Headlines

ಆಳ್ವಾಸ್ ವಿದ್ಯಾರ್ಥಿಸಿರಿಯ ಹೈಲೈಟ್ಸ್… * ಬಾಲಪ್ರತಿಭೆ ಪ್ರದರ್ಶನ * ಬಸದಿಗಳ ನಾಡಲ್ಲಿ ಕನ್ನಡದ ಬಾವುಟ… ಹೊತ್ತಿತೋ…ಹೊತ್ತಿತು ಕನ್ನಡದ ದೀಪ… * ನುಡಿಸಿರಿಯ ಸರ್ವಾಧ್ಯಕ್ಷರ ಎಕ್ಸ್ ಕ್ಲೂಸಿವ್ ಸಂದರ್ಶನ * ಹನ್ನೆರಡು ಸಾಧಕರಿಗೆ 2018ರ ಆಳ್ವಾಸ್ ನುಡಿಸಿರಿ ಪುರಸ್ಕಾರ * ನುಡಿಸಿರಿಯ ಅಂಗಳದಲ್ಲಿ ಅಚ್ಚರಿಯ ಮೇಲೊಂದಚ್ಚರಿ! * ನುಡಿಸಿರಿಯ ಅಂಗಳದಲ್ಲೊಂದು ಸುದ್ದಿಮನೆ! * ಆಳ್ವಾಸ್ ವಿದ್ಯಾರ್ಥಿಸಿರಿ 2018 ಆರಂಭ * ಕಣ್ಣುತೆರೆಸಿದ ಜವನೆರ್ ಬೆದ್ರ ಸಂಘಟನೆ * ಯೋಧರ ಮನೆಯಲ್ಲಿ ಬೆಳಗಿದ ದೀಪ! * ಯಶಸ್ವೀ 36ನೇವಾರ ಪೂರೈಸಿದ ಕ್ಲೀನ್ ಅಪ್ ಮೂಡಬಿದಿರೆ * ರಾಜ್ಯಮಟ್ಟದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟ ಆರಂಭ * ಅಳಿಯೂರಿನಲ್ಲಿ ಮೇಳೈಸಲಿದೆ ಕ್ರೀಡಾಹಬ್ಬ.! * ರಾಷ್ಟ್ರಮಟ್ಟಕ್ಕೆ ಆಯ್ಕೆಯಾಯ್ತು ಹಳ್ಳಿ ಹುಡುಗರ ಅನ್ವೇಷಣೆ! * ಶಿರ್ಲಾಲು: ಹೊಸ ಶಾಸನ ಪತ್ತೆ * ಸಾವಿರ ಕಂಬದ ಬಸದಿಯ ಸ್ವಚ್ಛತೆ * ಪುರಸಭೆಯ ಕಣ್ಣುತೆರೆಸಿದ ಜವನೆರ್ ಬೆದ್ರ! * ಪುರಸಭೆಗೆ ಸಾರ್ವಜನಿಕರಿಂದ ಹಿಡಿಶಾಪ * ಕಾರ್ಯಾಂಗ,ನ್ಯಾಯಾಂಗ,ಶಾಸಕಾಂಗದ ವೈಫಲ್ಯದ ವಿರುದ್ಧ ಹೋರಾಟ: ಸುದರ್ಶನ್ * ಬೆಸ್ಟ್ ಡ್ರಾಮೇಬಾಜ್ ಖ್ಯಾತಿಯ ಶ್ರೀಶ ಬೆಂಗಳೂರು ಅವರಿಗೆ ಗೌರವ ಸನ್ಮಾನ *

ರಾಶಿ ಫಲ

astrology vaarte

ಈ ವಾರದ ನಿಮ್ಮ 12 ರಾಶಿಗಳ ಭವಿಷ್ಯದಲ್ಲಿ ಏನಿದೆ ನೋಡೋಣ… ( ಡಿಸೆಂಬರ್ 8 ರಿಂದ ಡಿಸೆಂಬರ್  14 ರವರೆಗೆ)

ಮೇಷ
ಕುಟುಂಬದಲ್ಲಿ ಖರ್ಚುಗಳು ಹೆಚ್ಚಾಗುವ ಸಾಧ್ಯತೆಗಳಿವೆ. ಬಂಗಾರದ ಆಭರಣಗಳನ್ನು ಖರೀದಿಸುತ್ತೀರಿ. ಐತಿಹಾಸಿಕ ಸ್ಥಳಗಳಿಗೆ ಪ್ರವಾಸ ಯೋಗ. ಕುಟುಂಬದ ಹಿರಿಯರಲ್ಲಿ ನೆಮ್ಮದಿಯ ವಾತಾವರಣ.

