Headlines

ಹಂತಕರನ್ನು ಕೂಡಲೇ ಬಂಧಿಸಿ: ಸಿ.ಎಂ * ಎದೆಭಾಗಕ್ಕೆ 2;ಹಣೆಗೆ1ಗುಂಡು * ಪರ್ತಕರ್ತೆ ಗೌರಿ ಲಂಕೇಶ್ ಹತ್ಯೆ * ಎಂಟು ಮಂದಿ ಶಿಕ್ಷಕರಿಗೆ ಸನ್ಮಾನ * ಸಾಧಕರಿಗೆ ಸನ್ಮಾನ * ಶಾಲೆ ಶಾಲೆಯಲ್ಲಿ ಗೆಜ್ಜೆಯ ನಿನಾದ! * ಋಣ ತೀರಿಸುವ ಕಾರ್ಯವಾಗಲಿ: ದೇವಿಪ್ರಸಾದ್ ಶೆಟ್ಟಿ * ಸಾರ್ವಜನಿಕ ಗಣೇಶೋತ್ಸವ * ಶ್ರೀ ಸೂರ್ಯನಾರಾಯಣ ಕ್ಷೇತ್ರದಲ್ಲಿ ಗಣೇಶೋತ್ಸವ * ಗ್ರಾಮ-ಪಟ್ಟಣಕ್ಕೆ ಒಂದೇ ಗಣೇಶನಿರಲಿ-ಟಿ.ಆರ್.ಸುರೇಶ್ * 54ನೇ ವರ್ಷದ ಮೂಡಬಿದಿರೆಯ ಗಣೇಶ * ಪೆರಿಂಜೆಯಲ್ಲಿ ಸಂಭ್ರಮದ ಗಣೇಶೋತ್ಸವ * ಕಲ್ಲಬೆಟ್ಟಿನಲ್ಲಿ ಪೂಜಿಸಿದ ವಿಘ್ನವಿನಾಯಕ * ಮೂಡುಬಿದಿರೆಯಲ್ಲಿ ರಕ್ಷಾಂಬಂಧನ * ಪ್ರೊ. ಕೆ.ಇ.ರಾಧಾಕೃಷ್ಣ ಮತ್ತು ಸತ್ಯಮಂಗಲ ಆರ್ ಮಹಾದೇವ ಅವರಿಗೆ ವರ್ಧಮಾನ ಪ್ರಶಸ್ತಿ ಘೋಷಣೆನ * ಇದು ಅತ್ಯಾಧುನಿಕ `ಪಾರಂಪರಿಕ’ಮಾದರಿಯ ಶ್ಯಾವಿಗೆ ಮಣೆ! * ವಿಂಶತಿ ಯಕ್ಷಕಲೋತ್ಸವಕ್ಕೆ ತೆರೆ * ಸಿ.ಐ.ಟಿ.ಯು: 9ನೇ ಬೀಡಿ ಕಾರ್ಮಿಕರ ರಾಜ್ಯ ಸಮ್ಮೇಳನ * ಪದ್ಮಪ್ರಸಾದ್ ಜೈನ್ ನೇಮಕ * ವಿಶೇಷ ಪೂಜೆ-ಅಭಿಷೇಕ *

ನ್ಯೂಜೆರ್ಸಿ ಹಿಂದೂ ಬಾಪ್ಸ್ ಮಂದಿರಕ್ಕೆ ಸ್ವಾಮೀಜಿಗೆ ಆಮಂತ್ರಣ

#moodbidri #jain#mut

ನಮ್ಮ ಪ್ರತಿನಿಧಿ ವರದಿ
ಮೂಡಬಿದಿರೆ ಜೈನಮಠಕ್ಕೆ ಬ್ಯಾಪ್ಸ್ ಗುಜರಾತು ಇಲ್ಲಿನ ಸ್ವಾಮಿ ನಾರಾಯಣ ಸಂಪ್ರದಾಯದ ಎಂಟು ಮಂದಿ ಸಾಧು ಸಂತರು ಭೇಟಿನೀಡಿ, ನ್ಯೂಜೆರ್ಸಿಯಲ್ಲಿರುವ ಹಿಂದೂ ಬಾಪ್ಸ್ ಮಂದಿರಕ್ಕೆ ಮೂಡಬಿದಿರೆ ಶ್ರೀಗಳು ಭೇಟಿನೀಡಲು ಸವಿನಯ ಆಮಂತ್ರಣ ನೀಡಿದರು. ಮೂಡಬಿದಿರೆ ಜೈನಮಠದ ಭಗವಾನ್ ಪಾಶ್ರ್ವನಾಥ ಸ್ವಾಮೀ, ಕೂಷ್ಮಾಂಡಿನೀ ದೇವಿಯ ದರ್ಶನ ಪಡೆದರು. ಇತಿಹಾಸ ಪ್ರಸಿದ್ಧ ಸಾವಿರ ಕಂಬದ ಬಸದಿಗೆ ತೆರಳಿದರು. ಪರಮಪೂಜ್ಯ ಸ್ವಸ್ತಿಶ್ರೀ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿಯವರನ್ನು ಭೇಟಿಮಾಡಿ ತಮ್ಮ ಸಂಸ್ಥೆಯು ಜಗತ್ತಿನಾದ್ಯಂತ 380ಕ್ಕೂ ಅಧಿಕ ಭಾರತೀಯ ಸಂಸ್ಕೃತಿಯ ಪ್ರಚಾರದ ಶ್ರದ್ಧಾಕೇಂದ್ರಗಳನ್ನು ಹೊಂದಿರುವುದಾಗಿ ತಿಳಿಸಿದರು.
ಸರಳ ವಿಜಯದಾಸ ಸಹರಂಗ್ ಪುರ್ , ಯು.ಪಿ. ಧ್ಯಾನೇಶ್ವರ್ ಮಹಾರಾಜ್ ಸೇರಿದಂತೆ ಎಂಟು ಮಂದಿ ಸಾಧುಗಳಿದ್ದರು. ಮೂಡಬಿದಿರೆ ಜೈನಮಠಕ್ಕೆ ಭೇಟಿ ಸಂದರ್ಭದಲ್ಲಿ ಪಟ್ಣಶೆಟ್ಟು ಸುದೇಶ್ ಕುಮಾರ್, ಬಾಹುಬಲಿ ಪ್ರಸಾದ್, ರಂಜನ್ ಪೂವಣಿ, ಶಾಂಭವ್ ಕುಮಾರ್ ಉಪಸ್ಥಿತರಿದ್ದರು.