Headlines

ಒತ್ತಡ ನಿರ್ವಹಣೆಗೆ ಆದ್ಯತೆ ಅವಶ್ಯ * ಬೆಳದಿಂಗಳ ಸಮ್ಮೇಳನಾಧ್ಯಕ್ಷತೆಗೆ ಬನ್ನಂಜೆ ಆಯ್ಕೆ * ಕಥೋಲಿಕ್ ಸಮಾಜೋತ್ಸವ * ಅಶ್ವತ್ಥಪುರದಲ್ಲಿ ಡಾ.ಸುಧೀರ್ ಹೆಗ್ಡೆ ನೇತೃತ್ವದಲ್ಲಿ ನೇತ್ರ ಚಿಕಿತ್ಸೆ ಶಿಬಿರ * ರೋಟರಿಯಿಂದ ಗಣರಾಜ್ಯೋತ್ಸವ ಆಚರಣೆ * ರಾಷ್ಟ್ರೀಯ ಐಕ್ಯತೆಗೆ ಯುವಪಡೆ ಸಿದ್ಧವಾಗಲಿ: ವಿನಯ ಹೆಗ್ಡೆ * ಮಹಾಮಜ್ಜನಕ್ಕೆ ಸಿದ್ದತೆ ಪೂರ್ಣ * ಶ್ರೀಬಾಹುಬಲಿ ಅಹಿಂಸಾದಿಗ್ವಿಜಯಂ ಲೋಕಾರ್ಪಣೆ * ಲೋಕಾಯುಕ್ತ ಪ್ರವಾಸ * ರೋಟರಿಯಿಂದ ಸಾಧಕರಿಗೆ ಸನ್ಮಾನ * ಸ್ವರಾಜ್ಯ ಮೈದಾನದ ಮೇಲೆ ತೂಗುಗತ್ತಿ…! * ಡಾ.ಸುಧೀರ್ ಹೆಗ್ಡೆ ನೇತೃತ್ವದಲ್ಲಿಕಣ್ಣಿನತಪಾಸಣಾ ಶಿಬಿರ * ಯುವಶಕ್ತಿಗೆ ಪರಿಸರಪ್ರಜ್ಞೆಯ ಅರಿವು ಮೂಡಿಸಿದ ಮಹಾಕಾರ್ಯ * ಮೂಡಬಿದಿರೆ ಶಿಕ್ಷಣ ಪ್ರೇಮಿಗಳ ನಾಡು: ಅಭಯಚಂದ್ರ ಜೈನ್ * 50ನೇ ವೈದ್ಯಕೀಯ ತಪಾಸಣಾ ಶಿಬಿರ * ಜ.21-25: ಮೂಡಬಿದಿರೆಯಲ್ಲಿ ರಾಷ್ಟ್ರೀಯ ವೈಯ್ಟ್ ಲಿಫ್ಟಿಂಗ್ * ರಾಜ್ಯಮಟ್ಟದ ಟಿ-20 ಕ್ರಿಕೆಟ್ ಟೂರ್ನಿ: ಆಳ್ವಾಸ್‍ಗೆ ಪ್ರಶಸ್ತಿ * ಕವಿಕುಲಗುರು ಕುಮಾರವ್ಯಾಸ * ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳಿಂದ ಒಡ್ಡು ನಿರ್ಮಾಣ * ಕಣ್ಣಿನ ಉಚಿತ ತಪಾಸಣೆಹಾಗೂ ಚಿಕಿತ್ಸಾ ಶಿಬಿರ *

ಬೆಳದಿಂಗಳ ಸಮ್ಮೇಳನಾಧ್ಯಕ್ಷತೆಗೆ ಬನ್ನಂಜೆ ಆಯ್ಕೆ

#beldadingala#sammelana

ಮೂಡಬಿದಿರೆ: 9 ನೇ ಅಖಿಲ ಕರ್ನಾಟಕ ಬೆಳದಿಂಗಳ ತುಳು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಹಿರಿಯ ಜಾನಪದ ವಿದ್ವಾಂಸ, ಅರ್ಥಧಾರಿ, ಬಹುಮುಖಿ ಸಮಾಜ ಸುಧಾರಣಾ ಚಿಂತಕ, ದೈವಾರಾಧನೆ ಸಹಿತ ತುಳುನಾಡಿನ ಆಚಾರ-ವಿಚಾರಗಳ ಬಗ್ಗೆ ಅಧಿಕಾರವಾಣಿಯಿಂದ ಮಾತನಾಡ ಬಲ್ಲ ಬನ್ನಂಜೆ ಬಾಬು ಅಮೀನ್ ಅವರು ಆಯ್ಕೆಯಾಗಿದ್ದಾರೆ ಎಂದು ಸಮಿತಿಯ ಅಧ್ಯಕ್ಷ ಈ ಸಮ್ಮೇಳನ ಸರಣಿ ಕಾರ್ಯಕ್ರಮಗಳ ರೂವಾರಿ ಶೇಖರ ಅಜೆಕಾರು ತಿಳಿಸಿದ್ದಾರೆ.
