Headlines

ಹಂತಕರನ್ನು ಕೂಡಲೇ ಬಂಧಿಸಿ: ಸಿ.ಎಂ * ಎದೆಭಾಗಕ್ಕೆ 2;ಹಣೆಗೆ1ಗುಂಡು * ಪರ್ತಕರ್ತೆ ಗೌರಿ ಲಂಕೇಶ್ ಹತ್ಯೆ * ಎಂಟು ಮಂದಿ ಶಿಕ್ಷಕರಿಗೆ ಸನ್ಮಾನ * ಸಾಧಕರಿಗೆ ಸನ್ಮಾನ * ಶಾಲೆ ಶಾಲೆಯಲ್ಲಿ ಗೆಜ್ಜೆಯ ನಿನಾದ! * ಋಣ ತೀರಿಸುವ ಕಾರ್ಯವಾಗಲಿ: ದೇವಿಪ್ರಸಾದ್ ಶೆಟ್ಟಿ * ಸಾರ್ವಜನಿಕ ಗಣೇಶೋತ್ಸವ * ಶ್ರೀ ಸೂರ್ಯನಾರಾಯಣ ಕ್ಷೇತ್ರದಲ್ಲಿ ಗಣೇಶೋತ್ಸವ * ಗ್ರಾಮ-ಪಟ್ಟಣಕ್ಕೆ ಒಂದೇ ಗಣೇಶನಿರಲಿ-ಟಿ.ಆರ್.ಸುರೇಶ್ * 54ನೇ ವರ್ಷದ ಮೂಡಬಿದಿರೆಯ ಗಣೇಶ * ಪೆರಿಂಜೆಯಲ್ಲಿ ಸಂಭ್ರಮದ ಗಣೇಶೋತ್ಸವ * ಕಲ್ಲಬೆಟ್ಟಿನಲ್ಲಿ ಪೂಜಿಸಿದ ವಿಘ್ನವಿನಾಯಕ * ಮೂಡುಬಿದಿರೆಯಲ್ಲಿ ರಕ್ಷಾಂಬಂಧನ * ಪ್ರೊ. ಕೆ.ಇ.ರಾಧಾಕೃಷ್ಣ ಮತ್ತು ಸತ್ಯಮಂಗಲ ಆರ್ ಮಹಾದೇವ ಅವರಿಗೆ ವರ್ಧಮಾನ ಪ್ರಶಸ್ತಿ ಘೋಷಣೆನ * ಇದು ಅತ್ಯಾಧುನಿಕ `ಪಾರಂಪರಿಕ’ಮಾದರಿಯ ಶ್ಯಾವಿಗೆ ಮಣೆ! * ವಿಂಶತಿ ಯಕ್ಷಕಲೋತ್ಸವಕ್ಕೆ ತೆರೆ * ಸಿ.ಐ.ಟಿ.ಯು: 9ನೇ ಬೀಡಿ ಕಾರ್ಮಿಕರ ರಾಜ್ಯ ಸಮ್ಮೇಳನ * ಪದ್ಮಪ್ರಸಾದ್ ಜೈನ್ ನೇಮಕ * ವಿಶೇಷ ಪೂಜೆ-ಅಭಿಷೇಕ *

ಮಧುಮೇಹ ಮುಕ್ತ ಭಾರತದ ಸಂಕಲ್ಪ

diatetic_sathish_shankar_vaarte_news_madhumeha

ಅಂಕಣ:  ಡಾ.ಸತೀಶ ಶಂಕರ್ ಬಿ

ಮಧುಮೇಹ ತಡೆಯಲು ಈ ಕೆಳಗಿನ ಅಭ್ಯಾಸಗಳಿಂದ ದೂರವಿರಿ
1. ಕುಳಿತುಕೊಂಡೇ ಕೆಲಸ ಮಾಡುವುದು(ವ್ಯಾಯಾಮ ರಹಿತ):
ವ್ಯಾಯಾಮವಿಲ್ಲದೆ ಕುಳಿತುಕೊಂಡೇ ಕೆಲಸ ಮಾಡುವುದರಿಂದ Type- 2 ಗೆ ಒಳಗಾಗುವ ಸಾಧ್ಯತೆ ಹೆಚ್ಚು. ಇಂತಹ ವೃತ್ತಿಯಲ್ಲಿ ಇರುವವರು ಬೆಳಗ್ಗೆ 1/2 ತಾಸು ವೇಗದ ನಡಿಗೆ ರೂಡಿ ಮಾಡಿಕೊಳ್ಳಿ ಮತ್ತು ಕೆಲವೊಂದು ಸುಲಭ ಯೋಗಾಸನ
1. ವಕ್ರಾಸನ 2.ಭುಜಂಗಾಸನ 3.ಅರ್ಥಮತ್ಸೇಂದ್ರಾಸನ 4.ಧನುರಾಸನ 5. ಪಶ್ಚಿಮೋಸ್ಥಾಸನ ಅಭ್ಯಾಸ ಮಾಡಿ.

 

 

 

2. ಅತಿಯಾದ ಮಾನಸಿಕ ಒತ್ತಡ:
ಇಂದಿನ ಜೀವನಶೈಲಿಯಿಂದಾಗಿ ಮಾನಸಿಕ ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ಇದರಿಂದಾಗಿ ಸ್ಟ್ರೆಸ್ ಹಾಮರ್ೋನ್ ಗಳು ಹೆಚ್ಚಾಗಿ ಮಧುಮೇಹ ಹೆಚ್ಚುವಂತೆ ಮಾಡುತ್ತದೆ. ಮಾನಸಿಕ ಒತ್ತಡದಿಂದ ದೂರವಿರಲು ಪ್ರಾಣಾಯಾಮ ಸಹಕಾರಿ.

