Headlines

ಆಳ್ವಾಸ್ ವಿದ್ಯಾರ್ಥಿಸಿರಿಯ ಹೈಲೈಟ್ಸ್… * ಬಾಲಪ್ರತಿಭೆ ಪ್ರದರ್ಶನ * ಬಸದಿಗಳ ನಾಡಲ್ಲಿ ಕನ್ನಡದ ಬಾವುಟ… ಹೊತ್ತಿತೋ…ಹೊತ್ತಿತು ಕನ್ನಡದ ದೀಪ… * ನುಡಿಸಿರಿಯ ಸರ್ವಾಧ್ಯಕ್ಷರ ಎಕ್ಸ್ ಕ್ಲೂಸಿವ್ ಸಂದರ್ಶನ * ಹನ್ನೆರಡು ಸಾಧಕರಿಗೆ 2018ರ ಆಳ್ವಾಸ್ ನುಡಿಸಿರಿ ಪುರಸ್ಕಾರ * ನುಡಿಸಿರಿಯ ಅಂಗಳದಲ್ಲಿ ಅಚ್ಚರಿಯ ಮೇಲೊಂದಚ್ಚರಿ! * ನುಡಿಸಿರಿಯ ಅಂಗಳದಲ್ಲೊಂದು ಸುದ್ದಿಮನೆ! * ಆಳ್ವಾಸ್ ವಿದ್ಯಾರ್ಥಿಸಿರಿ 2018 ಆರಂಭ * ಕಣ್ಣುತೆರೆಸಿದ ಜವನೆರ್ ಬೆದ್ರ ಸಂಘಟನೆ * ಯೋಧರ ಮನೆಯಲ್ಲಿ ಬೆಳಗಿದ ದೀಪ! * ಯಶಸ್ವೀ 36ನೇವಾರ ಪೂರೈಸಿದ ಕ್ಲೀನ್ ಅಪ್ ಮೂಡಬಿದಿರೆ * ರಾಜ್ಯಮಟ್ಟದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟ ಆರಂಭ * ಅಳಿಯೂರಿನಲ್ಲಿ ಮೇಳೈಸಲಿದೆ ಕ್ರೀಡಾಹಬ್ಬ.! * ರಾಷ್ಟ್ರಮಟ್ಟಕ್ಕೆ ಆಯ್ಕೆಯಾಯ್ತು ಹಳ್ಳಿ ಹುಡುಗರ ಅನ್ವೇಷಣೆ! * ಶಿರ್ಲಾಲು: ಹೊಸ ಶಾಸನ ಪತ್ತೆ * ಸಾವಿರ ಕಂಬದ ಬಸದಿಯ ಸ್ವಚ್ಛತೆ * ಪುರಸಭೆಯ ಕಣ್ಣುತೆರೆಸಿದ ಜವನೆರ್ ಬೆದ್ರ! * ಪುರಸಭೆಗೆ ಸಾರ್ವಜನಿಕರಿಂದ ಹಿಡಿಶಾಪ * ಕಾರ್ಯಾಂಗ,ನ್ಯಾಯಾಂಗ,ಶಾಸಕಾಂಗದ ವೈಫಲ್ಯದ ವಿರುದ್ಧ ಹೋರಾಟ: ಸುದರ್ಶನ್ * ಬೆಸ್ಟ್ ಡ್ರಾಮೇಬಾಜ್ ಖ್ಯಾತಿಯ ಶ್ರೀಶ ಬೆಂಗಳೂರು ಅವರಿಗೆ ಗೌರವ ಸನ್ಮಾನ *

