Headlines

ಕಣ್ಣುತೆರೆಸಿದ ಜವನೆರ್ ಬೆದ್ರ ಸಂಘಟನೆ * ಯೋಧರ ಮನೆಯಲ್ಲಿ ಬೆಳಗಿದ ದೀಪ! * ಯಶಸ್ವೀ 36ನೇವಾರ ಪೂರೈಸಿದ ಕ್ಲೀನ್ ಅಪ್ ಮೂಡಬಿದಿರೆ * ರಾಜ್ಯಮಟ್ಟದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟ ಆರಂಭ * ಅಳಿಯೂರಿನಲ್ಲಿ ಮೇಳೈಸಲಿದೆ ಕ್ರೀಡಾಹಬ್ಬ.! * ರಾಷ್ಟ್ರಮಟ್ಟಕ್ಕೆ ಆಯ್ಕೆಯಾಯ್ತು ಹಳ್ಳಿ ಹುಡುಗರ ಅನ್ವೇಷಣೆ! * ಶಿರ್ಲಾಲು: ಹೊಸ ಶಾಸನ ಪತ್ತೆ * ಸಾವಿರ ಕಂಬದ ಬಸದಿಯ ಸ್ವಚ್ಛತೆ * ಪುರಸಭೆಯ ಕಣ್ಣುತೆರೆಸಿದ ಜವನೆರ್ ಬೆದ್ರ! * ಪುರಸಭೆಗೆ ಸಾರ್ವಜನಿಕರಿಂದ ಹಿಡಿಶಾಪ * ಕಾರ್ಯಾಂಗ,ನ್ಯಾಯಾಂಗ,ಶಾಸಕಾಂಗದ ವೈಫಲ್ಯದ ವಿರುದ್ಧ ಹೋರಾಟ: ಸುದರ್ಶನ್ * ಬೆಸ್ಟ್ ಡ್ರಾಮೇಬಾಜ್ ಖ್ಯಾತಿಯ ಶ್ರೀಶ ಬೆಂಗಳೂರು ಅವರಿಗೆ ಗೌರವ ಸನ್ಮಾನ * ಮಾನವೀಯ ಸ್ಪಂದನೆ ಆಗಲೇಬೇಕಾಗಿದೆ… * 33ನೇ ವಾರ ಪೂರೈಸಿದ ಜವನೆರ್ ಬೆದ್ರದ ಸಾಧನೆ * ಆಧುನಿಕತೆಯಿಂದ ಆಶಾದಾಯಕ ಸ್ಥಿತಿ ಬಂದೊದಗಿದೆ: ಹರೀಶ್ ಶೆಣೈ * ಮೂಡಬಿದಿರೆಯಲ್ಲಿ ಸದ್ಭಾವನಾ ಗೋಷ್ಠಿ * ಭಾರತೀಯ ಜನತಾ ಪಾರ್ಟಿಯಿಂದ ಸ್ವಚ್ಛತೆಯ ಮಂತ್ರ * ಬಸದಿಗಳ ಬೀಡಲ್ಲಿ ಬಸದಿಗಳ ಸ್ವಚ್ಛತೆ * ಕಂಬಳಸಮಿತಿ ಸಭೆ * 30ನೇವಾರದ ಕ್ಲೀನ್ ಅಪ್ ಮೂಡಬಿದಿರೆ *

