Headlines

ಒತ್ತಡ ನಿರ್ವಹಣೆಗೆ ಆದ್ಯತೆ ಅವಶ್ಯ * ಬೆಳದಿಂಗಳ ಸಮ್ಮೇಳನಾಧ್ಯಕ್ಷತೆಗೆ ಬನ್ನಂಜೆ ಆಯ್ಕೆ * ಕಥೋಲಿಕ್ ಸಮಾಜೋತ್ಸವ * ಅಶ್ವತ್ಥಪುರದಲ್ಲಿ ಡಾ.ಸುಧೀರ್ ಹೆಗ್ಡೆ ನೇತೃತ್ವದಲ್ಲಿ ನೇತ್ರ ಚಿಕಿತ್ಸೆ ಶಿಬಿರ * ರೋಟರಿಯಿಂದ ಗಣರಾಜ್ಯೋತ್ಸವ ಆಚರಣೆ * ರಾಷ್ಟ್ರೀಯ ಐಕ್ಯತೆಗೆ ಯುವಪಡೆ ಸಿದ್ಧವಾಗಲಿ: ವಿನಯ ಹೆಗ್ಡೆ * ಮಹಾಮಜ್ಜನಕ್ಕೆ ಸಿದ್ದತೆ ಪೂರ್ಣ * ಶ್ರೀಬಾಹುಬಲಿ ಅಹಿಂಸಾದಿಗ್ವಿಜಯಂ ಲೋಕಾರ್ಪಣೆ * ಲೋಕಾಯುಕ್ತ ಪ್ರವಾಸ * ರೋಟರಿಯಿಂದ ಸಾಧಕರಿಗೆ ಸನ್ಮಾನ * ಸ್ವರಾಜ್ಯ ಮೈದಾನದ ಮೇಲೆ ತೂಗುಗತ್ತಿ…! * ಡಾ.ಸುಧೀರ್ ಹೆಗ್ಡೆ ನೇತೃತ್ವದಲ್ಲಿಕಣ್ಣಿನತಪಾಸಣಾ ಶಿಬಿರ * ಯುವಶಕ್ತಿಗೆ ಪರಿಸರಪ್ರಜ್ಞೆಯ ಅರಿವು ಮೂಡಿಸಿದ ಮಹಾಕಾರ್ಯ * ಮೂಡಬಿದಿರೆ ಶಿಕ್ಷಣ ಪ್ರೇಮಿಗಳ ನಾಡು: ಅಭಯಚಂದ್ರ ಜೈನ್ * 50ನೇ ವೈದ್ಯಕೀಯ ತಪಾಸಣಾ ಶಿಬಿರ * ಜ.21-25: ಮೂಡಬಿದಿರೆಯಲ್ಲಿ ರಾಷ್ಟ್ರೀಯ ವೈಯ್ಟ್ ಲಿಫ್ಟಿಂಗ್ * ರಾಜ್ಯಮಟ್ಟದ ಟಿ-20 ಕ್ರಿಕೆಟ್ ಟೂರ್ನಿ: ಆಳ್ವಾಸ್‍ಗೆ ಪ್ರಶಸ್ತಿ * ಕವಿಕುಲಗುರು ಕುಮಾರವ್ಯಾಸ * ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳಿಂದ ಒಡ್ಡು ನಿರ್ಮಾಣ * ಕಣ್ಣಿನ ಉಚಿತ ತಪಾಸಣೆಹಾಗೂ ಚಿಕಿತ್ಸಾ ಶಿಬಿರ *

