Headlines

ಆಳ್ವಾಸ್ ವಿದ್ಯಾರ್ಥಿಸಿರಿಯ ಹೈಲೈಟ್ಸ್… * ಬಾಲಪ್ರತಿಭೆ ಪ್ರದರ್ಶನ * ಬಸದಿಗಳ ನಾಡಲ್ಲಿ ಕನ್ನಡದ ಬಾವುಟ… ಹೊತ್ತಿತೋ…ಹೊತ್ತಿತು ಕನ್ನಡದ ದೀಪ… * ನುಡಿಸಿರಿಯ ಸರ್ವಾಧ್ಯಕ್ಷರ ಎಕ್ಸ್ ಕ್ಲೂಸಿವ್ ಸಂದರ್ಶನ * ಹನ್ನೆರಡು ಸಾಧಕರಿಗೆ 2018ರ ಆಳ್ವಾಸ್ ನುಡಿಸಿರಿ ಪುರಸ್ಕಾರ * ನುಡಿಸಿರಿಯ ಅಂಗಳದಲ್ಲಿ ಅಚ್ಚರಿಯ ಮೇಲೊಂದಚ್ಚರಿ! * ನುಡಿಸಿರಿಯ ಅಂಗಳದಲ್ಲೊಂದು ಸುದ್ದಿಮನೆ! * ಆಳ್ವಾಸ್ ವಿದ್ಯಾರ್ಥಿಸಿರಿ 2018 ಆರಂಭ * ಕಣ್ಣುತೆರೆಸಿದ ಜವನೆರ್ ಬೆದ್ರ ಸಂಘಟನೆ * ಯೋಧರ ಮನೆಯಲ್ಲಿ ಬೆಳಗಿದ ದೀಪ! * ಯಶಸ್ವೀ 36ನೇವಾರ ಪೂರೈಸಿದ ಕ್ಲೀನ್ ಅಪ್ ಮೂಡಬಿದಿರೆ * ರಾಜ್ಯಮಟ್ಟದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟ ಆರಂಭ * ಅಳಿಯೂರಿನಲ್ಲಿ ಮೇಳೈಸಲಿದೆ ಕ್ರೀಡಾಹಬ್ಬ.! * ರಾಷ್ಟ್ರಮಟ್ಟಕ್ಕೆ ಆಯ್ಕೆಯಾಯ್ತು ಹಳ್ಳಿ ಹುಡುಗರ ಅನ್ವೇಷಣೆ! * ಶಿರ್ಲಾಲು: ಹೊಸ ಶಾಸನ ಪತ್ತೆ * ಸಾವಿರ ಕಂಬದ ಬಸದಿಯ ಸ್ವಚ್ಛತೆ * ಪುರಸಭೆಯ ಕಣ್ಣುತೆರೆಸಿದ ಜವನೆರ್ ಬೆದ್ರ! * ಪುರಸಭೆಗೆ ಸಾರ್ವಜನಿಕರಿಂದ ಹಿಡಿಶಾಪ * ಕಾರ್ಯಾಂಗ,ನ್ಯಾಯಾಂಗ,ಶಾಸಕಾಂಗದ ವೈಫಲ್ಯದ ವಿರುದ್ಧ ಹೋರಾಟ: ಸುದರ್ಶನ್ * ಬೆಸ್ಟ್ ಡ್ರಾಮೇಬಾಜ್ ಖ್ಯಾತಿಯ ಶ್ರೀಶ ಬೆಂಗಳೂರು ಅವರಿಗೆ ಗೌರವ ಸನ್ಮಾನ *