ಅವರ ಆಯ್ಕೆಯ ಬಗ್ಗೆ ಮುಂಬಯಿ, ಬೆಂಗಳೂರು, ವಿದೇಶ ಮತ್ತು ತುಳುನಾಡಿನಿಂದ ವ್ಯಾಪಕ ಪ್ರಶಂಸೆ ಬಂದಿದೆ ಎಂದು ಅವರು ಹರ್ಷ ವ್ಯಕ್ತ ಪಡಿಸಿದ್ದಾರೆ.
ಅವರು ಧರ್ಮಸ್ಥಳ ಶ್ರೀ ರಾಮಕ್ಷೇತ್ರದ ಉಡುಪಿ ವಿದ್ಯಾ ಸಂಸ್ಥೆಗಳ ಕಾರ್ಯಾಧ್ಯಕ್ಷರಾಗಿ ಕಾರ್ಯ ನಿರತರಾಗಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ, ಯಕ್ಷಗಾನ ಕಲಾಕ್ಷೇತ್ರ ಗುಂಡಿಬೈಲು ಇದರ ಅಧ್ಯಕ್ಷರಾಗಿ, ಉಡುಪಿ ಶ್ರೀ ಬ್ರಹ್ಮ ಬೈದರ್ಕಳ ಸಾಂಸ್ಕೃತಿಕ ಅಧ್ಯಯನ ಪ್ರತಿಷ್ಠಾನದ ಸ್ಥಾಪಕ ವಿಶ್ವಸ್ಥ, ಮುಂಬಯಿ ವಾಸಿನಾಕಾದ ಶನಿಪೂಜಾ ಸಮಿತಿಯ ಸ್ಥಾಪಕ ಮತ್ತು ಅಧ್ಯಕ್ಷ, ಕೆಮ್ಮಲಜೆ ಜಾನಪದ ಪ್ರಕಾಶನ ನಿಟ್ಟೂರು ಇದರ ಸ್ಥಾಪಕ, ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲಾ ಘಟಕದ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಹೀಗೆ ಸಮಾಜ ಸೇವಾ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ.
ಅವರ “ಕೋಟಿ ಚೆನ್ನಯ” ಕೃತಿ ಹತ್ತಕ್ಕೂ ಹೆಚ್ಚು ಆವೃತ್ತಿ ಕಂಡು ದಾಖಲೆ ನಿರ್ಮಿಸಿದೆ. ತುಳುನಾಡಿನ “ಜಾನಪದ ಆಚರಣೆಗಳು”, “ದೈವಗಳ ಮಡಿಲಲ್ಲಿ”, “ತುಳುನಾಡ ದೈವಗಳು”, “ಗರೋಡಿ ಒಂದು ಚಿಂತನೆ”, “ಆಟಿ ಸೋಣ”, “ದೈವ ನೆಲೆ” “ಉಗುರಿಗೆ ಮುಡಿಯಕ್ಕಿ ಮತ್ತು ಇತರ ಕತೆಗಳು” ಅವರ ಬಹು ಚರ್ಚಿತ ಕನ್ನಡ ಕೃತಿಗಳು.
ತುಳುವಿನಲ್ಲಿ “ಪೂ ಪೊದ್ದೊಲ್” ಕಾದಂಬರಿ, “ಮಾನೆಚ್ಚಿ”, “ನುಡಿಕಟ್ಟ್” , “ದೈವೊಲೆ ಕತೆಕುಲು” ಸಹಿತ ಮೌಲಿಕ ಕೃತಿಗಳು ಪ್ರಕಟವಾಗಿವೆ. ಅಕಾಡಮಿಕ್ ಅಧ್ಯಯನಗಳಿಗೆ ಸಡ್ಡು ಹೊಡೆಯುವಂತೆ ಅತ್ಯಂತ ಪ್ರಾಮಾಣಿಕ ಕ್ಷೇತ್ರ ಕಾರ್ಯಗಳನ್ನು ಮಾಡಿ ಜನಮಾನಸದಲ್ಲಿ ಒಂದು ವಿಶಿಷ್ಟ ಸ್ಥಾನ ಪಡೆದಿದ್ದಾರೆ.
