Headlines

ಹಂತಕರನ್ನು ಕೂಡಲೇ ಬಂಧಿಸಿ: ಸಿ.ಎಂ * ಎದೆಭಾಗಕ್ಕೆ 2;ಹಣೆಗೆ1ಗುಂಡು * ಪರ್ತಕರ್ತೆ ಗೌರಿ ಲಂಕೇಶ್ ಹತ್ಯೆ * ಎಂಟು ಮಂದಿ ಶಿಕ್ಷಕರಿಗೆ ಸನ್ಮಾನ * ಸಾಧಕರಿಗೆ ಸನ್ಮಾನ * ಶಾಲೆ ಶಾಲೆಯಲ್ಲಿ ಗೆಜ್ಜೆಯ ನಿನಾದ! * ಋಣ ತೀರಿಸುವ ಕಾರ್ಯವಾಗಲಿ: ದೇವಿಪ್ರಸಾದ್ ಶೆಟ್ಟಿ * ಸಾರ್ವಜನಿಕ ಗಣೇಶೋತ್ಸವ * ಶ್ರೀ ಸೂರ್ಯನಾರಾಯಣ ಕ್ಷೇತ್ರದಲ್ಲಿ ಗಣೇಶೋತ್ಸವ * ಗ್ರಾಮ-ಪಟ್ಟಣಕ್ಕೆ ಒಂದೇ ಗಣೇಶನಿರಲಿ-ಟಿ.ಆರ್.ಸುರೇಶ್ * 54ನೇ ವರ್ಷದ ಮೂಡಬಿದಿರೆಯ ಗಣೇಶ * ಪೆರಿಂಜೆಯಲ್ಲಿ ಸಂಭ್ರಮದ ಗಣೇಶೋತ್ಸವ * ಕಲ್ಲಬೆಟ್ಟಿನಲ್ಲಿ ಪೂಜಿಸಿದ ವಿಘ್ನವಿನಾಯಕ * ಮೂಡುಬಿದಿರೆಯಲ್ಲಿ ರಕ್ಷಾಂಬಂಧನ * ಪ್ರೊ. ಕೆ.ಇ.ರಾಧಾಕೃಷ್ಣ ಮತ್ತು ಸತ್ಯಮಂಗಲ ಆರ್ ಮಹಾದೇವ ಅವರಿಗೆ ವರ್ಧಮಾನ ಪ್ರಶಸ್ತಿ ಘೋಷಣೆನ * ಇದು ಅತ್ಯಾಧುನಿಕ `ಪಾರಂಪರಿಕ’ಮಾದರಿಯ ಶ್ಯಾವಿಗೆ ಮಣೆ! * ವಿಂಶತಿ ಯಕ್ಷಕಲೋತ್ಸವಕ್ಕೆ ತೆರೆ * ಸಿ.ಐ.ಟಿ.ಯು: 9ನೇ ಬೀಡಿ ಕಾರ್ಮಿಕರ ರಾಜ್ಯ ಸಮ್ಮೇಳನ * ಪದ್ಮಪ್ರಸಾದ್ ಜೈನ್ ನೇಮಕ * ವಿಶೇಷ ಪೂಜೆ-ಅಭಿಷೇಕ *

ನಿರೀಕ್ಷೆಯ ಅಸತೋಮಾ ಸದ್ಗಮಯಾ…

mood_movie shoutin_vaarte

ಅಸತೋಮಾ ಸದ್ಗಮಯ ಚಿತ್ರದ ಚಿತ್ರೀಕರಣ ಮೂಡಬಿದಿರೆ ಪರಿಸರದಲ್ಲಿ ಭರದಿಂದ ಸಾಗುತ್ತಿದೆ. ವಾರ್ತೆ.ಕಾಂಗೆ ಚಿತ್ರತಂಡ ಮೊಟ್ಟಮೊದಲ ಸಂದರ್ಶನಕ್ಕೆ ಅವಕಾಶ ನೀಡಿತು. ಅದರ ಆಯ್ದ ಭಾಗ ನಮ್ಮ ಓದುಗರಿಗಾಗಿ…

ವಾರ್ತೆ ಎಕ್ಸ್ ಕ್ಲೂಸಿವ್ : ಹರೀಶ್ ಕೆ.ಆದೂರು.

