Headlines

ಹಂತಕರನ್ನು ಕೂಡಲೇ ಬಂಧಿಸಿ: ಸಿ.ಎಂ * ಎದೆಭಾಗಕ್ಕೆ 2;ಹಣೆಗೆ1ಗುಂಡು * ಪರ್ತಕರ್ತೆ ಗೌರಿ ಲಂಕೇಶ್ ಹತ್ಯೆ * ಎಂಟು ಮಂದಿ ಶಿಕ್ಷಕರಿಗೆ ಸನ್ಮಾನ * ಸಾಧಕರಿಗೆ ಸನ್ಮಾನ * ಶಾಲೆ ಶಾಲೆಯಲ್ಲಿ ಗೆಜ್ಜೆಯ ನಿನಾದ! * ಋಣ ತೀರಿಸುವ ಕಾರ್ಯವಾಗಲಿ: ದೇವಿಪ್ರಸಾದ್ ಶೆಟ್ಟಿ * ಸಾರ್ವಜನಿಕ ಗಣೇಶೋತ್ಸವ * ಶ್ರೀ ಸೂರ್ಯನಾರಾಯಣ ಕ್ಷೇತ್ರದಲ್ಲಿ ಗಣೇಶೋತ್ಸವ * ಗ್ರಾಮ-ಪಟ್ಟಣಕ್ಕೆ ಒಂದೇ ಗಣೇಶನಿರಲಿ-ಟಿ.ಆರ್.ಸುರೇಶ್ * 54ನೇ ವರ್ಷದ ಮೂಡಬಿದಿರೆಯ ಗಣೇಶ * ಪೆರಿಂಜೆಯಲ್ಲಿ ಸಂಭ್ರಮದ ಗಣೇಶೋತ್ಸವ * ಕಲ್ಲಬೆಟ್ಟಿನಲ್ಲಿ ಪೂಜಿಸಿದ ವಿಘ್ನವಿನಾಯಕ * ಮೂಡುಬಿದಿರೆಯಲ್ಲಿ ರಕ್ಷಾಂಬಂಧನ * ಪ್ರೊ. ಕೆ.ಇ.ರಾಧಾಕೃಷ್ಣ ಮತ್ತು ಸತ್ಯಮಂಗಲ ಆರ್ ಮಹಾದೇವ ಅವರಿಗೆ ವರ್ಧಮಾನ ಪ್ರಶಸ್ತಿ ಘೋಷಣೆನ * ಇದು ಅತ್ಯಾಧುನಿಕ `ಪಾರಂಪರಿಕ’ಮಾದರಿಯ ಶ್ಯಾವಿಗೆ ಮಣೆ! * ವಿಂಶತಿ ಯಕ್ಷಕಲೋತ್ಸವಕ್ಕೆ ತೆರೆ * ಸಿ.ಐ.ಟಿ.ಯು: 9ನೇ ಬೀಡಿ ಕಾರ್ಮಿಕರ ರಾಜ್ಯ ಸಮ್ಮೇಳನ * ಪದ್ಮಪ್ರಸಾದ್ ಜೈನ್ ನೇಮಕ * ವಿಶೇಷ ಪೂಜೆ-ಅಭಿಷೇಕ *

ಮತ್ತೆ ಮಳೆ ಹೊಯ್ಯುತಿದೆ…ಎಲ್ಲ ನೆನಪಾಗುತಿದೆ…

umbrella story

 

