆ: ವಿದ್ಯಾರ್ಥಿಗಳ ಈ ಸಾಧನೆಗೆ ಸಂಸ್ಥೆಯ ಪ್ರಾಂಶುಪಾಲ ಜೆ.ಜೆ.ಪಿಂಟೋ ಅಭಿನಂದನೆ ಸಲ್ಲಿಸಿದ್ದಾರೆ. ವಿದ್ಯಾರ್ಥಿಗಳ ಹಾಗೂ ಅದಕ್ಕೆ ಕಾರಣರಾದ ಉಪನ್ಯಾಸಕರನ್ನು ಅಭಿನಂದಿಸಿದ್ದಾರೆ.