Headlines

ಕಂಬಳಸಮಿತಿ ಸಭೆ * 30ನೇವಾರದ ಕ್ಲೀನ್ ಅಪ್ ಮೂಡಬಿದಿರೆ * ಸ್ವಚ್ಛತಾ ದಿನಾಚರಣರೆ * ಶಾಸಕ ಉಮಾನಾಥ್ ಎ.ಕೋಟ್ಯಾನ್ ವಿಶೇಷ ಸಂದರ್ಶನ * ಸಮ್ಮೇಳನದ ಸರ್ವಾಧ್ಯಕ್ಷರಾಗಿ ಡಾ. ಮಲ್ಲಿಕಾ ಎಸ್.ಘಂಟಿ, ಉದ್ಘಾಟಕರಾಗಿ ಡಾ.ಷ. ಶೆಟ್ಟರ್ * ಫಲವಿತರಿಸಿ ಹುಟ್ಟುಹಬ್ಬ ಆಚರಣೆ * ನುಡಿಸಿರಿಯಲ್ಲೊಂದು ಕೃಷಿಸಿರಿ:ಡಾ.ಆಳ್ವ * ಹುಲಿ-ಸ್ವಚ್ಛತೆಯೂ -ಗಣೇಶೋತ್ಸವವೂ-ಪುರಸಭೆಯೂ! * ಗಣೇಶ ದರ್ಶನ… * ಮೂಡಬಿದಿರೆಯಲ್ಲಿ ಗಣೇಶೋತ್ಸವದ ಗೌಜಿ ಶುರು… * 28ನೇ ವಾರದ ಸ್ವಚ್ಛತಾ ಅಭಿಯಾನ * ಈ ಕರ್ಮಕಾಂಡಕ್ಕೆ ಯಾರು ಬಲಿ…? * `ಗುಣಮಟ್ಟದ ಶಿಕ್ಷಣ-ಸೂಕ್ತ ಉದ್ಯೋಗಕ್ಕೆ ಒತ್ತು’ * 27ನೇ ವಾರದ ಕ್ಲೀನ್ ಅಪ್ ಮೂಡಬಿದಿರೆ ಸಂಪನ್ನ * ನಮ್ಮ ಹೆಮ್ಮಕ್ಕಳು ಅದೆಷ್ಟು ಸುರಕ್ಷಿತ…? * ಮನಮೋಹಕ ನೃತ್ಯ ಸಿಂಚನ * ಸ್ವಚ್ಛ ಸರ್ವೇಕ್ಷಣ ಗ್ರಾಮೀಣ 2018 * ಆಧುನಿಕತೆಯೇ ಮುಳುವಾಯಿತೇ…? * ನಾಟ್ಯ ಮಯೂರಿ… * ನವೆಂಬರ್ 16-18: ಆಳ್ವಾಸ್ ನುಡಿಸಿರಿ *

ಯುವಶಕ್ತಿಯಲ್ಲಿ ಸಾಹಿತ್ಯದ ಸ್ಪೂರ್ತಿಗೆ ವಿದ್ಯಾರ್ಥಿ ಸಿರಿ

#alvas#nudisiri#moodbidri

ಹರೀಶ್ ಕೆ.ಆದೂರು.

