Headlines

ಹಂತಕರನ್ನು ಕೂಡಲೇ ಬಂಧಿಸಿ: ಸಿ.ಎಂ * ಎದೆಭಾಗಕ್ಕೆ 2;ಹಣೆಗೆ1ಗುಂಡು * ಪರ್ತಕರ್ತೆ ಗೌರಿ ಲಂಕೇಶ್ ಹತ್ಯೆ * ಎಂಟು ಮಂದಿ ಶಿಕ್ಷಕರಿಗೆ ಸನ್ಮಾನ * ಸಾಧಕರಿಗೆ ಸನ್ಮಾನ * ಶಾಲೆ ಶಾಲೆಯಲ್ಲಿ ಗೆಜ್ಜೆಯ ನಿನಾದ! * ಋಣ ತೀರಿಸುವ ಕಾರ್ಯವಾಗಲಿ: ದೇವಿಪ್ರಸಾದ್ ಶೆಟ್ಟಿ * ಸಾರ್ವಜನಿಕ ಗಣೇಶೋತ್ಸವ * ಶ್ರೀ ಸೂರ್ಯನಾರಾಯಣ ಕ್ಷೇತ್ರದಲ್ಲಿ ಗಣೇಶೋತ್ಸವ * ಗ್ರಾಮ-ಪಟ್ಟಣಕ್ಕೆ ಒಂದೇ ಗಣೇಶನಿರಲಿ-ಟಿ.ಆರ್.ಸುರೇಶ್ * 54ನೇ ವರ್ಷದ ಮೂಡಬಿದಿರೆಯ ಗಣೇಶ * ಪೆರಿಂಜೆಯಲ್ಲಿ ಸಂಭ್ರಮದ ಗಣೇಶೋತ್ಸವ * ಕಲ್ಲಬೆಟ್ಟಿನಲ್ಲಿ ಪೂಜಿಸಿದ ವಿಘ್ನವಿನಾಯಕ * ಮೂಡುಬಿದಿರೆಯಲ್ಲಿ ರಕ್ಷಾಂಬಂಧನ * ಪ್ರೊ. ಕೆ.ಇ.ರಾಧಾಕೃಷ್ಣ ಮತ್ತು ಸತ್ಯಮಂಗಲ ಆರ್ ಮಹಾದೇವ ಅವರಿಗೆ ವರ್ಧಮಾನ ಪ್ರಶಸ್ತಿ ಘೋಷಣೆನ * ಇದು ಅತ್ಯಾಧುನಿಕ `ಪಾರಂಪರಿಕ’ಮಾದರಿಯ ಶ್ಯಾವಿಗೆ ಮಣೆ! * ವಿಂಶತಿ ಯಕ್ಷಕಲೋತ್ಸವಕ್ಕೆ ತೆರೆ * ಸಿ.ಐ.ಟಿ.ಯು: 9ನೇ ಬೀಡಿ ಕಾರ್ಮಿಕರ ರಾಜ್ಯ ಸಮ್ಮೇಳನ * ಪದ್ಮಪ್ರಸಾದ್ ಜೈನ್ ನೇಮಕ * ವಿಶೇಷ ಪೂಜೆ-ಅಭಿಷೇಕ *

ರಾಶಿ ಭವಿಷ್ಯ

astrology vaarte

ಈ ವಾರದ ನಿಮ್ಮ 12 ರಾಶಿಗಳ ಭವಿಷ್ಯದಲ್ಲಿ ಏನಿದೆ ನೋಡೋಣ… (ನ.2ರಿಂದ ನ.8 ರವರೆಗೆ)
ಮೇಷ
ಹಿತವಾದ ಸುದ್ದಿಗಳು ನಿಮಗೆ ಸಂತಸ ತರುತ್ತವೆ. ಹಾಲು, ಮೊಸರು, ಹೋಟೆಲು ವ್ಯಾಪಾರವು ಉತ್ತಮವಾಗಿರುವುದು. ಉದ್ಯೋಗಸ್ಥರಿಗೆ ಸ್ಥಳ ಬದಲಾವಣೆ. ಸ್ನೇಹಿತರೊಂದಿಗೆ ಭೇಟಿ ಮಾಡಲು ಮತ್ತು ಮೊದಲ ಒಳ್ಳೆಯ ಅಭಿಪ್ರಾಯ ಮೂಡಿಸಲು ನೀವು ಒಳ್ಳೆ ದಿನವನ್ನು ಪಡೆಯುವುದಿಲ್ಲ. ಮಹಿಳೆಯರು ತಮ್ಮ ವಾಕ್ಚಾತುರ್ಯದಿಂದ ಗಮನ ಸೆಳೆಯುತ್ತಾರೆ.