ಮಧುಮೇಹ ಮುಕ್ತ ಭಾರತದ ಸಂಕಲ್ಪ

diatetic_sathish_shankar_vaarte_news_madhumeha

ಅಂಕಣ:  ಡಾ.ಸತೀಶ ಶಂಕರ್ ಬಿ
ಮಧುಮೇಹ ಇಂದು ಜಗತ್ತಿನಾದ್ಯಂತ ವ್ಯಾಪಕವಾಗಿ ಕಾಣಿಸಿಕೊಳ್ಳುತ್ತಿದೆ ಮತ್ತು ಭಾರತ ವಿಶ್ವಕ್ಕೆ ಮಧುಮೇಹದ ಅಗ್ಗ ರಾಷ್ಟ್ರಗಳಲ್ಲಿ ಕಾಣಿಸಿಕೊಂಡಿದೆ. ಮುಧುಮೇಹ ಮುಕ್ತ ಸಾಧ್ಯವೇ ಎಂಬ ಪ್ರಶ್ನೆ ಎಲ್ಲರಲ್ಲೂ ಇದೆ. ಮಧುಮೇಹದಲ್ಲಿ 2 ವಿಧಗಳಿವೆ. Type 1 ಮಧುಮೇಹ ಮತ್ತು Type 2 ಮಧುಮೇಹ.

 

 

 

Type 1 ಮಧುಮೇಹ:

ಇನ್ಸುಲಿನ್ ಕೊರತೆ ಅಥವಾ ಅನುತ್ಪಾದನೆಯಿಂದ ಬರುತ್ತದೆ. ಇದಕ್ಕೆ ಇನ್ಸುಲಿನ್ ಅವಶ್ಯಕತೆಯಿದೆ. ಈ ವಿಧದಲ್ಲಿ ಮಧುಮೇಹಮುಕ್ತ ಎಂದರೆ ಮಧುಮೇಹ ನಿಯಂತ್ರಣದಲ್ಲಿ ಇದ್ದರೆ ಮಧುಮೇಹದಿಂದ ಬರುವ ತೊಂದರೆಗಳನ್ನು ನಿವಾರಿಸಬಹುದು. ಆದರೆ ಇನ್ಸುಲಿನ್ ತೆಗೆದುಕೊಳ್ಳಲೇಬೇಕಾಗುತ್ತದೆ.

 

 

Type -2 ಮಧುಮೇಹ:
ಇದು ಈ ಕೆಳಗಿನ ಕಾರಣಗಳಿಂದ ಬರುತ್ತದೆ.
1. ಅನುವಂಶೀಯ
2. ಆಧುನಿಕ ಜೀವನಶೈಲಿ
3. ಸಿಹಿ ಪದಾರ್ಥದ ಅತಿಯಾದ ಸೇವನೆ
4. ಬೊಜ್ಜು
5. ವ್ಯಾಯಾಮದ ಕೊರತೆ

 

 
ಈ ವಿಧವಾದ ಮಧುಮೇಹವನ್ನು ಖಂಡಿತವಾಗಿಯೂ ತಡೆಗಟ್ಟಬಹುದು ಮತ್ತು ಶೇ.95ರಷ್ಟು ಜನ Type 2 ಮಧುಮೇಹ ಹೊಂದಿದ್ದಾರೆ. ಶೇ.5ರಷ್ಟು ಜನರು Type 1 ಮಧುಮೇಹ ಹೊಂದಿದ್ದಾರೆ.

Type 2 ಮಧುಮೇಹ ತಡೆಗಟ್ಟಬೇಕಾದರೆ ನಮ್ಮ ಆಹಾರಪದ್ಧತಿಯಲ್ಲಿ ಕೆಲವೊಂದು ಬದಲಾವಣೆ, ವ್ಯಾಯಾಮ ಮತ್ತು ಬೊಜ್ಜು ಬಾರದಂತೆ ನೋಡಿಕೊಳ್ಳುವುದರ ಮೂಲಕ ಸಾಧಿಸಬಹುದು ಅಥವಾ ಬೇಗನೆ ಬರದಂತೆ ಮಾಡಲು ಖಂಡಿತವಾಗಿಯೂ ಸಾಧ್ಯವಿದೆ.

 

 

 

ಮಧುಮೇಹದ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು ಮುಖ್ಯ. ಜನಜಾಗೃತಿಯು ಮಾಡಿದರೆ Type 2 ಮಧುಮೇಹದಿಂದ ಜನರನ್ನು ರಕ್ಷಿಸುವುದು ಸಾಧ್ಯ. ಮತ್ತು ಮಧುಮೇಹದಿಂದ ಬರುವ ಅನೇಕ ತೊಂದರೆಗಳನ್ನು ತಡೆಗಟ್ಟಬಹುದು.

