Headlines

ಕಂಬಳಸಮಿತಿ ಸಭೆ * 30ನೇವಾರದ ಕ್ಲೀನ್ ಅಪ್ ಮೂಡಬಿದಿರೆ * ಸ್ವಚ್ಛತಾ ದಿನಾಚರಣರೆ * ಶಾಸಕ ಉಮಾನಾಥ್ ಎ.ಕೋಟ್ಯಾನ್ ವಿಶೇಷ ಸಂದರ್ಶನ * ಸಮ್ಮೇಳನದ ಸರ್ವಾಧ್ಯಕ್ಷರಾಗಿ ಡಾ. ಮಲ್ಲಿಕಾ ಎಸ್.ಘಂಟಿ, ಉದ್ಘಾಟಕರಾಗಿ ಡಾ.ಷ. ಶೆಟ್ಟರ್ * ಫಲವಿತರಿಸಿ ಹುಟ್ಟುಹಬ್ಬ ಆಚರಣೆ * ನುಡಿಸಿರಿಯಲ್ಲೊಂದು ಕೃಷಿಸಿರಿ:ಡಾ.ಆಳ್ವ * ಹುಲಿ-ಸ್ವಚ್ಛತೆಯೂ -ಗಣೇಶೋತ್ಸವವೂ-ಪುರಸಭೆಯೂ! * ಗಣೇಶ ದರ್ಶನ… * ಮೂಡಬಿದಿರೆಯಲ್ಲಿ ಗಣೇಶೋತ್ಸವದ ಗೌಜಿ ಶುರು… * 28ನೇ ವಾರದ ಸ್ವಚ್ಛತಾ ಅಭಿಯಾನ * ಈ ಕರ್ಮಕಾಂಡಕ್ಕೆ ಯಾರು ಬಲಿ…? * `ಗುಣಮಟ್ಟದ ಶಿಕ್ಷಣ-ಸೂಕ್ತ ಉದ್ಯೋಗಕ್ಕೆ ಒತ್ತು’ * 27ನೇ ವಾರದ ಕ್ಲೀನ್ ಅಪ್ ಮೂಡಬಿದಿರೆ ಸಂಪನ್ನ * ನಮ್ಮ ಹೆಮ್ಮಕ್ಕಳು ಅದೆಷ್ಟು ಸುರಕ್ಷಿತ…? * ಮನಮೋಹಕ ನೃತ್ಯ ಸಿಂಚನ * ಸ್ವಚ್ಛ ಸರ್ವೇಕ್ಷಣ ಗ್ರಾಮೀಣ 2018 * ಆಧುನಿಕತೆಯೇ ಮುಳುವಾಯಿತೇ…? * ನಾಟ್ಯ ಮಯೂರಿ… * ನವೆಂಬರ್ 16-18: ಆಳ್ವಾಸ್ ನುಡಿಸಿರಿ *

ಭೋಜಕೋಟ್ಯಾನ್ ನಗರ ನಾಮಕರಣ

#bhioja kotyan

ಮೂಡಬಿದಿರೆ ಪ್ರತಿನಿಧಿ ವರದಿ

ಮೂಡಬಿದಿರೆ ಪುರಸಭಾ ಸದಸ್ಯರಾಗಿ ತನ್ನ ಕ್ಷೇತ್ರಾಭಿವೃದ್ಧಿಯೂ ಸೇರಿದಂತೆ ಸಮಾಜ ಸೇವೆಯಲ್ಲಿ ಶ್ರೇಷ್ಠ ಸಾಧನೆಗೈದವರು ಭೋಜಕೋಟ್ಯಾನ್ ಎಂದು ಪುರಸಭಾ ಕಂದಾಯ ಅಧಿಕಾರಿ ಧನಂಜಯ್ ಹೇಳಿದರು. ತಮ್ಮ ಜೀವಿತಾವಧಿಯುದ್ದಕ್ಕೂ ಕ್ಷೇತ್ರದ ನಾಗರೀಕರ ಸಂಕಷ್ಟಗಳಿಗೆ ಸ್ಪಂದಿಸುತ್ತಾ ಜನಾನುರಾಗಿಯಾಗಿದ್ದರು. ಆ ಕಾರಣಕ್ಕಾಗಿಯೇ ಅವರ ಹೆಸರು ನಿರಂತರವಾಗಿ ಉಳಿಯುವ ಹಿನ್ನಲೆಯಲ್ಲಿ ಒಂಟಿಕಟ್ಟೆಯಲ್ಲಿ `ಭೋಜಕೋಟ್ಯಾನ್ ನಗರ’ ನಾಮಕರಣ ಮಾಡಲಾಗುತ್ತಿದೆ ಎಂದವರು ಹೇಳಿದರು.

#bhioja kotyanಒಂಟಿಕಟ್ಟೆಯಲ್ಲಿ ಭೋಜಕೋಟ್ಯಾನ್ ನಗರವನ್ನು ಸುಜಾತಾ ಭೋಜಕೋಟ್ಯಾನ್ ಉದ್ಘಾಟಿಸಿದರು. ಪುರಸಭಾಧ್ಯಕ್ಷೆ ಹರಿಣಾಕ್ಷಿ ಸುವರ್ಣ, ಉಪಾಧ್ಯಕ್ಷ ವಿನೋದ್ ಸೆರಾವೋ, ಮೂಡಾ ಮೂಡಬಿದಿರೆ ಅಧ್ಯಕ್ಷ ಸುರೇಶ್ ಪ್ರಭು, ಸದಸ್ಯರಾದ ಪಿ.ಕೆ.ಥೋಮಸ್, ಸ್ಥಾಯೀ ಸಮಿತಿ ಅಧ್ಯಕ್ಷ ಕೊರಗಪ್ಪ, ನಾಗರಾಜ್ ಪೂಜಾರಿ, ರತ್ನಾಕರ ದೇವಾಡಿಗ, ಸುಪ್ರಿಯಾ ಡಿ ಶೆಟ್ಟಿ, ಶಕುಂತಲಾ, ಅಬ್ದುಲ್ ಬಶೀರ್,ವಲೇರಿಯನ್ ಸಿಕ್ವೇರ, ಇಕ್ಬಾಲ್ ಕರೀಂ, ಗೋಪಾಲ್ ಪೂಜಾರಿ,ಪ್ರಕಾಶ್ ಶೆಟ್ಟಿಗಾರ್, ಪ್ರಕಾಶ್ ಪೂಜಾರಿ ಮೊದಲಾದವರಿದ್ದರು.