ಯುವಶಕ್ತಿಗೆ ಪರಿಸರಪ್ರಜ್ಞೆಯ ಅರಿವು ಮೂಡಿಸಿದ ಮಹಾಕಾರ್ಯ

#rotary#club#moodbidri#srikanth#kamath

 ಹರೀಶ್ ಕೆ.ಆದೂರು.
“ ಹರಿವ ನೀರನ್ನು ನಿಲ್ಲಿಸುವ ತನ್ಮೂಲಕ ಪರಂಪರೆಯ `ಕಟ್ಟ’ಗಳಿಗೆ ಮರುಜೀವ ನೀಡುವ, ಬತ್ತಿ ಬರಡಾಗುತ್ತಿರುವ ಭೂಮಿಯಲ್ಲಿ ಜೀವ ಜಲ ವೃದ್ಧಿಸುವ ಸಾಹಸವೊಂದಕ್ಕೆ ಮೂಡಬಿದಿರೆಯ ರೋಟರಿ ಕ್ಲಬ್ನ ಸರ್ವ ಸದಸ್ಯರು, ಹಾಗೂ ಹೊಸಂಗಡಿ ಗ್ರಾಮದ ಕ್ರಿಯಾಶೀಲ ಚಿಂತಕ ಹರಿಪ್ರಸಾದ್ ನೇತೃತ್ವದ ತಂಡ ಚಿಂತಿಸಿ ಕಾರ್ಯರೂಪಕ್ಕೆ ತಂದಿದ್ದಾರೆ. ಅದರ ಫಲವಾಗಿಯೇ ಹೊಸಂಗಡಿ ಗ್ರಾಮದ `ತೊರ್ಪು’ಎಂಬಲ್ಲಿ ವಿಶಾಲವಾದ ನದಿಯಲ್ಲಿ ಪರಂಪರೆಯ ಕಟ್ಟ ನಿಮರ್ಾಣವಾಗಿದೆ. ಹರಿವ ನೀರು ಸಂಗ್ರಹವಾಗತೊಡಗಿದೆ…ಜನತೆಯ ಮುಖದಲ್ಲಿ ಮಂದಹಾಸ ಕಾಣಿಸತೊಡಗಿದೆ!”

