Headlines

ಹಂತಕರನ್ನು ಕೂಡಲೇ ಬಂಧಿಸಿ: ಸಿ.ಎಂ * ಎದೆಭಾಗಕ್ಕೆ 2;ಹಣೆಗೆ1ಗುಂಡು * ಪರ್ತಕರ್ತೆ ಗೌರಿ ಲಂಕೇಶ್ ಹತ್ಯೆ * ಎಂಟು ಮಂದಿ ಶಿಕ್ಷಕರಿಗೆ ಸನ್ಮಾನ * ಸಾಧಕರಿಗೆ ಸನ್ಮಾನ * ಶಾಲೆ ಶಾಲೆಯಲ್ಲಿ ಗೆಜ್ಜೆಯ ನಿನಾದ! * ಋಣ ತೀರಿಸುವ ಕಾರ್ಯವಾಗಲಿ: ದೇವಿಪ್ರಸಾದ್ ಶೆಟ್ಟಿ * ಸಾರ್ವಜನಿಕ ಗಣೇಶೋತ್ಸವ * ಶ್ರೀ ಸೂರ್ಯನಾರಾಯಣ ಕ್ಷೇತ್ರದಲ್ಲಿ ಗಣೇಶೋತ್ಸವ * ಗ್ರಾಮ-ಪಟ್ಟಣಕ್ಕೆ ಒಂದೇ ಗಣೇಶನಿರಲಿ-ಟಿ.ಆರ್.ಸುರೇಶ್ * 54ನೇ ವರ್ಷದ ಮೂಡಬಿದಿರೆಯ ಗಣೇಶ * ಪೆರಿಂಜೆಯಲ್ಲಿ ಸಂಭ್ರಮದ ಗಣೇಶೋತ್ಸವ * ಕಲ್ಲಬೆಟ್ಟಿನಲ್ಲಿ ಪೂಜಿಸಿದ ವಿಘ್ನವಿನಾಯಕ * ಮೂಡುಬಿದಿರೆಯಲ್ಲಿ ರಕ್ಷಾಂಬಂಧನ * ಪ್ರೊ. ಕೆ.ಇ.ರಾಧಾಕೃಷ್ಣ ಮತ್ತು ಸತ್ಯಮಂಗಲ ಆರ್ ಮಹಾದೇವ ಅವರಿಗೆ ವರ್ಧಮಾನ ಪ್ರಶಸ್ತಿ ಘೋಷಣೆನ * ಇದು ಅತ್ಯಾಧುನಿಕ `ಪಾರಂಪರಿಕ’ಮಾದರಿಯ ಶ್ಯಾವಿಗೆ ಮಣೆ! * ವಿಂಶತಿ ಯಕ್ಷಕಲೋತ್ಸವಕ್ಕೆ ತೆರೆ * ಸಿ.ಐ.ಟಿ.ಯು: 9ನೇ ಬೀಡಿ ಕಾರ್ಮಿಕರ ರಾಜ್ಯ ಸಮ್ಮೇಳನ * ಪದ್ಮಪ್ರಸಾದ್ ಜೈನ್ ನೇಮಕ * ವಿಶೇಷ ಪೂಜೆ-ಅಭಿಷೇಕ *

ಮಧುಮೇಹಮುಕ್ತ ಭಾರತದ ಸಂಕಲ್ಪ

diatetic_sathish_shankar_vaarte_news_madhumeha

 

ಅಂಕಣ:  ಡಾ.ಸತೀಶ ಶಂಕರ್ ಬಿ

ಮಧುಮೇಹಮುಕ್ತಭಾರತ ಅಭಿಯಾನ ಇದೀಗ ರಾಜ್ಯಾದ್ಯಂತ ವಿಸ್ತರಿಸಲ್ಪಡುತ್ತಿದೆ. ಮೇ 12ರಂದು ಶ್ರೀರಂಗಮಟ್ಟಣದ ತಗ್ಗಹಳ್ಳಿಯಲ್ಲಿ(ಮಂಡ್ಯ ಜಿಲ್ಲೆ) ನಡೆಸುವುದರ ಮೂಲಕ ರಾಜ್ಯಕ್ಕೆ ವಿಸ್ತರಿಸಲ್ಪಡುತ್ತಿದೆ. ಈ ಮೊದಲು ದಕ್ಷಿಣಕನ್ನಡ ಜಿಲ್ಲೆಯಾದ್ಯಂತ 10 ಕಡೆ ಈ ಅಭಿಯಾನ ನಡೆಸಲಾಗಿದೆ.

 

 
ಪ್ರಯೋಜನಗಳು:
ಮಧುಮೇಹಮುಕ್ತ ಭಾರತ ಜನಜಾಗೃತಿ ಅಭಿಯಾನಕ್ಕೆ ಭಾರೀ ಜನಬೆಂಬಲ ವ್ಯಕ್ತವಾಗುತ್ತಿದ್ದು, ಪ್ರತೀ ಜಿಲ್ಲೆಯಲ್ಲೂ ನಡೆಸಲು ಜನ ಉತ್ಸುಕರಾಗಿದ್ದಾರೆ. ಇದಕ್ಕಾಗಿಯೇ ಮೊದಲು ಮಂಡ್ಯ ಜಿಲ್ಲೆಯಲ್ಲಿ ನಡೆಸಲಾಗುತ್ತಿದೆ. ಇದರ ಪ್ರಯೋಜನವನ್ನು ಜನರು ಪಡೆಯುತ್ತಿರುವುದು ಹೆಮ್ಮೆಯ ವಿಚಾರ.

