Headlines

ಕಣ್ಣುತೆರೆಸಿದ ಜವನೆರ್ ಬೆದ್ರ ಸಂಘಟನೆ * ಯೋಧರ ಮನೆಯಲ್ಲಿ ಬೆಳಗಿದ ದೀಪ! * ಯಶಸ್ವೀ 36ನೇವಾರ ಪೂರೈಸಿದ ಕ್ಲೀನ್ ಅಪ್ ಮೂಡಬಿದಿರೆ * ರಾಜ್ಯಮಟ್ಟದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟ ಆರಂಭ * ಅಳಿಯೂರಿನಲ್ಲಿ ಮೇಳೈಸಲಿದೆ ಕ್ರೀಡಾಹಬ್ಬ.! * ರಾಷ್ಟ್ರಮಟ್ಟಕ್ಕೆ ಆಯ್ಕೆಯಾಯ್ತು ಹಳ್ಳಿ ಹುಡುಗರ ಅನ್ವೇಷಣೆ! * ಶಿರ್ಲಾಲು: ಹೊಸ ಶಾಸನ ಪತ್ತೆ * ಸಾವಿರ ಕಂಬದ ಬಸದಿಯ ಸ್ವಚ್ಛತೆ * ಪುರಸಭೆಯ ಕಣ್ಣುತೆರೆಸಿದ ಜವನೆರ್ ಬೆದ್ರ! * ಪುರಸಭೆಗೆ ಸಾರ್ವಜನಿಕರಿಂದ ಹಿಡಿಶಾಪ * ಕಾರ್ಯಾಂಗ,ನ್ಯಾಯಾಂಗ,ಶಾಸಕಾಂಗದ ವೈಫಲ್ಯದ ವಿರುದ್ಧ ಹೋರಾಟ: ಸುದರ್ಶನ್ * ಬೆಸ್ಟ್ ಡ್ರಾಮೇಬಾಜ್ ಖ್ಯಾತಿಯ ಶ್ರೀಶ ಬೆಂಗಳೂರು ಅವರಿಗೆ ಗೌರವ ಸನ್ಮಾನ * ಮಾನವೀಯ ಸ್ಪಂದನೆ ಆಗಲೇಬೇಕಾಗಿದೆ… * 33ನೇ ವಾರ ಪೂರೈಸಿದ ಜವನೆರ್ ಬೆದ್ರದ ಸಾಧನೆ * ಆಧುನಿಕತೆಯಿಂದ ಆಶಾದಾಯಕ ಸ್ಥಿತಿ ಬಂದೊದಗಿದೆ: ಹರೀಶ್ ಶೆಣೈ * ಮೂಡಬಿದಿರೆಯಲ್ಲಿ ಸದ್ಭಾವನಾ ಗೋಷ್ಠಿ * ಭಾರತೀಯ ಜನತಾ ಪಾರ್ಟಿಯಿಂದ ಸ್ವಚ್ಛತೆಯ ಮಂತ್ರ * ಬಸದಿಗಳ ಬೀಡಲ್ಲಿ ಬಸದಿಗಳ ಸ್ವಚ್ಛತೆ * ಕಂಬಳಸಮಿತಿ ಸಭೆ * 30ನೇವಾರದ ಕ್ಲೀನ್ ಅಪ್ ಮೂಡಬಿದಿರೆ *

ಬೇಡವಾದಳೇ ಈ ಅಬ್ಬಕ್ಕ…??