 

 

 

ಜನಜಾಗೃತ ಕಾರ್ಯಕ್ರಮ:
ಆಯುರ್ ಸ್ಪರ್ಶ ಇನ್ನೋವೇಟಿವ್ ಡಯಾಬಿಟಿಕ್ ಪೌಂಡೇಶನ್ ಈ ನಿಟ್ಟಿನಲ್ಲಿ ಈಗಾಗಲೇ ಹಲವು ಮಧುಮೇಹ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದೆ. ಇನ್ನು ಇದನ್ನು ರಾಜ್ಯಾದ್ಯಂತ ವಿಸ್ತರಿಸಲು ಆರಂಭಿಸಿದ್ದೇವೆ. ಇಂತಹ ಜಾಗೃತಿ ಕಾರ್ಯಕ್ರಮದಿಂದ ಜನರಿಗೆ ನಿಜವಾಗಿಯೂ ಪ್ರಯೋಜನವಾಗಿದೆಯೇ ಎಂಬ ಕುರಿತು ಅವಲೋಕಿಸಿದಾಗ ನಮಗೆ ತಿಳಿದುಬಂದಿದ್ದು…
1. ಉಚಿತವಾಗಿ ಮಧುಮೇಹದ ರಕ್ತಪರೀಕ್ಷೆ ನಡೆಸಿದಾಗ ಪ್ರತೀ ಕಡೆಯಲ್ಲಿಯೂ 20ರಿಂದ 25 ಜನಕ್ಕೆ ಹೊಸದಾಗಿ ಮಧುಮೇಹ ಪತ್ತೆಯಾಗಿದೆ. ಇವರಿಗೆ ತಾವು ಮಧುಮೇಹದಿಂದ ಬಳಲುತ್ತಿದ್ದೇವೆಂಬ ಅರಿವು ಇಲ್ಲ. ಇದು ಹೀಗೆಯೇ ಮುಂದುವರಿದಿದ್ದರೆ ಅವರು ಮಧುಮೇಹದಿಂದ ಬರುವ ತೊಂದರೆಗಳು. ಉದಾ: ಕಿಡ್ನಿಯ ತೊಂದರೆಗಳು ಹೃದಯದ ತೊಂದರೆ ಹೀಗೆ ಹಲವು ತೊಂದರೆಗಳಿಗೆ ಒಳಗಾಗುತ್ತಿದ್ದರು. ಮಧುಮೇಹ ಪತ್ತೆಯಾದ ಬಳಿಕ ಸೂಕ್ತ ಚಿಕಿತ್ಸೆಯಿಂದ ನಿಯಂತ್ರಣ ಸಾಧಿಸಿದಾಗ ಮಧುಮೇಹದಿಂದ ಬರುವ ತೊಂದರೆಗಳನ್ನು ತಡೆಗಟ್ಟಲು ಸಾಧ್ಯ.

 
2. ಮಧುಮೇಹದ ಬಗ್ಗೆ ಅರಿವು:
ಮಧುಮೇಹ ಜಾಗೃತಿ ಕಾರ್ಯಕ್ರಮದ ಮೂಲದ ಇದರ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಸಹಕಾರಿ. ಯಾರು ಮಧುಮೇಹದಿಂದ ಬಳಲುತ್ತಿಲ್ಲವೊ ಅವರು ಮುಂಜಾಗ್ರತಾ ಕ್ರಮಗಳ ಮೂಲಕ ಅದನ್ನು ತಡೆಗಟ್ಟಲು ಸಹಕಾರಿ.

 

 

3. ಪ್ರತಿಯೊಬ್ಬರ ಭಾಗವಹಿಸುವಿಕೆ ಮುಖ್ಯ:
ಮಧುಮೇಹದ ಬಗ್ಗೆ ಅರಿವು ದೇಶಾದ್ಯಂತ ಮಾಡಬೇಕು. ಇದರಿಂದ ಅದೆಷ್ಟೋ ಜನರನ್ನು ಮಧುಮೇಹದ ತೊಂದರೆಗಳಿಂದ ರಕ್ಷಿಸಬಹುದು.