Headlines

ಕಂಬಳಸಮಿತಿ ಸಭೆ * 30ನೇವಾರದ ಕ್ಲೀನ್ ಅಪ್ ಮೂಡಬಿದಿರೆ * ಸ್ವಚ್ಛತಾ ದಿನಾಚರಣರೆ * ಶಾಸಕ ಉಮಾನಾಥ್ ಎ.ಕೋಟ್ಯಾನ್ ವಿಶೇಷ ಸಂದರ್ಶನ * ಸಮ್ಮೇಳನದ ಸರ್ವಾಧ್ಯಕ್ಷರಾಗಿ ಡಾ. ಮಲ್ಲಿಕಾ ಎಸ್.ಘಂಟಿ, ಉದ್ಘಾಟಕರಾಗಿ ಡಾ.ಷ. ಶೆಟ್ಟರ್ * ಫಲವಿತರಿಸಿ ಹುಟ್ಟುಹಬ್ಬ ಆಚರಣೆ * ನುಡಿಸಿರಿಯಲ್ಲೊಂದು ಕೃಷಿಸಿರಿ:ಡಾ.ಆಳ್ವ * ಹುಲಿ-ಸ್ವಚ್ಛತೆಯೂ -ಗಣೇಶೋತ್ಸವವೂ-ಪುರಸಭೆಯೂ! * ಗಣೇಶ ದರ್ಶನ… * ಮೂಡಬಿದಿರೆಯಲ್ಲಿ ಗಣೇಶೋತ್ಸವದ ಗೌಜಿ ಶುರು… * 28ನೇ ವಾರದ ಸ್ವಚ್ಛತಾ ಅಭಿಯಾನ * ಈ ಕರ್ಮಕಾಂಡಕ್ಕೆ ಯಾರು ಬಲಿ…? * `ಗುಣಮಟ್ಟದ ಶಿಕ್ಷಣ-ಸೂಕ್ತ ಉದ್ಯೋಗಕ್ಕೆ ಒತ್ತು’ * 27ನೇ ವಾರದ ಕ್ಲೀನ್ ಅಪ್ ಮೂಡಬಿದಿರೆ ಸಂಪನ್ನ * ನಮ್ಮ ಹೆಮ್ಮಕ್ಕಳು ಅದೆಷ್ಟು ಸುರಕ್ಷಿತ…? * ಮನಮೋಹಕ ನೃತ್ಯ ಸಿಂಚನ * ಸ್ವಚ್ಛ ಸರ್ವೇಕ್ಷಣ ಗ್ರಾಮೀಣ 2018 * ಆಧುನಿಕತೆಯೇ ಮುಳುವಾಯಿತೇ…? * ನಾಟ್ಯ ಮಯೂರಿ… * ನವೆಂಬರ್ 16-18: ಆಳ್ವಾಸ್ ನುಡಿಸಿರಿ *

‘ಪ್ರಳಯ ಫಿಕ್ಸ್’ ಮಾಡೋಕೆ ಇನ್ನೊಬ್ಬ ಬರಬೇಕಿಲ್ಲ

#ettina#hole#project#dk

ಅನಿಸಿಕೆ :ಗಿರಿಧರ್ ಶೆಟ್ಟಿ , ಮಂಗಳೂರು

ಪಶ್ಚಿಮ ಘಟ್ಟಗಳ ಶಿರಾಡಿ ಘಾಟ್, ಬಿಸ್ಲೆ ಘಾಟ್ ಮತ್ತು ಸಂಪಾಜೆ ಘಾಟ್ ಪ್ರದೇಶದಲ್ಲಿ ಗುಡ್ಡಗಳು ಯಾಕೆ ಕುಸಿಯುತ್ತಿವೆ ಅನ್ನೋದ್ರ ಬಗ್ಗೆ ಚಿಂತನೆ ಮಾಡಬೇಕು. ಸಾವಿರಾರು ವರ್ಷಗಳಿಂದ ಬಾಳಿ ಬದುಕಿದ್ದ ಈ ಪರಿಸರದ ಬೆಟ್ಟಗಳ ಸರಪಣಿ ಯಾಕೆ ಬಿಚ್ಚಿಕೊಳ್ಳುತ್ತಿದೆ. ಒಮ್ಮಿಂದೊಮ್ಮೆಲೇ ಯಾಕೆ ಸ್ಪೋಟಗೊಂಡು ಸೀಳಿ ಹೋಗುತ್ತಿವೆ ಅನ್ನೋದು. ಪರಿಸರ ತಜ್ಞರ ಪ್ರಕಾರ, ಇದಕ್ಕೆಲ್ಲ ಮೂಲಕಾರಣ ಎತ್ತಿನಹೊಳೆ ಯೋಜನೆ. ಯೋಜನಾ ಪ್ರದೇಶದ ಸಕಲೇಶಪುರ ಆಸುಪಾಸಿನಲ್ಲಿಯೇ ಇಂಥ ಸ್ಥಿತಿ ಸೃಷ್ಟಿಯಾಗಿದೆ ಅನ್ನೋದು ಗಮನಿಸಬೇಕಾದ ಅಂಶ.

