Headlines

ಕಣ್ಣುತೆರೆಸಿದ ಜವನೆರ್ ಬೆದ್ರ ಸಂಘಟನೆ * ಯೋಧರ ಮನೆಯಲ್ಲಿ ಬೆಳಗಿದ ದೀಪ! * ಯಶಸ್ವೀ 36ನೇವಾರ ಪೂರೈಸಿದ ಕ್ಲೀನ್ ಅಪ್ ಮೂಡಬಿದಿರೆ * ರಾಜ್ಯಮಟ್ಟದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟ ಆರಂಭ * ಅಳಿಯೂರಿನಲ್ಲಿ ಮೇಳೈಸಲಿದೆ ಕ್ರೀಡಾಹಬ್ಬ.! * ರಾಷ್ಟ್ರಮಟ್ಟಕ್ಕೆ ಆಯ್ಕೆಯಾಯ್ತು ಹಳ್ಳಿ ಹುಡುಗರ ಅನ್ವೇಷಣೆ! * ಶಿರ್ಲಾಲು: ಹೊಸ ಶಾಸನ ಪತ್ತೆ * ಸಾವಿರ ಕಂಬದ ಬಸದಿಯ ಸ್ವಚ್ಛತೆ * ಪುರಸಭೆಯ ಕಣ್ಣುತೆರೆಸಿದ ಜವನೆರ್ ಬೆದ್ರ! * ಪುರಸಭೆಗೆ ಸಾರ್ವಜನಿಕರಿಂದ ಹಿಡಿಶಾಪ * ಕಾರ್ಯಾಂಗ,ನ್ಯಾಯಾಂಗ,ಶಾಸಕಾಂಗದ ವೈಫಲ್ಯದ ವಿರುದ್ಧ ಹೋರಾಟ: ಸುದರ್ಶನ್ * ಬೆಸ್ಟ್ ಡ್ರಾಮೇಬಾಜ್ ಖ್ಯಾತಿಯ ಶ್ರೀಶ ಬೆಂಗಳೂರು ಅವರಿಗೆ ಗೌರವ ಸನ್ಮಾನ * ಮಾನವೀಯ ಸ್ಪಂದನೆ ಆಗಲೇಬೇಕಾಗಿದೆ… * 33ನೇ ವಾರ ಪೂರೈಸಿದ ಜವನೆರ್ ಬೆದ್ರದ ಸಾಧನೆ * ಆಧುನಿಕತೆಯಿಂದ ಆಶಾದಾಯಕ ಸ್ಥಿತಿ ಬಂದೊದಗಿದೆ: ಹರೀಶ್ ಶೆಣೈ * ಮೂಡಬಿದಿರೆಯಲ್ಲಿ ಸದ್ಭಾವನಾ ಗೋಷ್ಠಿ * ಭಾರತೀಯ ಜನತಾ ಪಾರ್ಟಿಯಿಂದ ಸ್ವಚ್ಛತೆಯ ಮಂತ್ರ * ಬಸದಿಗಳ ಬೀಡಲ್ಲಿ ಬಸದಿಗಳ ಸ್ವಚ್ಛತೆ * ಕಂಬಳಸಮಿತಿ ಸಭೆ * 30ನೇವಾರದ ಕ್ಲೀನ್ ಅಪ್ ಮೂಡಬಿದಿರೆ *