ಹಲವು ಸವಾಲುಗಳ ಮಧ್ಯೆಯೂ, ಆಂಗ್ಲ ಭಾಷಾ ವ್ಯಾಮೋಹ,ಜಾಗತೀಕರಣದ ಓಘ, ಖಾಸಗೀಕರಣದ ದಾಳಿಯ ನಡುವೆಯೂ ಯುವ ಮನಸ್ಸುಗಳಲ್ಲಿ ಕನ್ನಡ ಸಾಹಿತ್ಯದ ಬೀಜ ಬಿತ್ತುವ , ಸಾಹಿತ್ಯ ಸ್ಪೂರ್ತಿಯನ್ನು ತುಂಬುವ ನುಡಿಸಿರಿಯ ವಿದ್ಯಾಥರ್ಿ ಸಿರಿ ವೈಭವವು `ನಿಜಾರ್ಥದ ಕನ್ನಡ ಸೇವೆಗೆ ಹಿಡಿದ ಕೈಗನ್ನಡಿ ಎಂದರೆ ತಪ್ಪಲ್ಲ…
ನುಡಿಸಿರಿಗೆ ಈಗ 14ರ ಹರೆಯ…ಆರಂಭದಿಂದಲೂ ನುಡಿಸಿರಿಯಲ್ಲಿ ವಿದ್ಯಾಥರ್ಿಗಳ ಒಡ್ಡೋಲಗ ತಪ್ಪಿಲ್ಲ… ಎಲ್ಲೆಡೆಯೂ ಹಿರಿಯರೊಂದಿಗೆ ಬೆರೆಯುವ ವಿದ್ಯಾರ್ಥಿ ಸಮೂಹ ಪ್ರತಿಯೊಬ್ಬರಿಗೂ ಕುತೂಹಲಕ್ಕೆ ಕಾರಣವಾಗಿದ್ದಂತೂ ಸತ್ಯ. `ಇದ್ಯಾಕೆ ಹೀಗೆ …?’ ಎಂಬ ಪ್ರಶ್ನೆ ಉದ್ಭವಿಸದೆ ಬಿಟ್ಟಿಲ್ಲ.
ಹಲವು ವರುಷಗಳ ಹಿಂದಿನಮಾತು…ಆರಂಭದ ನುಡಿಸಿರಿಯನ್ನೊಮ್ಮೆ ಮೆಲುಕುಹಾಕ ಹೊರಟಾಗ ಕಂಡುಬಂದ ಒಂದು ವಿಚಾರವೆಂದರೆ ಡಾ.ಎಂ.ಮೋಹನ ಆಳ್ವರ ಬದ್ಧತೆ. ಅದು ವಿದ್ಯಾರ್ಥಿಗಳ ಬಗ್ಗೆ ಅವರಿಗಿದ್ದ ಬಹುದೊಡ್ಡ ಆಸಕ್ತಿ… ಯುವ ಮನಸ್ಸುಗಳ ಬಗೆಗಿರುವ ಬಹುದೊಡ್ಡ ಆಸೆ… ನಮ್ಮ ನೆಲದ ಬಹುರೂಪೀ ಸಂಸ್ಕೃತಿಯನ್ನೂ ಅದರ ದೇಸೀಯ ಸೊಗಡನ್ನೂ ಅರ್ಥಮಾಡಿಕೊಂಡು ಯುವ ವಿದ್ಯಾರ್ಥಿ ಮನಸ್ಸು ಬೆಳೆಯಬೇಕು; ಭವಿಷ್ಯದಲ್ಲಿ ಕನ್ನಡವನ್ನು ಕಟ್ಟುವ ಬೆಳೆಸುವ ಯುವ ಪ್ರಪಂಚಕ್ಕೆ ಸೂಕ್ತ ಮಾರ್ಗದರ್ಶನ ನೀಡುವ ಉದ್ದೇಶವನ್ನು ಸ್ಪಷ್ಟ ಪಡಿಸಿದ್ದು ನೋಡಿದರೆ `ಇದ್ಯಾಕೆ ಹೀಗೆ…?’ ಎಂಬ ಪ್ರಶ್ನೆಗೆ ಸ್ಪಷ್ಟ ಉತ್ತರಲಭಿಸಿದಂತಾಗುತ್ತದೆ!
ಮೋಹನ ಆಳ್ವರು ಇನ್ನಷ್ಟು ಸ್ಪಷ್ಟತೆಯನ್ನು ಬಿಚ್ಚಿಡುತ್ತಾರೆ. ಯುವ ಜನತೆ ಹಾದಿ ತಪ್ಪುತ್ತಿದೆ ಎಂದು ಭಾಷಣ ಬಿಗಿಯುವ ಮಂದಿ ಸಾಕಷ್ಟು ಸಿಗುತ್ತಾರೆ. ಆದರೆ ಸರಿಯಾದ ದಾರಿ ಯಾವುದು ಎಂದು ತೋರಿಸುವ, ದೇಶದ ನೈಜ ಪರಂಪರೆ ಯಾವುದು ಎಂಬುದನ್ನು ಅವರಿಗೆ ತಿಳಿಸಿಕೊಡುವ ಜನತೆ ನಮ್ಮ ನಡುವೆ ಎಷ್ಟಿದ್ದಾರೆ ಎಂದು ಪ್ರಶ್ನಿಸುತ್ತಾರೆ. ಈ ದೇಶವನ್ನು ಅರ್ಥಮಾಡಿಕೊಳ್ಳುವ ಉದ್ದೇಶದಿಂದ ಇಲ್ಲಿಯ ಸಾಹಿತ್ಯ, ಸಂಗೀತ, ನಾಡು ನುಡಿಯ ಕುರಿತು ಪ್ರೀತಿಯನ್ನೋ ಜಿಜ್ಞಾಸೆಯನ್ನೋ ಹುಟ್ಟುಹಾಕುವ ಸ್ಪಷ್ಟ ಉದ್ದೇಶವನ್ನು ಆಳ್ವಾಸ್ ನುಡಿಸಿರಿಯ ಮೂಲಕ ವಿದ್ಯಾರ್ಥಿಗಳನ್ನು ಗಮನದಲ್ಲಿರಿಸಿ ಮಾಡಲಾಗುತ್ತದೆ ಎನ್ನುತ್ತಾರೆ.
