Headlines

ರೋಟರಿಯಿಂದ ಸಾಧಕರಿಗೆ ಸನ್ಮಾನ * ಸ್ವರಾಜ್ಯ ಮೈದಾನದ ಮೇಲೆ ತೂಗುಗತ್ತಿ…! * ಡಾ.ಸುಧೀರ್ ಹೆಗ್ಡೆ ನೇತೃತ್ವದಲ್ಲಿಕಣ್ಣಿನತಪಾಸಣಾ ಶಿಬಿರ * ಯುವಶಕ್ತಿಗೆ ಪರಿಸರಪ್ರಜ್ಞೆಯ ಅರಿವು ಮೂಡಿಸಿದ ಮಹಾಕಾರ್ಯ * ಮೂಡಬಿದಿರೆ ಶಿಕ್ಷಣ ಪ್ರೇಮಿಗಳ ನಾಡು: ಅಭಯಚಂದ್ರ ಜೈನ್ * 50ನೇ ವೈದ್ಯಕೀಯ ತಪಾಸಣಾ ಶಿಬಿರ * ಜ.21-25: ಮೂಡಬಿದಿರೆಯಲ್ಲಿ ರಾಷ್ಟ್ರೀಯ ವೈಯ್ಟ್ ಲಿಫ್ಟಿಂಗ್ * ರಾಜ್ಯಮಟ್ಟದ ಟಿ-20 ಕ್ರಿಕೆಟ್ ಟೂರ್ನಿ: ಆಳ್ವಾಸ್‍ಗೆ ಪ್ರಶಸ್ತಿ * ಕವಿಕುಲಗುರು ಕುಮಾರವ್ಯಾಸ * ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳಿಂದ ಒಡ್ಡು ನಿರ್ಮಾಣ * ಕಣ್ಣಿನ ಉಚಿತ ತಪಾಸಣೆಹಾಗೂ ಚಿಕಿತ್ಸಾ ಶಿಬಿರ * ಅಂತರ್ ಕಾಲೇಜು ಸಾಫ್ಟ್ ಬಾಲ್ ಟೂರ್ನಮೆಂಟ್ ಆರಂಭ * ವಿಶೇಷ ವಿದ್ಯಾರ್ಥಿಗಳ ಗಮನಾರ್ಹ ಸಾಧನೆ * ವರ್ಣವೈವಿಧ್ಯ ಚಿತ್ತಾಕರ್ಷದ ಆಳ್ವಾಸ್ ವಿರಾಸತ್ * ವಿರಾಸತ್ ಗೌರವ * ಬೇಲಾಡಿ ರಾಮಚಂದ್ರ ಆಚಾರ್ಯ ನಿಧನ * ವಿವೇಕಾನಂದ ಜಯಂತಿ * 79.5ಕೋಟಿ ಅಭಿವೃದ್ಧಿ ಕಾರ್ಯಗಳ ಲೋಕಾರ್ಪಣೆ, ಶಂಕುಸ್ಥಾಪನೆ * ಆಳ್ವಾಸ್ ರೋಟರಿ ಬ್ಲಡ್ ಬ್ಯಾಂಕ್ ಉದ್ಘಾಟನೆ * ಸೇವೆಯಲ್ಲಿ ಬದಲಾವಣೆ ತಂದ ಹೆಗ್ಗಳಿಕೆ ರೋಟರಿಯದ್ದು – ಡಾ.ಹೆಗ್ಗಡೆ *