ಮೂರ್ತಿ ಚಿಕ್ಕದಾದರೂ…ಕೀರ್ತಿ ದೊಡ್ಡದು…

#abhijna

ವಾರ್ತೆ ವಿಶೇಷ

ಹೌದು…ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬ ಗಾದೆ ಈ ಪುಟ್ಟ ಬಾಲೆಗೆ ಹೇಳಿ ಮಾಡಿದಂತಿದೆ. ಈಕೆಯ ಪ್ರತಿಭೆ ಅದ್ಭುತ…ಬಹುಮುಖ ಪ್ರತಿಭೆಯ ಈ ಪುಟಾಣಿ ಹಲವು ರಂಗದಲ್ಲಿ ತನ್ನ ಕಲಾ ಪ್ರೌಢಿಮೆ ಮೆರೆದಿದ್ದಾಳೆ. ಮೂಡಬಿದಿರೆಯ ಶ್ರೀಕ್ರಷ್ಣ ಫ್ರೆಂಡ್ಸ್ ಸರ್ಕಲ್  ಪ್ರತಿ ವರ್ಷ ನಡೆಸುತ್ತಿರುವ ಮುದ್ದುಕೃಷ್ಣ  ವೇಷ ಸ್ಪರ್ಧೆಯಲ್ಲಿ  ಸತತ  ಪ್ರಥಮ ಸ್ಥಾನ ಪಡೆದ ಬಾಲ ಪ್ರತಿಭೆ. ಮಾದರೀ ಶಿಕ್ಷಕ  ಮಣಿಯೂರು ಗೋವರ್ಧನ ಮತ್ತು ಕಾಂತಿ ಇವರ ಸುಪುತ್ರಿ ಈ  ಅಭಿಜ್ಞಾ.ಎಸ್.ಎಂ.
ಗೋವು ಗುಡ್ಡೆ, ಕಟೀಲು,ಕದ್ರಿಯಲ್ಲಿ ಕೂಡ ಕೃಷ್ಣ ವೇಷ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಪಡೆದಿದ್ದಾಳೆ. ಕೆ.ವಿ.ರಮಣ್ ನಿರ್ದೇಶನದ, ಶ್ರೀ ಶಕ್ತಿದರ್ಶನ ಯೋಗಾಶ್ರಮ ಕಿನ್ನಿಗೋಳಿ ಇವರು ಪ್ರಸ್ತುತ ಪಡಿಸಿರುವ ‘ವಿಶ್ವಮಾತಾ ಗೋಮಾತಾ ‘ನ್ರತ್ಯ ನಾಟಕದಲ್ಲಿ ಅಭಿನಯಿಸಿರುತ್ತಾಳೆ. ಶ್ರೀಯಕ್ಷದೇವ ಮಿತ್ರ ಮಂಡಳಿ ಬೆಳುವಾಯಿ ಮತ್ತು ಪೆರ್ಲದಲ್ಲಿರುವ ಪಡ್ರೆ ಚಂದು ಯಕ್ಷಗಾನ ನಾಟ್ಯ ತರಬೇತಿ ಕೇಂದ್ರದ (ರಿ) ವಿದ್ಯಾರ್ಥಿನಿ.

ಯಕ್ಷಗಾನ,ನೃತ್ಯ,ಸಂಗೀತ,ಕಲೆ ಹೀಗೆ ಹಲವು ಕ್ಷೇತ್ರಗಳಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ಅಭಿಜ್ಞಾ  ಶಾಸ್ತ್ರೀಯ ಸಂಗೀತವನ್ನು ಶ್ರೀಮತಿ ಯಶಸ್ವಿನಿ ಉಳ್ಳಾಲ ಇ ವರಿಂದ,ಯಕ್ಷಗಾನವನ್ನು ನಾಟ್ಯಾಚಾರ್ಯ ಸಬ್ಬಣಕೋಡಿ ರಾಮ ಭಟ್ಟರಿಂದ,ಹಾಗೂ ಭರತ ನಾಟ್ಯವನ್ನು ತನ್ನ ತಾಯಿ ವಿದುಷಿ ಕಾಂತಿ ಗೋವರ್ಧನ ಇವರಿಂದ ಅಭ್ಯಾಸ ಮಾಡುತ್ತಿದ್ದಾಳೆ. ಈಕೆಯ ಭವಿಷ್ಯ  ಉಜ್ವಲವಾಗಲಿ. ಇನ್ನಷ್ಟು ಕಲಾ ಕ್ಷೇತ್ರದಲ್ಲಿ ಮಿಂಚುವಂತಾಗಲಿ ಎಂಬುದು ನಮ್ಮ ಹಾರೈಕೆ.