ಇಲ್ಲೇ ಯಾಕೆ ಗುಡ್ಡ ಕುಸಿಯುತ್ತಿದೆ ಅನ್ನೋದಕ್ಕೆ ಈ ಅವೈಜ್ಞಾನಿಕ ಯೋಜನೆಯೇ ಕಾರಣ ಅನ್ನೋದಕ್ಕೆ ತಜ್ಞರೇ ಬೇಕಿಲ್ಲ. ಹತ್ತು ಸಾವಿರ ಹೆಕ್ಟೇರ್ ವ್ಯಾಪ್ತಿಯಲ್ಲಿ ಅರಣ್ಯ ಕಡಿದು ಈ ಭಾಗದಲ್ಲಿದ್ದ ಶೋಲಾ ಕಾಡುಗಳನ್ನು ನಾಶಪಡಿಸಿದ್ದಾರೆ. ಶೋಲಾ ಕಾಡುಗಳಂದ್ರೆ ಪಶ್ಚಿಮ ಘಟ್ಟಗಳ ಹಾರ್ಟ್ ಇದ್ದಂತೆ. ಹೀಗಾಗಿ ನೀರನ್ನು ಹೀರುವ ಮೇಲ್ಮೈ ಪದರಗಳೇ ನಾಶವಾಗಿದೆ. ಇದರಿಂದ ಯೋಜನಾ ಪ್ರದೇಶದಲ್ಲಿ ಇಂಗಿದ ಮಳೆ ನೀರು ಸಡಿಲ ಬೆಟ್ಟ ಗುಡ್ಡಗಳ ನಡುವೆ ಹೊರಬರುತ್ತಿದೆ.

ನೀರನ್ನು ಹಿಡಿದಿಟ್ಟುಕೊಳ್ಳುವ ಶಕ್ತಿ ಇಲ್ಲವಾದ್ದರಿಂದ ಸಡಿಲ ಮಣ್ಣನ್ನು ಹೊಂದಿರುವ ಘಟ್ಟಗಳು ಸೀಳಿ ಹೋಗುತ್ತಿವೆ. ಪಶ್ಚಿಮ ಘಟ್ಟಗಳ ಮೇಲ್ಭಾಗ ಅಂದ್ರೆ ಬೆಟ್ಟಗಳ ಸರಪಣಿಯ ಮಧ್ಯಭಾಗ ಅತ್ಯಂತ ಮೆದು ಮಣ್ಣನ್ನು ಹೊಂದಿರುವ ಜಾಗ. ಅತ್ತ ಬಿಸ್ಲೆ ಘಾಟ್ ನಿಂದ ತೊಡಗಿ ಶಿರಾಡಿ, ಸಂಪಾಜೆ, ಪುಷ್ಪಗಿರಿ, ಬ್ರಹ್ಮಗಿರಿ ಬೆಟ್ಟಗಳು ಇದೇ ರೀತಿಯವು. ಹೀಗಾಗಿ ಈ ಭಾಗದ ಬೆಟ್ಟಗಳು ಬಿರುಕು ಬಿಡುತ್ತಿದ್ದು ಮಳೆ ನೀರು ಒಳಗಿಳಿದು ಸ್ಫೋಟಗೊಳ್ಳುತ್ತಿವೆ. ಪರಿಸರದಲ್ಲಿ ಮನೆ ಕಟ್ಟಿಕೊಂಡ ಬಡಜನರು ಎಲ್ಲವನ್ನೂ ಕಳಕೊಂಡು ಬೀದಿಗೆ ಬೀಳುತ್ತಿದ್ದಾರೆ.

