Headlines

ಪುರಸಭೆಯ ಕಣ್ಣುತೆರೆಸಿದ ಜವನೆರ್ ಬೆದ್ರ! * ಪುರಸಭೆಗೆ ಸಾರ್ವಜನಿಕರಿಂದ ಹಿಡಿಶಾಪ * ಕಾರ್ಯಾಂಗ,ನ್ಯಾಯಾಂಗ,ಶಾಸಕಾಂಗದ ವೈಫಲ್ಯದ ವಿರುದ್ಧ ಹೋರಾಟ: ಸುದರ್ಶನ್ * ಬೆಸ್ಟ್ ಡ್ರಾಮೇಬಾಜ್ ಖ್ಯಾತಿಯ ಶ್ರೀಶ ಬೆಂಗಳೂರು ಅವರಿಗೆ ಗೌರವ ಸನ್ಮಾನ * ಮಾನವೀಯ ಸ್ಪಂದನೆ ಆಗಲೇಬೇಕಾಗಿದೆ… * 33ನೇ ವಾರ ಪೂರೈಸಿದ ಜವನೆರ್ ಬೆದ್ರದ ಸಾಧನೆ * ಆಧುನಿಕತೆಯಿಂದ ಆಶಾದಾಯಕ ಸ್ಥಿತಿ ಬಂದೊದಗಿದೆ: ಹರೀಶ್ ಶೆಣೈ * ಮೂಡಬಿದಿರೆಯಲ್ಲಿ ಸದ್ಭಾವನಾ ಗೋಷ್ಠಿ * ಭಾರತೀಯ ಜನತಾ ಪಾರ್ಟಿಯಿಂದ ಸ್ವಚ್ಛತೆಯ ಮಂತ್ರ * ಬಸದಿಗಳ ಬೀಡಲ್ಲಿ ಬಸದಿಗಳ ಸ್ವಚ್ಛತೆ * ಕಂಬಳಸಮಿತಿ ಸಭೆ * 30ನೇವಾರದ ಕ್ಲೀನ್ ಅಪ್ ಮೂಡಬಿದಿರೆ * ಸ್ವಚ್ಛತಾ ದಿನಾಚರಣರೆ * ಶಾಸಕ ಉಮಾನಾಥ್ ಎ.ಕೋಟ್ಯಾನ್ ವಿಶೇಷ ಸಂದರ್ಶನ * ಸಮ್ಮೇಳನದ ಸರ್ವಾಧ್ಯಕ್ಷರಾಗಿ ಡಾ. ಮಲ್ಲಿಕಾ ಎಸ್.ಘಂಟಿ, ಉದ್ಘಾಟಕರಾಗಿ ಡಾ.ಷ. ಶೆಟ್ಟರ್ * ಫಲವಿತರಿಸಿ ಹುಟ್ಟುಹಬ್ಬ ಆಚರಣೆ * ನುಡಿಸಿರಿಯಲ್ಲೊಂದು ಕೃಷಿಸಿರಿ:ಡಾ.ಆಳ್ವ * ಹುಲಿ-ಸ್ವಚ್ಛತೆಯೂ -ಗಣೇಶೋತ್ಸವವೂ-ಪುರಸಭೆಯೂ! * ಗಣೇಶ ದರ್ಶನ… * ಮೂಡಬಿದಿರೆಯಲ್ಲಿ ಗಣೇಶೋತ್ಸವದ ಗೌಜಿ ಶುರು… *