 

 

ವೃಷಭ
ಆ ವಾರ ನೀವು ಒಳ್ಳೆಯ ದಿನವನ್ನು ಕಳೆಯುವಿರಿ. ಕೆಲವು ಪ್ರಮುಖ ಕಾರ್ಯಗಳು ಪೂರ್ಣಗೊಳ್ಳಲಿವೆ, ಮಾನಸಿಕ ನಿರಾಳತೆ ದೊರಕುತ್ತದೆ. ಮಿತ್ರರ ಸಹಕಾರ. ದೊರೆಯುವ ಅವಕಾಶಗಳಿವೆ. ಅಸಹಕಾರ ಭಾವನೆಗಳಿಂದ ಹಾನಿಯಾಗಲಿದೆ.

 

 

ಮಿಥುನ
ಈ ವಾರ ನೀವು ಉತ್ತಮ ಮನಸ್ಥಿತಿಯಲ್ಲಿರುವಂತೆ ಕಾಣುತ್ತದೆ. ನಿಮ್ಮ ಆಕಾಂಕ್ಷೆಗಳನ್ನು ಪೂರ್ಣಗೊಳಿಸುವತ್ತ ದೃಢ ಹೆಜ್ಜೆಗಳನ್ನು ಇರಿಸಲಿದ್ದೀರಿ. ಪ್ರೀತಿಸಿದವರ ಮೇಲೆ ಪ್ರೋತ್ಸಾಹ ಮತ್ತು ಗಮನ ನೀಡಬೇಕಾದ ಅವಶ್ಯಕತೆ ಇದೆ.ಹಿರಿಯರ ಆರೋಗ್ಯದ ಬಗ್ಗೆ ಗಮನಹರಿಸಲು ಪ್ರಯತ್ನಿಸಿ.

 

 

ಕರ್ಕಾಟಕ
ಪ್ರಮುಖ ಕೆಲಸಗಳಲ್ಲಿ ಇಂದು ನೀವು ಯಶಸ್ವಿಯಾಗುತ್ತೀರಿ. ಮಿತ್ರರ ಸಹಕಾರವೂ ದೊರೆಯಲಿದೆ. ವಿದೇಶಿ ಪ್ರವಾಸ ಯೋಗವಿದೆ. ನೂತನ ವ್ಯಕ್ತಿಗಳ ಪರಿಚಯವಾಗಲಿರುವುದರಿಂದ ಮಾನಸಿಕ ನೆಮ್ಮದಿ ದೊರೆಯಲಿದೆ. ಪತ್ರಿಕಾ ರಂಗದಲ್ಲಿ ಕಾರ್ಯನಿರ್ವಹಿಸುವವರಿಗೆ ಗೌರವ ದೊರೆಯಲಿದೆ.

 
ಸಿಂಹ
ಸ್ನೇಹಿತನಿಂದ ಸುದ್ದಿಯು ಒಬ್ಬರನ್ನೊಬ್ಬರು ನೋಡಲು ಯೋಜನೆ ಮಾಡುತ್ತದೆ. ವಿರಸಗಳಿಂದ ಮಾನಸಿಕ ಅಶಾಂತಿ. ರಹಸ್ಯ ವಿತಾರಗಳನ್ನು ರಹಸ್ಯವಾಗಿಡಲು ಪ್ರಯತ್ನಿಸಿ. ಕುಟುಂಬದಲ್ಲಿ ಪ್ರೇಮ ಅನುರಾಗಗಳು ಹೆಚ್ಚಾಗುತ್ತವೆ. ಆರೋಗ್ಯದ ಬಗ್ಗೆ ಎಚ್ಚರಿಕೆವಹಿಸಿ.

 

 

ಕನ್ಯಾ
ವ್ಯಾಪಾರ ವಹಿವಾಟುಗಳಲ್ಲಿ ಉನ್ನತಿ. ದಿಢೀರ್ ಪ್ರಯಾಣ ಅನುಕೂಲಕರ. ಬುದ್ದಿಜೀವಿಗಳ ಸಮಾಗಮಕ್ಕೆ ಕಾತುರ. ಹಳೆಯ ಮಿತ್ರನ ಭೇಟಿ. ನಿಮ್ಮ ಬಯಕೆಗಳು ಈಡೇರಲಿವೆ. ಹಣವು ಎಲ್ಲ ಕಡೆಗಳಿಂದ ಹರಿದುಬರಲಿದೆ. ಸರಕು ಸಾಗಾಣಿಕೆದಾರರಿಗೆ, ಟ್ರಾವೇಲ್ಸ್ ಮಾಲೀಕರಿಗೆ ಉತ್ತಮ ಲಾಭವಾಗಲಿದೆ.

 
ತುಲಾ
ನೀವು ಏನು ಮಾಡಬೇಕೆಂದಿರುವಿರೋ ಅದನ್ನು ನೀವು ನೆರವೇರಿಸುವಿರಿ, ಹೆಚ್ಚು ಕೆಲಸವಿಲ್ಲದಿರುವುದರಿಂದ ನೀವು ನೀವಾಗಿಯೇ ಹೆಜ್ಜೆ ಇರಿಸುತ್ತೀರಿ.ಮಕ್ಕಳ ಚಟುವಟಿಕೆಗಳಿಂದ ಮನೆಯಲ್ಲಿ ನೆಮ್ಮದಿ. ನಿಮ್ಮ ಹಣಕಾಸು ಪರಿಸ್ಥಿತಿ ಉತ್ತಮಗೊಳ್ಳುತ್ತದೆ. ಖರೀದಿ ಸಂತಸದಾಯಕವಾಗಿರುತ್ತದೆ.