ಸರಕಾರ ಹಠಕ್ಕೆ ಬಿದ್ದು ಯಾರದ್ದೋ ಜೇಬು ತುಂಬಿಸಲು ಪಶ್ಚಿಮ ಘಟ್ಟವನ್ನು ಕೊಯ್ದು ನಿಸರ್ಗ ಸಿರಿಯ ಮೇಲೆ ನಮ್ಮೆಲ್ಲರ ಚಟ್ಟ ಕಟ್ಟಲು ಹೊರಟಂತಿದೆ. ಐದು ವರ್ಷಗಳ ಹಿಂದೆ ತಜ್ಞರು ವ್ಯಕ್ತಪಡಿಸಿದ್ದ ಆತಂಕ ನಿಜವಾಗುತ್ತಿದೆ. ಅತ್ತ ಕಾಡು- ಪರಿಸರವೂ ನಾಶ, ಇತ್ತ ಕೋಲಾರದ ಜನರಿಗೆ ಮೋಸ. ಇದಕ್ಕಾಗಿ ನಿಮ್ಮೆಲ್ಲರ ವರದಿಯಲ್ಲಿ ಎತ್ತಿನಹೊಳೆ ಪ್ರಾಜೆಕ್ಟ್ ಟಾರ್ಗೆಟ್ ಆಗಿರಲಿ ಅನ್ನೋದು ನನ್ನ ಕಳಕಳಿ‌.

ಕೊಡಗಿನಲ್ಲಿ ಮಳೆಯಿಂದ ತಗ್ಗುಪ್ರದೇಶ ಮುಳುಗಿರಬಹುದು‌. ಆದರೆ, ಈ ಭಾಗದಲ್ಲಿ ಬೆಟ್ಟಗಳೇ ಸೀಳಿ ಹೋಗುತ್ತಿವೆ. ಪ್ರಕೃತಿ ಒಂದಷ್ಟು ದಿನ ಕಾಯುತ್ತೆ. ತಿದ್ದಿಕೊಳ್ಳದಿದ್ದರೆ ತಿರುಗೇಟು ನೀಡುತ್ತೆ. ಈ ಬೆಟ್ಟಗಳು ಬಿರುಕು ಬಿಟ್ಟ ಪರಿಣಾಮ ಆಸುಪಾಸಿನಲ್ಲಿರುವ ಹಾರಂಗಿ, ಲಿಂಗನಮಕ್ಕಿ, ಘಟ್ಟದ ಮಧ್ಯೆ ಕಟ್ಟಿರುವ ಅಣೆಕಟ್ಟುಗಳೇನಾದ್ರೂ ಒಡೆದು ಹೋದರೆ ಕೊಡಗು ಮಾತ್ರ ಅಲ್ಲ ಮಲೆನಾಡು ಸೇರಿ ಇಡೀ ಕರಾವಳಿ ಜಿಲ್ಲೆಗಳೇ ಸರ್ವನಾಶ ಆಗಬಹುದು. ಈ ಬಾರಿಯದ್ದು ಬರೀಯ ಮುನ್ಸೂಚನೆ ಅಷ್ಟೆ. ನಮಗೆ ಬೇರೇನೂ ಮಾಡಲಾಗದು. ಪಶ್ಚಿಮ ಘಟ್ಟಗಳ ಬಗ್ಗೆ ಕನಿಷ್ಠ ಕಳಕಳಿ, ಆಸ್ಥೆ ಇದ್ದರೆ ಈ ಕುರಿತ ವರದಿಗಳನ್ನಾದ್ರೂ ಹೈಲೈಟ್ ಮಾಡೋಣ… ಕಾಡು ಬೆಟ್ಟಗಳ ಮಧ್ಯೆ ನಿಂತು ಪ್ರಕೃತಿಯನ್ನು ಆಸ್ವಾದಿಸುತ್ತಾ ಫೋಟೊ ಕ್ಲಿಕ್ಕಿಸಿಕೊಳ್ಳುವ ಬೆಂಗಳೂರಿನಲ್ಲಿ ಇರುವವರೂ ಎಚ್ಚತ್ತುಕೊಳ್ಳಿ. ಕಾಡು ಬರೀಯ ಕಾಡಲ್ಲ. ಅವು ನಮ್ಮ ಜೀವನಾಡಿಗಳು. ನಾಡಿಗಳು ಬರಿದಾದರೆ ನಮ್ಮ ಅಳಿವಿಗೆ, ‘ಪ್ರಳಯ ಫಿಕ್ಸ್’ ಮಾಡೋಕೆ ಇನ್ನೊಬ್ಬ ಬರಬೇಕಿಲ್ಲ.