ನುಡಿಸಿರಿಯಲ್ಲೊಂದು ಕೃಷಿಸಿರಿ:ಡಾ.ಆಳ್ವ

#alvas#krishisri#alvasnudisiri#2018

ವಿಭಿನ್ನ-ಅತ್ಯಾಕರ್ಷಕ ಕೃಷಿ ಸಿರಿ ಕಾರ್ಯಕ್ರಮ

ಮೂಡಬಿದಿರೆ: ಆಳ್ವಾಸ್ ನುಡಿಸಿರಿಯ ಅಂಗವಾಗಿ ಆಳ್ವಾಸ್ ಕೃಷಿ ಸಿರಿ 2018 ಇದೇ ನವೆಂಬರ್ 16, 17 ಮತ್ತು 18ರಂದು ವಿದ್ಯಾಗಿರಿಯ ಸುಂದರಿ ಆನಂದ ಆಳ್ವ ಆವರಣದಲ್ಲಿ ವಿಭಿನ್ನವಾಗಿ ನಡೆಸಲುದ್ದೇಶಿಲಾಗಿದೆ. ಸಾಹಿತ್ಯ, ಸಂಸ್ಕೃತಿಗಳೊಡನೆ ಜನಜೀವನಕ್ಕೆ ಮೂಲಾಧಾರವಾಗಿರುವ ಕೃಷಿಯನ್ನೂ ಮುನ್ನೆಲೆಗೆ ತರಬೇಕೆಂಬ ಇರಾದೆಯಿಂದ ಈ ಸಮ್ಮೇಳನದಲ್ಲಿ ಕೃಷಿ ಸಂಬಂಧಿ ಚಟುವಟಿಕೆಗಳ ಪ್ರಾತ್ಯಕ್ಷಿಕೆ, ಪ್ರದರ್ಶನ ಹಾಗೂ ಮಾರಾಟಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಆಳ್ವಾಸ್ ನುಡಿಸಿರಿಯ ರೂವಾರಿ ಡಾ.ಎಂ.ಮೋಹನ ಆಳ್ವ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಫಿಶರೀಶ್ ಇಲಾಖೆ, ಕೃಷಿ ಇಲಾಖೆ, ಶ್ರೀ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ, ಕೃಷಿಕ ಸಮಾಜ, ಕೃಷಿ ವಿಚಾರ ವಿನಿಮಯ ಕೇಂದ್ರ ಮೂಡುಬಿದಿರೆ ಮತ್ತು ರೈತಸಂಘಗಳ ಸಹಯೋಗಗಳೊಂದಿಗೆ ಕಾರ್ಯಕ್ರಮ ಆಯೋಜಿಸಲಾಗಿದ್ದು ಹಿರಿಯ ರೈತಮುಖಂಡ, ಕೃಷಿಪ್ರೇಮಿ, ರೈತ ಹೋರಾಟಗಾರ ದಿ.ಕೆ.ಎಸ್.ಪುಟ್ಟಣ್ಣಯ್ಯನವರ ಗೌರವಾರ್ಥ ಆಳ್ವಾಸ್ ಕೃಷಿಸಿರಿ-ಕೃಷಿ ಮೇಳ ನಡೆಯುವ ಆವರಣಕ್ಕೆ ‘ಕೆ.ಎಸ್.ಪುಟ್ಟಣ್ಣಯ್ಯ ಆವರಣ’ ಎಂದು ನಾಮಕರಣ ಮಾಡಲಾಗಿದೆ ಎಂದರು.
ಆಳ್ವಾಸ್ ಕೃಷಿಸಿರಿ-2018ರ ವಿಶೇಷತೆಗಳು
ಈ ಸಮ್ಮೇಳನಕ್ಕಾಗಿ ಎರಡು ಎಕ್ರೆ ಪ್ರದೇಶದಲ್ಲಿ ಊರಿನ ಸಾಂಪ್ರದಾಯಿಕ ಮಾದರಿಯಲ್ಲಿ ತರಕಾರಿಗಳನ್ನು ಬೆಳೆಯಲಾಗಿದೆ. 44 ವಿಧದ ಬಿದಿರಿನ ಗಿಡಗಳು ಹಾಗೂ 40 ವಿಧದ ಬಿದಿರುಗಳ ಪ್ರದರ್ಶನ, ನ್ಯೂಜಿಲೇಂಡ್ ಮೂಲದ ವಿಶಿಷ್ಟ ಬಣ್ಣಗಳ ಹಾಗೂ ಆಹಾರಕ್ಕಾಗಿ ಬಳಸುವ ಸಸ್ಯಗಳ ಪ್ರದರ್ಶನ, ಪುಷ್ಪ ಪ್ರದರ್ಶನ ಮತ್ತು ತರಕಾರಿ ಹಾಗೂ ಹಣ್ಣುಗಳಲ್ಲಿ ಕಲಾಕೃತಿಗಳ ರಚನೆಯ ಪ್ರದರ್ಶನಗಳನ್ನು ಏರ್ಪಡಿಸಲಾಗಿದೆ. ಜೊತೆಗೆ ಕೃಷಿ ಸಾಹಿತ್ಯ-ಸಲಕರಣೆಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆಗಳಿಗೂ ಅವಕಾಶ ನೀಡಲಾಗಿದೆ. ವಿಶೇಷ ಆಕರ್ಷಣೆಯಲ್ಲಿ ಮತ್ಸ್ಯಮೇಳ, ಸಮುದ್ರ ಚಿಪ್ಪು ಪ್ರದರ್ಶನ, ಶ್ವಾನ ಪ್ರದರ್ಶನ. ಪಕ್ಷಿಗಳ ಪ್ರದರ್ಶನ, ಬೆಕ್ಕು ಪ್ರದರ್ಶನಗಳನ್ನು ಆಯೋಜಿಸಲಾಗಿದೆ.