#abbakka#rani#vaarte

ಆಳುವವರ್ಗಕ್ಕೆ ಮರೆತುಹೋದಳೇ ಮನೆಮಗಳು…

ವಾರ್ತೆ ವಿಶೇಷ ವರದಿ

ಪೋರ್ಚುಗೀಸರ ವಿರುದ್ಧ ಹೋರಾಡಿದ ಏಕೈಕ ಧೀರ ಮಹಿಳೆ ಮೂಡಬಿದಿರೆಯ ಮಣ್ಣಿನ ಮಗಳು ರಾಣಿ ಅಬ್ಬಕ್ಕಳ ಹೆಸರಾಗಲೀ,ವೃತ್ತವಾಗಲೀ ಮೂಡಬಿದಿರೆಯಲ್ಲಿಲ್ಲ!. ಅಂತಾರಾಷ್ಟ್ರೀಯ ಸಂಸ್ಥೆಗಳ ಹೆಸರು, ವೃತ್ತಗಳು ಮೂಡಬಿದಿರೆಯಲ್ಲಿ ರಾರಾಜಿಸುತ್ತಿವೆ! ಹೇಗಿದೆ ನೋಡಿ ಇಲ್ಲಿನ ಜನತೆಯ ಮನಸ್ಥಿತಿ!…ಆಳುವವರ್ಗದ ಇಚ್ಚಾಶಕ್ತಿ… ಹಿತ್ತಿಲ ಗಿಡ ಮದ್ದಲ್ಲ ಎಂಬಂತಾಗಿದೆ ಮೂಡಬಿದಿರೆಯ ಅವಸ್ಥೆ…

ಮೂಡಬಿದಿರೆ: ನಾವು ತಿನ್ನುವ ಒಂದೊಂದು ಅಗುಳಿನಲ್ಲೂ ಆಕೆಯ ಹೆಸರಿದೆ… ನಾವಿಂದು ನಿರುಮ್ಮಳವಾಗಿ ನಿಶ್ಚಿಂತೆಯಿಂದಿದ್ದೇವೆಯೆಂದರೆ ಅದಕ್ಕೆ `ಆಕೆ’ಯ ತ್ಯಾಗಮನೋಭಾವವೇ ಕಾರಣ…ನಾವು ಈ ನೆಲದಲ್ಲಿಂದು ಸ್ವಚ್ಚಂಧವಾಗಿ ವಿಹರಿಸುತ್ತಿದ್ದೇವೆಯೆಂದರೆ ಅದೂ ಆಕೆಯಿಂದಾಗಿಯೇ…ಆಕೆಯ ಋಣವನ್ನು ನಾವು ತೀರಿಸಲು ಸಾಧ್ಯವೇ…? ಖಂಡಿತಾ ಇಲ್ಲ…ಇಂತಹ ಅನಘ್ರ್ಯ ಮಾತೃಹೃದಯದ ಮಹಾಮಾತೆಗೆ ಅವಮಾನವಾಗುತ್ತಿದೆ. ಅದೂ ಆಕೆಯ ತವರು ನೆಲದಲ್ಲಿಯೇ…!!! ಎಂತಹ ದುರ್ವಿಧಿ ಇದು…? ಅಧಿಕಾರದ ದಾಹ, ಮದದಿಂದ ಆಳುವ ವರ್ಗ ಈ ಹೆಣ್ಣುಮಗಳನ್ನು; ಮನೆಮಗಳನ್ನು ಮರೆತೇ ಬಿಟ್ಟಿದೆ. ಇದು ನಮ್ಮನ್ನಾಳುವ ಸರಕಾರ ನಾಡಿಗೆ ಮಾಡಿದ ಅಪಮಾನ ಎಂದರೆ ತಪ್ಪಾಗಲಾರದು. ಜನತೆಯೆದುರು `ಟೋಪಿ’ಹಾಕಿ ಭಾಷಣ ಬಿಗಿಯುವ ಸೋ ಕಾಲ್ಡ್ ರಾಜಕಾರಣಿಗಳು, ನಾವೇ ಆರಿಸಿ ಕಳುಹಿಸಿದ ಜನಪ್ರತಿನಿಧಿಗಳು ಇನ್ನಾದರೂ ಎಚ್ಚೆತ್ತುಕೊಳ್ಳಬೇಕಾಗಿದೆ.