 

 
1. ಮಧುಮೇಹ ಇಲ್ಲದೇ ಇರುವವರಿಗೆ
Type 2 ಮಧುಮೇಹ ಹೆಚ್ಚಾಗಿ 40ರ ಹರೆಯದ ನಂತರ ಕಾಣಿಸಿಕೊಳ್ಳುತ್ತದೆ. ಆದರೆ ಇಂದಿನ ಜೀವನಶೈಲಿಯಿಂದಾಗಿ ಇದು 20ರ ಯುವಕರನ್ನೂ ಕಾಣಸಿಗುತ್ತದೆ. ಆದರೆ ಇದರ ಬಗ್ಗೆ ಜಾಗೃತಿ ಮೂಡಿಸುವುದರಿಂದ ಯುವಕರನ್ನು Type 2 ಮಧುಮೇಹದಿಂದ ರಕ್ಷಿಸಬಹುದು.

 

 

 

2. ಮಧುಮೇಹಿಗಳಿಗೆ:
ಈಗಾಗಲೇ Type 2 ಮಧುಮೇಹದಿಂದ ಬಳಲುತ್ತಿರುವವರಿಗೆ ಮಧುಮೇಹದಿಂದ ಬರುವ ತೊಂದರೆಗಳಿಂದ ರಕ್ಷಿಸಬಹುದು. ಅನೇಕರು Type 2 ಮಧುಮೇಹ ಹೊಂದಿದ್ದರೂ ಇದರಿಂದ ಮುಂದೆ ಅವರಿಗೆ ಅಪಾಯವಾಗಿ ತೊಂದರೆಗಳು ಕಾಣಿಸಿಕೊಳ್ಳಬಹುದು ಎಂಬುದರ ಅರಿವು ಇಲ್ಲ. ಇದರಿಂದ ಅವರು ಮಧುಮೇಹದಿಂದ ಬರುವ ಕಿಡ್ನಿ ಫೆಲ್ಯೂರ್, ರೆಟಿನೋಪತಿ, ನ್ಯೂರೋಪತಿ ಮುಂತಾದ ತೊಂದರೆಗೆ ಒಳಗಾಗುತ್ತಿದ್ದಾರೆ. ಇದರ ಬಗ್ಗೆ ಜಾಗೃತಿ ಮೂಡಿಸಿದರೆ ಮಧುಮೇಹವನ್ನು ನಿಯಂತ್ರಣದಲ್ಲಿ ಇಡುವ ಮೂಲಕ ಇಂತಹ ಅನೇಕ ತೊಂದರೆಗಳನ್ನು ಬರದಂತೆ ತಡೆಯಬಹುದು.

 

 

 

ಮಧುಮೇಹದ ಆರಂಭ ಹಂತದಲ್ಲೇ ಪತ್ತೆಹಚ್ಚುವುದು
Type 2 ಮಧುಮೇಹ ಆರಂಭ ಹಂತದಲ್ಲಿ ಯಾವುದೇ ಲಕ್ಷಣಗಳನ್ನು ತೋರಿಸುವುದಿಲ್ಲ. ಕೇವಲ ಸುಸ್ತು ಅತಿಯಾದ ಬಾಯರಿಕೆ ಪದೇ ಪದೇ ಮೂತ್ರ ವಿಸರ್ಜನೆ ಅಷ್ಟೇ ಇರುತ್ತದೆ. ಇದರ ಬಗ್ಗೆ ಮಾಹಿತಿಯ ಕೊರತೆಯಿಂದ ಜನರು ಇದನ್ನು ನಿರ್ಲಕ್ಷಿಸುವುದೇ ಹೆಚ್ಚು. ಇದರಿಂದ ಕೆಲವೊಮ್ಮೆ ಹಲವು ವರ್ಷಗಳ ಬಳಿಕ ಮಧುಮೇಹದಿಂದ ಬರುವ ಅಪಾಯಕಾರಿ ತೊಂದರೆಗಳು ಕಾಣಿಸಿದಾಗ ಟೈಪ್ 2 ಮಧುಮೇಹದಿಂದ ಬಳಲುತ್ತಿರುವುದು ತಿಳಿದುಬರುತ್ತದೆ. ಇದಕ್ಕಾಗಿ ಜನರಲ್ಲಿ ಜಾಗೃತಿ ಮೂಡಿಸಿದಾಗ ಮಾತ್ರ ಇಂತಹ ತೊಂದರೆಗಳಿಂದ ರಕ್ಷಿಸಲು ಸಾಧ್ಯ.

 

 

 

ಜಾಗೃತಿ ಕಾರ್ಯಕ್ರಮ:
ಶಾಲಾ-ಕಾಲೇಜುಗಳಲ್ಲಿ ಸಹ ಜಾಗೃತಿ ಮೂಡಿಸುವುದರಿಂದ ಮುಂದೆ ಇವರಲ್ಲಿ Type 2 ಮಧುಮೇಹ ಬರದಂತೆ ತಡೆಗಟ್ಟಬಹುದು. ಮತ್ತು ಎಲ್ಲಾ ಕಡೆಗಳಲ್ಲಿಯೂ ಇಂತಹ ಜಾಗೃತಿ ಮಾಡಬೇಕು. ಇದಕ್ಕಾಗಿಯೇ ” Together we can stop diabetes

ಡಾ.ಸತೀಶ ಶಂಕರ್ ಬಿ

response@vaarte.com