ಬಹೂಪಯೋಗಿ ಈ ತುಳಸಿ…

Sada Tulsi

ಸ್ಟೂಡೆಂಟ್ ರಿಪೋರ್ಟ್ : ವಿಶೇಷ ವರದಿ

ಹುಟ್ಟಿನಿಂದ ಸಾವಿನ ತನಕ ಹಿಂದೂ ಸಂಪ್ರದಾಯದಲ್ಲಿ ತುಳಸಿ ಗಿಡಕ್ಕೆ ತನ್ನದೇ ಆದ ಮಹತ್ವವಿದೆ. ಪ್ರತಿಯೊಬ್ಬ ಹಿಂದುವಿನ ಮನೆಯಲ್ಲೂ ತುಳಸೀ ಕಟ್ಟೆ, ತುಳಸೀ ಗಿಡ  ಇದ್ದೇ ಇರುತ್ತದೆ.  ಸಂಪ್ರದಾಯ ಪ್ರಕಾರ  ತುಳಸಿಗಿಡವು ಪ್ರತಿಯೊಂದು ಪೂಜೆ ಪುನಸ್ಕಾರಗಳಲ್ಲಿ ಶುದ್ಧತೆಯ ಸಂಕೇತವಾಗಿ ಬಳಸಲ್ಪಡುತ್ತದೆ. ಈ ಗಿಡವನ್ನು ಮನೆಯ ಮುಂದುಗಡೆ ಬೆಳೆಸುವುದರಿಂದ ಮನೆಯವರೆಲ್ಲರಿಗೂ ಒಳಿತ್ತಾಗುತ್ತೆ ಎಂಬ ವಿಶ್ವಾಸ ನಮಲ್ಲಿದೆ. ಜೊತೆಗೆ ಹಲವಾರು ವೈರಸ್, ಬ್ಯಾಕ್ಟೀರಿಯಾಗಳನ್ನು ತಡೆಯುವ ಶಕ್ತಿಯೂ ಈ ತುಳಸಿ ಗಿಡಕ್ಕಿದೆ ಎಂಬುದು ವೈಜ್ಞಾನಿಕವಾಗಿ ಸಾಬೀತಾಗಿದೆ.

ನಿಮ್ಮಗೆ ಗೊತ್ತೇ ?
ವೈದ್ಯಕೀಯ ಕ್ಷೇತ್ರದಲ್ಲಿ ತುಳಸಿಯು ತನ್ನದೇ ಆದ ಹಲವಾರು ಅದ್ಭುತಗಳನ್ನು ಸೃಷ್ಟಿಮಾಡಿದೆ‌. ಇದು ರಕ್ತದೊತ್ತಡ ಹಾಗೂ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸುತ್ತದೆ ಎಂದು ವೈದ್ಯಕೀಯ ಕ್ಷೇತ್ರ ಒಪ್ಪಿಕೊಂಡಿದೆ. ಆಯುರ್ವೇದ ವೈದ್ಯ ಪದ್ದತಿಯಲ್ಲಿ ತುಳಸಿಗಿಡಕ್ಕೆ ಮಹತ್ವ ಸ್ಥಾನ ನೀಡಲಾಗಿದೆ.

ತುಳಸಿ ಎಲೆಗಳ ಅರೋಗ್ಯಕಾರಿ ಪ್ರಯೋಜನಗಳೇನು?

ರೋಗಗಳಿಗೆ ರಾಮ ಬಾಣ
ಹಲವು ಶೀತಸಂಬಂಧೀ ರೋಗಗಳಿಗೆ ತುಳಸಿ ಉತ್ತಮ ಮದ್ದು ಎಂದು ಆರ್ಯುವೇದದಲ್ಲಿ ಹೇಳಲಾಗಿದೆ. ಪ್ರತಿ ನಿತ್ಯ ಇದರ ಎಲೆಯನ್ನು ಜಗಿಯುದರಿಂದ ಶೀತ, ಕಫ ,ಅಲರ್ಜಿ ಮುಂತಾದ ಸಮಸ್ಯೆಗಳಿಗೆ ಹಾಗೂ ಇದರ ಎಲೆಯನ್ನು ಚಹಾದೊಂದಿಗೆ ಕುದಿಸಿ ಕುಡಿಯುವುದರಿಂದ ಮಲೇರಿಯಾ ‌ಹಾಗೂ ಡೆಂಗ್ಯೂ ಜ್ವರ ಉಪಶಮನವಾಗುತ್ತದೆ . ತುಳಸಿ ರಸವನ್ನು ಗಂಧದೊಂದಿಗೆ‌ ಸೇರಿಸಿ ನೆತ್ತಿಗೆ‌ ಹಚ್ಚುವುದರಿಂದ ತಲೆನೋವು ನಿವಾರಣೆಯಾಗುತ್ತದೆ.