ಮಟ ಮಟ ಮಧ್ಯಾಹ್ನ…ಏರುತ್ತಿರುವ ಬಿಸಿಲ ಝಳವನ್ನೂ ಲೆಕ್ಕಿಸದ ಗುಳಿಕೆನ್ನೆಯ ಹುಡುಗ ಕೈಯಲ್ಲೊಂದು ಕೆಂಪು ಕರ್ಚೀಫ್ ಹಿಡಿದು ಎಲ್ಲರಿಗೂ ತೋರಿಸುತ್ತಾನೆ… ನೋಡ ನೋಡುತ್ತಿದ್ದಂತೆಯೇ ಅದು ಉದ್ದನೆಯ ಸ್ಟೀಲ್ ರಾಡ್ ಆಗಿ ಪರಿವರ್ತನೆ!… ಆತನ ಕೈಯಲ್ಲಿ ಬಳುಕಿ ಬಾಗಿರುವ ಹಗ್ಗ ಕ್ಷಣಮಾತ್ರದಲ್ಲಿ ನೇರ ಸಲಾಕೆಯಂತಾಯಿತು… ಖಾಲಿ ಬುಟ್ಟಿಯಲ್ಲಿ ಘಮಘವಿಸುವ ಬಾಳೇಹಣ್ಣಿನ ಸೃಷ್ಠಿ…!ವ್ಹಾವ್… ಕುಪ್ಪಿಗ್ಲಾಸಿನ ತಳಭಾಗದಲ್ಲಿದ್ದ ಹಾಲು ನೋಡ ನೋಡುತ್ತಿದಂತೆಯೇ ಏರತೊಡಗಿತು… ಸೇರಿದ್ದ ಮಕ್ಕಳು, ಹಿರಿಯರೆಲ್ಲರ ಬಾಯಲ್ಲೂ ವಾವ್…ಎಂ ಉದ್ಗಾರ! ಚಪ್ಪಾಳೆ, ವಿಸಿಲ್…!!

 

mood_movie shoutin_vaarte1
ಮೂಡಬಿದಿರೆ ಸಮೀಪದ ಮಾರೂರು ಶ್ರೀ ಸತ್ಯನಾರಾಯಣ ಕಟ್ಟೆಯಲ್ಲಿ ಸೋಮವಾರ ಚಮತ್ಕಾರದ ಮ್ಯಾಜಿಕ್ ಶೋ… ಇದು ಅಂತಿಂಥ ಮ್ಯಾಜಿಕ್ ಶೋ ಅಲ್ಲ… ಮೂಡಬಿದಿರೆಯ ಐಕೇರ್ ಮೂವೀಸ್ ಹೊರತರುತ್ತಿರುವ ಪ್ರಪ್ರಥಮ ಚಿತ್ರ `ಅಸತೋಮಾ ಸದ್ಗಮಯಾ…’ದ ಚಿತ್ರೀಕರಣಕ್ಕಾಗಿ ನಡೆದ ಶೋ.

