Headlines

ಕಂಬಳಸಮಿತಿ ಸಭೆ * 30ನೇವಾರದ ಕ್ಲೀನ್ ಅಪ್ ಮೂಡಬಿದಿರೆ * ಸ್ವಚ್ಛತಾ ದಿನಾಚರಣರೆ * ಶಾಸಕ ಉಮಾನಾಥ್ ಎ.ಕೋಟ್ಯಾನ್ ವಿಶೇಷ ಸಂದರ್ಶನ * ಸಮ್ಮೇಳನದ ಸರ್ವಾಧ್ಯಕ್ಷರಾಗಿ ಡಾ. ಮಲ್ಲಿಕಾ ಎಸ್.ಘಂಟಿ, ಉದ್ಘಾಟಕರಾಗಿ ಡಾ.ಷ. ಶೆಟ್ಟರ್ * ಫಲವಿತರಿಸಿ ಹುಟ್ಟುಹಬ್ಬ ಆಚರಣೆ * ನುಡಿಸಿರಿಯಲ್ಲೊಂದು ಕೃಷಿಸಿರಿ:ಡಾ.ಆಳ್ವ * ಹುಲಿ-ಸ್ವಚ್ಛತೆಯೂ -ಗಣೇಶೋತ್ಸವವೂ-ಪುರಸಭೆಯೂ! * ಗಣೇಶ ದರ್ಶನ… * ಮೂಡಬಿದಿರೆಯಲ್ಲಿ ಗಣೇಶೋತ್ಸವದ ಗೌಜಿ ಶುರು… * 28ನೇ ವಾರದ ಸ್ವಚ್ಛತಾ ಅಭಿಯಾನ * ಈ ಕರ್ಮಕಾಂಡಕ್ಕೆ ಯಾರು ಬಲಿ…? * `ಗುಣಮಟ್ಟದ ಶಿಕ್ಷಣ-ಸೂಕ್ತ ಉದ್ಯೋಗಕ್ಕೆ ಒತ್ತು’ * 27ನೇ ವಾರದ ಕ್ಲೀನ್ ಅಪ್ ಮೂಡಬಿದಿರೆ ಸಂಪನ್ನ * ನಮ್ಮ ಹೆಮ್ಮಕ್ಕಳು ಅದೆಷ್ಟು ಸುರಕ್ಷಿತ…? * ಮನಮೋಹಕ ನೃತ್ಯ ಸಿಂಚನ * ಸ್ವಚ್ಛ ಸರ್ವೇಕ್ಷಣ ಗ್ರಾಮೀಣ 2018 * ಆಧುನಿಕತೆಯೇ ಮುಳುವಾಯಿತೇ…? * ನಾಟ್ಯ ಮಯೂರಿ… * ನವೆಂಬರ್ 16-18: ಆಳ್ವಾಸ್ ನುಡಿಸಿರಿ *

ಮೂಡಬಿದಿರೆಯಲ್ಲಿ ಗಣೇಶೋತ್ಸವದ ಗೌಜಿ ಶುರು…

#ganesh#moodbidri#preparation

ಎಲ್ಲಿ ನೋಡಿದರಲ್ಲಿ ಕಬ್ಬು,ಹೂವಿನ ವ್ಯಾಪಾರ…
ಮೂಡಬಿದಿರೆ: ಗಣೇಶೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ.ಗೌರಿ ಹಬ್ಬದ ಬೆನ್ನಲ್ಲೇ ಗಣೇಶನ ಚತುರ್ಥಿ …ಮೂಡಬಿದಿರೆಯಲ್ಲಿ ಭರ್ಜರಿ ವ್ಯಾಪಾರ ಆರಂಭವಾಗಿದೆ. ಮೂಡಬಿದಿರೆಯ ಹೆದ್ದಾರಿ ಬದಿಗಳಲ್ಲಿ ಊರ ಕಬ್ಬಿನ ವ್ಯಾಪಾರ ವಹಿವಾಟು ಭರ್ಜರಿ ಸಾಗಿದೆ. ಎಲ್ಲೆಂದರಲ್ಲಿ ಕಬ್ಬು ರಾಶಿಹಾಕಿ ವ್ಯಾಪಾರ ಮಾಡುವ ದೃಶ್ಯ ಕಂಡುಬಂದಿದೆ. ಹೂವಿನ ಅಂಗಡಿಗಳು ರಾಶಿ ರಾಶಿ ಹೂವುಗಳನ್ನು ಮಾರಾಟಕ್ಕಿರಿಸಿವೆ. ಹಿಂಗಾರ, ಸೇವಂತಿಗೆ,ಮಲ್ಲಿಗೆ ಹೂವುಗಳಿಗೆ ಸಕತ್ ಬೇಡಿಕೆ ಬರತೊಡಗಿದೆ. ಅರಶಿನ ಎಲೆಯೂ ಮಾರಾಟಕ್ಕೆ ಲಭ್ಯವಾಗಿವೆ. ಒಟ್ಟಿನಲ್ಲಿ ಹಬ್ಬದ ಕಳೆಕಾಣತೊಡಗಿದೆ.

#ganesh#moodbidri#preparation2

ಗಣೇಶನಿಗೆ ಅಂತಿಮ ಟಚ್: ಮೂಡಬಿದಿರೆಯ ವೆಂಕಟ್ರಮಣ ದೇವಸ್ಥಾನದ ಆವರಣದಲ್ಲಿ ಗಣೇಶ ಮೂತರ್ಿಗಳ ಫಿನಿಶಿಂಗ್ ಕಾರ್ಯ ನಡೆಯುತ್ತಿವೆ. ಈಗಾಗಲೇ ಮೂಡಬಿದಿರೆಯ ಸಾರ್ವಜನಿಕ ಗಣೇಶೋತ್ಸವದ ಬೃಹತ್ 5.5ಅಡಿ ಎತ್ತರದ ಗಣಪತಿ ಸೇರಿದಂತೆ ಆಸು ಪಾಸಿನ ಸಾರ್ವಜನಿಕ ಉತ್ಸವಗಳಲ್ಲಿ ಪೂಜಿಸಲ್ಪಡುವ ಗಣೇಶನ ವಿಗ್ರಹಗಳು ಸುಂದರವಾಗಿ ನಿರ್ಮಾಣಗೊಂಡಿವೆ.

#ganesh#moodbidri#preparation1

#ganesh#moodbidri#preparation3

ಮೂಡಬಿದಿರೆಯ ಸಮಾಜ ಮಂದಿರ `ಅರಮನೆಯ’ಶೈಲಿಯಲ್ಲಿ ಸಂಪೂರ್ಣ ಸ್ವರ್ಣವರ್ಣದಲ್ಲಿ ಅಲಂಕೃತಗೊಂಡು ಜನಾಕರ್ಷಣೆಗೆ ಪಾತ್ರವಾಗಿದೆ. ಗುರವಾರ ಜಿಲ್ಲಾಧಿಕಾರಿ ಎಸ್.ಸಸಿಕಾಂತ್ ಸೆಂಥಿಲ್ ಗೌರವ ಉಪಸ್ಥಿತಿಯಲ್ಲಿ ಪ್ರಧಾನ ಅರ್ಚಕ ಈಶ್ವರ ಭಟ್ ಆಲಂಗಾರು ವಿಗ್ರಹ ಪ್ರತಿಷ್ಠಾಪನೆ ಮಾಡಲಿದ್ದಾರೆ.