Ocimum sanctum flowers (aka. Tulasi, Thai Holy basil )

Ocimum sanctum flowers (aka. Tulasi, Thai Holy basil )

ನಿರ್ಮಲ ಗಾಳಿ
ಬೇರೆ ಸಸ್ಯ ಸಂಕುಲಗಳಿಗೆ ಹೋಲಿಸಿದರೆ ತುಳಸಿ ಹೆಚ್ಚು ಆಮ್ಲಜನಕ ಬಿಡುಗಡೆ ಮಾಡುತ್ತದೆ. ಅಂದಾಜು ದಿನಕ್ಕೆ 20ಗಂಟೆಗಳ ಕಾಲ ಇದು ಆಮ್ಲಜನಕವನ್ನು ಹೊರಸೂಸುತ್ತವೆ. ಅಲ್ಲದೆ ಇದರಿಂದ ಹೊರಹೊಮ್ಮುವ ಸುವಾಸನೆಗೆ ಸೊಳ್ಳೆಗಳ ನಿಯಂತ್ರಣವನ್ನು ಮಾಡಬಹುದಾಗಿದೆ.
ಕಿಡ್ನಿ ಕಲ್ಲು
ಮೂತ್ರ ಪಿಂಡದ ಕಲ್ಲು ಸಮಸ್ಯೆಯಲ್ಲಿ ಬಳಲುತ್ತಿರುವವರಿಗೆ ಪ್ರತಿ ನಿತ್ಯ ತುಳಸಿ ಎಲೆಯ ರಸದ ಜೊತೆಗೆ ಜೇನು ತುಪ್ಪ ಸೇರಿಸಿ ಕುಡಿಯುವುದರಿಂದ ಸಮಸ್ಯೆಯನ್ನು ‌ನಿವಾರಿಸಬಹುದಾಗಿದೆ .

ಜ್ಞಾಪಕ ಶಕ್ತಿ ಹೆಚ್ಚುತ್ತದೆ
ಐದು ತುಳಸಿ ಎಲೆಯನ್ನು ಸೇವಿಸುವುದರಿಂದ ಹಲವು ಸೋಂಕು ಮತ್ತು ರೋಗವನ್ನು ದೂರವಿರಿಸಬಹುದು . ಇದರ ಜೊತೆಗೆ ಜ್ಞಾಪಕ ಶಕ್ತಿಯೂ ಹೆಚ್ಚಾಗಿ ಬುದ್ಧಿವಂತಿಕೆಯ ಮಟ್ಟ ಚುರುಕುಗೊಳ್ಳುತ್ತದೆ .

ಆದರೆ…

ಬಹೂಪಯೋಗಿ ತುಳಸಿಯ ಮಹತ್ವ ಇನ್ನೂ ಅನೇಕರಿಗೆ ತಿಳಿದಿಲ್ಲ. ತನ್ನಿಂದ ತಾನಾಗಿಯೇ ಬೆಳೆಯುವ  ಈ ಸಸ್ಯಕ್ಕೆ ಯಾವ ಪೋಷಣೆಯೂ ಅವಶ್ಯಕತೆಯಿಲ್ಲ.
ನಿಜವಾಗಿಯೂ… ಇಂದಿನ ಆಧುನಿಕ ಕಾಲದಲ್ಲಿ ತುಳಸಿಯ ಮಹತ್ವವನ್ನೇ ಮರೆತ್ತುಬಿಡುತ್ತಿದ್ದೇವೆ. ಕೇವಲ ಮನೆಯ ತುಳಸಿ ಕಟ್ಟೆಯಲ್ಲಿ ಮಾತ್ರ ಒಂದು ತುಳಸಿಗಿಡವನ್ನು ಬೆಳೆಸುವ ಕಾಲ‌ ಬಂದಿದೆ. ಹಲವು ರೋಗ-ರುಜಿನಗಳನ್ನು ನಿವಾರಿಸುವ ಶಕ್ತಿ ಹೊಂದಿರುವ ತುಳಸಿ ಇಂದು ಮರೆಯಾಗುತ್ತಿದೆ.

ದಿನೇಶ್. ಕೆ

ಸರಕಾರಿ ಪ್ರಥಮ ದರ್ಜೆ ಕಾಲೇಜು ಸಿದ್ದಕಟ್ಟೆ