 

 

3. ಆಹಾರ ಪದ್ಧತಿ:
ಅತಿಯಾದ ಆಹಾರಸೇವನೆ, ಸಮಯಕ್ಕೆ ಸರಿಯಾಗಿ ಆಹಾರಸೇವನೆ ಮಾಡದೇ ಇರುವುದು, ಜಂಕ್ ಫುಡ್, ಪಾಸ್ಟ್ ಫುಡ್ ಗಳತ್ತ ತೋರಿಬರುತ್ತಿರುವ ಒಲವು, ಸಾಫ್ಟ್ ಡ್ರಿಂಕ್ಸ್ ಗಳ ಅತಿಯಾದ ಸೇವನೆ ಮಾಡಿದರೆ Type- 2 ಮಧುಮೇಹ ಕಟ್ಟಿಟ್ಟ ಬುತ್ತಿ.
ಇಂದು ಯುವಕ-ಯುವತಿಯರು ಪಾಶ್ಚಿಮಾತ್ಯ ಆಹಾರಗಳತ್ತ ಒಲವು ವ್ಯಕ್ತಪಡಿಸುತ್ತಿರುವುದು ಕೂಡ ಒಂದು ಕಾರಣವಾಗಿದೆ. ಭಾರತೀಯ ಸಾಂಪ್ರದಾಯಿಕ ಅಡುಗೆ ಸೇವಿಸಿ.
3ವರ್ಷದ ಮಕ್ಕಳಿಗೂ ಪೆಪ್ಸಿ ಕೋಲಾದಂತಹ ಸಾಫ್ಟ್ ಡ್ರಿಂಕ್ಸ್ ಕೊಟ್ಟು ಬೆಳೆಸುವ ಪೋಷಕರಿಗೇನೂ ಕೊರತೆಯಿಲ್ಲ. ಇದಕ್ಕಾಗಿಯೇ ಇಂದು 20ರ ಹರೆಯದಲ್ಲೇ Type- 2 ಕಾಣಿಸಿಕೊಳ್ಳುತ್ತದೆ. ಭಾರತೀಯ ಸಾಂಪ್ರದಾಯಿಕ ಅಡುಗೆಗಳನ್ನು ಮಾಡುವುದನ್ನು ಬಿಡಿ, ಇವುಗಳ ಹೆಸರೇ ತಿಳಿಯದ ಇಂದಿನ ಜನಾಂಗ ಈ ಮೂಲಕ Type- 2 ಮಧುಮೇಹಕ್ಕೆ ತಮ್ಮ ತಮ್ಮ ಕೊಡುಗೆ ಸಲ್ಲಿಸುತ್ತಿದ್ದಾರೆ.

 

 

 
ಆರೋಗ್ಯದ ಬಗ್ಗೆ ಕಾಳಜಿ ಇಲ್ಲದೇ ಇರುವುದು
ಆರೋಗ್ಯವೇ ಭಾಗ್ಯ ಎಂಬ ಮಾತಿದೆ. ಮೊದಲನೆ ಮಹತ್ವ ಆರೋಗ್ಯಕ್ಕೆ ನೀಡಲೇಬೇಕು. ಆದರೆ ಇಂದಿನ ಯುವಕ-ಯುವತಿಯರು ಆರೋಗ್ಯಕ್ಕೆ ಮಹತ್ವ ನೀಡದೇ ಇರುವುದು Type- 2 ಮಧುಮೇಹ ಹೆಚ್ಚಳವಾಗಲು ಕಾರಣ. ನಾವು ಸಾಮಾನ್ಯವಾಗಿ ವ್ಯಾಯಾಮ ಮಾಡಲು ಅಥವಾ ಯೋಗ ಮಾಡಲು ಸೂಚಿಸಿದಾಗ ತಾವು ಬ್ಯುಸಿ ಇದನ್ನು ಮಾಡಲು ನಮಗೆ ಸಮಯವಿಲ್ಲ ಎಂಬ ಉತ್ತರ ಬರುತ್ತದೆ. ಆದರೆ ಮಧುಮೇಹದಿಂದ ಬರುವ ಅಪಾಯಗಳನ್ನು ಅವರು ಅನುಭವಿಸಿದಾಗಲೇ ಇದರೆ ಮಹತ್ವ ಅರಿವೆಗೆ ಬರುತ್ತದೆ. ಆರೋಗ್ಯಕ್ಕಾಗಿ ನಾವು ಪ್ರಾಧಾನ್ಯತೆ ಕೊಡಲೇಬೇಕು ಆರೋಗ್ಯವಿಲ್ಲದಿದ್ದರೆ ಏನನ್ನು ಸಾಧಿಸಲು ಸಾಧ್ಯವಿಲ್ಲ. ಆರೋಗ್ಯವಿಲ್ಲದಿದ್ದರೆ ಉಳಿದವೆಲ್ಲವೂ ನಿಪ್ರಯೋಜಕ. ಇದಕ್ಕಾಗಿಯೇ ಆಯುರ್ವೇದದಲ್ಲಿ ದಿನಚರ್ಯ ಮತ್ತು ಋತುಚರ್ಯಕ್ಕೆ ಮಹತ್ವ ನೀಡಿರುವುದು. ಆಯುರ್ವೇದದಲ್ಲಿ ಹೇಳಲಾದ ದಿನಚರ್ಯ ಮತ್ತು ಋತುಚರ್ಯವನ್ನು ಪಾಲಿಸಿದರೆ ಅನೇಕ ರೋಗಗಳಿಂದ ದೂರವಿರಬಹುದು. ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು.

 ಡಾ.ಸತೀಶ ಶಂಕರ್ ಬಿ

response@vaarte.com