Headlines

ಆಳ್ವಾಸ್ ವಿದ್ಯಾರ್ಥಿಸಿರಿಯ ಹೈಲೈಟ್ಸ್… * ಬಾಲಪ್ರತಿಭೆ ಪ್ರದರ್ಶನ * ಬಸದಿಗಳ ನಾಡಲ್ಲಿ ಕನ್ನಡದ ಬಾವುಟ… ಹೊತ್ತಿತೋ…ಹೊತ್ತಿತು ಕನ್ನಡದ ದೀಪ… * ನುಡಿಸಿರಿಯ ಸರ್ವಾಧ್ಯಕ್ಷರ ಎಕ್ಸ್ ಕ್ಲೂಸಿವ್ ಸಂದರ್ಶನ * ಹನ್ನೆರಡು ಸಾಧಕರಿಗೆ 2018ರ ಆಳ್ವಾಸ್ ನುಡಿಸಿರಿ ಪುರಸ್ಕಾರ * ನುಡಿಸಿರಿಯ ಅಂಗಳದಲ್ಲಿ ಅಚ್ಚರಿಯ ಮೇಲೊಂದಚ್ಚರಿ! * ನುಡಿಸಿರಿಯ ಅಂಗಳದಲ್ಲೊಂದು ಸುದ್ದಿಮನೆ! * ಆಳ್ವಾಸ್ ವಿದ್ಯಾರ್ಥಿಸಿರಿ 2018 ಆರಂಭ * ಕಣ್ಣುತೆರೆಸಿದ ಜವನೆರ್ ಬೆದ್ರ ಸಂಘಟನೆ * ಯೋಧರ ಮನೆಯಲ್ಲಿ ಬೆಳಗಿದ ದೀಪ! * ಯಶಸ್ವೀ 36ನೇವಾರ ಪೂರೈಸಿದ ಕ್ಲೀನ್ ಅಪ್ ಮೂಡಬಿದಿರೆ * ರಾಜ್ಯಮಟ್ಟದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟ ಆರಂಭ * ಅಳಿಯೂರಿನಲ್ಲಿ ಮೇಳೈಸಲಿದೆ ಕ್ರೀಡಾಹಬ್ಬ.! * ರಾಷ್ಟ್ರಮಟ್ಟಕ್ಕೆ ಆಯ್ಕೆಯಾಯ್ತು ಹಳ್ಳಿ ಹುಡುಗರ ಅನ್ವೇಷಣೆ! * ಶಿರ್ಲಾಲು: ಹೊಸ ಶಾಸನ ಪತ್ತೆ * ಸಾವಿರ ಕಂಬದ ಬಸದಿಯ ಸ್ವಚ್ಛತೆ * ಪುರಸಭೆಯ ಕಣ್ಣುತೆರೆಸಿದ ಜವನೆರ್ ಬೆದ್ರ! * ಪುರಸಭೆಗೆ ಸಾರ್ವಜನಿಕರಿಂದ ಹಿಡಿಶಾಪ * ಕಾರ್ಯಾಂಗ,ನ್ಯಾಯಾಂಗ,ಶಾಸಕಾಂಗದ ವೈಫಲ್ಯದ ವಿರುದ್ಧ ಹೋರಾಟ: ಸುದರ್ಶನ್ * ಬೆಸ್ಟ್ ಡ್ರಾಮೇಬಾಜ್ ಖ್ಯಾತಿಯ ಶ್ರೀಶ ಬೆಂಗಳೂರು ಅವರಿಗೆ ಗೌರವ ಸನ್ಮಾನ *

ಯೋಧರ ಮನೆಯಲ್ಲಿ ಬೆಳಗಿದ ದೀಪ!