ಪ್ರತೀ ಪ್ರಜೆಗೂ ಕುಡಿಯುವ ನೀರು:ಕೇಂದ್ರ ಸಚಿವ ಭರವಸೆ

#bjp#central#minister

ನಮ್ಮ ಪ್ರತಿನಿಧಿ ವರದಿ
ಪ್ರಧಾನಿ ನರೇಂದ್ರ ಮೋದಿಯವರ ಬಯಲು ಮುಕ್ತ ಶೌಚಾಲಯ ರಾಷ್ಟ್ರದ ಚಿಂತನೆ ಸಾಕಾರವಾಗುತ್ತಿದ್ದು ದೇಶದಲ್ಲಿ ಶೇ70.62 ಪ್ರಗತಿ ಸಾಧಿಸಲಾಗಿದೆ. ಅಕ್ಟೋಬರ್ 2,2014ರಂದು ಪ್ರಧಾನಿ ನರೇಂದ್ರ ಮೋದಿ ಸ್ವಚ್ಛ ಭಾರತ ಯೋಜನೆಗೆ ಚಾಲನೆ ನೀಡಿದರು. 2019ರ ಅಕ್ಟೋಬರ್ 2ರೊಳಗೆ ಬಯಲು ಮುಕ್ತ ಶೌಚಾಲಯ ರಾಷ್ಟ್ರವನ್ನಾಗಿ ಘೋಷಿಸುವ ಉದ್ದೇಶ ಹೊಂದಿದ್ದು ಇದು ಸಾಕಾರಗೊಳ್ಳುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿದೆ ಎಂದು ಕೇಂದ್ರ ಸಚಿವ ರಮೇಶ್ ಜಿನಜಿನಗೀ ಹೇಳಿದರು.
ಮೂಡಬಿದಿರೆ ಎಂ.ಸಿ.ಎಸ್ ಬ್ಯಾಂಕ್ಗೆ ಭೇಟಿನೀಡಿದ ಅವರು ಬ್ಯಾಂಕ್ನ ಪ್ರಗತಿಯ ಬಗ್ಗೆ ಮಾಹಿತಿ ಸಂಗ್ರಹಿಸಿ ಹರ್ಷ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಬ್ಯಾಂಕ್ನ ಅಧ್ಯಕ್ಷ ಕೆ.ಅಮರನಾಥ ಶೆಟ್ಟಿ ಆತ್ಮೀಯವಾಗಿ ಸನ್ಮಾನಿಸಿದರು.ಎಂ.ಸಿ.ಎಸ್ ಬ್ಯಾಂಕ್ ನ ನಿರ್ದೇಶಕರಾದ ಬಾಹುಬಲಿ ಪ್ರಸಾದ್, ಗಣೇಶ್ , ಬ್ಯಾಂಕ್ ಉಪಾಧ್ಯಕ್ಷ ಜೋರ್ಜ್ ಮೋನಿಸ್, ಜೆ.ಡಿ.ಎಸ್ ಮುಖಂಡ ಅಶ್ವಿನ್ ಪಿರೇರಾ ಜೊತೆಗಿದ್ದರು.

