Headlines

ಹಂತಕರನ್ನು ಕೂಡಲೇ ಬಂಧಿಸಿ: ಸಿ.ಎಂ * ಎದೆಭಾಗಕ್ಕೆ 2;ಹಣೆಗೆ1ಗುಂಡು * ಪರ್ತಕರ್ತೆ ಗೌರಿ ಲಂಕೇಶ್ ಹತ್ಯೆ * ಎಂಟು ಮಂದಿ ಶಿಕ್ಷಕರಿಗೆ ಸನ್ಮಾನ * ಸಾಧಕರಿಗೆ ಸನ್ಮಾನ * ಶಾಲೆ ಶಾಲೆಯಲ್ಲಿ ಗೆಜ್ಜೆಯ ನಿನಾದ! * ಋಣ ತೀರಿಸುವ ಕಾರ್ಯವಾಗಲಿ: ದೇವಿಪ್ರಸಾದ್ ಶೆಟ್ಟಿ * ಸಾರ್ವಜನಿಕ ಗಣೇಶೋತ್ಸವ * ಶ್ರೀ ಸೂರ್ಯನಾರಾಯಣ ಕ್ಷೇತ್ರದಲ್ಲಿ ಗಣೇಶೋತ್ಸವ * ಗ್ರಾಮ-ಪಟ್ಟಣಕ್ಕೆ ಒಂದೇ ಗಣೇಶನಿರಲಿ-ಟಿ.ಆರ್.ಸುರೇಶ್ * 54ನೇ ವರ್ಷದ ಮೂಡಬಿದಿರೆಯ ಗಣೇಶ * ಪೆರಿಂಜೆಯಲ್ಲಿ ಸಂಭ್ರಮದ ಗಣೇಶೋತ್ಸವ * ಕಲ್ಲಬೆಟ್ಟಿನಲ್ಲಿ ಪೂಜಿಸಿದ ವಿಘ್ನವಿನಾಯಕ * ಮೂಡುಬಿದಿರೆಯಲ್ಲಿ ರಕ್ಷಾಂಬಂಧನ * ಪ್ರೊ. ಕೆ.ಇ.ರಾಧಾಕೃಷ್ಣ ಮತ್ತು ಸತ್ಯಮಂಗಲ ಆರ್ ಮಹಾದೇವ ಅವರಿಗೆ ವರ್ಧಮಾನ ಪ್ರಶಸ್ತಿ ಘೋಷಣೆನ * ಇದು ಅತ್ಯಾಧುನಿಕ `ಪಾರಂಪರಿಕ’ಮಾದರಿಯ ಶ್ಯಾವಿಗೆ ಮಣೆ! * ವಿಂಶತಿ ಯಕ್ಷಕಲೋತ್ಸವಕ್ಕೆ ತೆರೆ * ಸಿ.ಐ.ಟಿ.ಯು: 9ನೇ ಬೀಡಿ ಕಾರ್ಮಿಕರ ರಾಜ್ಯ ಸಮ್ಮೇಳನ * ಪದ್ಮಪ್ರಸಾದ್ ಜೈನ್ ನೇಮಕ * ವಿಶೇಷ ಪೂಜೆ-ಅಭಿಷೇಕ *