ಬೆಳ್ಳಂ ಬೆಳಗ್ಗೆ ಕಾಡಹಾದಿಯೊಳಗೊಂದು ಪಯಣ…ನಿಬಿಢ ಕಾನನದ ಮಧ್ಯೆ ಹರಿವ ನದಿಯತ್ತ ಯುವಶಕ್ತಿಯ ಹೆಜ್ಜೆ…ಹತ್ತಲ್ಲ…ನಲ್ವತ್ತಲ್ಲ…ನೂರಾರು ಮಂದಿ… ಯುವ ಜನತೆಗೆ ಸಾಥ್ ನೀಡಿದ್ದೇ ಸ್ಥಳೀಯ ಜನತೆ…ಜೊತೆಗೆ ಮೂಡಬಿದಿರೆಯ ರೋಟರಿಯ ಸದಸ್ಯರು… ಹೌದು…ಇದು ನಡೆದದ್ದು ಮೂಡಬಿದಿರೆ ಸಮೀಪದ ಹೊಸಂಗಡಿ ಗ್ರಾಮದ ತೊರ್ಪು ಎಂಬಲ್ಲಿ.
ಭಾನುವಾರ ರಜೆಯ ಮಜಾದಲ್ಲಿ ಎಲ್ಲರೂ ಇದ್ದರೆ ಮೂಡಬಿದಿರೆಯ ಎಸ್.ಎನ್.ಎಂ ಪಾಲಿಟೆಕ್ನಿಕ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಿದ್ಯಾರ್ಥಿಗಳು, ಆಳ್ವಾಸ್ ಎಂ.ಎಸ್.ಡಬ್ಲ್ಯೂ ವಿದ್ಯಾರ್ಥಿಗಳು,ಹೊಸಂಗಡಿ ಗ್ರಾಮಪಂಚಾಯತ್ ಸದಸ್ಯರು,ಗ್ರಾಮಸ್ಥರು `ಜಲಸಾಕ್ಷರತೆ’ಯತ್ತ ಚಿತ್ತ ನೆಟ್ಟು ಕಾರ್ಯೋನ್ಮುಖರಾಗಿದ್ದರು…! `ತೊರ್ಪು’ಎಂಬಲ್ಲಿ ವಿಶಾಲವಾಗಿ ಹರಡಿನಿಂತ ಫಲ್ಗುಣೀ ನದಿ…ಇಲ್ಲಿ ಹರಿವ ನೀರನ್ನು ತಡೆಹಿಡಿದು ಸಂಗ್ರಹಿಸುವ ಪ್ರಯತ್ನ…ತನ್ಮೂಲಕ ಜಲಸಾಕ್ಷರತೆಯ ಪ್ರಜ್ಞೆ ಯುವಜನತೆಯಲ್ಲಿ ಮೂಡುವಂತೆ ಮಾಡಲಾಯಿತು. ಪರಂಪರೆಯ ಕಟ್ಟಗಳನ್ನು ನಿರ್ಮಿಸುವ ಬಗೆಯನ್ನೂ ಯುವ ಜನತೆಗೆ ಪ್ರಾಯೋಗಿಕವಾಗಿ `ಹಿರಿ’ಯರ ಮಾರ್ಗದರ್ಶನದ ಮೂಲಕ ನೀಡಲಾಯಿತು. ತನ್ಮೂಲಕ ನಶಿಸಿಹೋಗುವ `ಪರಂಪರೆಯ ಕಟ್ಟ’ಗಳನ್ನು ಉಳಿಸಿದ ಕೀರ್ತಿ ರೋಟರಿ ಸಂಸ್ಥೆಗೂ, ಸ್ಥಳೀಯ ಪಂಚಾಯತ್ಗೂ ಲಭಿಸಿದಂತಾಯಿತು.
ಜನವರಿಯಲ್ಲಿಯೇ ಕೆರೆ ಬಾವಿಗಳು ಬತ್ತಿ ಜೀವಜಲಕ್ಕಾಗಿ ಪರಿತಪಿಸುವ ಸಂದರ್ಭ…ಮುಂದೆ ಹೀಗಾಗದಿರಲಿ ಎಂಬ ಮುನ್ನೆಚ್ಚರಿಕೆಗಾಗಿ ಜನತೆಯಲ್ಲಿ ಜೀವಜಲದ ಮಹತ್ವ ತಿಳಿಸುವುದು ಸೇರಿದಂತೆ ಪರಿಸರದಲ್ಲಿ ಅಂತರ್ಜಲ ವೃದ್ಧಿಸುವ ದೃಷ್ಠಿಯಿಂದ ಪಾರಂಪರಿಕ ಕಟ್ಟ ನಿಮರ್ಾಣದ ಕಾರ್ಯಕ್ಕೆ ಮುಂದಡಿಯಿಡಲಾಯಿತು… ಸುಮಾರು 2000ಗೋಣಿ ಚೀಲಗಳಲ್ಲಿ ಮರಳು ತುಂಬಿ `ಕಟ್ಟ’ಕಟ್ಟಿ ಹರಿವ ನೀರನ್ನು ತಡೆ ಹಿಡಿಯಲಾಯಿತು. ನೂರಾರು ಮಂದಿ ಉತ್ಸಾಹದಿಂದ ಕಟ್ಟ ನಿರ್ಮಾಣ ಕಾರ್ಯದಲ್ಲಿ ಭಾಗಿಗಳಾದರು…

#rotary#club#moodbidri#srikanth#kamath1
ಕಟ್ಟ ಎಂಬ ಕಲೆ!
ಕಟ್ಟ ಕಟ್ಟುವುದು ಸುಲಭದ ಕೆಲಸವಲ್ಲ. ಅದಕ್ಕೊಂದು ವಿಶೇಷವಾದ ನೈಪುಣ್ಯತೆ ಬೇಕಾಗುತ್ತದೆ…ಕಟ್ಟ ನಿರ್ಮಾಣಕ್ಕೆ ಅದರದ್ದೇ ಆದ ಲೆಕ್ಕಾಚಾರವೂ ಇದೆ. ತೊರ್ಪು  ಪರಿಸರದಲ್ಲಿ ಕಟ್ಟ ಕಟ್ಟುವುವಾಗಲೂ ಪರಂಪರೆಯ ಮೂಲ ತತ್ವವನ್ನೇ ಅನುಸರಿಸಲಾಯಿತು. ಹಿರಿಯರ ಮಾರ್ಗದರ್ಶನ ಹೆಜ್ಜೆ ಹೆಜ್ಜೆಗಿತ್ತು. ಗೋಣಿ ಚೀಲಗಳಲ್ಲಿ ಮರುಳು ತುಂಬಿ ಜೋಡಿಸಲಾಯಿತು. ಒಂದೂರವರೆ ಫೀಟ್ ಅಂತರದಲ್ಲಿ ಸಮಾನಾಂತರವಾಗಿ ಚೀಲಗಳನ್ನಿಡುತ್ತಾ ಅವುಗಳ ಮಧ್ಯೆ ಮಣ್ಣು ತುಂಬುತ್ತಾ ಕಟ್ಟ ನಿರ್ಮಿಸಲಾಯಿತು. ಜಲಸಂಗ್ರಹದ ಅಂದಾಜಿದ ಮೇಲೆ ಕಟ್ಟದ ಎತ್ತರ ನಿರ್ಣಯಿಸಲಾಯಿತು. ಎಲ್ಲೂ ನೀರು ಸೋರಿ ಹೋಗದಂತೆ ಜಾಗ್ರತೆ ವಹಿಸಲಾಗಿತ್ತು.ಯುವ ಜನತೆಯ ಶ್ರಮದ ಫಲವಾಗಿ ಒಟ್ಟಿನಲ್ಲಿ ಸುಭದ್ರವಾದ ಕಟ್ಟ ನಿರ್ಮಾಣವಾಯಿತು…!

