Headlines

ಆಳ್ವಾಸ್ ವಿದ್ಯಾರ್ಥಿಸಿರಿಯ ಹೈಲೈಟ್ಸ್… * ಬಾಲಪ್ರತಿಭೆ ಪ್ರದರ್ಶನ * ಬಸದಿಗಳ ನಾಡಲ್ಲಿ ಕನ್ನಡದ ಬಾವುಟ… ಹೊತ್ತಿತೋ…ಹೊತ್ತಿತು ಕನ್ನಡದ ದೀಪ… * ನುಡಿಸಿರಿಯ ಸರ್ವಾಧ್ಯಕ್ಷರ ಎಕ್ಸ್ ಕ್ಲೂಸಿವ್ ಸಂದರ್ಶನ * ಹನ್ನೆರಡು ಸಾಧಕರಿಗೆ 2018ರ ಆಳ್ವಾಸ್ ನುಡಿಸಿರಿ ಪುರಸ್ಕಾರ * ನುಡಿಸಿರಿಯ ಅಂಗಳದಲ್ಲಿ ಅಚ್ಚರಿಯ ಮೇಲೊಂದಚ್ಚರಿ! * ನುಡಿಸಿರಿಯ ಅಂಗಳದಲ್ಲೊಂದು ಸುದ್ದಿಮನೆ! * ಆಳ್ವಾಸ್ ವಿದ್ಯಾರ್ಥಿಸಿರಿ 2018 ಆರಂಭ * ಕಣ್ಣುತೆರೆಸಿದ ಜವನೆರ್ ಬೆದ್ರ ಸಂಘಟನೆ * ಯೋಧರ ಮನೆಯಲ್ಲಿ ಬೆಳಗಿದ ದೀಪ! * ಯಶಸ್ವೀ 36ನೇವಾರ ಪೂರೈಸಿದ ಕ್ಲೀನ್ ಅಪ್ ಮೂಡಬಿದಿರೆ * ರಾಜ್ಯಮಟ್ಟದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟ ಆರಂಭ * ಅಳಿಯೂರಿನಲ್ಲಿ ಮೇಳೈಸಲಿದೆ ಕ್ರೀಡಾಹಬ್ಬ.! * ರಾಷ್ಟ್ರಮಟ್ಟಕ್ಕೆ ಆಯ್ಕೆಯಾಯ್ತು ಹಳ್ಳಿ ಹುಡುಗರ ಅನ್ವೇಷಣೆ! * ಶಿರ್ಲಾಲು: ಹೊಸ ಶಾಸನ ಪತ್ತೆ * ಸಾವಿರ ಕಂಬದ ಬಸದಿಯ ಸ್ವಚ್ಛತೆ * ಪುರಸಭೆಯ ಕಣ್ಣುತೆರೆಸಿದ ಜವನೆರ್ ಬೆದ್ರ! * ಪುರಸಭೆಗೆ ಸಾರ್ವಜನಿಕರಿಂದ ಹಿಡಿಶಾಪ * ಕಾರ್ಯಾಂಗ,ನ್ಯಾಯಾಂಗ,ಶಾಸಕಾಂಗದ ವೈಫಲ್ಯದ ವಿರುದ್ಧ ಹೋರಾಟ: ಸುದರ್ಶನ್ * ಬೆಸ್ಟ್ ಡ್ರಾಮೇಬಾಜ್ ಖ್ಯಾತಿಯ ಶ್ರೀಶ ಬೆಂಗಳೂರು ಅವರಿಗೆ ಗೌರವ ಸನ್ಮಾನ *

