Headlines

ಹಂತಕರನ್ನು ಕೂಡಲೇ ಬಂಧಿಸಿ: ಸಿ.ಎಂ * ಎದೆಭಾಗಕ್ಕೆ 2;ಹಣೆಗೆ1ಗುಂಡು * ಪರ್ತಕರ್ತೆ ಗೌರಿ ಲಂಕೇಶ್ ಹತ್ಯೆ * ಎಂಟು ಮಂದಿ ಶಿಕ್ಷಕರಿಗೆ ಸನ್ಮಾನ * ಸಾಧಕರಿಗೆ ಸನ್ಮಾನ * ಶಾಲೆ ಶಾಲೆಯಲ್ಲಿ ಗೆಜ್ಜೆಯ ನಿನಾದ! * ಋಣ ತೀರಿಸುವ ಕಾರ್ಯವಾಗಲಿ: ದೇವಿಪ್ರಸಾದ್ ಶೆಟ್ಟಿ * ಸಾರ್ವಜನಿಕ ಗಣೇಶೋತ್ಸವ * ಶ್ರೀ ಸೂರ್ಯನಾರಾಯಣ ಕ್ಷೇತ್ರದಲ್ಲಿ ಗಣೇಶೋತ್ಸವ * ಗ್ರಾಮ-ಪಟ್ಟಣಕ್ಕೆ ಒಂದೇ ಗಣೇಶನಿರಲಿ-ಟಿ.ಆರ್.ಸುರೇಶ್ * 54ನೇ ವರ್ಷದ ಮೂಡಬಿದಿರೆಯ ಗಣೇಶ * ಪೆರಿಂಜೆಯಲ್ಲಿ ಸಂಭ್ರಮದ ಗಣೇಶೋತ್ಸವ * ಕಲ್ಲಬೆಟ್ಟಿನಲ್ಲಿ ಪೂಜಿಸಿದ ವಿಘ್ನವಿನಾಯಕ * ಮೂಡುಬಿದಿರೆಯಲ್ಲಿ ರಕ್ಷಾಂಬಂಧನ * ಪ್ರೊ. ಕೆ.ಇ.ರಾಧಾಕೃಷ್ಣ ಮತ್ತು ಸತ್ಯಮಂಗಲ ಆರ್ ಮಹಾದೇವ ಅವರಿಗೆ ವರ್ಧಮಾನ ಪ್ರಶಸ್ತಿ ಘೋಷಣೆನ * ಇದು ಅತ್ಯಾಧುನಿಕ `ಪಾರಂಪರಿಕ’ಮಾದರಿಯ ಶ್ಯಾವಿಗೆ ಮಣೆ! * ವಿಂಶತಿ ಯಕ್ಷಕಲೋತ್ಸವಕ್ಕೆ ತೆರೆ * ಸಿ.ಐ.ಟಿ.ಯು: 9ನೇ ಬೀಡಿ ಕಾರ್ಮಿಕರ ರಾಜ್ಯ ಸಮ್ಮೇಳನ * ಪದ್ಮಪ್ರಸಾದ್ ಜೈನ್ ನೇಮಕ * ವಿಶೇಷ ಪೂಜೆ-ಅಭಿಷೇಕ *

ಬ್ರ್ಯಾಂಡ್ ವಿಷನ್ ಟಸ್ಕರ್ ಗೆ ಕೋಸ್ಟಲ್ ವುಡ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಪ್ರಶಸ್ತಿ

mng_cpl_crikets

 