 
ವೃಷಭ
ಹಿತೈಷಿಯಿಂದ ಉತ್ತಮ ಸಲಹೆ.ಕುಟುಂಬದಲ್ಲಿ ಸಂತೋಷದ ವಾತಾವರಣ ಇರುತ್ತದೆ. ಆರೋಗ್ಯ ಉತ್ತಮವಾಗಿರುತ್ತದೆ ಪ್ರೀತಿಪಾತ್ರರೊಂದಿಗಿನ ಭಿನ್ನಾಭಿಪ್ರಾಯ ಕೊನೆಗೊಳ್ಳುವುದು. ಎಲ್ಲಾ ಕ್ಷೇತ್ರಗಳಲ್ಲಿ ನಿಮಗೆ ಮಿಶ್ರ ಫಲ ಲಭಿಸುತ್ತದೆ. ವ್ಯಾಪಾರಿಗಳಿಗೆ ಉತ್ತಮಲಾಭ. ಸ್ತ್ರೀಯರಿಗೆ ಅಹ್ವಾನ ದೊರೆಯುವುದು.

 

 

ಮಿಥುನ
ಗುತ್ತಿಗೆದಾರರು ತಮ್ಮ ನಿರ್ಣಯಗಳನ್ನು ಪರಿಶೀಲಿಸುವುದು ಉತ್ತಮ. ಕುಟುಂಬದಲ್ಲಿ ಪರಸ್ಪರ ಅಸಹಕಾರ. ಹಳೆಯ ಸ್ನೇಹಿತರನ್ನು ಭೇಟಿಯಾಗಲಿದ್ದೀರಿ. ನಿಮ್ಮ ವ್ಯಾಪಾರ ಮತ್ತು ಕೆಲಸ ಪ್ರದೇಶದಲ್ಲಿ ನಿಮ್ಮ ಸಹವರ್ತಿಗಳು ನೆರವು ನೀಡುವ ಸಾಧ್ಯತೆ ಇದೆ.

 

 

ಕರ್ಕಾಟಕ
ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಮನೆಯಲ್ಲಿ ಸಂಭ್ರಮದ ವಾತಾವರಣ. ನಿಮ್ಮ ಅಗತ್ಯ ಮತ್ತು ಇಚ್ಛೆಗಳನ್ನು ವ್ಯಕ್ತಪಡಿಸಲು ಹಾಗೂ ನಿಮಗೆ ನಿಜವಾಗಿಯೂ ಏನು ಬೇಕು ಎಂಬುದನ್ನು ಇತರರಿಗೆ ತಿಳಿಸಲು ಇದು ಸೂಕ್ತ ಸಮಯ. ನೆರೆಹೊರೆಯವರಿಂದ ನೆರವು.

 

 

ಸಿಂಹ
ವಾಗ್ವಾದದಿಂದ ದೂರವಿರಿ. ಹಣಕಾಸಿನ ಬಗ್ಗೆ ಎಚ್ಚರವಿರಲಿ. ಮುಖ್ಯವಾದ ಕಾರ್ಯಗಳಲ್ಲಿ ಏಕಾಗ್ರತೆ ವಹಿಸದಿದ್ದಲ್ಲಿ ಇಕ್ಕಟ್ಟಿಗೆ ಸಿಲುಕುತ್ತೀರಿ. ಖರ್ಚುಗಳು ಹೆಚ್ಚಾದರು ಮಾನಸಿಕ ಶಾಂತಿ ದೊರೆಯುತ್ತದೆ.ನಿಮ್ಮ ಕಾರ್ಯಗಳಲ್ಲಿ ಜಯ ಲಭಿಸಲಿದೆ.

 

 

ಕನ್ಯಾ
ನಿಮ್ಮ ಎಳಿಗೆಯತ್ತ ಗಮನಹರಿಸಿ. ನೀವು ಕೈಗೊಂಡ ಕಾರ್ಯಗಳು ಯಶಸ್ವಿಯಾಗಲಿವೆ. ನಿಮಗೆ ಗೌರವ ಪ್ರಾಪ್ತಿಯಾಗಲಿದೆ. ವಿದೇಶಿ ಪ್ರವಾಸ ಯೋಗವಿದೆ. ವಿಶಿಷ್ಟ, ಆಕರ್ಷಕ ಮತ್ತು ಉಲ್ಲಸಿತ ವ್ಯಕ್ತಿಯೊಬ್ಬರು ನಿಮಗೆ ಸಿಗಬಹುದು. ಮಾನಸಿಕ ನೆಮ್ಮದಿ ದೊರೆಯಲಿದೆ.

 

 

ತುಲಾ
ನಿಮ್ಮ ಸ್ವಂತ ಕೆಲಸವನ್ನು ನೀವು ಜರೂರಾಗಿ ಮಾಡಬೇಕಾಗುತ್ತದೆ. ನಿಮ್ಮ ಯೋಚನೆಗಳ ಬಗ್ಗೆ ಇತರರಿಗೆ ತಿಳಿಸದೇ ಮುಚ್ಚಿಡುವಂತಹ ಕೆಲಸ ಮಾಡಬೇಡಿ. ನೀವು ಸಾಹಸಿ ಮನೋಭಾವ ಹೊಂದಿರುತ್ತೀರಿ. ನಿಮ್ಮ ಪ್ರಯತ್ನ ಸಫಲವಾಗಲಿದೆ.