ಹದಿನಾಲ್ಕು ವರ್ಷದ ನುಡಿಸಿರಿಯ ಸುದೀರ್ಘ ಇತಿಹಾಸವನ್ನು ಕೆದುಕುತ್ತಾ ಹೋದರೆ ಅಲ್ಲಿ ಉದ್ಘಾಟಕಾರದಿಯಾಗಿ ಸಮ್ಮೇಳನಾಧ್ಯಕ್ಷರ ಆದಿಯಾಗಿ ಪ್ರತಿಯೊಬ್ಬರೂ ಯುವ ಸಮೂಹದ ಬಗ್ಗೆ ಅಚ್ಚರಿ ವ್ಯಕ್ತಪಡಿಸಿ ಮುಕ್ತ ಕಂಠದಿಂದ ಪ್ರಶಂಸಿರುವುದನ್ನು ಕಾಣಬಹುದು. ಪ್ರತಿಯೊಬ್ಬರಲ್ಲಿ ಅಡಗಿರುವ ಸಂವೇದನೆಯನ್ನು ಒರೆಗೆ ಹಚ್ಚುವ, ಅದನ್ನು ಮತ್ತಷ್ಟು ಚುರುಕುಗೊಳಿಸುವಂತೆ ಪ್ರಚೋದಿಸುವ ಕಾರ್ಯವು ನಡಿಸಿರಿಯಿಂದಾಗಿದೆ ಎಂದರೆ ತಪ್ಪಲ್ಲ. ವಿದ್ಯಾರ್ಥಿಗಳನ್ನು ಸರಿದಾರಿಗೆ ಕೊಂಡೊಯ್ಯುವ ಮಹೋನ್ನತ ಜವಾಬ್ದಾರಿಯನ್ನು ಹೊಂದಿರುವ ಶಿಕ್ಷಣ ಸಂಸ್ಥೆಯೊಂದು ಶಿಕ್ಷಣದ ಭಾಗವೇ ಆಗಿರುವ ಸಾಹಿತ್ಯದ ಮೂಲಕ ಸಂಸ್ಕೃತಿಯ ಉದ್ದೀಪನಗೊಳಿಸಿ ಹಾದಿ ತಪ್ಪುವ ಯುವ ಮನಸ್ಸುಗಳಿಗೆ ಸಾಹಿತ್ಯ ಸ್ಪೂರ್ತಿಯನ್ನು ಸ್ಪುರಿಸುವಂತೆ ಮಾಡುತ್ತಿರುವ ಕಾರ್ಯವನ್ನು ಮುಕ್ತಕಂಠದಿಂದ ಶ್ಲಾಘಿಸಲೇ ಬೇಕು.
ಸರಕಾರೀ ಕೃಪಾಪೋಷಿತ ಕನ್ನಡ ಸಾಹಿತ್ಯ ಸಮ್ಮೇಳನವಿರಲಿ, ವಿಶ್ವಸಮ್ಮೇಳನಗಳಿರಲಿ ಅಲ್ಲೆಲ್ಲೂ ಯುವ ಮನಸ್ಸುಗಳಿಗೆ ಸ್ಪಂದಿಸುವ, ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕಾರ್ಯಗಳಾಗಿಲ್ಲ. ಆದರೆ ನುಡಿಸಿರಿಯಲ್ಲಿ ಆರಂಭದಿಂದಲೂ ಯುವ ಮನಸ್ಸುಗಳನ್ನು ಒಂದೆಡೆ ಸೇರಿಸುವ ಹಿರಿಯ ಸಾಹಿತಿಗಳೊಂದಿಗೆ ಬರೆಯುವಂತೆ ಮಾಡುವ, ಸಾಹಿತ್ಯದಲ್ಲಿ ಆಸಕ್ತಿಯಿಂದ ಭಾಗವಹಿಸಿ ಪಾಲು ಪಡೆದುಕೊಳ್ಳುವಂತೆ ಮಾಡುವ ಒಂದಿಲ್ಲೊಂದು ಕಾರ್ಯಗಳು ಹಲವು ಆಯಾಮಗಳಲ್ಲಿ ನಡೆಯುತ್ತಾ ಬಂದಿದೆ. ಅದಕ್ಕೊಂದು ಸ್ಪಷ್ಟ ರೂಪವನ್ನು `ವಿದ್ಯಾರ್ಥಿ ಸಿರಿ’ಯೆಂಬ ಮಕ್ಕಳಿಗಾಗಿ ಮಕ್ಕಳಿಂದಲೇ ನಡೆಸಲ್ಪಡುವ ಸಮ್ಮೇಳನದ ಮೂಲಕ ನೀಡಲಾಗುತ್ತಿದೆ. ನುಡಿಸಿರಿ,ವಿದ್ಯಾರ್ಥಿ ಸಿರಿಯಲ್ಲಿ ವರ್ಷಂಪ್ರತಿ 4-5ಸಾವಿರ ವಿದ್ಯಾರ್ಥಿಗಳು ಭಾಗವಹಿಸುತ್ತಿದ್ದಾರೆ. ಅವಿಭಜಿತ ದಕ್ಷಿಣ ಕನ್ನಡಜಿಲ್ಲೆ ಕಾಸರಗೋಡು ಜಿಲ್ಲೆಗಳ ವಿದ್ಯಾರ್ಥಿಗಳು ಸೇರಿದಂತೆ ರಾಜ್ಯಾದ್ಯಂತ ಹರಡಿನಿಂತ ಹಲವು ವಿದ್ಯಾಸಂಸ್ಥೆಗಳ ವಿದ್ಯಾರ್ಥಿಗಳು ಭಾಗವಹಿಸುತ್ತಿದ್ದಾರೆ.

