Headlines

ಆಳ್ವಾಸ್ ವಿದ್ಯಾರ್ಥಿಸಿರಿಯ ಹೈಲೈಟ್ಸ್… * ಬಾಲಪ್ರತಿಭೆ ಪ್ರದರ್ಶನ * ಬಸದಿಗಳ ನಾಡಲ್ಲಿ ಕನ್ನಡದ ಬಾವುಟ… ಹೊತ್ತಿತೋ…ಹೊತ್ತಿತು ಕನ್ನಡದ ದೀಪ… * ನುಡಿಸಿರಿಯ ಸರ್ವಾಧ್ಯಕ್ಷರ ಎಕ್ಸ್ ಕ್ಲೂಸಿವ್ ಸಂದರ್ಶನ * ಹನ್ನೆರಡು ಸಾಧಕರಿಗೆ 2018ರ ಆಳ್ವಾಸ್ ನುಡಿಸಿರಿ ಪುರಸ್ಕಾರ * ನುಡಿಸಿರಿಯ ಅಂಗಳದಲ್ಲಿ ಅಚ್ಚರಿಯ ಮೇಲೊಂದಚ್ಚರಿ! * ನುಡಿಸಿರಿಯ ಅಂಗಳದಲ್ಲೊಂದು ಸುದ್ದಿಮನೆ! * ಆಳ್ವಾಸ್ ವಿದ್ಯಾರ್ಥಿಸಿರಿ 2018 ಆರಂಭ * ಕಣ್ಣುತೆರೆಸಿದ ಜವನೆರ್ ಬೆದ್ರ ಸಂಘಟನೆ * ಯೋಧರ ಮನೆಯಲ್ಲಿ ಬೆಳಗಿದ ದೀಪ! * ಯಶಸ್ವೀ 36ನೇವಾರ ಪೂರೈಸಿದ ಕ್ಲೀನ್ ಅಪ್ ಮೂಡಬಿದಿರೆ * ರಾಜ್ಯಮಟ್ಟದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟ ಆರಂಭ * ಅಳಿಯೂರಿನಲ್ಲಿ ಮೇಳೈಸಲಿದೆ ಕ್ರೀಡಾಹಬ್ಬ.! * ರಾಷ್ಟ್ರಮಟ್ಟಕ್ಕೆ ಆಯ್ಕೆಯಾಯ್ತು ಹಳ್ಳಿ ಹುಡುಗರ ಅನ್ವೇಷಣೆ! * ಶಿರ್ಲಾಲು: ಹೊಸ ಶಾಸನ ಪತ್ತೆ * ಸಾವಿರ ಕಂಬದ ಬಸದಿಯ ಸ್ವಚ್ಛತೆ * ಪುರಸಭೆಯ ಕಣ್ಣುತೆರೆಸಿದ ಜವನೆರ್ ಬೆದ್ರ! * ಪುರಸಭೆಗೆ ಸಾರ್ವಜನಿಕರಿಂದ ಹಿಡಿಶಾಪ * ಕಾರ್ಯಾಂಗ,ನ್ಯಾಯಾಂಗ,ಶಾಸಕಾಂಗದ ವೈಫಲ್ಯದ ವಿರುದ್ಧ ಹೋರಾಟ: ಸುದರ್ಶನ್ * ಬೆಸ್ಟ್ ಡ್ರಾಮೇಬಾಜ್ ಖ್ಯಾತಿಯ ಶ್ರೀಶ ಬೆಂಗಳೂರು ಅವರಿಗೆ ಗೌರವ ಸನ್ಮಾನ *