ವಾರ್ತೆ.ಕಾಂ ವಿಶೇಷ: ಹರೀಶ್ ಕೆ.ಆದೂರು

“ ಮತ್ತೆ ಮಳೆ ಹೊಯ್ಯುತಿದೆ ಎಲ್ಲ ನೆನಪಾಗುತಿವೆ…ಈ ಸಾಲು ಇಂದಿಗೂ ಪ್ರಸ್ತುತ…ಮತ್ತೆ ಮಳೆ ಹೊಯ್ಯುವ ಕಾಲ ಸನ್ನಿಹಿತವಾಗಿದೆ. ಮಾನ್ಸೂನ್ ಮಾರುತದ ದಿನಗಳು ಹತ್ತಿರ ಹತ್ತಿರವಾಗುತ್ತಿದ್ದಂತೆಯೇ ಧೋ ಎಂದು ಎಲ್ಲೆಡೆ ಅಕಾಲಿಕ ಮಳೆಯೂ ಬೀಳಲಾರಂಭಿಸಿದೆ. ಗುಡುಗಿನಾರ್ಭಟದೊಂದಿಗೆ ಮಳೆಯ ಅಬ್ಬರದ ಒಡ್ಡೋಲಗ…ಮಣ್ಣಿನ ವಾಸನೆಯೊಂದಿಗೆ ಹಳೆಯ ನೆನಪುಗಳ ಬುತ್ತಿ ಬಿಚ್ಚಿಡುವ ಕಾಲ…ಒಂದೆರಡು ಮಳೆ ಬಿದ್ದ ಇಳೆಯಲ್ಲಿ ಬಚ್ಚಿಟ್ಟಿದ್ದ ಸಹಸ್ರ ಸಹಸ್ರ ಬೀಜಗಳು ತಮ್ಮ ಇರುವಿಕೆಯ ಮೊಗ್ಗನ್ನು ಹೊರಸೂಸಿ ಅರಳುವ ಸಮಯ… ಮರಗಳ ಮರೆಯಲ್ಲಿ ಅವಿತುಕುಳಿತ ಜೀರುಂಡೆಗಳ ಸಂಗೀತ…ಮುದುಡಿ ಬಿದ್ದಿದ್ದ ಛತ್ರಿಗಳಿಗೆಲ್ಲ ಗರಿಗೆದರುವ ಸಮಯ! ವ್ಹಾವ್…ಏನೆಲ್ಲಾ ನೆನಪಾಗುತ್ತದೆ!…”

 

umbrella story1

ಹೌದು… ಮಳೆಯ ಸಮಯವೇ ಹಾಗೆ…! ಸುಮ್ಮನೆ ಹಲವು ಚಿಂತನೆಗಳಿಗೊಂದು ವೇದಿಕೆಯೊದಗಿಸುತ್ತಿರುತ್ತದೆ…ಆ ಕಾರಣಕ್ಕಾಗಿಯೇ ಮಳೆ ಪ್ರೇಮಿಗಳಿಗೂ, ಸಾಹಿತಿಗಳಿಗೂ ಬಹು ಪ್ರಿಯವಾಗಿದ್ದು!. ಮಳೆಗಾಲಕ್ಕೆ ಇನ್ನೂ ತುಸುಸಮಯವಿರುವಾಗಲೇ ಕೊಡೆಗಳು ಅರಳಿ ಸುಸ್ವಾಗತ ಕೋರುತ್ತಿವೆ. ಮಳೆನೀರಿನಿಂದ ರಕ್ಷಣೆ ನೀಡುವ ಕೊಡೆಗಳು ಬಿಸಿಲಿಗೂ ಸೈ… ಏರಿದ ಕಾವಿಗೆ ಒಂದು ಸಣ್ಣ ಬ್ರೇಕ್ ಹಾಕುವ ಈ ಛತ್ರಿಗಳು ಅಬಾಲ ವೃದ್ಧರಾದಿಯಾಗಿ ಎಲ್ಲರಿಗೂ ಬೇಕೇ ಬೇಕು… ಅದಕ್ಕಾಗಿಯೇ ಪುಟ್ಟ ಪುಟ್ಟ ಕೊಡೆಗಳಿಂದ ತೊಡಗಿ ಫೋಲ್ಡೆಡ್ ಛತ್ರಿ, ದೊಡ್ಡ ಕಾಲಿನ ಬಣ್ಣದ ಛತ್ರಿಯ ತನಕವೂ ಲಭಿಸುತ್ತಿದೆ.

 
ಈಗಾಗಲೇ ನಾಲ್ಕಾರು ಮಳೆ ಬಿದ್ದ ಮೂಡಬಿದಿರೆಯಲ್ಲಿ ವೈವಿಧ್ಯಮಯ ಛತ್ರಿಗಳು ಜನಾಕರ್ಷಣೆ ಪಡೆಯಲಾರಂಭಿಸಿದೆ. ಮೂಡಬಿದಿರೆಯ ರಸ್ತೆ ಬದಿಗಳಲ್ಲಿ ಹೊಸ ಹೊಸ ವೈವಿಧ್ಯಮಯ ಛತ್ರಿಗಳು ಮಾರಾಟಕ್ಕೆ ಲಭ್ಯವಾಗುತ್ತಿದೆ. ಇಂದು ಸಣ್ಣ ಸಣ್ಣ ಛತ್ರಿಗಳ ಬದಲಾಗಿ ದೊಡ್ಡ ಛತ್ರಿಗಳಿಗೆ ಡಿಮಾಂಡ್ ಜಾಸ್ತಿ. ವರ್ಣಮಯ ಹೊದಿಕೆಯೊಂದಿಗೆ ಟ್ರೆಂಡೀಯಾಗಿರುವ ಛತ್ರಿಗಳು ಶೋಡಷಿಯರಿಗಾಗಿಯೇ ಲಭ್ಯವಾಗುತ್ತಿದೆ. ಇನ್ನು ಪೇಪರ್ ಛತ್ರಿ(ಪ್ರಿಂಟೆಡ್), ಕಲರ್ಸ್ ಛತ್ರಿ, ಆಂಟಿಕ್ ಛತ್ರಿಗಳು ಹೊಸ ಟ್ರೆಂಡ್ ರೂಪಿಸುತ್ತಿವೆ.

