Headlines

ಆಳ್ವಾಸ್ ವಿದ್ಯಾರ್ಥಿಸಿರಿಯ ಹೈಲೈಟ್ಸ್… * ಬಾಲಪ್ರತಿಭೆ ಪ್ರದರ್ಶನ * ಬಸದಿಗಳ ನಾಡಲ್ಲಿ ಕನ್ನಡದ ಬಾವುಟ… ಹೊತ್ತಿತೋ…ಹೊತ್ತಿತು ಕನ್ನಡದ ದೀಪ… * ನುಡಿಸಿರಿಯ ಸರ್ವಾಧ್ಯಕ್ಷರ ಎಕ್ಸ್ ಕ್ಲೂಸಿವ್ ಸಂದರ್ಶನ * ಹನ್ನೆರಡು ಸಾಧಕರಿಗೆ 2018ರ ಆಳ್ವಾಸ್ ನುಡಿಸಿರಿ ಪುರಸ್ಕಾರ * ನುಡಿಸಿರಿಯ ಅಂಗಳದಲ್ಲಿ ಅಚ್ಚರಿಯ ಮೇಲೊಂದಚ್ಚರಿ! * ನುಡಿಸಿರಿಯ ಅಂಗಳದಲ್ಲೊಂದು ಸುದ್ದಿಮನೆ! * ಆಳ್ವಾಸ್ ವಿದ್ಯಾರ್ಥಿಸಿರಿ 2018 ಆರಂಭ * ಕಣ್ಣುತೆರೆಸಿದ ಜವನೆರ್ ಬೆದ್ರ ಸಂಘಟನೆ * ಯೋಧರ ಮನೆಯಲ್ಲಿ ಬೆಳಗಿದ ದೀಪ! * ಯಶಸ್ವೀ 36ನೇವಾರ ಪೂರೈಸಿದ ಕ್ಲೀನ್ ಅಪ್ ಮೂಡಬಿದಿರೆ * ರಾಜ್ಯಮಟ್ಟದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟ ಆರಂಭ * ಅಳಿಯೂರಿನಲ್ಲಿ ಮೇಳೈಸಲಿದೆ ಕ್ರೀಡಾಹಬ್ಬ.! * ರಾಷ್ಟ್ರಮಟ್ಟಕ್ಕೆ ಆಯ್ಕೆಯಾಯ್ತು ಹಳ್ಳಿ ಹುಡುಗರ ಅನ್ವೇಷಣೆ! * ಶಿರ್ಲಾಲು: ಹೊಸ ಶಾಸನ ಪತ್ತೆ * ಸಾವಿರ ಕಂಬದ ಬಸದಿಯ ಸ್ವಚ್ಛತೆ * ಪುರಸಭೆಯ ಕಣ್ಣುತೆರೆಸಿದ ಜವನೆರ್ ಬೆದ್ರ! * ಪುರಸಭೆಗೆ ಸಾರ್ವಜನಿಕರಿಂದ ಹಿಡಿಶಾಪ * ಕಾರ್ಯಾಂಗ,ನ್ಯಾಯಾಂಗ,ಶಾಸಕಾಂಗದ ವೈಫಲ್ಯದ ವಿರುದ್ಧ ಹೋರಾಟ: ಸುದರ್ಶನ್ * ಬೆಸ್ಟ್ ಡ್ರಾಮೇಬಾಜ್ ಖ್ಯಾತಿಯ ಶ್ರೀಶ ಬೆಂಗಳೂರು ಅವರಿಗೆ ಗೌರವ ಸನ್ಮಾನ *

ಪುರಸಭೆಯ ಕಣ್ಣುತೆರೆಸಿದ ಜವನೆರ್ ಬೆದ್ರ!