ಯಶಸ್ವೀ 36ನೇವಾರ ಪೂರೈಸಿದ ಕ್ಲೀನ್ ಅಪ್ ಮೂಡಬಿದಿರೆ

nov4#javenarbedra#group

ಜವನೆರ್ ಬೆದ್ರ ಸಂಘಟನೆಯ ಸತ್ಕಾರ್ಯಕ್ಕೆ ಬೆಂಬಲದ ಮಹಾಪೂರ
ಮೂಡಬಿದಿರೆ: ಯಾವೊಂದು ಆಸೆ,ಆವಿಷವೂ ಇಲ್ಲದೆ ತನ್ನ ಪಾಡಿಗೆ ಮೂಡಬಿದಿರೆಯನ್ನು ಸ್ವಚ್ಛ ಸುಂದರ ನಗರವನ್ನಾಗಿ ರೂಪಿಸುವ ಮಹತ್ಕಾರ್ಯವನ್ನು ಮುಂದಿಟ್ಟುಕೊಂಡು ಮೂಡಬಿದಿರೆಯ ಜವನೆರ್ ಬೆದ್ರ ಸಂಘಟನೆ ಹಮ್ಮಿಕೊಂಡು ಬರುತ್ತಿರುವ ಕ್ಲೀನ್ ಅಪ್ ಮೂಡಬಿದಿರೆ ಕಾರ್ಯಕ್ರಮ ಭಾನುವಾರ ಯಶಸ್ವಿಯಾಗಿ 36ವಾರಗಳನ್ನು ಪೂರೈಸಿತು.
ಮೂಡಬಿದಿರೆಯ ಐತಿಹಾಸಿಕ ಸಾವಿರ ಕಂಬದ ಬಸದಿಯ ಆವರಣದಲ್ಲಿ ಈವಾರದ ಸ್ವಚ್ಛತಾ ಅಭಿಯಾನವನ್ನು ನಡೆಸಿತು.

nov4#javenarbedra

ಉದ್ಯಮಿ ಶಿವಾನಂದ ಪ್ರಭು ಅತಿಥಿಗಳಾಗಿದ್ದರು. ಮೂಡಬಿದಿರೆಯಲ್ಲಿ ಕೇವಲ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಹೆಕ್ಕುವ ಮೂಲಕವಷ್ಟೇ ಜವನೆರ್ ಬೆದ್ರ ಸಂಘಟನೆ ತನ್ನ ಸ್ವಚ್ಛತಾ ಕಾರ್ಯವನ್ನು ಮಾಡಿಲ್ಲ. ಬದಲಾಗಿ ಸಮಾಜದಲ್ಲಾಗುತ್ತಿರುವ ನೈಜ ಸಮಸ್ಯೆಗಳ ವಿರುದ್ಧ ದನಿಯಾಗಿ, ಜನಪರವಾಗಿ ಕಾರ್ಯನಿರ್ವಹಿಸುತ್ತಿದೆ. ಜಾಢ್ಯತೆಯನ್ನು ಮೆರೆಯುತ್ತಿರುವ ಅಧಿಕಾರಿಗಳ ವಿರುದ್ಧ ಹೋರಾಟಮಾಡುತ್ತಿದೆ. ಇದು ಅಭಿನಂದನಾರ್ಹ ಎಂದರು.
ಹೆರಿಟೇಜ್ ಉಳಿಸೋಣ: ಐತಿಹ್ಯದ ಸ್ಮಾರಕಗಳನೇಕ ಇರುವ ಮೂಡಬಿದಿರೆಯಲ್ಲಿ ಐತಿಹ್ಯಗಳ ರಕ್ಷಣೆ ಅತ್ಯವಶ್ಯಕವಾಗಿ ಆಗಬೇಕಾಗಿದೆ. ಈ ನಿಟ್ಟಿನಲ್ಲಿ ಸಂಬಂಧಿತ ಅಧಿಕಾರಿಗಳು ಚಿತ್ತವಹಿಸಬೇಕಾಗಿದೆ. ಜವನೆರ್ ಬೆದ್ರ ಸಂಘಟನೆ ಐತಿಹ್ಯದ ಉಳಿವಿನತ್ತ ಕಾಯರ್ೋನ್ಮುಖವಾಗಿದೆ ಎಂದು ಸಂಘಟನೆಯ ರೂವಾರಿ ಅಮರ್ ಕೋಟೆ ಹೇಳಿದರು.
ಸ್ವಚ್ಛತಾ ಕಾರ್ಯದಲ್ಲಿ ರಾಜೇಂದ್ರ ಜಿ, ಶ್ಯಾಮ್ ಪ್ರಸಾದ್, ದಿನೇಶ್, ಶರತ್, ಶುಭಕರ್ ಪೂಜಾರಿ, ರಂಜಿತ್, ಸಂತೋಷ್, ಹರಿಪ್ರಸಾದ್ ಎಂ.ಸಿ, ನಾರಾಯಣ ಪದುಮಲೆ, ರಾಜೇಶ್ ದೇವಾಡಿಗ, ಪ್ರತೀಶ್,ಸುರೇಶ್,ಸವಿತ, ದಯಾನಂದ ಕುಲಾಲ್,ವಿಖ್ಯಾತ್ ಮೊದಲಾದವರಿದ್ದರು.