ಪ್ರತೀ ಪ್ರಜೆಗೂ ಕುಡಿಯುವ ನೀರು
ಕೇಂದ್ರ ಸರಕಾರದ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯು ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರು ಸರಬರಾಜು ಯೋಜನೆಯಡಿ ಪ್ರತಿಯೊಬ್ಬ ಗ್ರಾಮೀಣ ಪ್ರದೇಶದ ಪ್ರಜೆಗೂ ಶುದ್ದ ನೀರು ಪೂರೈಕೆ ಮಾಡುವ ಉದ್ದೇಶ ಹೊಂದಿದೆ ಎಂದು ಸಚಿವ ರಮೇಶ್ ತಿಳಿಸಿದರು.
2017ರೊಳಗೆ ಶೇ.50ರಷ್ಟು ಗ್ರಾಮೀಣ ಜನತೆಗೆ ಪೈಪ್ ಲೈನ್ ಮೂಲಕ ನೀರು ಪೂರೈಕೆ ಮಾಡುವುದು ಹಾಗೂ ಶೇ.35 ಮನೆಗಳಿಗೆ ನಳ್ಳಿ ಸಂಪರ್ಕ ಕಲ್ಪಿಸುವುದು ಉದ್ದೇಶವಾಗಿದೆ ಎಂದರು.
2022ರೊಳಗೆ ಶೇ.90ರಷ್ಟು ಗ್ರಾಮೀಣ ಪೈಪ್ ಲೈನ್ ಮೂಲಕ ನೀರು ಪೂರೈಕೆ ಮಾಡುವುದು ಹಾಗೂ ಶೇ.80ರಷ್ಟು ಮನೆಗಳಿಗೆ ನಳ್ಳಿ ಸಂಪರ್ಕ ಕಲ್ಪಿಸುವ ಉದ್ದೇಶವಿದೆ ಎಂದರು.
ವೈಯಕ್ತಿಕ ಶೌಚಾಲಯ ನಿರ್ಮಾಣಕ್ಕೆ ಕೇಂದ್ರ ಸರಕಾರವು ರು.7200 ಅನುದಾನ ನೀಡುತ್ತಿದೆ. ರಾಜ್ಯ ಸರಕಾರವು 4800ರುಪಾಯಿ ಅನುದಾನ ನೀಡುತ್ತದೆ. ಸ್ವಚ್ಛ ಭಾರತ ಯೋಜನೆಯನ್ನು ಪ್ರಾರಂಭಿಸಿದ ದಿನದಿಂದ ಈವರೆಗೆ 5.21ಕೋಟಿ ವೈಯಕ್ತಿಕ ಶೌಚಾಲಯಗಳನ್ನು ನಿರ್ಮಿಸಲಾಗಿದೆ. 2.67 ಲಕ್ಷ ಗ್ರಾಮಗಳು, 1.17ಲಕ್ಷ ಗ್ರಾಮ ಪಂಚಾಯತ್ಗಳು, 225 ಜಿಲ್ಲೆಗಳು, 2048 ತಾಲೂಕುಗಳನ್ನು ಬಯಲು ಶೌಚ ಮುಕ್ತ ಪ್ರದೇಶಗಳೆಂದು ಘೋಷಿಸಲಾಗಿದೆ. ರಾಷ್ಟ್ರದಲ್ಲಿ ಶೇ.70.62 ರಷ್ಟು ಪ್ರಮಾಣದಲ್ಲಿ ಸಾರ್ವಜನಿಕರು ಶೌಚಾಲಯಗಳನ್ನು ಹೊಂದಿದ್ದಾರೆ. 13,948 ಕೋಟಿ ರೂಪಾಯಿ ಅನುದಾನವನ್ನು ವಿನಿಯೋಗಿಸಲಾಗಿದೆ ಎಂದವರು ಮಾಹಿತಿ ನೀಡಿದರು.
ಹಿಮಾಚಲ ಪ್ರದೇಶ, ಕೇರಳ, ಸಿಕ್ಕಿಂ, ಉತ್ತರಾಖಂಡ, ಗುಜರಾತ್, ಹರಿಯಾಣ, ಚಂಡೀಗಡಗಳು ಸ್ವಚ್ಛ ಭಾರತ ಪರಿಕಲ್ಪನೆಯಲ್ಲಿ ಟಾಪ್ 6ರಾಜ್ಯಗಳೆಂದು ಗುರುತಿಸಲ್ಪಟ್ಟಿವೆ. ಈ ರಾಜ್ಯಗಳಲ್ಲಿ ಅತ್ಯಧಿಕ ಪ್ರಗತಿ ಸಾಧಿಸಲಾಗಿದೆ ಎಂದರು. ಬಿಹಾರ್ (ಶೇ.33), ಜಮ್ಮು ಮತ್ತು ಕಾಶ್ಮೀರ ( ಶೇ.37), ಒಡಿಸ್ಸಾ (ಶೇ.43), ಪಾಂಡಿಚೇರಿ (ಶೇ.49), ಉತ್ತರ ಪ್ರದೇಶ(ಶೆ.52) ಈ ಐದು ರಾಜ್ಯಗಳು ಅತ್ಯಂತ ಕಡಿಮೆ ಪ್ರಗತಿ ಸಾಧಿಸಿದ ರಾಜ್ಯಗಳಾಗಿವೆ ಎಂದವರು ತಿಳಿಸಿದರು.
2011ರ ಸಮೀಕ್ಷೆಯಂತೆ 31.88ಶೇ ಶೌಚಾಲಯ ಹೊಂದಿರುವವರು ಕರ್ನಾಟಕ ರಾಜ್ಯದಲ್ಲಿದ್ದರು. 2013ರಲ್ಲಿ ನಡೆಸಿದ ಬೇಸ್ ಲೈನ್ ಸಮೀಕ್ಷೆಯಂತೆ ಶೇ.35.41ರಷ್ಟು ಸಾರ್ವಜನಿಕರು ಶೌಚಾಲಯ ಹೊಂದಿದ್ದಾರೆ. ಜನವರಿ 5, 2017ರ ಸಮೀಕ್ಷೆಯಂತೆ ಶೇ.79.50ರಷ್ಟು ಸಾರ್ವಜನಿಕರು ಶೌಚಾಲಯ ಹೊಂದಿದ್ದಾರೆ ಎಂದವರು ವಿವರಿಸಿದರು.