#javaner#bedra#cleanup#moodbidri#34week#progaram

34ನೇ ವಾರದ ಸ್ವಚ್ಛತಾ ಅಭಿಯಾನ

ಮೂಡಬಿದಿರೆ: ಪುರಸಭಾ ವ್ಯಾಪ್ತಿಯ ವಿಶಾಲ್ ನಗರ ಪ್ರಾಂತ್ಯಶಾಲೆಯ ಪರಿಸರದಲ್ಲಿ ಜವನೆರ್ ಬೆದ್ರ ಸಂಘಟನೆಯ ಕ್ಲೀನ್ ಅಪ್ ಮೂಡಬಿದಿರೆ ಅಭಿಯಾನದ ಆಶ್ರಯದಲ್ಲಿ 34ನೇ ವಾರದ ಸ್ವಚ್ಛತಾ ಅಭಿಯಾನ ಯಶಸ್ವಿಯಾಗಿ ನಡೆಯಿತು. ನೂರಾರು ಕಾರ್ಯಕರ್ತರು ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡರು. ಗಬ್ಬು ನಾರುತ್ತಿರುವ ವಿಶಾಲ್ ನಗರ ಪ್ರದೇಶದಲ್ಲಿ ಲೋಡುಗಟ್ಟಲೆ ಕಸಗಳನ್ನು ಸಂಗ್ರಹಿಸಿ ರಾಶಿಹಾಕುವ ಮೂಲಕ ಮೂಡಬಿದಿರೆ ಪುರಸಭೆಯ ಕಾರ್ಯವೈಖರಿಯನ್ನು ಜನತೆಗೆ ತಿಳಿಸುವ ಮಹತ್ಕಾರ್ಯವನ್ನು ಜವನೆರ್ ಬೆದ್ರ ಸಂಘಟನೆ ಮಾಡಿತು. ಕಸಗಳನ್ನು ರಾಶಿಹಾಕಿ ಮೂಡಬಿದಿರೆ ಪುರಸಭೆಯ ಪರಿಸರ ಅಭಿಯಂತರರಿಗೆ ಕರೆಮಾಡಿ ಇಲ್ಲಿರುವ ಕಸವಿಲೇವಾರಿಗೆ ಬೇಕಾದ ವ್ಯವಸ್ಥೆಮಾಡುವಂತೆ ಮಾಹಿತಿಯನ್ನು ನೀಡಲಾಯಿತು. ಅಕ್ಟೋಬರ್ 21ರ ಭಾನುವಾರ ಬೆಳ್ಳಂ ಬೆಳಗ್ಗೆ ಜವನೆರ್ ಬೆದ್ರ ಸಂಘಟನೆ ಹಾಗೂ ಚಾಮುಂಡಿ ಬೆಟ್ಟ ಭಗತ್ ಸೇನೆ ಹಾಗೂ ಸ್ಥಳೀಯರ ಸಹಾಯದಿಂದ ನಡೆದ ಕ್ಲೀನ್ ಅಪ್ ಮೂಡಬಿದಿರೆ ಕಾರ್ಯಕ್ರಮದಲ್ಲಿ ಈ ಪರಿಸರ ಸ್ವಚ್ಛಗೊಳಿಸುವ ಕಾರ್ಯ ನಡೆಯಿತು.

#javaner#bedra#cleanup#moodbidri#34week#progaram

ಹೇಳುವುದು ಒಂದು….:ಪುರಸಭೆಯ ಸಾಮಾನ್ಯ ಸಭೆಯಲ್ಲಿ ಈ ಭಾಗದ ಪುರಸಭಾ ಸದಸ್ಯರು ಸ್ವಚ್ಛತೆಯ ಬಗ್ಗೆ ಮಾರುದ್ದದ ಭಾಷಣ ಮಾಡಿ, ನಮ್ಮ ಏರಿಯಾ ಹೇಗೆ ಕ್ಲೀನ್ ಇಡಬೇಕೆಂಬುದು ನಮಗೆ ಗೊತ್ತಿದೆ ಎಂಬ ಮಾಹಿತಿ ಹೇಳಿದ್ದರು.!. ಆದರೆ ಜವನೆರ್ ಬೆದ್ರ ಸಂಘಟನೆ ಈ ಭಾಗದಲ್ಲಿಕ್ಲೀನ್ ಅಪ್ ಮಾಡಿದಾಗ ಸಿಕ್ಕಿರುವ ದೊಡ್ಡ ಪ್ರಮಾಣದ ತ್ಯಾಜ್ಯ, ಕಸಗಳನ್ನು ನೋಡಿದಾಗಾದರೂ ಈ ಭಾಗದ ಸದಸ್ಯರಿಗೆ ತಮ್ಮ ಕಾರ್ಯವೈಖರಿಯ ಅರಿವಾಗಬಹುದು ಎಂಬುದು ಗಮನಾರ್ಹ ಅಂಶ.