 
ಈಗಾಗಲೇ ಮಾಲ್ ಗಳು, ಫ್ಯಾನ್ಸಿ ಸ್ಟೋರ್ಸ್ ಗಳಲ್ಲಿ ಶಾಲಾ ಬ್ಯಾಗ್ ಗಳೊಂದಿಗೆ ಛತ್ರಿಗಳ ವ್ಯಾಪಾರವೂ ಜೋರಾಗಿದೆ!. ಕಾಲೇಜು ಹುಡುಗೀರು ಹೆಚ್ಚಾಗಿ ದೊಡ್ಡ ದೊಡ್ಡ ಕೊಡೆಗಳಿಗೆ ಆಕರ್ಷಿತರಾಗುತ್ತಿದ್ದಾರೆ ಎಂಬುದು ಅಂಗಡಿ ಮಾಲೀಕರ ಅನಿಸಿಕೆ.

 

 

 

ಸ್ಕೂಟರ್ ಬೈಕ್ ಅಂಬ್ರೆಲ್ಲಾ!
ಇದು ಹೊಸ ಅವಿಷ್ಕಾರ… ಮಳೆಯಿಂದ ರಕ್ಷಣೆ ಪಡೆಯಲು ದ್ವಿಚಕ್ರ ವಾಹನ ಸವಾರರು ತಲೆಗೊಂಡು ಪ್ಲಾಸ್ಟಿಕ್ ಕವರ್ ಧರಿಸಿ ಹೋಗುತ್ತಿದ್ದ ನೆನಪು ನಮಗೆಲ್ಲರಿಗೂ ಬಂದೇ ಬರುತ್ತದೆ. ಇದರ ಪ್ರೇರಣೆಯಿಂದಲೋ ಏನೋ ಹೀಗೊಂದು ಹೊಸ ಅವಿಷ್ಕಾರ ನಡೆದಿದೆ. ಸ್ಕೂಟರ್ , ಬೈಕ್ ಗಳಿಗೆ ಹೊಸ ರೀತಿಯ ಕೊಡೆಗಳು ಲಭ್ಯವಾಗಿದೆ. ಇದೊಂದು ಗೂಡು ರೀತಿಯದ್ದು. ಇದರೊಳಗೆ ಕುಳಿತು ಮಳೆಯಿಂದ ರಕ್ಷಣೆ ಪಡೆಯಬಹುದಾಗಿದೆ.! 1750ರುಪಾಯಿ ಮೌಲ್ಯದ ಕೊಡೆಗಳು ಇದಾಗಿವೆ. ಅಂತರ್ಜಾಲ ಆಧಾರಿತ ಮಾರುಕಟ್ಟೆ ವ್ಯವಸ್ಥೆಯಲ್ಲಿ ಅತ್ಯಂತ ಬೇಡಿಕೆಯಿಂದ ಈ ಕೊಡೆ ಖರ್ಚಾಗುತ್ತಿದೆ.

scooter umbrella_vaarte

 

 

ವಿಶಿಷ್ಟ ಮಾದರಿಯ ಮೇಲ್ಭಾಗಕ್ಕೆ ಮಡಚುವ ಕೊಡೆಗಳು ಈ ಬಾರಿಯ ಮಳೆಗಾಲಕ್ಕೆ ಹೊಸ ಟ್ರೆಂಡ್ ತೊಂದೊಗಿಸುವುದರಲ್ಲಿ ಸಂದೇಹವೇ ಇಲ್ಲ. ಇದು ಮಾಮೂಲಿ ಕೊಡೆಗಳಿಗಿಂತ ವಿಭಿನ್ನವಾಗಿದೆ. ಮಡಿಸಿದಾಗ ಒಂದು ತೊಟ್ಟು ಹನಿಯೂ ಹೊರಬೀಳದಂತೆ ವಿಶೇಷ ರೀತಿಯಲ್ಲಿ ಫೋಲ್ಡಿಂಗ್ ವಿನ್ಯಾಸ ಮಾಡಲಾಗಿದೆ. ಅಂತರ್ಜಾಲ ಮಾರುಕಟ್ಟೆಯ ಮೂಲಕ ಅತ್ಯಂತ ಹೆಚ್ಚು ಮಾರಾಟವಾಗುತ್ತಿದೆ.

folded umbrella_story