 
ವೃಶ್ಚಿಕ
ನಿಮ್ಮ ಜೀವನದಲ್ಲಿ ವ್ಯಕ್ತಿಗತ ಬೆಳವಣಿಗೆಯೊಂದರ ಬಗ್ಗೆ ನೀವು ಸಂತೋಷಪಡುತ್ತೀರಿ. ನೆನೆಗುದಿಗೆ ಬಿದ್ದ ಕಾರ್ಯಗಳಿಗೆ ಚಾಲನೆ. ನಿಮ್ಮ ಕಾರ್ಯಗಳು ಭರದಿಂದ ಸಾಗುತ್ತವೆ. ಮನೆಯಲ್ಲಿ ಸಂತಸದ ವಾತಾವರಣ. ಕೌಟಂಬಿಕ ನೆಮ್ಮದಿ.

 

 

ಧನು
ನಿಮ್ಮ ಅಗತ್ಯ ಮತ್ತು ಇಚ್ಛೆಗಳನ್ನು ವ್ಯಕ್ತಪಡಿಸಲು ಹಾಗೂ ನಿಮಗೆ ನಿಜವಾಗಿಯೂ ಏನು ಬೇಕು ಎಂಬುದನ್ನು ಇತರರಿಗೆ ತಿಳಿಸಲು ಇದು ಸೂಕ್ತ ಸಮಯ. ವಾಹನ ಚಾಲನೆಯಲ್ಲಿ ಜಾಗೃತೆ, ಅಪಘಾತ ಸಾಧ್ಯತೆ. ಖಾಸಗಿ ಸಂಸ್ಥೆಗಳ ಉದ್ಯೋಗಿಗಳಿಗೆ ಹೊಸ ಆಲೋಚನೆಗಳು ಎದುರಾಗುತ್ತವೆ. ಮನೆಯಲ್ಲಿ ಸಂತಸದ ವಾತಾವರಣವಿದೆ.

 

 

ಮಕರ
ಖಾಸಗಿ ಸಂಸ್ಥೆಗಳ ಉದ್ಯೋಗಿಗಳಿಗೆ ಅಧಿಕಾರದಲ್ಲಿ ಬಡ್ತಿ ದೊರೆಯುತ್ತದೆ.ಆರ್ಥಿಕವಾಗಿ ಉತ್ತಮ ಕಾಲವಾಗಿದೆ. ಸರಕಾರಿ ನೌಕರರಿಗೆ ವರ್ಗಾವಣೆ ಯೋಗ. ದೂರ ಪ್ರಯಾಣದ ಕಾರ್ಯಗಳು ಯಶಸ್ವಿಯಾಗಲಿವೆ. ಮನೆಯಲ್ಲಿ ನೆಮ್ಮದಿಯ ವಾತಾವರಣವಿರುತ್ತದೆ. ಬಹುದಿನಗಳ ಕನಸು ಈಡೇರುವ ಸಮಯ ಬಂದಿದೆ.

 

 

ಕುಂಭ
ಹೊಸ ಯೋಜನೆಗಳು ಮತ್ತು ಯೋಚನೆಗಳಲ್ಲಿ ನಿಮಗೆ ಯಶಸ್ಸು ದೊರೆಯಲಿದೆ. ಹಣಕಾಸು ವ್ಯವಹಾರಗಳಲ್ಲಿ ನಿಮಗೆ ಯಶಸ್ಸು ಲಭಿಸುತ್ತದೆ. ನಿಮ್ಮ ಹಣಕಾಸು ಪರಿಸ್ಥಿತಿ ಉತ್ತಮಗೊಳ್ಳುತ್ತದೆ. ಖರೀದಿ ಸಂತಸದಾಯಕವಾಗಿರುತ್ತದೆ. ಆರೋಪ ಪ್ರತ್ಯಾರೋಪಗಳಲ್ಲಿ ತೊಡಗಬೇಡಿ.

 

 

ಮೀನ
ಕುಟುಂಬದಲ್ಲಿ ನೆಮ್ಮದಿ ದೊರೆಯಲಿದೆ. ವಿರೋಧಿಗಳ ಬಗ್ಗೆ ಎಚ್ಚರವಿರಲಿ. ಎಲ್ಲರಿಗೂ ಆತ್ಮೀಯರಾಗಿ ಮತ್ತು ಉತ್ಸಾಹಕರಾಗಿರುವಂತಿರಲು ಪ್ರಯತ್ನಿಸಿ, ಒಂದು ಪ್ರಣಯದ ಸಂಜೆ ನಿಮಗೆ ಉತ್ಸಾಹ ಮತ್ತು ಆನಂದವನ್ನು ನೀಡಲಿದೆ.