ಮಂಗಳೂರು ಸ್ಪೋರ್ಟ್ಸ್ ಪ್ರತಿನಿಧಿ ವರದಿ
ಕರಾವಳಿಯ ಚಿತ್ರರಂಗದ ಕೋಸ್ಟಲ್ವುಡ್ ಕಲಾವಿದರು ಮತ್ತು ತಂತ್ರಜ್ಞರ ಸಾಂಸ್ಕೃತಿಕ ಸಂಘಟನೆಯ ಆಸರೆಯಲ್ಲಿ ಮಂಗಳೂರಿನ ನೆಹರೂ ಮೈದಾನದಲ್ಲಿ ಜರಗಿದ ಸುರಕ್ಷಾ ಕೋಸ್ಟಲ್ವುಡ್ ಕ್ರಿಕೆಟ್ ಪ್ರೀಮಿಯರ್ಲೀಗ್ ಪಂದ್ಯಾಟದ ಪಶಸ್ತಿಯನ್ನು ಬ್ರ್ಯಾಂಡ್ ವಿಷನ್ ಈವೆಂಟ್ ಮ್ಯಾನೇಜ್ಮೆಂಟ್ ಮತ್ತು ಮಾರ್ಕೆಟಿಂಗ್ ಸಂಸ್ಥೆಯ ಮಾಲಕತ್ವದ ಬ್ರ್ಯಾಂಡ್ ವಿಷನ್ ಟಸ್ಕರ್ ತಂಡವು ಗೆದ್ದುಕೊಂಡಿತು. ಹೋರಾಟಕಾರಿ ಅಂತ್ಯವನ್ನು ಕಂಡ ಅಂತಿಮ ಪಂದ್ಯದಲ್ಲಿ ಬ್ರ್ಯಾಂಡ್ ವಿಷನ್ ತಂಡವು ಗ್ಲಿಟ್ಝ್ ಗ್ಲೇಡಿಯೇಟರ್ಸ್ ತಂಡವನ್ನು ಪರಾಜಯ ಗೊಳಿಸಿ ಆಕರ್ಷಕ ಟ್ರೋಫಿ ಮತ್ತು ರೂ.2,00,000.00 ನಗದು ಬಹುಮಾನವನ್ನು ಪಡೆಯಿತಾದರೆ ದ್ವಿತೀಯ ಸ್ಥಾನಿ ಗ್ಲಿಟ್ಝ್ ತಂಡವು ಟ್ರೋಫಿ ಮತ್ತು ರೂ.1,00,000.00 ನಗದು ಬಹುಮಾನವನ್ನು ಪಡೆಯಿತು.

 

 
ಅಂತಿಮ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಗ್ಲಿಟ್ಝ್ ಗ್ಲೇಡಿಯೇಟರ್ಸ್ ತಂಡವು ರಾಖೇಶ್ ದಿಲ್ಸೆರವರ 7 ಭರ್ಜರಿ ಸಿಕ್ಸರ್ಗಳನ್ನೊಳಗೊಂಡ 63 ರನ್ಗಳ ನೆರವಿನಿಂದ 10 ಓವರುಗಳಲ್ಲಿ 5ವಿಕೇಟುಗಳ ನಷ್ಟದಲ್ಲಿ 113ರ ದೊಡ್ಡ ಮೊತ್ತವನ್ನು ಕಲೆ ಹಾಕಿತು. ದೀಪಕ್ 19, ಸಂದೀಪ್ 12 ರನ್ ಗಳನ್ನು ಗಳಿಸಿದರು. ಸಚಿಂದ್ರ 14-1, ಪ್ರೀತಮ್ 18-1, ಸಂಪತ್ 17ಕ್ಕೆ 1 ವಿಕೇಟುಗಳನ್ನು ಪಡೆದರು.

 

 

 
ದೊಡ್ಡ ಮೊತ್ತವನ್ನು ಬೆನ್ನಟ್ಟುವಲ್ಲಿ ಹೆಜ್ಜೆಯಿಟ್ಟ ಬ್ರ್ಯಾಂಡ್ ವಿಷನ್ ತಂಡವು ಮೊದಲ ಓವರಿನಲ್ಲಿಯೇ ರಕ್ಷಿತ್ರವರ ವಿಕೇಟನ್ನು ಕಳೆದುಕೊಂಡು ಅಘಾತಕ್ಕೊಳಗಾಯಿತಾದರೂ, ಒಂದನೆಯ ವಿಕೇಟಿನಲ್ಲಿ ಜತೆಗೂಡಿದ ಸಂಪತ್ ಆದ್ಯಪಾಡಿ ಮತ್ತು ಓಸ್ಕರ್ ಫೆರ್ನಾಡಿಸ್ ಅವರು ಎಗ್ಗಿಲ್ಲದ ಆಟದ ಮೂಲಕ ಬೌಂಡರಿ, ಸಿಕ್ಸ್ರ್ರ್ಗಳ ಮಳೆ ಸುರಿಸುತ್ತಾ ನೆರೆದಿದ್ದ ಸುಮಾರು 10 ಸಾವಿರದಷ್ಟು ಪ್ರೇಕ್ಷಕರಿಗೆ ಭರ್ಜರಿ ಕ್ರೀಡಾ ರಂಜನೆಯನ್ನು ನೀಡಿದರು. ತಂಡವು 5ನೆಯ ಓವರಿನಲ್ಲಿ 1 ವಿಕೇಟ್ ನಷ್ಟಕ್ಕೆ 62 ರನ್ಗಳನ್ನು ಗಳಿಸಿತ್ತು. ಈ ಜೋಡಿಯು 81ರವರೆಗೆ ಜತೆಯಾಟವನ್ನು ಮುಂದುವರಿಸಿದಾಗ 11 ರನ್ಗಳಿಸಿದ ಆಸ್ಕರ್ರವರು ರನ್ ಔಟ್ ಆಗಿ ಮರಳಿದರು. ಈ ಮಧ್ಯೆ ಕೈಚೆಲ್ಲಿದ ಹಲವು ಕ್ಯಾಚ್ ಗಳು ಗ್ಲಿಟ್ಝ್ ಪಾಲಿಗೆ ವೆಚ್ಚದಾಯಕವಾಗಿ ಪರಿಣಮಿಸಿತು. ಕೊನೆಯ 12 ಚೆಂಡುಗಳಲ್ಲಿ 14 ರನ್ ಗಳ ಅವಶ್ಯಕತೆಯ ಸಂದರ್ಭದಲ್ಲಿ 101ರ ಮೊತ್ತದಲ್ಲಿ ಬ್ರ್ಯಾಂಡ್ ನ 3 ವಿಕೇಟ್ ಉರುಳಿತು. ಕೊನೆಯ ಓವರಿನಲ್ಲಿ ಬ್ರ್ಯಾಂಡ್ ಗೆ 11 ಓಟಗಳ ಅವಶ್ಯಕತೆ ಒದಗಿತ್ತು. ಕೊನೆಯ ಓವರಿನ ಮೊದಲ ಚೆಂಡಿನಲ್ಲಿ ಸಂಪತ್ರವರ ಹೊಡೆತವನ್ನು ಕೈಚೆಲ್ಲಿದ ಗ್ಲಿಟ್ಝ್ , ಬ್ರ್ಯಾಂಡ್ ನ ವಿಜಯದ ಓಟವನ್ನು ಮುಂದುವರಿಸಲು ಅನುವು ಮಾಡಿಕೊಟ್ಟಿತು. ಮುಂದಿನ ಎಸೆತದಲ್ಲಿ ಸಂಪತ್ರವರ ಪಾಲಿಗೆ ಬೌಂಡರಿಯೊಂದು ಒದಗಿ ಬಂತು. ಎರಡು ಘೋಷಿಸಿದರು. ಸಂಪತ್ರವರು 7 ಸಿಕ್ಸರ್ ಆರು ಬೌಂಡರಿಗಳುಳ್ಳ 92 ರನ್ಗಳನ್ನು ಕೇವಲ 40 ಚೆಂಡುಗಳಲ್ಲಿ ಭಾರಿಸಿ ಅಜೇಯರಾಗುಳಿದು ವಿಜಯ ಶಿಲ್ಪಿಯಾದರು.