deepavali1

ಜವನೆರ್ ಬೆದ್ರ ಸಂಘಟನೆಯಿಂದ ವಿಭಿನ್ನ ರೀತಿಯ ದೀಪಾವಳಿ ಆಚರಣೆ
ಮೂಡಬಿದಿರೆ: ಯಥಾ ರಾಜ ತಥಾ ಪ್ರಜಾ ಎಂಬ ಗಾದೆಯೊಂದಿಗೆ. ರಾಜ ಹೇಗಿದ್ದಾನೋ ಅದೇ ರೀತಿ ಪ್ರಜೆಗಳೂ ಇರುತ್ತಾರೆ ಎಂದರ್ಥ. ಹೌದು ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿಯವರು ದೇಶದ ಗಡಿಕಾಯುವ ಯೋಧರೊಂದಿಗೆ ದೀಪಾವಳಿಯನ್ನು ಆಚರಿಸಿ ಯೋಧರಿಗೂ ಶಕ್ತಿ ತುಂಬುವ ಕಾರ್ಯ ಮಾಡಿದರೆ ಇತ್ತ ಮೂಡಬಿದಿರೆಯ ಪುಟ್ಟ ಸಂಘಟನೆಯೊಂದು ಯೋಧರ ಮನೆಯಲ್ಲಿ ದೀಪಾವಳಿ ಆಚರಿಸುವ ಮೂಲಕ ಹೃದಯ ವೈಶಾಲ್ಯತೆಯನ್ನು ಮೆರೆದ ಘಟನೆ ಗುರುವಾರ ನಡೆದಿದೆ.

deepavali

ಮೂಡಬಿದಿರೆಯ ಜವನೆರ್ ಬೆದ್ರ ಸಂಘಟನೆ ಈ ಮಹತ್ಕಾರ್ಯ ಮಾಡುವ ಮೂಲಕ ಪ್ರತಿಯೊಬ್ಬರಿಗೂ ಆದರ್ಶಪ್ರಾಯವಾಗಿದೆ. ಮೂಡಬಿದಿರೆಯ ಮಾಸ್ತಿಕಟ್ಟೆ ನಿವಾಸಿಗಳಾದ ಶಾಂತಿರಾಜ ಹೆಗ್ಡೆ ಮತ್ತು ಐರಾವತೀದೇವಿ ಅವರ ಇಬ್ಬರು ಮಕ್ಕಳು ದೇಶದ ಗಡಿಕಾಯುವ ಮಹತ್ಕಾರ್ಯ ಮಾಡುತ್ತಿದ್ದಾರೆ. ನಮ್ಮ ಮಕ್ಕಳನ್ನು ದೇಶ ಸೇವೆಗೆ ಕಳುಹಿಸಿದ ಮಹಾನ್ ಪೋಷಕರ ಮನೆಯನ್ನೇ ಆರಿಸಿ ಅಲ್ಲಿ ಸಂಘಟನೆಯ ಸರ್ವ ಸದಸ್ಯರ ಸಮ್ಮುಖದಲ್ಲಿ ಆದರಣೀಯ ದಂಪತಿ ಸನ್ಮಾನ ನಡೆಸಿ, ಗೋಪೂಜೆಗೈದು, ಸುಡುಮದ್ದಿನೊಂದಿಗೆ ಸಿಹಿಭಕ್ಷ್ಯ ಹಂಚಿ ಸಂಭ್ರಮೋಲ್ಲಾಸದಿಂದ ದೀಪಾವಳಿ ಆಚರಿಸುವ ಮೂಲಕ ಜವನೆರ್ ಬೆದ್ರ ಸಂಘಟನೆ ಮಾದರಿಯೆನಿಸಿತು.