ಕ್ವಿಟ್ ಇಂಡಿಯಾ ಚಳುವಳಿಯ ದಿನ, ಸ್ವಾತಂತ್ರ್ಯೋತ್ಸವದ ದಿನ ಬಂದಾಗ ಗಾಂಧೀ,ನೇತಾಜೀ,ನೆಹರೂ ಎಂದು ಭಾಷಣ ಬಿಗಿಯುವ ಮಂದಿಗೆ ಮನೆಮಗಳ ಹೆಸರು ಮಾತ್ರ ನೆನಪಿಗೆ ಬಾರದಿರುವುದು ದುರದೃಷ್ಠವೇ ಸರಿ.
ಯಾರೀಕೆ…? : ಭಾರತದ ಇತಿಹಾಸದಲ್ಲಿ ವಸಾಹತುಶಾಹಿಗಳ ವಿರುದ್ಧಹೋರಾಡಿದ ಮಹಾನ್ ವ್ಯಕ್ತಿಗಳ ಸಾಲಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆಯ ಚೌಟರ ವಂಶಸ್ಥೆ ವೀರರಾಣಿ ಅಬ್ಬಕ್ಕ ಮೊದಲಿಗಳು ಎಂಬುದು ಗಮನಾರ್ಹ. ಮೂಡಬಿದಿರೆಯ ಮಣ್ಣಿನ ಮಗಳು ಇಡೀ ರಾಷ್ಟ್ರ ಸ್ವತಂತ್ರವಾಗಲು ಹೋರಾಡಿ ವೀರ ಮರಣವನ್ನಪ್ಪಿದ್ದು ಇಂದಿಗೆ ಇತಿಹಾಸ. ಆದರೆ ಆ ವೀರರಾಣಿಯ ವೀರಮಾತೆಯ ನೆನಪು ಶಾಶ್ವತವಾಗಿ ಉಳಿಯುವಂತಾಗಲು ಮೂಡಬಿದಿರೆಯಲ್ಲಿ ಯಾವೊಂದು ಶಾಶ್ವತ ಕಾಮಗಾರಿಯೂ ನಡೆದಿಲ್ಲ. ವೀರ ರಾಣಿ ಅಬ್ಬಕ್ಕ ಸಂಸ್ಕೃತಿ ಗ್ರಾಮ ಎಂಬ `ಹೆಸರು’ಒಂದನ್ನು ಬಿಟ್ಟರೆ ಬೇರೇನೂ ಆಗಿಲ್ಲ…ಸಂಸ್ಕೃತಿ ಗ್ರಾಮವೂ ಮರೀಚಿಕೆಯಾಗಿಯೇ ಉಳಿದಿದೆ.

ಅಬ್ಬಕ್ಕನ ಇತಿಹಾಸ:ಪೋರ್ಚುಗೀಸರ ವಿರುದ್ಧ ಹೋರಾಡಿದ ಏಕೈಕ ಧೀರ ಮಹಿಳೆ ರಾಣಿ ಅಬ್ಬಕ್ಕ ಹದಿನಾರನೇ ಶತಮಾನದಲ್ಲಿ 1558,1567,1568ರಲ್ಲಿ ಪೋರ್ಚುಗೀಸರೊಂದಿಗೆ ನಡೆದ ಯುದ್ಧದಲ್ಲಿ ನೇರ ಭಾಗಿಯಾಗಿ ಹೋರಾಡಿ ಪರಕೀಯರಿಗೆ ಸಿಂಹಸ್ವಪ್ನವಾಗಿದ್ದರು. ರಾಣಿ ಅಬ್ಬಕ್ಕಳ ಕೀರ್ತಿ ಅರೆಬಿಯಾ, ಪರ್ಷಿಯಾ ದೇಶದಲ್ಲೂ ಹುಟ್ಟಿತ್ತು ಎಂಬುದನ್ನು ಪ್ರಸಿದ್ಧ ಯಾತ್ರಿಕ ಇಟಾಲಿಯ ಪೀತ್ರೋ ತನ್ನ ಪುಸ್ತಕವೊಂದರಲ್ಲಿ ದಾಖಲಿಸಿದ್ದ.ತನ್ನ ಕಾರ್ಯಸಾಧನೆಗಳಿಂದ ಪೋರ್ಚುಗೀಸರಿಂದಲೇ `ಅಭಯರಾಣಿ’ಎಂಬ ಬಿರುದು ಪಡೆದಿದ್ದರು. ಆ ಕಾಲದಲ್ಲಿ ಮೂಡಬಿದಿರೆಯನ್ನು ರಾಜಧಾನಿಯನ್ನಾಗಿಸಿ ತುಳುನಾಡನ್ನು ಆಳುತ್ತಿದ್ದ ಜೈನ ಧರ್ಮೀಯ ಚೌಟರ ವಂಶಕ್ಕೆ ಸೇರಿದವಳು. ಈ ಕಾರಣಕ್ಕಾಗಿಯೇ ಮೂಡಬಿದಿರೆ ರಾಣಿ ಅಬ್ಬಕ್ಕಳ ತವರೂರು ಎಂಬುದು ಮೂಡಬಿದಿರಿಗರಿಗೆ ಹೆಮ್ಮೆಯ ವಿಚಾರ.