 

ನವೆಂಬರ್ 15 ಗುರುವಾರದಂದು ಸಂಜೆ 5.00 ಗಂಟೆಗೆ ಉದ್ಘಾಟನೆಗೊಳ್ಳುವ ಆಳ್ವಾಸ್ ಕೃಷಿಸಿರಿ ಸಮ್ಮೇಳನವು ದಿನಾಂಕ 16.11.2018 ರಿಂದ 18.11.2018ರ ವರೆಗೆ 3 ದಿನಗಳು ನಡೆಯಲಿದ್ದು ಅಸಂಖ್ಯ ಕೃಷಿ ಸಂಬಂಧಿ-ಸಲಕರಣೆ-ಪರಿಕರ ಮತ್ತು ಕೃಷಿ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ ಮಳಿಗೆಗಳು ಒಂದೆಡೆ ಸೇರಲಿವೆ. ಆಸಕ್ತರ ವೀಕ್ಷಣೆ ಮತ್ತು ಖರೀದಿಗೆ ಇದೊಂದು ಸುವರ್ಣಾವಕಾಶವಾಗಿದೆ. ಜೊತೆಗೆ ಆಸಕ್ತರ ಮನತಣಿಸಲು ದಿನವಿಡೀ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಇಲ್ಲಿನ ವೇದಿಕೆಯಲ್ಲಿ ಹಮ್ಮಿಕೊಳ್ಳಲಾಗಿದೆ. ಮಳಿಗೆದಾರರು ಮತ್ತು ವೀಕ್ಷಕರೆಲ್ಲರಿಗೂ ಉಚಿತ ಊಟೋಪಚಾರದ ವ್ಯವಸ್ಥೆ ಇದೆ. ಆಸಕ್ತರಿಗೆ ವಸತಿಯ ವ್ಯವಸ್ಥೆಯನ್ನೂ ಮಾಡಲಾಗುವುದು.
ದಿನಂಪ್ರತಿ ಒಂದು ಲಕ್ಷಕ್ಕೂ ಮಿಕ್ಕಿ ಸಾಹಿತಿಗಳು, ಸಾಹಿತ್ಯ ಪ್ರೇಮಿಗಳು, ಕಲಾವಿದರು, ಕೃಷಿಕರು, ಕೃಷಿಪ್ರೇಮಿಗಳು, ಸಾರ್ವಜನಿಕರು, ಮಕ್ಕಳಿಂದ ತೊಡಗಿ ವಯೋವೃದ್ಧರವರೆಗೆ ವಿವಿಧ ವಯೋಮಾನದ, ವಿವಿಧ ಅಭಿರುಚಿಗಳ ಜನರನ್ನು ಈ ಸಮ್ಮೇಳನವು ಆಕರ್ಷಿಸುವುದರಲ್ಲಿ ಸಂಶಯವಿಲ್ಲ. ಅದಕ್ಕೆ ಸಂಬಂಧಿಸಿದ ಎಲ್ಲಾ ಕೆಲಸ ಕಾರ್ಯಗಳು ಭರದಿಂದ ಸಾಗುತ್ತಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಮೂಲಕ ಸಮ್ಮೇಳನವನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿಸಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ರಾಜವರ್ಮ ಬೈಲಂಗಡಿ, ಸುಭಾಶ್ಚಂದ್ರ ಚೌಟ, ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಕೃಷ್ಣ, ಸಂಪತ್ ಸಾಮ್ರಾಜ್ಯ ಉದಯ ದೇವಾಡಿಗ ಮೊದಲಾದವರಿದ್ದರು