deepavali2

ಜವನೆರ್ ಬೆದ್ರ ಸಂಘಟನೆ ಹೇಳಿದ್ದೇನು ಗೊತ್ತೇ…?
ದೀಪಾವಳಿ ಬಂತೆಂದರೆ ಬೋನಸ್ ಹಿಡಿದುಕೊಂಡು ಪಟಾಕಿ ಸಿಡಿಸಿ, ದೋಸೆ ತಿಂದು ಸಖತ್ತಾಗಿ 3 ದಿನಗಳ ಕಾಲ ಕುಟುಂಬ ಸ್ನೇಹಿತರೊಂದಿಗೆ ನಾವು ಎಂಜಾಯ್ ಮಾಡುತ್ತೇವೆ. ಆದರೆ ತಮ್ಮ ಕಣ್ಣಿಗೆ ಎಣ್ಣೆ ಬಿಟ್ಟು, ನಮ್ಮನ್ನು ಕಣ್ಣಲ್ಲಿ ಕಣ್ಣಿಟ್ಟು, ಗಡಿಯಲ್ಲಿ ಶತ್ರುದೇಶದ ನರಿಗಳನ್ನು ತಮ್ಮ ಬಂದೂಕಿನ ತುದಿಯಿಂದ ದಿಟ್ಟಿಸಿ ನಮ್ಮನ್ನು ರಕ್ಷಿಸುತ್ತಿರುವ ಕಣ್ಣಿಗೆ ಕಾಣುವ ದೇವರುಗಳು ನಮ್ಮ ದೇಶದ ಯೋಧರಿಗೆ ಮಾತ್ರ ಹಬ್ಬದ ವಾತಾವರಣವೇ ಇಲ್ಲ. ಛೇ, ಈ ಹಬ್ಬಕ್ಕೂ ನಮ್ಮ ಮಕ್ಕಳೊಂದಿಗೆ ದೀಪಾವಳಿ ಆಚರಿಸೋದಕ್ಕೆ ಆಗ್ತಾ ಇಲ್ವಲ್ಲಾ ಎಂಬ ಕೊರಗು ಅವರ ಹೆತ್ತವರದ್ದು. ಇದಕ್ಕಾಗಿಯೇ ಜವನೆರ್ ಬೆದ್ರ ಸಂಘಟನೆ ಈ ಬಾರಿಯ ದೀಪಾವಳಿಯನ್ನು ಯೋಧರ ಮನೆಯಲ್ಲಿ ಆಚರಿಸುವುದಕ್ಕೆ ನಿರ್ಧರಿಸಿದೆ. ಮೂಡುಬಿದಿರೆಯ ಮಾಸ್ತಿಕಟ್ಟೆ ಸಮೀಪದ ನಿವಾಸಿಗಳಾದ ಮಹವೀರ್ ಜೈನ್ ಹಾಗೂ ಮಹೇಂದ್ರ ಜೈನ್ ಎಂಬವರು ಹಲವಾರು ವರ್ಷಗಳಿಂದ ಸೈನ್ಯದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

b1ba22f7-286b-4404-9306-291743dfc079

ಮಹವೀರ್ ಜೈನ್ ಎಂಬವರು ಕಳೆದ 20 ವರ್ಷದಿಂದ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಜಮ್ಮು-ಕಾಶ್ಮೀರ, ಪಠಾಣ್ ಕೋಟ್, ಗ್ವಾಲಿಯರ್, ಅಸ್ಸಾಂ, ಹಾಗೂ ಎಟಿಸಿಯಲ್ಲಿ ಸೇವೆಯನ್ನು ಸಲ್ಲಿಸಿದ್ದಾರೆ. ಆಪರೇಷನ್ ಪರಾಕ್ರಮ್ ವೇಳೆಯಲ್ಲಿ ರಾಜಸ್ತಾನದಲ್ಲಿ ಸೇವೆ ಸಲ್ಲಿಸುತ್ತಿದ್ದರು.ಈಗ ಬೆಂಗಳೂರಿನಲ್ಲಿ ಎನ್.ಸಿ.ಸಿ. ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇನ್ನು ಇವರ ಸಹೋದರ ಮಹೇಂದ್ರ ಜೈನ್ ಎಂಬವರು ಭಾರತೀಯ ಸೇನೆಯಲ್ಲಿ 14 ವರ್ಷದಿಂದ ಸೇವೆ ಸಲ್ಲಿಸುತ್ತಿದ್ದಾರೆ. ಅರುಣಾಚಲ,ರಾಜಸ್ತಾನ, ನಸಿರಾಬಾದ್,ಜಮ್ಮುವಿನ ಅಕ್ನೋರ್, ಮಿರಾಟ್, ಕಾಶ್ಮೀರ, ಬಾರಮುಲ್ಲ, ಸಹಿತ ಅನೇಕ ಕಡೆಗಳಲ್ಲಿ ಸೇವೆ ಸಲ್ಲಿಸಿ ಇದೀಗ ಉತ್ತರ ಪ್ರದೇಶದ ಮಿರಾಟ್ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ತಮ್ಮ ಇಬ್ಬರು ಮಕ್ಕಳನ್ನೂ ತಾಯಿ ಭಾರತಿಯ ಸೇವೆಗಾಗಿ ಗಡಿಗೆ ಕಳಿಸಿರುವ ದೇಶಭಕ್ತ ಕುಟುಂಬದೊಂದಿಗೆ ನಾವು ದೀಪಾವಳಿಯನ್ನು ಆಚರಿಸುತ್ತಿದ್ದೇವೆ ಎಂದು ಈ ಸಂಘಟನೆ ಹೇಳಿದೆ. ಅದು ನಿಜವೂ ಕೂಡ.