 

 

 
ಅಮೋಘ ಬ್ಯಾಟಿಂಗ್ ನಡೆಸಿದ ಸಂಪತ್ರವರು ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಪಡೆದರು. ಪಂದ್ಯಕೂಟದಲ್ಲಿ ಅತ್ಯಧಿಕ ಸಿಕ್ಸರ್ ಭಾರಿಸಿದ ಬಹುಮಾನವನ್ನು ಸಂಪತ್ರವರು ಪಡೆದರಲ್ಲದೆ ಅಧಿಕ ಸ್ಕೋರ್ ಗಳಿಸಿದಕ್ಕಾಗಿ ಕಿತ್ತಳೆ ಬಣ್ಣದ ಟೋಪಿಯ ಗೌರವವನ್ನು ಪಡೆದರು.. ಪಂದ್ಯಕೂಟದಲ್ಲಿ ಒಟ್ಟು 11 ವಿಕೇಟುಗಳನ್ನು ಗಳಿಸಿದ ಸಚೀಂದ್ರ ಶೆಟ್ಟಿಯವರು ನೇರಳೆ ಟೋಪಿಯ ಗೌರವಕ್ಕೆ ಅರ್ಹರಾದರು.

 

 

 
ತುಳುನಾಡನ್ನು ಹೊರಗಟ್ಟಿದ ಗ್ಲಿಟ್ಝ್ ಗ್ಲೇಡಿಯೇಟರ್ಸ್:
ಇಂದು ಜರಗಿದ ಹೋರಾಟಕಾರಿ ಅಂತ್ಯವನ್ನು ಕಂಡ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ ನಡೆಸಿದ ತುಳುನಾಡು ಪ್ಯಾಂಥರ್ಸ್ ತಂಡವು ರಜತ್ ಶೆಟ್ಟಿ 22, ಅನುಪ್ ಸಾಗರ್ 15 ಮತ್ತು ಅರುಣ್ ಶೆಟ್ಟಿ 10 ಇವರ ಬ್ಯಾಟಿಂಗ್ ನೆರವಿನಿಂದ 10 ಓವರುಗಳಲ್ಲಿ 6 ವಿಕೇಟುಗಳ ನಷ್ಟದಲ್ಲಿ 70 ರನ್ಗಳ ಸಾಧಾರಣ ಮೊತ್ತವನ್ನು ದಾಖಲಿಸಿತು. ಪ್ರಶಾಂತ್ ಉತ್ತಮವಾಗಿ ಬೌಲಿಂಗ್ ನಡೆಸಿ 16 ರನ್ ಗಳಿಗೆ 4 ವಿಕೇಟುಗಳನ್ನು ಪಡೆದರೆ, ವಿಘ್ನೇಶ್ 18 ರನ್ಗಳಿಗೆ 1 ವಿಕೇಟನ್ನು ಪಡೆದರು.

