Headlines

ಹಂತಕರನ್ನು ಕೂಡಲೇ ಬಂಧಿಸಿ: ಸಿ.ಎಂ * ಎದೆಭಾಗಕ್ಕೆ 2;ಹಣೆಗೆ1ಗುಂಡು * ಪರ್ತಕರ್ತೆ ಗೌರಿ ಲಂಕೇಶ್ ಹತ್ಯೆ * ಎಂಟು ಮಂದಿ ಶಿಕ್ಷಕರಿಗೆ ಸನ್ಮಾನ * ಸಾಧಕರಿಗೆ ಸನ್ಮಾನ * ಶಾಲೆ ಶಾಲೆಯಲ್ಲಿ ಗೆಜ್ಜೆಯ ನಿನಾದ! * ಋಣ ತೀರಿಸುವ ಕಾರ್ಯವಾಗಲಿ: ದೇವಿಪ್ರಸಾದ್ ಶೆಟ್ಟಿ * ಸಾರ್ವಜನಿಕ ಗಣೇಶೋತ್ಸವ * ಶ್ರೀ ಸೂರ್ಯನಾರಾಯಣ ಕ್ಷೇತ್ರದಲ್ಲಿ ಗಣೇಶೋತ್ಸವ * ಗ್ರಾಮ-ಪಟ್ಟಣಕ್ಕೆ ಒಂದೇ ಗಣೇಶನಿರಲಿ-ಟಿ.ಆರ್.ಸುರೇಶ್ * 54ನೇ ವರ್ಷದ ಮೂಡಬಿದಿರೆಯ ಗಣೇಶ * ಪೆರಿಂಜೆಯಲ್ಲಿ ಸಂಭ್ರಮದ ಗಣೇಶೋತ್ಸವ * ಕಲ್ಲಬೆಟ್ಟಿನಲ್ಲಿ ಪೂಜಿಸಿದ ವಿಘ್ನವಿನಾಯಕ * ಮೂಡುಬಿದಿರೆಯಲ್ಲಿ ರಕ್ಷಾಂಬಂಧನ * ಪ್ರೊ. ಕೆ.ಇ.ರಾಧಾಕೃಷ್ಣ ಮತ್ತು ಸತ್ಯಮಂಗಲ ಆರ್ ಮಹಾದೇವ ಅವರಿಗೆ ವರ್ಧಮಾನ ಪ್ರಶಸ್ತಿ ಘೋಷಣೆನ * ಇದು ಅತ್ಯಾಧುನಿಕ `ಪಾರಂಪರಿಕ’ಮಾದರಿಯ ಶ್ಯಾವಿಗೆ ಮಣೆ! * ವಿಂಶತಿ ಯಕ್ಷಕಲೋತ್ಸವಕ್ಕೆ ತೆರೆ * ಸಿ.ಐ.ಟಿ.ಯು: 9ನೇ ಬೀಡಿ ಕಾರ್ಮಿಕರ ರಾಜ್ಯ ಸಮ್ಮೇಳನ * ಪದ್ಮಪ್ರಸಾದ್ ಜೈನ್ ನೇಮಕ * ವಿಶೇಷ ಪೂಜೆ-ಅಭಿಷೇಕ *

ಮಳೆಗಾಲದಲ್ಲಿ ಗದ್ದೆಗಳ ತುಂಬೆಲ್ಲಾ ಕೃಷಿ ಯಂತ್ರಗಳು!