ರಾಶಿ ಭವಿಷ್ಯ…

astrology vaarte

ಈ ವಾರದ ನಿಮ್ಮ 12 ರಾಶಿಗಳ ಭವಿಷ್ಯದಲ್ಲಿ ಏನಿದೆ ನೋಡೋಣ… (ನ.23ರಿಂದ ನ.30 ರವರೆಗೆ)
ಮೇಷ
ನಿಮ್ಮ ಇಷ್ಟದ ಕಾರ್ಯಗಳು ಉತ್ತಮವಾಗಿ ಸಾಗಲಿವೆ.ವಿದ್ಯಾರ್ಥಿಗಳಿಗೆ ಸಕಾಲವಾಗಿದೆ. ಮಹಿಳೆಯರಿಂದ ದೂರವಿರಿ.ಕೌಟಂಬಿಕ ನೆಮ್ಮದಿ ದೊರೆಯಲಿದೆ. ದೂರಪ್ರಯಾಣದಲ್ಲಿ ಎಚ್ಚರವಿರಲಿ.ಅಭಿವೃದ್ಧಿಗೆ ಹೊಸ ನೀತಿಗಳು ಜಾರಿಗೆ ಬರಲಿವೆ.

 
ವೃಷಭ
ನಿಮ್ಮ ಸ್ವಂತ ಪ್ರಯತ್ನದಿಂದ ಆಸ್ತಿ ಪಾಸ್ತಿ ಸಂಪಾದನೆ ಮಾಡುತ್ತೀರಿ. ಇದರಿಂದ ನಿಮ್ಮ ಗೌರವ ಹೆಚ್ಚಾಗಲಿದೆ. ಇತರರೊಂದಿಗೆ ಸ್ನೇಹ ಮತ್ತು ಒಳ್ಳೆಯ ಕ್ಷಣಗಳನ್ನು ಹಂಚಿಕೊಳ್ಳಿ, ಆದರೆ ಹಣದ ಅವ್ಯವಹಾರದಲ್ಲಿ ಭಾಗಿಯಾಗಬೇಡಿ.

 

 

ಮಿಥುನ
ಮನೆಯಲ್ಲಿ ಶಾಂತಿಯ ವಾತಾವರಣ. ನಿಮ್ಮ ಉನ್ನತಾಧಿಕಾರಿ ಅಥವಾ ಅಧಿಕಾರಿಗಳಿಂದ ಬೆಂಬಲ ಬರುತ್ತದೆ. ನ್ಯಾಯ ವ್ಯವಹಾರಗಳಲ್ಲಿ ಗೆಲುವು ಗಳಿಸಲಿದ್ದೀರಿ. ಈ ವಾರ ಯಾರೊಂದಿಗೂ ವಾಗ್ವಾದಕ್ಕಿಳಿಯಬೇಡಿ. ಕಚೇರಿಗಳಲ್ಲಿ ಸಹದ್ಯೋಗಿಗಳಿಂದ ಕಿರುಕುಳ ಇರಬಹುದು.

 

 

ಕರ್ಕಾಟಕ
ಈ ವಾರ ವ್ಯಾಪಾರಿಗಳಿಗೆ ಉತ್ತಮಲಾಭ. ಸ್ತ್ರೀಯರಿಗೆ ಅಹ್ವಾನ ದೊರೆಯುವುದು. ಬಂಧುಗಳು ಮನೆಗೆ ಎಡತಾಕುವುದು ಹೆಚ್ಚಾಗುತ್ತದೆ. ಕಿರಾಣಿ, ಫ್ಯಾನ್ಸಿ ,ಔಷಧಿ ವ್ಯಾಪಾರಿಗಳಿಗೆ ಮಧ್ಯಮ ಲಾಭವಾಗಬಹುದು.ಖಾಸಗಿ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುವವರಿಗೆ ಬಡ್ತಿ ಸಂಭವ.