 
ಇಂದು ಕನ್ನಡ ಶಾಲೆಗಳು ಮುಚ್ಚುವ ಹಂತ ತಲುಪಿದೆ. ಶಿಕ್ಷಣ ವ್ಯವಸ್ಥೆಯಲ್ಲಿ ದೊಡ್ಡ ಮಟ್ಟದ ಬದಲಾವಣೆಯಾಗುತ್ತಿದೆ. ಏತನ್ಮಧ್ಯೆ ಕನ್ನಡ ಶಾಲೆಗಳ ಉಳಿವಿಗೆ ಸ್ಪಂದಿಸುವ ಹೋರಾಡುವ ಅತ್ಯಪೂರ್ವ ಕಲ್ಪನೆಗಳನ್ನು ಹೊತ್ತ ಬಹುನಿರೀಕ್ಷೆಯ ಸಮಾಜಮುಖೀ ಚಿತ್ರದ ಒಂದು ದೃಶ್ಯದ ಚಿತ್ರೀಕರಣ ಸಮಾಜ ಬಾಂಧವರ ಸಮ್ಮುಖದಲ್ಲಿ ನಡೆಯಿತು. ಕಳೆದೊಂದು ವಾರದಿಂದ ಮೂಡಬಿದಿರೆಯ ಆಸುಪಾಸು, ಮಂಗಳೂರಿನಲ್ಲಿ ಈ ಚಿತ್ರದ ಚಿತ್ರೀಕರಣ ಕೂಲ್ ಆಗಿ ನಡೆದಿದೆ. ಮುಂದಿನ ಒಂದು ತಿಂಗಳ ಕಾಲ ಮೂಡಬಿದಿರೆಯ ಆಸುಪಾಸು, ಬೆಂಗಳೂರು, ಮಂಡ್ಯ ಪರಿಸರದಲ್ಲಿ ಚಿತ್ರೀಕರಣ ನಡೆಯಲಿದೆ ಎಂಬ ಮಾಹಿತಿ ಚಿತ್ರತಂಡ ನೀಡಿದೆ.
ಮೂಡಬಿದಿರೆ ಪರಿಸರದವರೇ ಆದ ಉದ್ಯಮಿ ಅಶ್ವಿನ್ ಈ ಚಿತ್ರದ ನಿರ್ಮಾಪಕ. ಬೆಳ್ತಂಗಡಿ ತಾಲೂಕಿನ ವೇಣೂರು ಬಳಿಯ ಅಂಡಿಂಜೆ ವಾಸಿ ರಾಜೇಶ್ ವೇಣೂರು ಚಿತ್ರದ ನಿರ್ದೇಶಕ. ರಾಜೇಶ್ ಚಿತ್ರೋದ್ಯಮದಲ್ಲಿ ಆಸಕ್ತಿ ಹೊಂದಿದ ವ್ಯಕ್ತಿ. ಕಿರುಚಿತ್ರ, ಜಾಹೀರಾತು ಗಳನ್ನು ನಿರ್ಮಾಣ ಮಾಡಿ ಪಳಗಿದವರು. ಇದೀಗ ಚೊಚ್ಚಲ ಚಿತ್ರವನ್ನು ಅದ್ಭುತವಾಗಿ ಹೊರತರುವ ನಿಟ್ಟಿನಲ್ಲಿ ಅಹೋರಾತ್ರಿ ಶ್ರಮಿಸುತ್ತಿದ್ದಾರೆ.
ರಂಗಿತರಂಗಿ ಖ್ಯಾತಿಯ ರಾಧಿಕಾ ಚೇತನ್ ಮುಖ್ಯ ಭೂಮಿಕೆಯಲ್ಲಿದ್ದಾರೆ. ‘ಮಾರ್ಚ್ 22’ ಕನ್ನಡ ಚಲನಚಿತ್ರದ ನಟ ಕಿರಣ್ ರಾಜ್ ಈ ಚಿತ್ರದಲ್ಲಿ ನಾಯಕ ನಟನಾಗಿ ಮಿಂಚಲಿದ್ದಾರೆ.
ಒಟ್ಟು 5ಹಾಡುಗಳಿದ್ದು ಸಲೀಂ ಪುತ್ತೂರು ಹಾಡು ರಚಿಸಿ ನಿರ್ದೇಶಿಸಿದ್ದಾರೆ. ಹಾಡಿನ ಚಿತ್ರೀಕರಣ ಸದ್ಯದಲ್ಲೇ ನಡೆಯಲಿದೆ.
“ಇಂದು ಸಂಬಂಧಗಳಿಗೆ ಬೆಲೆ ಕಡಿಮೆಯಾಗುತ್ತಿದೆ. ನಮ್ಮ ಹಿರಿಯರು ಸಂಬಂಧಗಳಿಗೆ ಬೆಲೆಕೊಟ್ಟು ಬದುಕಿದರು. ಇಂದಿನ ಜನಾಂಗ ಕೇವಲ ಜಾಣ್ಮೆ, ಶಿಕ್ಷಣ, ಉದ್ಯೋಗ, ಶ್ರೀಮಂತಿಕೆಗೆ ಬೆಲೆ ಕೊಡುತ್ತಿದ್ದಾರೆ. ಇಂದಿನ ಮಕ್ಕಳಲ್ಲಿ ಭಾವನೆಗಳಿಗೆ ಸ್ಪಂದಿಸುವ ಗುಣ ಕಡಿಮೆಯಾಗುತ್ತಿದೆ. ಮೌಲ್ಯಗಳ ಕೊರತೆ ಕಾಣತೊಡಗಿದೆ. ಈ ಅಂಶಗಳನ್ನು ಗಮನದಲ್ಲಿರಿಸಿಕೊಂಡು ವಿಷಯಾಧಾರಿತ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದೇವೆ. ಒಂದು ವಾರಗಳ ಕಾಲ ನಡೆದ ಚಿತ್ರೀಕರಣ ಭರವಸೆ ಮೂಡಿಸಿದೆ. ಉತ್ತಮ ರೀತಿಯಲ್ಲಿ ಇದು ಹೊರಬರುವುದು ಖಂಡಿತ” ಎಂದು ಚಿತ್ರ ನಿರ್ದೇಶಕ ರಾಜೇಶ್ `ವಾರ್ತೆ.ಕಾಂ’ಗೆ ತಿಳಿಸಿದ್ದಾರೆ. ಯಾವುದೇ ರೀತಿಯ ಫೈಟ್ ಇದರಲ್ಲಿಲ್ಲ. ಒಂದುಷ್ಟು ಹೊಸ ಹೊಸ ವಿಚಾರಗಳನ್ನು ಸಮಾಜಕ್ಕೆ ತಿಳಿಸುವ ಪ್ರಯತ್ನ ಮಾಡುತ್ತೇವೆ. ಒಟ್ಟಿನಲ್ಲಿ ಈಗಾಗಲೇ ಜನತೆಗೆ ಇದರ ಬಗ್ಗೆ ನಿರೀಕ್ಷೆ ಮೂಡತೊಡಗಿರುವುದು ಸತ್ಯ ಎಂದು ಹೇಳಿದ್ದಾರೆ.

 

 

 

 

ಉತ್ತಮ ತಂಡದೊಂದಿಗೆ ಕೆಲಸಮಾಡುವ ಅವಕಾಶ ದೊರೆತಿದೆ. ಸಮಾಜದಲ್ಲಿ ಈ ಚಿತ್ರ ಒಂದು ಹೊಸ ಸಂಚಲನ ಮೂಡಿಸುವುದರಲ್ಲಿ ಸಂದೇಹವಿಲ್ಲ. ಜನರ ಭರವಸೆಗಳನ್ನು ಹುಸಿಗೊಳಿಸುವುದಿಲ್ಲ
– ರಾಜೇಶ್ ವೇಣೂರು
ಚಿತ್ರ ನಿರ್ದೇಶಕ.

mood_movie shoutin_vaarte_directre