Headlines

ಆಳ್ವಾಸ್ ವಿದ್ಯಾರ್ಥಿಸಿರಿಯ ಹೈಲೈಟ್ಸ್… * ಬಾಲಪ್ರತಿಭೆ ಪ್ರದರ್ಶನ * ಬಸದಿಗಳ ನಾಡಲ್ಲಿ ಕನ್ನಡದ ಬಾವುಟ… ಹೊತ್ತಿತೋ…ಹೊತ್ತಿತು ಕನ್ನಡದ ದೀಪ… * ನುಡಿಸಿರಿಯ ಸರ್ವಾಧ್ಯಕ್ಷರ ಎಕ್ಸ್ ಕ್ಲೂಸಿವ್ ಸಂದರ್ಶನ * ಹನ್ನೆರಡು ಸಾಧಕರಿಗೆ 2018ರ ಆಳ್ವಾಸ್ ನುಡಿಸಿರಿ ಪುರಸ್ಕಾರ * ನುಡಿಸಿರಿಯ ಅಂಗಳದಲ್ಲಿ ಅಚ್ಚರಿಯ ಮೇಲೊಂದಚ್ಚರಿ! * ನುಡಿಸಿರಿಯ ಅಂಗಳದಲ್ಲೊಂದು ಸುದ್ದಿಮನೆ! * ಆಳ್ವಾಸ್ ವಿದ್ಯಾರ್ಥಿಸಿರಿ 2018 ಆರಂಭ * ಕಣ್ಣುತೆರೆಸಿದ ಜವನೆರ್ ಬೆದ್ರ ಸಂಘಟನೆ * ಯೋಧರ ಮನೆಯಲ್ಲಿ ಬೆಳಗಿದ ದೀಪ! * ಯಶಸ್ವೀ 36ನೇವಾರ ಪೂರೈಸಿದ ಕ್ಲೀನ್ ಅಪ್ ಮೂಡಬಿದಿರೆ * ರಾಜ್ಯಮಟ್ಟದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟ ಆರಂಭ * ಅಳಿಯೂರಿನಲ್ಲಿ ಮೇಳೈಸಲಿದೆ ಕ್ರೀಡಾಹಬ್ಬ.! * ರಾಷ್ಟ್ರಮಟ್ಟಕ್ಕೆ ಆಯ್ಕೆಯಾಯ್ತು ಹಳ್ಳಿ ಹುಡುಗರ ಅನ್ವೇಷಣೆ! * ಶಿರ್ಲಾಲು: ಹೊಸ ಶಾಸನ ಪತ್ತೆ * ಸಾವಿರ ಕಂಬದ ಬಸದಿಯ ಸ್ವಚ್ಛತೆ * ಪುರಸಭೆಯ ಕಣ್ಣುತೆರೆಸಿದ ಜವನೆರ್ ಬೆದ್ರ! * ಪುರಸಭೆಗೆ ಸಾರ್ವಜನಿಕರಿಂದ ಹಿಡಿಶಾಪ * ಕಾರ್ಯಾಂಗ,ನ್ಯಾಯಾಂಗ,ಶಾಸಕಾಂಗದ ವೈಫಲ್ಯದ ವಿರುದ್ಧ ಹೋರಾಟ: ಸುದರ್ಶನ್ * ಬೆಸ್ಟ್ ಡ್ರಾಮೇಬಾಜ್ ಖ್ಯಾತಿಯ ಶ್ರೀಶ ಬೆಂಗಳೂರು ಅವರಿಗೆ ಗೌರವ ಸನ್ಮಾನ *

ಮಾವಿನ ಹಣ್ಣಿನ ಮಾಂಬಳ

vaarte dish. mango mambula

ವಾರ್ತೆ ರೆಸಿಪಿ
ಬೇಕಾಗುವ ಸಾಮಾಗ್ರಿಗಳು: ಮಾವಿನ ಹಣ್ಣುಗಳು

 
ತಯಾರಿಸುವ ವಿಧಾನ:
ಮಾವಿನ ಹಣ್ಣುಗಳ ರಸ ತೆಗೆದು ಒಂದು ವಸ್ತ್ರದ ಮೇಲೆ ತೆಳುವಾಗಿ ಹರಡಿ ಬಿಸಿಲಲ್ಲಿ ಒಣಗಿಸಬೇಕು. ಮರುದಿನ ಇನ್ನಷ್ಟು ಮಾವಿನ ಹಣ್ಣುಗಳ ರಸವನ್ನು ಈ ಪದರದ ಮೇಲೇ ಹರಡಿ, ಒಣಗಿಸಬೇಕು. ಈ ರೀತಿ ೬-೭ ದಿನಗಳ ಕಾಲ ನಿತ್ಯವೂ ಮಾವಿನ ಹಣ್ಣುಗಳ ರಸವನ್ನು ಒಣಗಿಸುತ್ತಾ ಬರಬೇಕು. ಬಳಿಕ ಇದನ್ನು ನಿತ್ಯವೂ ಸುಮಾರು ಹತ್ತು ದಿನಗಳ ಕಾಲ ಬಿಸಿಲಲ್ಲಿ ಒಣಗಿಸಬೇಕು. ಈಗ ಇದನ್ನು ವಸ್ತ್ರದಿಂದ ಮಾವಿನ ಪದರವಾಗಿ ಎಬ್ಬಿಸಬಹುದು. ಇದಕ್ಕೆ ಮಾಂಬಳ ಎಂದು ಹೆಸರು. ಇದನ್ನು ಬೇಕಾದ ಆಕಾರಕ್ಕೆ ಕತ್ತರಿಸಿ,ಗಾಳಿಯಾಡದ ಡಬ್ಬದಲ್ಲಿ ಶೇಖರಿಸಿದರೆ, ಮಳೆಗಾಲದಲ್ಲಿ ಮಾವು ಇರದ ಕಾಲದಲ್ಲಿ ಹಾಗೇ  ತಿನ್ನಲು ಬಲು ರುಚಿ.

ಇದರಿಂದ ಗೊಜ್ಜು ಕೂಡ ತಯಾರಿಸಬಹುದು. ತೆಂಗಿನ ತುರಿಯ ಜತೆ ಕೆಂಪು ಮೆಣಸು ,ಸಾಸಿವೆ ಮತ್ತು ಮಾಂಬಳ ಹಾಕಿ ರುಬ್ಬಿದರೆ ಮಾಂಬಳ ಗೊಜ್ಜು ತಯಾರು.