deepavali3

ಕಳಂಕರಹಿತ ಪೀಳಿಗೆ: ಇಬ್ಬರು ಮಕ್ಕಳನ್ನು ಸೇನೆಗೆ ಕಳುಹಿಸುವ ಮೂಲಕ ದೇಶಸೇವೆಯ ಕನಸು ನನಸಾಗಿದೆ. ಈ ಮಕ್ಕಳೇ ನನ್ನ ಆಸ್ತಿ. ಕಳಂಕರಹಿತ ಪೀಳಿಗೆ ಮುಂದುವರಿದಿದೆ ಎಂಬ ಹೆಮ್ಮೆ ನನಗಿದೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿನ್ನಲೆಯಿಂದಾಗಿ ದೇಶಪ್ರೇಮಿ ಕುಟುಂಬ ನಮ್ಮದಾಯಿತು ಎಂದು ಶಾಂತಿರಾಜ ಹೆಗ್ಡೆ ಹೇಳಿದರು.
ಸಮಾಜವನ್ನು ಸನ್ಮಾರ್ಗದತ್ತ ಕೊಂಡೊಯ್ಯುವ ಮಹತ್ಕಾಯ ಇಂದಾಗುವ ಅನಿವಾರ್ಯತೆಯಿದೆ ಎಂದು ನಿವೃತ್ತ ಯೋಧ ರಾಜೇಂದ್ರ ಜಿ ಅಭಿಪ್ರಾಯಿಸಿದರು.
ಜವನೆರ್ ಬೆದ್ರ ಸಂಘಟನೆ ಸಮಾಜಮುಖೀ ಚಿಂತನೆಯೊಂದಿಗೆ, ಸಮಾಜದಲ್ಲಿ ಬದಲಾವಣೆ ತರುವ ಪ್ರಯತ್ನ ಮಾಡುತ್ತಿದೆ ಎಂದು ಅಧ್ಯಕ್ಷತೆ ವಹಿಸಿದ್ದ ಜವನೆರ್ ಬೆದ್ರ ಸಂಘಟನೆಯ ಅಧ್ಯಕ್ಷ ಅಮರ್ ಕೋಟೆ ಅಭಿಪ್ರಾಯಿಸಿದರು. ಸಂಘಟನೆಯ ಪ್ರಧಾನ ಕಾರ್ಯದರ್ಶಿ ಸುನಿಲ್ ಪಣಪಿಲ ಕಾರ್ಯಕ್ರಮ ನಿರ್ವಹಿಸಿದರು.

deepavali1

ಜಿನುಗಿದ ಆನಂದ ಭಾಷ್ಪ: ತಮ್ಮ ಮನೆಯಲ್ಲಿ ನಡೆಯುವ ಕಾರ್ಯಕ್ರಮ ಹಾಗೂ, ತಮ್ಮ ತಂದೆಯವರ ಹೃದಯಾಂತರಾಳದ ಮಾತುಗಳನ್ನು ತದೇಕಚಿತ್ತದಿಂದ `ವಿಡಿಯೋ ಕಾಲ್’ಮೂಲಕ ವೀಕ್ಷಿಸುತ್ತಿದ್ದ ಯೋಧ ಮಹೇಂದ್ರ ಜೈನ್ ಅವರ ಕಣ್ಣಾಲಿಗಳು ತುಂಬಿಕೊಂಡವು. ಕಣ್ಣಂಚಿನಿಂದ ಎರಡು ಹನಿ ನೀರು ಜಿನುಗಿತು. ತಾವು ದೇಶದ ಗಡಿಕಾಯುತ್ತಿದ್ದರೂ ನಮಗಾಗಿ ಮಿಡಿಯುವ ಹೃದಯಗಳ ಸಮ್ಮಿಲನ ಅವರ ಮನದಲ್ಲಿ ನೆಮ್ಮದಿಯನ್ನು ತಂದಿದ್ದವು.
ಈ ಸಂದರ್ಭದಲ್ಲಿ ಸಂಘಟನೆಯ ಸದಸ್ಯರಾದ ರವಿಪ್ರಸಾದ್, ರಂಜಿತ್ ಶೆಟ್ಟಿ, ವಿಕ್ಕಿ ಶೆಟ್ಟಿ, ಪ್ರತೀಕ್, ಸಂತೋಷ್, ಸುರೇಶ್, ಪ್ರತೀಷ್, ನಿತೇಶ್ ಕಡೆಪಳ್ಳ, ಹರಿಪ್ರಸಾದ್, ಅನಿಲ್ ಸೇರಿದಂತೆ ಅನೇಕರು ಭಾಗಿಗಳಾಗಿದ್ದರು.