ಕನರ್ಾಟಕ ಮಲ್ಲ ದೈನಿಕದಲ್ಲಿ ತುಳು- ಕನ್ನಡ ಅಂಕಣಕಾರರಾಗಿ ತುಳು ವಾರಪತ್ರಿಕೆ ಟೈಮ್ಸ್ ಆಫ್ ಕುಡ್ಲ ಪತ್ರಿಕೆಯ  ಅಪೂರ್ವ ಅಂಕಣಕಾರರಾಗಿ ಜನಪ್ರಿಯರಾಗಿದ್ದಾರೆ.
ನೂರಾರು ಯುವಕರನ್ನು ತುಳುನಾಡಿನ ಅಧ್ಯಯನದ ಆಸಕ್ತಿ ಮೂಡುವಂತೆ ಪ್ರೇರೆಪಿಸಿದ್ದಾರೆ. ಬಹುಮುಖಿ ವ್ಯಕ್ತಿತ್ವದ ಸರಳ ಸಜ್ಜನ, ನೇರ ದಿಟ್ಟ ನುಡಿಯ ಬನ್ನಂಜೆ ಬಾಬು ಅಮೀನ್ ಅವರಿಗೆ ಉಡುಪಿ ಜಿಲ್ಲಾ ರಾಜ್ಯೋತ್ಸವ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಗೌರವ, ಅಬುದಾಬಿ ಕರ್ನಾಟಕ ಸಂಘದ ಸನ್ಮಾನ, ನಾರಾಯಣ ಸಾಲ್ಯಾನ್ ಪ್ರಶಸ್ತಿ, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಗೌರವ ಅಲ್ಲದೆ ನೂರಾರು ಸನ್ಮಾನಗಳು ಸಂದಿವೆ.
ತುಳು ಮತ್ತು ಕನ್ನಡದ ಸಮಗ್ರ ಜಾನಪದ , ದೈವಾರಾಧನೆ ಮತ್ತು ಗರೋಡಿಗಳ ಅಧ್ಯಯನ, ತುಳು- ಕನ್ನಡ ನಾಡು ನುಡಿಯ ಸೇವೆ, ಯುವ ಜನತೆಗಾಗಿ ಜಾನಪದ ಸಂಶೋಧನೆ, ಆಚರಣೆಗಳ ಹಾಗೂ ದೈವಾರಾಧನೆಯ ಕುರಿತ ಮಾರ್ಗದರ್ಶನ ಶಿಬಿರಗಳ ಆಯೋಜನೆ ಅವರ ಆಸಕ್ತಿಯ ಕ್ಷೇತ್ರಗಳು.
ಕೆಮ್ಮಲಜೆ ಪ್ರಕಾಶನದ ವತಿಯಿಂದ ಬನ್ನಂಜೆ ಬಾಬು ಅಮೀನ್ ಜಾನಪದ ಸಂಶೋಧಕ ಪ್ರಶಸ್ತಿ ಮತ್ತು ಜಾನಪದ ಕಲಾವಿದ ಪ್ರಶಸ್ತಿ ಸ್ಥಾಪಿಸಿ ಪ್ರತಿವರ್ಷ 10000 ನಗದು ಸಹಿತ ಪ್ರಶಸ್ತಿ ನೀಡುತ್ತಿರುವುದು ಅವರ ಹೃದಯವಂತಿಕೆಗೆ ಸಾಕ್ಷಿ.
ಸಮ್ಮೇಳನ ಉದ್ಘಾಟನೆಯ ಗೌರವ ಹಿರಿಯ ಸಮಾಜ ಸೇವಕ, ಮುಂಬಯಿ ಉದ್ಯಮಿ, ಸಿನಿಮಾ ನಿಮರ್ಾಪಕ ಕಡಂದಲೆ ಸುರೇಶ ಭಂಡಾರಿ ಅವರಿಗೆ ಸಲ್ಲುತ್ತಿದ್ದು, ಯಕ್ಷಗಾನದ ಪ್ರಸಿದ್ಧ ಭಾಗವತ ಸತೀಶ ಶೆಟ್ಟಿ ಅವರು ಸಭಾಧ್ಯಕ್ಷತೆಯನ್ನು ವಹಿಸಲಿರುವರು. ತುಳು ಬಾಷೆ- ಸಂಸ್ಕೃತಿಯ ಕುರಿತ ವಿಚಾರಗೋಷ್ಠಿ, ಕವಿಗೋಷ್ಠಿ, ಬಾಲ ಸಾಧಧಕರಿಗೆ, ಯುವ ಸಾಧಕರಿಗೆ ಹಿರಿಯ ಸಾಧಕರಿಗೆ ಗೌರವಾರ್ಪಣೆ ನಡೆಯಲಿದೆ.