 

 

 
ಉತ್ತಮ ಪ್ರತಿಹೋರಾಟ ನೀಡಿದ ಗ್ಲಿಟ್ಝ್ ಗ್ಲೇಡಿಯೇಟರ್ಸ್ ತಂಡವು ರಾಖೇಶ್ರವರ ಎರಡು ಸಿಕ್ಸರ್ಗಳನ್ನೊಳಗೊಂಡ 17, ದೀಪಕ್ 14, ಪ್ರಶಾಂತ್ 10 ಇವರುಗಳ ಬ್ಯಾಟಿಂಗ್ ನೆರವಿನಿಂದ 2 ಚೆಂಡುಗಳು ಬಾಕಿ ಇರುವಂತೆ 7ವಿಕೇಟುಗಳನ್ನು ಕಳೆದುಕೊಂಡು ವಿಜಯದ ಗುರಿಯನ್ನು ತಲಪಿ ಸೆಮಿಫೈನಲ್ ಪ್ರವೇಶವನ್ನು ಕಂಡಿತು. ಪ್ರಶಾಂತ್ರವರು ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಗೆದ್ದುಕೊಂಡರು.

 

 
ಜುಗಾರಿ ವಾರಿಯರ್ಸ್ ತಂಡವನ್ನು ಹೊರತಳ್ಳಿದ ಬ್ರ್ಯಾಂಡ್ ವಿಷನ್:
ಎರಡನೆಯ ಸೆಮಿಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗಿಗಿಳಿದ ಬ್ರ್ಯಾಂಡ್ ವಿಷನ್ ಟಸ್ಕರ್ ತಂಡವು ಆರಂಭದಲ್ಲಿ ನಿಧಾನಗತಿಯ ಆರಂಭವನ್ನು ಕಂಡಿತಾದರೂ ನಂತರ ಬ್ಯಾಟಿಂಗಿಗಿಳಿದ ಸಂಪತ್ ಆದ್ಯಪಾಡಿಯವರು ಮಿಂಚಿನ 5 ಸಿಕ್ಸರ್ಗಳನ್ನು ಬಾರಿಸಿ ತಂಡದ ಮೊತ್ತಕ್ಕೆ ವೇಗವನ್ನು ನೀಡಿದರು. ಅವರು 39 ರನ್ ಗಳನ್ನು ಗಳಿಸಿದರು. ಆಸ್ಕರ್ ಫೆರ್ನಾಂಡಿಸ್ರವರು 19, ಸಚಿಂದ್ರ ಶೆಟ್ಟಿ 10 ರನ್ಗಳ ಕೊಡುಗೆಯನ್ನು ನೀಡುವ ಮೂಲಕ ತಂಡವು 10 ಓವರುಗಳಲ್ಲಿ 7 ವಿಕೇಟುಗಳ ನಷ್ಟದಲ್ಲಿ 87 ರನ್ಗಳನ್ನು ಗಳಿಸಿತು.

 

 

 
ಬ್ರ್ಯಾಂಡ್ ವಿಷನ್ ತಂಡದ ಉತ್ತಮ ಕ್ಷೇತ್ರ ರಕ್ಷಣೆ ಮತ್ತು ಬೌಲಿಂಗಿನೆದರು ಎದ್ದು ನಿಲ್ಲಲಾರದ ಜುಗಾರಿ ವಾರಿಯರ್ಸ್ ತಂಡವು 8ನೆಯ ಓವರಿನಲ್ಲಿ 58 ರನ್ ಗಳಿಗೆ ತನ್ನೆಲ್ಲಾ ವಿಕೇಟುಗಳನ್ನು ಕಳೆದುಕೊಂಡಿತು. ರಂಜಿತ್ 26 ಮತ್ತು ರೂಪೇಶ್ 19 ರನ್ ಗಳನ್ನು ಗಳಿಸಿದರು. ತಾನಾಡಿದ ಎಲ್ಲ ಪಂದ್ಯಗಳನ್ನು ಗೆದ್ದುಕೊಂಡ ಬ್ರ್ಯಾಂಡ್ ವಿಷನ್ ತಂಡವು ಅಜೇಯ ತಂಡವಾಗಿ ಫೈನಲನ್ನು ಪ್ರವೇಶಿಸಿತು.
ಸಂಪತ್ ಆದ್ಕಪಾಡಿ ಪಂದ್ಯಶ್ರೇಷ್ಠರಾಗಿ ಮೆರೆದರು.