#rice#planting#machine#vaarte#exclusive#story

ವಾರ್ತೆ.ಕಾಂ  ವಿಶೇಷ: ಹರೀಶ್ ಕೆ.ಆದೂರು

ಆಗಸದಲ್ಲಿ ಮೋಡ ಮುಸುಕುತ್ತಿದ್ದಂತೆಯೇ ರೈತರ ಚಿತ್ತ ಗದ್ದೆಯತ್ತ ನೆಡುತ್ತಿತ್ತು… ನೊಗ ನೇಗಿಲು, ಜೋಡಿ ಕೋಣ, ಎತ್ತುಗಳು ರೈತರೊಂದಿಗೆ ದೊಡ್ಡ ದೊಡ್ಡ ಬಾಕಿಮಾರ್ ಗದ್ದೆಗಳತ್ತ ಹೆಜ್ಜೆ ಹಾಕುತ್ತಿದ್ದವು… ಗದ್ದೆ ಉಳುವ ಕಾಯಕಕ್ಕೆ ಕೃಷಿಕರು ಸಿದ್ಧತೆ ನಡೆಸುತ್ತಿದ್ದರು…ಗ್ರಾಮೀಣ ಭಾಗದಲ್ಲಿ ಈ ದೃಶ್ಯ ಸಾಮಾನ್ಯವಾಗಿತ್ತು.
ಆದರೆ ಕಾಲ ಬದಲಾಗಿದೆ. ಗದ್ದೆ ತೋಟಗಳಾಗಿಯೋ, ವಾಣಿಜ್ಯೋದ್ಯಮಕ್ಕೆ ಬೇಕಾದ ಸ್ಥಳವಾಗಿಯೋ ಪರಿವರ್ತನೆಯಾಗಿವೆ. ದೊಡ್ಡ ಪ್ರಮಾಣದಲ್ಲಿ ಕೃಷಿ ವ್ಯವಸ್ಥೆಯಲ್ಲಿ ಬದಲಾವಣೆಗಳಾಗಿವೆ. ಇಂದು ಸಾಂಪ್ರದಾಯಿಕ ಕೃಷಿ ಪದ್ಧತಿ ಕ್ಷೀಣಿಸತೊಡಗಿದೆ. ಆ ಜಾಗದಲ್ಲಿ ಆಧುನಿಕತೆಯ ಪ್ರಭಾವ ಹೆಚ್ಚಾಗಿದೆ. `ಇಲ್ಲ’ ಎಂಬ ಸಮಸ್ಯೆಯನ್ನು ತುಂಬುವ ಕಾರ್ಯವನ್ನು `ಯಂತ್ರ’ಗಳು ಯಶಸ್ವಿಯಾಗಿಸಿವೆ. ಹೀಗಾಗಿಯೇ ಉಳುವ ಯೋಗಿಯ ನೋಡಲ್ಲಿ…ಎಂಬ ಮಾತಿಗೆ ಅರ್ಥವೇ ಇಲ್ಲವೆಂಬಂತಾಗಿದೆ…. ಸಾಂಪ್ರದಾಯಿಕ ಕೃಷಿ ಕಾಯಕ ಒಂದರ್ಥದಲ್ಲಿ ತನ್ನ ತನವನ್ನು ಕಳೆದುಕೊಂಡಿವೆ.

ಹತ್ತು ಸಾವಿರ ಹೆಕ್ಟೇರ್ ಕಡಿಮೆ!
ಕಳೆದ ಹತ್ತು ವರುಷಗಳಲ್ಲಿ ಹತ್ತು ಸಾವಿರ ಹೆಕ್ಟೇರ್ ಭತ್ತ ಕೃಷಿ ದಕ್ಷಿಣ ಕನ್ನಡ ಜಿಲ್ಲೆಯೊಂದರಲ್ಲಿ ಕಡಿಮೆಯಾಗಿದೆ. ಹತ್ತು ವರ್ಷದ ಹಿಂದೆ 38000 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯುತ್ತಿದ್ದುದು ಇಂದಿಗೆ 28000 ಹೆಕ್ಟೇರ್ ಪ್ರದೇಶಕ್ಕೆ ಕುಸಿತ ಕಂಡಿದೆ. ನಗರೀಕರಣ, ವಾಣಿಜ್ಯೀಕರಣದ ಪ್ರಭಾವವೇ ಇದಕ್ಕೆಲ್ಲಾ ಪ್ರಮುಖ ಕಾರಣ ಎಂದರೆ ತಪ್ಪಲ್ಲ ಎಂಬುದು ಪಾರಂಪರಿಕ ಕೃಷಿಕರ ಅಭಿಪ್ರಾಯ.

batta2
ಕೃಷಿ ಕೂಲಿಕಾರ್ಮಿಕರ ಅಭಾವ, ನಗರೀಕರಣ, ಬೃಹತ್ ಕೈಗಾರಿಕೆಗಳು, ವಾಣಿಜ್ಯೋದ್ಯಮಗಳು, ಹಾಗೂ ಕೃಷಿ ಲಾಭದಾಯಕವಲ್ಲ ಎಂಬ ಚಿಂತನೆಗಳು ಕೃಷಿಕರಲ್ಲಿ ಮೂಡಿದ ಪರಿಣಾಮವೇ ಇಷ್ಟು ದೊಡ್ಡ ಮೊತ್ತದ ಕೃಷಿ ಜಾಗೆ ಪರಿವರ್ತನೆಯಾಗುತ್ತಿದೆ. ಒಂದೊಮ್ಮೆ ಭತ್ತದ ಕೃಷಿಯಿಂದ ಕಂಗೊಳಿಸುತ್ತಿದ್ದ ಗದ್ದೆಗಳಲ್ಲಿ ಇಂದು ಹೊಗೆಯುಗುಳುವ ಕೈಗಾರಿಕೆಗಳೋ, ದೊಡ್ಡ ದೊಡ್ಡ ವಾಣಿಜ್ಯ ಸಂಕೀರ್ಣಗಳೋ, ಬೃಹತ್ ವಸತಿ ಸಮುಚ್ಛಯವೋ ನಿರ್ಮಾಣಗೊಳ್ಳಲಾರಂಭಿಸಿವೆ.