 

 

ವೃಶ್ಚಿಕ
ನಿಮ್ಮ ಸುತ್ತಲ ವಾತಾವರಣವು ಸಂತಸದಾಯಕವಾಗಿರುತ್ತದೆ. ಕುಟುಂಬದವರ ನೆರವು ಪ್ರಾಪ್ತವಾಗುತ್ತದೆ. ಹೊಸ ವಾಹನ ಖರೀದಿಸಲು ನೀವು ಯೋಚಿಸಬಹುದು. ಕಷ್ಟಕರ ಕಾಲದಲ್ಲಿ ಆರ್ಥಿಕ ನೆರವು. ನಿಮ್ಮ ಪ್ರಯತ್ನಗಳಲ್ಲಿ ಸಾವಧಾನವಾಗಿರಿ.

 

 

ಧನು
ಆರೋಗ್ಯದ ಬಗ್ಗೆ ಗಮನ ಹರಿಸಿ. ಅನಿರೀಕ್ಷಿತ ಧನಲಾಭ ದೊರೆಯುವ ಸಾಧ್ಯತೆ ಇದೆ . ನಿಮ್ಮ ವ್ಯವಹಾರಗಳಲ್ಲಿ ಸ್ನೇಹಿತರಿಂದ ನೆರವು ದೊರೆಯುತ್ತದೆ.ಹಣಕಾಸಿನ ವ್ಯವಹಾರದಲ್ಲಿ ಎಚ್ಚರವಿರಲಿ. ಆರೋಗ್ಯ ಸಂತುಲಿತವಾಗಿರುತ್ತದೆ. ನಿಮಗೆ ಒಳ್ಳೆಯ ಸುದ್ದಿ ಕಾದಿದೆ.

 

 

ಮಕರ
ನಿಮ್ಮ ಕ್ರಿಯಾಶೀಲ ಯೋಚನೆಯನ್ನು ಸರಿಯಾದ ದಿಕ್ಕಿನಲ್ಲಿ ಬಳಸಿದರೆ ಭವಿಷ್ಯದಲ್ಲಿ ಯಶಸ್ಸು. ಚಾಣಕ್ಷತನದಿಂದ ಸತ್ಕಾರ್ಯ ಸಾಧನೆ.ನಿಮ್ಮ ಬಯಕೆಗಳು ಈಡೇರಲಿವೆ. ಹಣವು ಎಲ್ಲ ಕಡೆಗಳಿಂದ ಹರಿದುಬರಲಿದೆ. ನಿಮ್ಮ ಸ್ವಂತ ಪ್ರಯತ್ನದಿಂದ ಆಸ್ತಿ ಪಾಸ್ತಿ ಸಂಪಾದನೆ ಮಾಡುವಿರಿ. ಹಿಂದುಳಿದಿದ್ದ ಎಲ್ಲ ಕಾರ್ಯಗಳಲ್ಲಿ ಆಸಕ್ತಿ.

 
ಕುಂಭ
ಈ ತಿಂಗಳು ಆಶಾಜನಕವಾಗಿದೆ. ಕಳೆದ ಕೆಲ ಕಾಲಗಳಿಂದ ಭಾಧಿಸುತ್ತಿರುವ ಸಮಸ್ಯೆಗಳು ನಿವಾರಣೆಯಾಗಿ ಮಾನಸಿಕವಾಗಿ ನೆಮ್ಮದಿಯನ್ನು ಕಾಣುತ್ತೀರಿ.ರಾಜಕಾರಣಿಗಳಿಗೆ ಉತ್ತಮ ಯೋಗವಿದೆ. ಆರೋಗ್ಯದ ಬಗ್ಗೆ ಗಮನ ಹರಿಸಿ. ಅನಿರೀಕ್ಷಿತ ಧನಲಾಭ ದೊರೆಯುವ ಸಾಧ್ಯತೆ ಇದೆ.

 

 

ಮೀನ
ದಿನ ಆರಂಭವಾಗುತ್ತಿರುವಂತೆಯೇ ನಿಮ್ಮ ತೀಕ್ಷ್ಣ ಬುದ್ದಿವಂತಿಕೆ ಬೆಳಕಿಗೆ ಬರುತ್ತದೆ. ಹಿರಿಯರ ಆರೋಗ್ಯದ ಕಾಳಜಿ ವಹಿಸಿ. ಎಲ್ಲರಿಗೂ ಆತ್ಮೀಯರಾಗಿ ಮತ್ತು ಉತ್ಸಾಹಕರಾಗಿರುವಂತಿರಲು ಪ್ರಯತ್ನಿಸಿ. ನಿಗದಿತ ಅವಧಿಯಲ್ಲಿ ಕಾರ್ಯಗಳನ್ನು ಪೂರ್ಣಗೊಳಿಸಿ.