ಮಧುಮೇಹ ಮುಕ್ತ ಭಾರತದ ಸಂಕಲ್ಪ-3

diatetic_sathish_shankar_vaarte_news_madhumeha

ಅಂಕಣ:  ಡಾ.ಸತೀಶ ಶಂಕರ್ ಬಿ
ಮಧುಮೇಹ ಮುಕ್ತ ಜಾಗೃತಿ ಕಾರ್ಯಕ್ರಮ
ಮಧುಮೇಹ ಇಂದು ವಿಶ್ವಾದ್ಯಂತ ಎಲ್ಲಾ ರಾಷ್ಟ್ರಗಳಲ್ಲೂ ವ್ಯಾಪಕವಾಗಿ ಕಾಣಿಸಿಕೊಳ್ಳುತ್ತದೆ. ವಿಶ್ವದ ಅನೇಕ ರಾಷ್ಟ್ರಗಳಲ್ಲಿ ಇದರ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನ ನಡೆಯುತ್ತಿದೆ. ಬೇರೆ ದೇಶಗಳಲ್ಲಿ ಹೇಗೆ ಜಾಗೃತಿ ಮೂಡಿಸುವ ಪ್ರಯತ್ನ ನಡೆಯುತ್ತಿದೆ ಎಂದು ನೋಡಿದಾಗ ಈ ಕೆಳಗಿನ ಅಂಶಗಳು ಕಂಡುಬಂದಿದೆ.

 

 

 

1.ಶಾಲಾ-ಕಾಲೇಜುಗಳಲ್ಲಿ ಜಾಗೃತಿ:
ವಿದೇಶಗಳಲ್ಲೂ ಮಧುಮೇಹ ತಡೆಯಲು ಪ್ರಮುಖವಾಗಿ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ನಡೆಯುತ್ತಿದೆ. ಇದರಿಂದ ಮುಂದೆ ಅವರಿಗೆ Type-2 ಮಧುಮೇಹ ಬಾರದಂತೆ ತಡೆಗಟ್ಟಬಹುದು. ಅಥವಾ ಬೇಗನೆ ಬರದಂತೆ ನೋಡಿಕೊಳ್ಳಬಹುದು. ಇದು ಕೇವಲ ಎರಡು ಉದಾಹರಣೆಗಳಷ್ಟೇ. ತುಂಬ ಮಂದಿ ಯುವಕರು Type-2 ಮಧುಮೇಹದಿಂದ ಬರುವ ತೊಂದರೆಗಳನ್ನು ಅನುಭವಿಸುತ್ತಿದ್ದಾರೆ. ಇಲ್ಲಿ ಎಲ್ಲರಲ್ಲೂ ಕಂಡು ಬರುವ ಒಂದು ಸಾಮಾನ್ಯ ಅಂಶ ಇವರೆಲ್ಲರಿಗೂ ಮಧುಮೇಹದ ಬಗ್ಗೆ ಸರಿಯಾದ ಮಾಹಿತಿಯ ಕೊರತೆ. ಮಧುಮೇಹದಿಂದ ಇಂತಹ ಅಪಾಯಕಾರಿ ತೊಂದರೆಗಳು ಕಾಣಿಸುತ್ತದೆ ಎಂದು ಆರಿವೇ ಇವರಿಗೆ ಇರಲಿಲ್ಲ.

 

 

 