#javaner#bedra#cleanup#moodbidri1

ರಸ್ತೆಯಂಚಿನಲ್ಲೇ ಕಸದ ರಾಶಿ! : ಸಾರ್ವಜನಿಕ ರಸ್ತೆಯಂಚಿನಲ್ಲೇ ರಾಶಿ ರಾಶಿ ಕಸಗಳು!. ಮದ್ಯಪಾನ ಮಾಡಿ ಎಸೆದ ದೊಡ್ಡ ದೊಡ್ಡ ಬಾಟಲ್ಗಳು, ಡೈಪರ್ ಸೇರಿದಂತೆ ನ್ಯಾಪ್ ಕಿನ್ಗಳು…, ಮಾಂಸ ತ್ಯಾಜ್ಯಗಳು…,ಕೊಳೆತು ನಾರುವ ತ್ಯಾಜ್ಯ ರಾಶಿ…,ಪ್ಲಾಸ್ಟಿಕ್ ಹೀಗೆ ರಾಶಿ ರಾಶಿ ಕಸಗಳು ಜವನೆರ್ ಬೆದ್ರ ತಂಡಕ್ಕೆ ಕಂಡುಬಂದಿವೆ. ರಸ್ತೆಯಿಕ್ಕೆಲೆಗಳಲ್ಲಿ ಈ ರೀತಿಯ ತ್ಯಾಜ್ಯ ರಾಶಿಯಿದ್ದರೂ ಪರಿಸರದ ಜತನೆಯಾಗಲೀ, ಈ ಭಾಗದ ಪುರಸಭಾ ಸದಸ್ಯರಾಗಲೀ ಎಚ್ಚೆತ್ತುಕೊಳ್ಳದಿದ್ದುದು ಸೋಜಿಗದ ವಿಚಾರವೇ ಆಗಿದೆ!

#javaner#bedra#cleanup#moodbidri

ಸ್ವಚ್ಛತೆಯಲ್ಲಿ ರಾಜಿ ಸಲ್ಲ: ಸ್ವಚ್ಛತಾ ವಿಚಾರದಲ್ಲಿ ಯಾರೂ ರಾಜಿಮಾಡಿಕೊಳ್ಳುವ ಪ್ರಶ್ನೆಯೇ ಇರಬಾರದು. ಯಾವ ರಾಜಕೀಯ ಪಕ್ಷವೂ ಇದಕ್ಕೆ ಠೀಕಿಸುವುದು ಸರಿಯಲ್ಲ. ಸ್ವಚ್ಛತೆ ಎಂಬುದು ನಮ್ಮ ಆದ್ಯ ಕರ್ತವ್ಯ. ನಮ್ಮ ನಮ್ಮ ಪರಿಸರವನ್ನು ಸ್ವಚ್ಛಗೊಳಿಸುವುದು ನಮ್ಮ ಜವಾಬ್ದಾರಿ. ಇದನ್ನು ನಿರ್ವಹಿಸುವ ತಾಕತ್ತಿಲ್ಲದಿದ್ದರೆ, ಇದಕ್ಕೆ ಪ್ರತಿರೋಧ ಒಡ್ಡುವುದು ಸರಿಯಲ್ಲ ಎಂದು ಜವನೆರ್ ಬೆದ್ರ ಸಂಘಟನೆಯ ರೂವಾರಿ ಅಮರ್ ಕೋಟೆ ಗುಡುಗಿದರು.
ಅಭಿಯಾನದಲ್ಲಿ ಚಾಮುಂಡಿಬೆಟ್ಟ ಭಗತ್ ಸೇನೆಯ ಪ್ರಮುಖರಾದ ಸುರೇಶ್, ಮಧು, ಜವನೆರ್ ಬೆದ್ರ ಸಂಘಟನೆಯ ಪ್ರಮುಖರಾದ ಅಮರ್ ಕೋಟೆ, ರಾಜೇಂದ್ರ ಜಿ, ಪ್ರೊ.ಶ್ಯಾಮ್ ಸುಂದರ್, ಝಾನ್ಸಿ ಮ್ಯಾಕ್ಸಿ ಡಿ’ಸೋಜ, ನಿರ್ಮಲ್, ಹರಿಪ್ರಸಾದ್, ಕಿರಣ್, ಶಿವಪ್ರಸಾದ್, ನಾರಾಯಣ ಪದುಮಲೆ, ಸುಧಾಕರ ಪೂಜಾರಿ, ವಿದ್ಯಾನಂದ, ನಿತೇಶ್ ಎನ್.ಕೆ., ಅಜಿತ್,ವಿಶ್ವನಾಥ್ ದೇವಾಡಿಗ ಸೇರಿದಂತೆ ಅನೇಕರಿದ್ದರು.