 

 

ಸಿಂಹ
ಈ ವಾರ ನಿಮಗೆ ಸಂಸಾರದಲ್ಲಿ ವಿರಸ ಉಂಟಾಗುತ್ತದೆ. ಅಲ್ಲದೆ ಆರ್ಥಿಕ ಪರಿಸ್ಥಿತಿ ಹಾಗೂ ಸಾಮಾಜಿಕ ಸ್ಥಾನ ಮಾನಗಳಿಗೆ ಧಕ್ಕೆ ಉಂಟಾಗಬಹುದು. ಸರಿಯಾದ ದಾರಿಯಲ್ಲಿ ನಿಮ್ಮ ಉತ್ಸಾಹ ಮತ್ತು ಬುದ್ಧಿವಂತಿಕೆಯನ್ನು ಬಳಸಿದಲ್ಲಿ ಯಶಸ್ಸು ಇದೆ. ಧನವ್ಯಯ. ಪ್ರೀತಿಪಾತ್ರರಿಂದ ಸಂತಸ.

 

 

ಕನ್ಯಾ
ಇಂದು ನಿಮ್ಮ ಏಕಾಗ್ರತಾ ಶಕ್ತಿಗಳ ಮೂಲಕ ಹೊಸತನ್ನು ಕಲಿಯುತ್ತೀರಿ. ವಾರ ಪೂರ್ತಿ ನಿಮ್ಮ ಕೋಪದ ಮೇಲೆ ನಿಯಂತ್ರಣವಿರಲಿ. ಆರ್ಥಿಕ ಒತ್ತಡಗಳು ಎದುರಾಗುವ ಸಾಧ್ಯತೆಗಳಿರುವುದರಿಂದ ಅನಗತ್ಯ ವೆಚ್ಚದಲ್ಲಿ ಕಡಿಮೆ ಮಾಡುವುದು ಸೂಕ್ತ. ಕೃಷಿ ಕ್ಷೇತ್ರದವರಿಗೆ ಉತ್ತಮ ಧನಲಾಭ.ಅವಿವಾಹಿತರಿಗೆ ವಿವಾಹ ಯೋಗವಿದೆ.

 

 

ತುಲಾ
ಈ ವಾರ ನೀವು ಸ್ವಾರ್ಥಿಗಳಾಗದಿರಿ.ಮುಖ್ಯ ಕೆಲಸವೊಂದರ ಪ್ರಯತ್ನದಲ್ಲಿ ನಿಮಗೆ ಹೆತ್ತವರ ನೆರವು ದೊರೆಯಲಿದೆ. ನ್ಯಾಯ ವ್ಯವಹಾರಗಳಲ್ಲಿ ಗೆಲುವು ಗಳಿಸಲಿದ್ದೀರಿ.ನಿರುದ್ಯೋಗಿಗಳಿಗೆ ಉದ್ಯೋಗವಕಾಶ. ಪ್ರೇಮ ಮತ್ತು ಪ್ರಣಯ ಸಲ್ಲಾಪದಲ್ಲಿ ನಿಮಗೆ ಯಶಸ್ಸು ದೊರೆಯಲಿದೆ.ಸಂತಸದ ಕ್ಷಣಗಳು ಎದುರಾಗಲಿವೆ.

 

 

ವೃಶ್ಚಿಕ
ಈ ವಾರ ನಿಮ್ಮಿಂದ ದೂರವಾದವರು ಹತ್ತಿರವಾಗುತ್ತಾರೆ. ಪ್ರತಿಯೊಂದು ವಿಷಯದಲ್ಲಿ ಅವಸರ ಬೇಡ. ಗುರುಗಳನ್ನು ಗೌರವಿಸುವುದರಿಂದ ನಿಮಗೆ ಸೂಕ್ತ ಲಾಭವಾಗುತ್ತದೆ. ಅಥಿಕಾರಿಗಳಿಗೆ ಶುಭ ಯೋಗವಿದೆ. ಹೊಸ ಗೆಳೆಯರ ಪರಿಚಯದಿಂದ ನಿಮಗೆ ಸಂತೃಪ್ತಿ ದೊರೆಯಲಿದೆ.ಸರಕಾರದ ಯೋಜನೆಯ ಲಾಭ ಪಡೆಯುವಿರಿ.