ಯುವಕರಿಗೆ ಇದರ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ನಡೆಯಲೇಬೇಕಿದೆ. ನಮ್ಮ ದೇಶದ ಯುವಕರನ್ನು ರಕ್ಷಿಸಲೇಬೇಕಿದೆ. ಇದು ಪ್ರತಿಯೊಂದು ಶಾಲಾ-ಕಾಲೇಜುಗಳಲ್ಲಿಯೂ ನಡೆಯಬೇಕು. ಜಾಗೃತಿ ಎಲ್ಲರನ್ನೂ ತಲುಪುವಂತೆ ನಾವು ನೋಡಿಕೊಳ್ಳಬೇಕಿದೆ. ಸಮಾಜದಲ್ಲಿ ಯುವಕರು ಪ್ರಮುಖ ಪಾತ್ರ ನಿರ್ವಹಿಸುತ್ತಾರೆ. ಆದರೆ ಇಂದು ಟೈಪ್ 2 ಮಧುಮೇಹ 20ರ ಹರೆಯದ ಆರೋಗ್ಯವಂತ ಯುವಕರಲ್ಲೂ ಕಾಣಿಸತೊಡಗಿದೆ.
ಕುಮಾರ್ ಎಂಬ 28 ವರ್ಷದ ಯುವಕ ನಮ್ಮಲ್ಲಿ ಮಧುಮೇಹ ತೊಂದರೆಯಿಂದ ಡಯಾಬಿಟಿಕ್ ರೆಟಿನೋಪತಿಗೆ ಔಷಧ ತೆಗೆದುಕೊಳ್ಳುತ್ತಿದ್ದಾನೆ. 20ರ ಹರೆಯದಲ್ಲೇ ಮಧುಮೇಹಕ್ಕೆ ತುತ್ತಾದ ಈ ಯುವಕ ಇದರ ಬಗ್ಗೆ ಮಾಹಿತಿಯ ಕೊರತೆಯಿಂದಾಗಿ ಸರಿಯಾದ ಔಷಧ ತೆಗೆದುಕೊಳ್ಳದೇ ಇದ್ದುದರಿಂದ ಕಣ್ಣಿನ ತೊಂದರೆಗೆ ಒಳಗಾಗಿದ್ದಾನೆ. 20ರ ಯುವಕ ದೃಷ್ಠಿದೋಷದಿಂದ ಬಳಲುತ್ತಿದ್ದಾನೆ.

 
ರೋನಾಲ್ಡ್ ಎಂಬ 30ರ ಹರೆಯದ ಯುವಕ ಟೈಪ್ 2 ಮಧುಮೇಹದಿಂದ ನರದ ತೊಂದರೆಯಿಂದ ಬಳಲುತ್ತಿದ್ದಾನೆ. ನಡೆಯಲು ಕಷ್ಟವಾಗುವ ಪರಿಸ್ಥಿತಿ. ಈಗ ಸ್ವಲ್ಪ ನಡೆದಾಡಲು ಆರಂಭಿಸಿರುವ ಈ ಯುವಕ ಇಷ್ಟು ಚಿಕ್ಕ ವಯಸ್ಸಿನಲ್ಲಿಯೇ ನರದ ತೊಂದರೆಗೆ ಒಳಗಾಗಿದ್ದಾನೆ.

 

 

 

ಇದು ಕೇವಲ 2 ಉದಾಹರಣೆಯಷ್ಟೇ. ಹಲವು ಮಂದಿ ಯುವಕರು Type-2 ಮಧುಮೇಹದಿಂದ ಬರು ತೊಂದರೆಗಳನ್ನು ಅನುಭವಿಸುತ್ತಿದ್ದಾರೆ.
ಯುವಕರು ಸಮಾಜಕ್ಕೆ ಕೊಡುಗೆಯಾಗಬಲ್ಲರು. ಮಧುಮೇಹದ ಬಗ್ಗೆ ಜಾಗೃತಿ ಕೇವಲ ಯುವಕರಿಗಷ್ಟೇ ಅಲ್ಲದೆ ಎಲ್ಲರಿಗೂ ತಲುಪಬೇಕು. ‘ವಸುದೈವ ಕುಟುಂಬಕಮ್’ ಎಂಬ ಮಾತಿದೆ ಇಡೀ ವಿಶ್ವವೇ ಒಂದು ಕುಟುಂಬವಿದ್ದಂತೆ. ಇದಕ್ಕಾಗಿ ಮೊದಲು ಭಾರತವನ್ನು ಮಧುಮೇಹಮುಕ್ತ ಭಾರತವನ್ನಾಗಿ ಮಾಡಲು ಹೆಜ್ಜೆಯನ್ನಿಡೋಣ. ಭಾರತದ ದೇಶವನ್ನು ವಿಶ್ವಕ್ಕೆ ಮಾದರಿ ರಾಷ್ಟ್ರವಾಗಿಸೋಣ.

 

ಡಾ.ಸತೀಶ ಶಂಕರ್ ಬಿ

response@vaarte.com