ಸ್ಮರಣೆ ಯಾಕಿಲ್ಲ?: ರಾಜ್ಯ ಸರಕಾರ  ಸ್ವಾತಂತ್ರ್ಯ ಹೋರಾಟಗಾರರ ಸ್ಮರಣೆಯನ್ನು ಅದ್ದೂರಿಯಾಗಿಯೇ ಮಾಡುತ್ತಿದೆ. ಆದರೆ ವಸಾಹತುಶಾಹಿಗಳ ವಿರುದ್ಧ ಹೋರಾಡಿದ ವೀರ ವನಿತೆ, ದೇಶದ ಪ್ರಥಮ ಮಹಿಳಾ ಸ್ವಾತಂತ್ರ್ಯ ಹೋರಾಟಗಾರ್ತಿ ರಾಣಿ ಅಬ್ಬಕ್ಕಳ ಬಗ್ಗೆ ಮಾತ್ರ ಸರಕಾರ  ಯಾವೊಂದು ಗಮನವನ್ನೂ ಹರಿಸುತ್ತಿಲ್ಲ ಎಂಬುದು ಖೇದಕರ ಅಂಶವಾಗಿದೆ. ಒಂದೊಮ್ಮೆ ಆಚರಣೆಯಾಗುತ್ತಿದೆಯೆಂದಾದರೂ ಅದು ತುಳುನಾಡಿಗೆ ಮಾತ್ರ ಸೀಮಿತ ಎಂಬಂತಾಗುತ್ತಿರುವುದು ವಿಷಾಧನೀಯ. ರಾಣಿ ಅಬ್ಬಕ್ಕಳ ಬಗ್ಗೆ ರಾಜ್ಯಮಟ್ಟದಲ್ಲಿ ದೊಡ್ಡ ಉತ್ಸವಗಳು ಆಗಬೇಕಾಗಿದೆ. ಇಡೀ ರಾಷ್ಟ್ರಕ್ಕೆ ಸ್ವಾತಂತ್ರ್ಯ ತರುವಲ್ಲಿ ತನ್ನ ಕೊಡುಗೆ ನೀಡಿದ ಅಬ್ಬಕ್ಕನ ಹೆಸರು ಮತ್ತೊಮ್ಮೆ ವಿರಾಜಮಾನವಾಗುವಂತೆ ತನ್ಮೂಲಕ ಆಕೆಗೊಂದು ನ್ಯಾಯ ಸಿಗುವಂತಹ ರೀತಿಯಲ್ಲಿ ಉತ್ಸವ, ಪ್ರಶಸ್ತಿ ನೀಡುವ ಕಾರ್ಯ ಆಗಲೇಬೇಕಾಗಿದೆ. ಅಬ್ಬಕ್ಕನ ಪ್ರತಿಮೆಯನ್ನು ರಾಜ್ಯದ ಕೇಂದ್ರ ಸ್ಥಾನ ಹಾಗೂ ಆಕೆಯ ಹುಟ್ಟೂರು ಮೂಡಬಿದಿರೆಯಲ್ಲಿ ಸ್ಥಾಪಿಸುವ ಮಹತ್ಕಾರ್ಯ ಆಗಲೇಬೇಕಾಗಿದೆ.
ಅಭಿವೃದ್ಧಿಯ ಹೆಸರಿನಲ್ಲಿ ಹಣದ ಖಜಾನೆ ತುಂಬಿಸುವ ರಾಜಕಾರಣಿಗಳು, ಸಕರ್ಾರಿ ಅಧಿಕಾರಿಗಳು ನಾಡಿಗೆ ಸ್ವಾತಂತ್ರ್ಯತಂದುಕೊಡುವಲ್ಲಿ ಕೆಚ್ಚೆದೆಯ ಹೋರಾಟಮಾಡಿದ ವೀರ ವನಿತೆಯ ಸ್ಮರಣೆ ಮಾಡುವತ್ತವೂ ಚಿತ್ತ ಹರಿಸುವಂತಾಗಬೇಕಾಗಿದೆ. ಸ್ಥಳೀಯಾಡಳಿತಗಳು, ಅಧಿಕಾರಿಗಳು, ಆಳುವವರ್ಗ, ಮುಖಂಡರು ಇನ್ನಾದರೂ ಎಚ್ಚೆತ್ತುಕೊಳ್ಳುವಂತಾಗಲಿ ಎಂಬುದು ನಮ್ಮ ಹಾರೈಕೆ.