ನೆಮ್ಮದಿ ತಂದಿದೆ
ಜೀವ ಜಲದ ಬಗ್ಗೆ ಜಾಗೃತಿ ಮೂಡಿಸುವುದು ನಮ್ಮ ಉದ್ದೇಶ. ಈ ಉದ್ದೇಶ ಸಾಕಾರವಾಗಿದ್ದು ನಮಗೆ ತೃಪ್ತಿ ತಂದಿದೆ. ಊರವರ,ವಿದ್ಯಾರ್ಥಿಗಳ ಸಹಕಾರ ಉತ್ತಮವಾಗಿ ದೊರೆತಿದೆ. ಯುವ ಜನತೆಯಲ್ಲಿ ಜಲ ಜಾಗೃತಿ ಮೂಡಿಸುವ ಕಾರ್ಯ ಆಗಿದೆ ಎಂಬುದು ನಮಗೆ ನೆಮ್ಮದಿ ಎನ್ನುತ್ತಾರೆ ರೋಟರಿ ಕ್ಲಬ್ ಅಧ್ಯಕ್ಷ ಶ್ರೀಕಾಂತ್ ಕಾಮತ್.
ಪರಂಪರೆಯನ್ನು ಉಳಿಸುವುದು, ಜೀವ ಜಲ ವೃದ್ಧಿಸುವಂತೆ ಮಾಡುವುದು ನಮ್ಮ ಮೂಲ ಉದ್ದೇಶ. ಅದಕ್ಕಾಗಿ ಜಲಸಾಕ್ಷರತೆಯ ಚಿಂತನೆಯನ್ನು ರೂಪಿಸಿ ರೋಟರಿ ಸಂಸ್ಥೆ ಮುಂದುವರಿಯುತ್ತಿದೆ.
– ಡಾ.ಮುರಳೀಕೃಷ್ಣ.

ನದಿಗೆ ಕಟ್ಟಕಟ್ಟುವುದರಿಂದ ಅಂತರ್ಜಲ ಹೆಚ್ಚುತ್ತದೆ. ವರ್ಷಂಪ್ರತಿ ನಮ್ಮೂರಲ್ಲಿ ಕಟ್ಟ ಕಟ್ಟಿ ನೀರು ಸಂಗ್ರಹಿಸುವ ಕಾರ್ಯವನ್ನು ಮಾಡುತ್ತಿದ್ದೆವು. ಅಂದು ಗೋಣಿ ಚೀಲಗಳನ್ನು ಬಳಸುತ್ತಿರಲಿಲ್ಲ. ಬದಲಾಗಿ ಕುರುಚಲು ಪೊದೆಗಳನ್ನು, ಮರದ ಗೆಲ್ಲುಗಳನ್ನು ಬಳಸಿ ಕಟ್ಟ ನಿರ್ಮಾಣ ಮಾಡುತ್ತಿದ್ದೆವು.
ಜೆ.ಜೆ.ಪಿಂಟೋ
ಪ್ರಾಂಶುಪಾಲರು, ಎಸ್.ಎನ್.ಎಂ.ಪಾಲಿಟೆಕ್ನಿಕ್