ಯಾಂತ್ರೀಕತೆ ಪ್ರಭಾವ

ಕರಾವಳೀ ಪ್ರದೇಶದ ಪ್ರಮುಖ ಆಹಾರ ಬೆಳೆಯಾಗಿಯೇ ಪ್ರಸಿದ್ಧಿ ಪಡೆದ ಭತ್ತದ ಕೃಷಿಯಲ್ಲಿ ಯಾಂತ್ರಿಕತೆಯ ಪ್ರಭಾವ ಅತಿಯಾಗಿದೆ. ಹೆಚ್ಚುತ್ತಿರುವ ಉತ್ಪಾದನಾ ವೆಚ್ಚವನ್ನು ಕಡಿಮೆಗೊಳಿಸುವ ಹಿನ್ನಲೆಯಲ್ಲಿ ಕೃಷಿಕ ಯಂತ್ರದ ಮೊರೆಹೋಗುತ್ತಿದ್ದಾನೆ. ಬದಲಾದ ಸನ್ನಿವೇಶಕ್ಕೆ ತಕ್ಕಂತೆಯೇ ಅಭಿವೃದ್ಧಿ ಹೊಂದಿದ ತಾಂತ್ರಿಕತೆಯನ್ನು ಒಪ್ಪಿ ಕೃಷಿ ಕಾರ್ಯವನ್ನು ಮಾಡಲಾರಂಭಿಸಿದ್ದಾನೆ. ಭತ್ತದ ಸಸಿನಾಟಿಯನ್ನು ಯಂತ್ರದ ಮೂಲಕ ಮಾಡಿಸಿ ಆಳುಗಳ ಖರ್ಚಿನ ಉಳಿತಾಯ ಮಾಡುವ ಚಿಂತನೆಗೆ ರೈತಾಪಿ ವರ್ಗ ಮುಂದಾಗಿದ್ದು ಸ್ಪಷ್ಟ. ತನ್ಮೂಲಕ ಕಡಿಮೆ ಖರ್ಚು ಅಧಿಕ ಇಳುವರಿ ಸಿದ್ದಾಂತವನ್ನು ರೈತ ಒಪ್ಪಿಕೊಳ್ಳುವಂತಾಗಿದೆ. ಖಾಸಗೀ ಸಹಭಾಗಿತ್ವದೊಂದಿಗೆ ಅನುಷ್ಠಾನಗೊಳಿಸಲಾದ ಸರಕಾರದ ಕೃಷಿ ಯಂತ್ರಧಾರೆಯನ್ನು ಬಳಸಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಸಾಲಿನಲ್ಲಿ 16,403ಕೃಷಿಕರು ಬೆಳೆ ಬೆಳೆದದ್ದೇ ಇದಕ್ಕೊಂದು ಸಾಕ್ಷಿ ಎಂದರೆ ತಪ್ಪಲ್ಲ.

ಹೈಲೈಟ್ಸ್
* ಸಾಂಪ್ರದಾಯಿಕ ವಿಧಾನದಲ್ಲಿ ನಾಟಿ ಮಾಡಲು ಪ್ರತೀ ಎಕ್ಕರೆಗೆ 25-30 ಆಳುಗಳ ಅವಶ್ಯಕತೆ. ಆದರೆ ಯಂತ್ರದ ಸಹಾಯದಿಂದ ನಾಟಿ ಮಾಡಲು ಕೇವಲ 4ಮಂದಿ ಆಳುಗಳು ಸಾಕು.
* ಸಮಯಾವಕಾಶ ಕಡಿಮೆ ಸಾಕು
* ಯಾಂತ್ರೀಕೃತ ವಿಧಾನದಿಂದ ಕಡಿಮೆ ವೆಚ್ಚ, ಸರಿಯಾದ ಆಳ ಅಂತರದಲ್ಲಿ ನಾಟಿ. ಇದರಿಂದ ಇಳುವರಿ ಅಧಿಕ.
* ಭತ್ತದ ಕೃಷಿಗಾಗಿ ನಾಟಿ,ಸ್ಪ್ರೇ,ಕಟಾವು,ಭತ್ತ ಬೇರ್ಪಡಿಸುವುದು, ಹೀಗೆ ಪ್ರತಿಯೊಂದು ಕಾರ್ಯಕ್ಕೂ ಯಂತ್ರಗಳಿವೆ.
* ಸಂಬಂಧಿತ ಇಲಾಖೆಯಿಂದ ಸಬ್ಸಿಡಿ ಸೌಲಭ್ಯವೂ ಇದೆ.