 

 
ಧನು
ವ್ಯವಹಾರಕ್ಕೆ ದೀರ್ಘಕಾಲದಿಂದ ನಿರೀಕ್ಷಿಸುತ್ತಿರುವ ಉತ್ತೇಜನ ದೊರೆಯಲಿದೆ. ಹೊಸ ಯೋಜನೆಗಳು ಮತ್ತು ಯೋಚನೆಗಳಲ್ಲಿ ನಿಮಗೆ ಯಶಸ್ಸು ದೊರೆಯಲಿದೆ. ಮಾನಸಿಕ ನೆಮ್ಮದಿ ದೊರೆಯಲಿದೆ. ಕೆಲವು ಅಡೆತಡೆಗಳ ಬಳಿಕ ಯಶಸ್ಸು ನಿಮ್ಮದಾಗಲಿದೆ. ಕೌಟಂಬಿಕ ನೆಮ್ಮದಿ ದೊರೆಯಲಿದೆ.

 

 

ಮಕರ
ಮಿತ್ರರ ಸಹಕಾರದಿಂದ ವ್ಯಾಪಾರದಲ್ಲಿ ಪ್ರಗತಿಯಾಗಲಿದೆ. ಸಜ್ಜನರ ಸಹವಾಸ ಲಭಿಸುತ್ತದೆ. ಎಲ್ಲರಿಂದಲೂ ಆದರ ಗೌರವಗಳನ್ನು ಪಡೆಯುತ್ತಾರೆ. ಸಂತಾನ ಪ್ರಾಪ್ತಿ. ಮನೆಯಲ್ಲಿನ ಅಸಹಕಾರದಿಂದ ಮಾನಸಿಕ ಅಶಾಂತಿ. ಮನರಂಜನೆಗಾಗಿ ಯೋಚಿಸುವ ಸಮಯ ಇದು. ಆರೋಗ್ಯ ಉತ್ತಮವಾಗಿರುತ್ತದೆ.ಉದ್ಯೋಗದಲ್ಲಿ ಬಡ್ಡಿ ಅವಕಾಶ.

 

 
ಕುಂಭ
ಕೃಷಿಯಿಂದ ಹೆಚ್ಚಿನ ಲಾಭ.ಕೃಷಿಕರಿಗೆ ಬೆಳೆ ಹಾನಿ ಸಾಧ್ಯತೆ. ಪ್ರೇಮ ವ್ಯವಹಾರಗಳಲ್ಲಿ ಧನಾತ್ಮಕ ಪ್ರತಿಕ್ರಿಯೆ ಕಂಡುಬರಲಿದೆ. ನಿಮ್ಮ ಹಣಕಾಸು ವಿಷಯಗಳಲ್ಲಿ ಮುಂದುವರಿಯುವಾಗ ಎಚ್ಚರಿಕೆಯಿಂದಿರಬೇಕಾಗುತ್ತದೆ. ಹಿರಿಯ ಅದಿಕಾರಿಗಳಿಂದ ಕಿರುಕುಳ ಸಾಧ್ಯತೆಯಿದೆ.

 

ಮೀನ
ಈ ವಾರ ನಿಮಗೆ ಬಡ್ತಿ ದೊರೆಯುವ ಸಂಭವವಿದೆ. ಕೆಲವರು ನಿಮ್ಮಿಂದ ಧನಸಹಾಯವನ್ನು ಬಯಸುತ್ತಾರೆ. ಮುಖ್ಯ ಕೆಲಸವೊಂದರ ಪ್ರಯತ್ನದಲ್ಲಿ ನಿಮಗೆ ಹೆತ್ತವರ ನೆರವು ದೊರೆಯಲಿದೆ. ನ್ಯಾಯ ವ್ಯವಹಾರಗಳಲ್ಲಿ ಗೆಲುವು ಗಳಿಸಲಿದ್ದೀರಿ.ಮಹಿಳೆಯರು ತಮ್ಮ ವಾಕ್ಚಾತುರ್ಯದಿಂದ ಇತರರ ಗಮನ ಸೆಳೆಯುತ್ತಾರೆ.