ಇದೊಂದು ಮಾನಸ ಯಜ್ಞ, ಎಳೆಯ ಮನಸ್ಸುಗಳ ಯಜ್ಞ, ಎಳೆಯ ಮನಸ್ಸುಗಳಿಗಾಗಿ ಬಲಿತ ಮನಸ್ಸುಗಳು ಮಾಡುವ ಯಜ್ಞ. ಈ ಯಜ್ಞದಲ್ಲಿ ಭಾಗಿಗಳಾದ ಸಾವಿರಾರು ಕನ್ನಡದ ಯುವ ಮನಸ್ಸುಗಳಲ್ಲಿ ಕನ್ನಡದ ಬಗ್ಗೆ ಸಂಸ್ಕೃತಿಯ ಬಗ್ಗೆ ಒಂದಷ್ಟು ಪ್ರೀತಿ, ಒಂದಷ್ಟು ಕುತೂಹಲ ಹುಟ್ಟಿದರೂ ಸಾಕು ನುಡಿಸಿರಿ ಸಾರ್ಥಕವಾದಂತೆ.
– ಡಾ.ಚಂದ್ರಶೇಖರ ಕಂಬಾರ

ಕನ್ನಡ ಸಾಹಿತ್ಯ,ಸಾಂಸ್ಕೃತಿಕ ಲೋಕದ ಹಿರಿಯರೆನ್ನೆಲ್ಲ ಒಂದೆಡೆ ಸೇರಿಸಿ ಅವರಿಂದ ಹೊಮ್ಮುವ ಸಾಹಿತ್ಯದ ಅಮೃತಧಾರೆಯನ್ನು ಯುವಜನಾಂಗಕ್ಕೆ ಉಣಿಸುವ ಕೆಲಸವನ್ನು ಕೈಲಾದ ಮಟ್ಟಿಗೆ ನುಡಿಸಿರಿ ಮಾಡುತ್ತಾ ಬಂದಿದೆ.
– ಡಾ.ಎಂ.ಮೋಹನ ಆಳ್ವ.

ವಿದ್ಯಾರ್ಥಿ ಸಿರಿಯಲ್ಲಿ ರಾಷ್ಟ್ರೀಯ ವಿಜ್ಞಾನ ಮೇಳ
ಚಿತ್ರ,ಕಾರ್ಟೂನ್,ಛಾಯಾಚಿತ್ರ ಪ್ರದರ್ಶನ
ಆಯ್ದ ಕನ್ನಡ ಭಾಷಾ ಚಲನಚಿತ್ರ
ಮೆರವಣಿಗೆಯಲ್ಲೂ ವಿದ್ಯಾರ್ಥಿಗಳಿಗೆ ಅವಕಾಶ
ರಾಜ್ಯದ ವಿವಿಧಜಿಲ್ಲೆಗಳ 5000ಕ್ಕೂ ಮಿಕ್ಕಿ ವಿದ್ಯಾರ್ಥಿಗಳ ಭಾಗವಹಿಸುವಿಕೆ