ಮೇ.26ಕ್ಕೆ ಲೋಕಾರ್ಪಣೆ

dola_sadiya_bridge

ರಾಷ್ಟ್ರೀಯ ಪ್ರತಿನಿಧಿ ವರದಿ

ಭಾರತ-ಚೀನಾ ಗಡಿಯಲ್ಲಿ ನಿರ್ಮಾಣದ ಭಾರತದ ಅತೀ ದೊಡ್ಡ ಸೇತುವೆಯೊಂದು ಅಸ್ಸಾಂನಲ್ಲಿ ಮೇ.26ಕ್ಕೆ ಲೋಕಾರ್ಪಣೆಯಾಗಲಿದೆ. ಭಾರತದಲ್ಲಿ ಹಲವು ಸೇತುವೆಗಳು ನಿರ್ಮಾಣವಾಗಿದೆ. ಆದರೆ ಈ ಸೇತುವೆ ಮಾತ್ರ ಬಹಳ ವಿಶೇಷವಾದ ಸೇತುವೆಯಾಗಿದೆ. ಇದು ಕೇವಲ ಸೇತುವೆ ಅಲ್ಲ, ಬದಲಾಗಿ ಇದು ರಕ್ಷಣಾ ಸೇತುವೆಯಾಗಿದೆ. ಈ ಸೇತುವೆ ವಿಶ್ವದಲ್ಲಿ ಗುರುತಿಸಿಕೊಳ್ಳುತ್ತಿದೆ. ಈ ಮೂಲಕ ಭಾರತ ದೇಶ ಚೀನಾಕ್ಕೆ ಸರಿಯಾದ ಪೆಟ್ಟು ನೀಡಿದೆ.

 

 
ಭಾರತದ ಅತೀ ದೊಡ್ಡ ಸೇತುವೆ ಡೋಲಾ-ಸಾದಿಯಾ ಸೇತುವೆಯನ್ನು ಪ್ರಧಾನಿ ನರೇಂದ್ರ ಮೋದಿ ಅಸ್ಸಾಂನಲ್ಲಿ ಪ್ರಧಾನಿ ಮೋದಿ ಮೇ.26 ರಂದು ದೇಶಕ್ಕೆ ಸಮರ್ಪಿಸಲಿದ್ದಾರೆ. ಮೇ.26ಕ್ಕೆ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಶುಭ ಸಂದರ್ಭದಲ್ಲಿ ಡೋಲಾ-ಸಾದಿಯಾ ಸೇತುವೆ ಲೋಕಾರ್ಪಣೆಗೆ ಸಿದ್ದವಾಗಿ ನಿಂತಿದೆ.

 

 

 

2011 ರಲ್ಲಿ 950 ಕೋಟಿ ವೆಚ್ಚದಲ್ಲಿ ಆರಂಭವಾದ ಈ ಸೇತುವೆ 9.15 ಕಿಮೀ ಉದ್ದವನ್ನು ಹೊಂದಿದ್ದು, 13ಮೀ. ಉದ್ದವನ್ನು ಹೊಂದಿದೆ. ಈ ಸೇತುವೆ ಮುಂಬೈನ ಬಾಂದ್ರಾ-ವಾರ್ಲಿ ಸೇತುವೆಗಿಂತ 3.55 ಕಿಮೀ ಉದ್ದವಿದ್ದು ಭಾರತದ ಅತೀ ಉದ್ದದ ಸೇತುವೆ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಸೇತುವೆ ಅಸ್ಸಾನ ಬ್ರಹ್ಮಪುತ್ರ ನದಿಯ ಉಪನದಿಗಳಲ್ಲಿ ಒಂದಾದ ಲೋಹಿತ್ ನದಿ ಮೇಲೆ ನಿರ್ಮಾಣವಾಗಿದೆ.

 

 

 

60 ಟನ್ ಯುದ್ದ ಟ್ಯಾಂಕರ್ಸ್’ಗಳ ಭಾರವನ್ನು ತೂಗುವ ಸಾಮರ್ಥ್ಯನವನ್ನು ಹೊಂದಿದೆ. ಈ ಸೇತುವೆಯಿಂದ ಅಸ್ಸಾಂ ಅರುಣಾಚಲ ಪ್ರದೇಶ ನಡುವಿನ 4 ತಾಸು ಪ್ರಯಾಣವನ್ನು ತಗ್ಗಿಸಲಿದೆ. ಭದ್ರತಾ ಅಗತ್ಯಗಳನ್ನು ಹೆಚ್ಚಿಸಲು ಈ ಸೇತುವೆ ಅನುಕೂಲವಾಗಲಿದೆ ಹಾಗೂ ಅರುಣಾಚಲ ಪ್ರದೇಶ ಮತ್ತು ಅಸ್ಸಾಂ ಜನರಿಗೆ ವಿಮಾನಯಾನ, ರೈಲ್ವೇ ಸಂಪರ್ಕ ಇನ್ನಷ್ಟು ಸುಲಭವಾಗಲಿದೆ.