Headlines

ಪುರಸಭೆಯ ಕಣ್ಣುತೆರೆಸಿದ ಜವನೆರ್ ಬೆದ್ರ! * ಪುರಸಭೆಗೆ ಸಾರ್ವಜನಿಕರಿಂದ ಹಿಡಿಶಾಪ * ಕಾರ್ಯಾಂಗ,ನ್ಯಾಯಾಂಗ,ಶಾಸಕಾಂಗದ ವೈಫಲ್ಯದ ವಿರುದ್ಧ ಹೋರಾಟ: ಸುದರ್ಶನ್ * ಬೆಸ್ಟ್ ಡ್ರಾಮೇಬಾಜ್ ಖ್ಯಾತಿಯ ಶ್ರೀಶ ಬೆಂಗಳೂರು ಅವರಿಗೆ ಗೌರವ ಸನ್ಮಾನ * ಮಾನವೀಯ ಸ್ಪಂದನೆ ಆಗಲೇಬೇಕಾಗಿದೆ… * 33ನೇ ವಾರ ಪೂರೈಸಿದ ಜವನೆರ್ ಬೆದ್ರದ ಸಾಧನೆ * ಆಧುನಿಕತೆಯಿಂದ ಆಶಾದಾಯಕ ಸ್ಥಿತಿ ಬಂದೊದಗಿದೆ: ಹರೀಶ್ ಶೆಣೈ * ಮೂಡಬಿದಿರೆಯಲ್ಲಿ ಸದ್ಭಾವನಾ ಗೋಷ್ಠಿ * ಭಾರತೀಯ ಜನತಾ ಪಾರ್ಟಿಯಿಂದ ಸ್ವಚ್ಛತೆಯ ಮಂತ್ರ * ಬಸದಿಗಳ ಬೀಡಲ್ಲಿ ಬಸದಿಗಳ ಸ್ವಚ್ಛತೆ * ಕಂಬಳಸಮಿತಿ ಸಭೆ * 30ನೇವಾರದ ಕ್ಲೀನ್ ಅಪ್ ಮೂಡಬಿದಿರೆ * ಸ್ವಚ್ಛತಾ ದಿನಾಚರಣರೆ * ಶಾಸಕ ಉಮಾನಾಥ್ ಎ.ಕೋಟ್ಯಾನ್ ವಿಶೇಷ ಸಂದರ್ಶನ * ಸಮ್ಮೇಳನದ ಸರ್ವಾಧ್ಯಕ್ಷರಾಗಿ ಡಾ. ಮಲ್ಲಿಕಾ ಎಸ್.ಘಂಟಿ, ಉದ್ಘಾಟಕರಾಗಿ ಡಾ.ಷ. ಶೆಟ್ಟರ್ * ಫಲವಿತರಿಸಿ ಹುಟ್ಟುಹಬ್ಬ ಆಚರಣೆ * ನುಡಿಸಿರಿಯಲ್ಲೊಂದು ಕೃಷಿಸಿರಿ:ಡಾ.ಆಳ್ವ * ಹುಲಿ-ಸ್ವಚ್ಛತೆಯೂ -ಗಣೇಶೋತ್ಸವವೂ-ಪುರಸಭೆಯೂ! * ಗಣೇಶ ದರ್ಶನ… * ಮೂಡಬಿದಿರೆಯಲ್ಲಿ ಗಣೇಶೋತ್ಸವದ ಗೌಜಿ ಶುರು… *

ಬಸದಿಗಳ ಬೀಡಲ್ಲಿ ಬಸದಿಗಳ ಸ್ವಚ್ಛತೆ

#javaner#bedra#swachatte

ಜವನೆರ್ ಬೆದ್ರದ ಮಹತ್ತರ ಕಾರ್ಯಕ್ಕೆ ಜೈನ್ ಮಿಲನ್ ಸಾಥ್
ಮೂಡಬಿದಿರೆ: ಮೂಡಬಿದಿರೆಯ ಪ್ರತಿಷ್ಟಿತ ಸಂಘಟನೆ `ಜವನೆರ್ ಬೆದ್ರ’ದ ಆಶ್ರಯದಲ್ಲಿ 31ನೇ ವಾರದ ಸ್ವಚ್ಛತಾ ಕಾರ್ಯಕ್ರಮ ಭಾನುವಾರ ಕಲ್ಸಂಕ ಮೂಡಬಿದಿರೆ ಪರಿಸರದಲ್ಲಿ ನಡೆಯಿತು. ಜೈನಕಾಶಿ, ಬಸದಿಗಳ ಬೀಡೆಂಬಖ್ಯಾತಿಯ ಮೂಡಬಿದಿರೆಯಲ್ಲಿರುವ ಬಸದಿಗಳ ಆವರಣ ಸ್ವಚ್ಛತೆಯ ಮೂಲಕ ಈ ವಾರದ ಸ್ವಚ್ಛತಾ ಕಾರ್ಯ ನಡೆಯಿತು. ಮೂಡಬಿದಿರೆ ಜೈನ್ ಮಿಲನ್ ಜವನೆರ್ ಬೆದ್ರ ಸಂಘಟನೆಗೆ ಸಾಥ್ ನೀಡಿತು.
ಮೂಡಬಿದಿರೆಯ ಜವನೆರ್ ಬೆದ್ರದ ರೂವಾರಿ ಅಮರ್ ಕೋಟೆ, ಜೈನ್ ಮಿಲನ್ನ ಪ್ರಮುಖರಾದ ಶ್ವೇತಾ ಜೈನ್, ಜಯರಾಜ್ ಕಂಬ್ಳಿ, ನಿತೇಶ್ ಬಲ್ಲಾಳ್, ರಾಜೇಂದ್ರ ಜಿ, ನಾಗವರ್ಮ ಜೈನ್, ಹರಿಪ್ರಸಾದ್ ಆಚಾರ್ಯ, ಸಂಪತ್, ವಿದ್ಯಾನಂದ, ದಯಾನಂದ ಕುಲಾಲ್, ವಿಖ್ಯಾತ್, ಪುನೀತ್, ಪ್ರಶಾಂತ್, ಪರೀಕ್ಷಿತ್ ಮೊದಲಾದವರು ಭಾಗವಹಿಸಿದ್ದರು.