Headlines

ಕಣ್ಣುತೆರೆಸಿದ ಜವನೆರ್ ಬೆದ್ರ ಸಂಘಟನೆ * ಯೋಧರ ಮನೆಯಲ್ಲಿ ಬೆಳಗಿದ ದೀಪ! * ಯಶಸ್ವೀ 36ನೇವಾರ ಪೂರೈಸಿದ ಕ್ಲೀನ್ ಅಪ್ ಮೂಡಬಿದಿರೆ * ರಾಜ್ಯಮಟ್ಟದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟ ಆರಂಭ * ಅಳಿಯೂರಿನಲ್ಲಿ ಮೇಳೈಸಲಿದೆ ಕ್ರೀಡಾಹಬ್ಬ.! * ರಾಷ್ಟ್ರಮಟ್ಟಕ್ಕೆ ಆಯ್ಕೆಯಾಯ್ತು ಹಳ್ಳಿ ಹುಡುಗರ ಅನ್ವೇಷಣೆ! * ಶಿರ್ಲಾಲು: ಹೊಸ ಶಾಸನ ಪತ್ತೆ * ಸಾವಿರ ಕಂಬದ ಬಸದಿಯ ಸ್ವಚ್ಛತೆ * ಪುರಸಭೆಯ ಕಣ್ಣುತೆರೆಸಿದ ಜವನೆರ್ ಬೆದ್ರ! * ಪುರಸಭೆಗೆ ಸಾರ್ವಜನಿಕರಿಂದ ಹಿಡಿಶಾಪ * ಕಾರ್ಯಾಂಗ,ನ್ಯಾಯಾಂಗ,ಶಾಸಕಾಂಗದ ವೈಫಲ್ಯದ ವಿರುದ್ಧ ಹೋರಾಟ: ಸುದರ್ಶನ್ * ಬೆಸ್ಟ್ ಡ್ರಾಮೇಬಾಜ್ ಖ್ಯಾತಿಯ ಶ್ರೀಶ ಬೆಂಗಳೂರು ಅವರಿಗೆ ಗೌರವ ಸನ್ಮಾನ * ಮಾನವೀಯ ಸ್ಪಂದನೆ ಆಗಲೇಬೇಕಾಗಿದೆ… * 33ನೇ ವಾರ ಪೂರೈಸಿದ ಜವನೆರ್ ಬೆದ್ರದ ಸಾಧನೆ * ಆಧುನಿಕತೆಯಿಂದ ಆಶಾದಾಯಕ ಸ್ಥಿತಿ ಬಂದೊದಗಿದೆ: ಹರೀಶ್ ಶೆಣೈ * ಮೂಡಬಿದಿರೆಯಲ್ಲಿ ಸದ್ಭಾವನಾ ಗೋಷ್ಠಿ * ಭಾರತೀಯ ಜನತಾ ಪಾರ್ಟಿಯಿಂದ ಸ್ವಚ್ಛತೆಯ ಮಂತ್ರ * ಬಸದಿಗಳ ಬೀಡಲ್ಲಿ ಬಸದಿಗಳ ಸ್ವಚ್ಛತೆ * ಕಂಬಳಸಮಿತಿ ಸಭೆ * 30ನೇವಾರದ ಕ್ಲೀನ್ ಅಪ್ ಮೂಡಬಿದಿರೆ *

`ನಾಡ ಪ್ರೇಮಿ’ಖ್ಯಾತಿಯ ಬಳ್ಳುಳ್ಳಾಯ ಇನ್ನಿಲ್ಲ

#mv#ballullaya#naadapremi#pressreporter#vaarte

ವಾರ್ತೆ.ಕಾಂ ಬಗ್ಗೆ ಮೆಚ್ಚುಗೆ ಸೂಚಿಸಿದ್ದರು!

ಹಿರಿಯ ಪತ್ರಕರ್ತ ಮೂಡುಮನೆ ವಾಸುದೇವ ಬಳ್ಳುಳ್ಳಾಯ(79)ಅಲ್ಪಕಾಲದ ಅಸೌಖ್ಯದಿಂದ ಹೆಬ್ರಿಯ ಖಾಸಗೀ ಆಸ್ಪತ್ರೆಯಲ್ಲಿ ಬುಧವಾರ ಸಾಯಂಕಾಲ ಮೃತಪಟ್ಟಿದ್ದಾರೆ. ಸುಮಾರು ಮೂರು ದಶಕಗಳಿಗೂ ಅಧಿಕ ಕಾಲ ಪತ್ರಿಕೋದ್ಯಮ ವೃತ್ತಿ ನಡೆಸಿದ ಹಿರಿಯ ಅನುಭವೀ ಪತ್ರಕರ್ತರಾಗಿದ್ದರು. ನಾಡಪ್ರೇಮಿ ವಾರಪತ್ರಿಕೆಯ ಸಂಪಾದಕ, ಪ್ರಕಾಶಕರಾಗಿ ಅನುಭವ ಪಡೆದ ಬಳ್ಳುಳ್ಳಾಯರು ತದನಂತರದಲ್ಲಿ ಡೆಕ್ಕನ್ ಹೆರಾಲ್ಡ್ ಪ್ರಜಾವಾಣಿ ಪತ್ರಿಕೆಯ ಕಾಸರಗೋಡು ಪ್ರತಿನಿಧಿಯಾಗಿ ಚಿರಪಚಿತರಾದರು. ಕಾಸರಗೋಡು ಕರ್ನಾಟಕ ಸಮಿತಿಯ ಸಂಚಾಲಕರಾಗಿದ್ದುಕೊಂಡು ಹಲವು ಹೋರಾಟಗಳಲ್ಲಿ ತನ್ನನ್ನು ತೊಡಗಿಸಿಕೊಂಡವರು.
ಎಂ.ವಿ.ಬಳ್ಳುಳ್ಳಾಯ ಎಂದೇ ಖ್ಯಾತಿ ಪಡೆದಿದ್ದ ವಾಸುದೇವ ಬಳ್ಳುಳ್ಳಾಯರು ಕೋಟೂರು ಕಾರ್ತಿಕೇಯ ಅನುದಾನಿತ ಪ್ರಾಥಮಿಕ ಶಾಲೆಯ ಮೇನೇಜರ್ ಆಗಿಯೂ ಕರ್ತವ್ಯ ನಿರ್ವಹಿಸಿದ್ದರು. ಕಾರ್ತಿಕೇಯ ಕಲಾನಿಲಯದ ಸಕ್ರಿಯ ಸದಸ್ಯರಾಗಿದ್ದುಕೊಂಡು ರಂಗ ಪ್ರಯೋಗಗಳನ್ನು ನಡೆಸಿದ ಕೀರ್ತಿಯೂ ಅವರಿಗೆ ಸಲ್ಲುತ್ತದೆ. ಕಾಸರಗೋಡಿನ ಮುಳಿಯಾರು ಗ್ರಾಮದ ಹೆಸರಾಂತ ಮೂಡುಮನೆ ಮನೆತನದವಾಗಿದ್ದ ಎಂ.ವಿ.ಬಳ್ಳುಳ್ಳಾಯರು ಓರ್ವ ಪ್ರಭಾವೀ ಪತ್ರಕರ್ತರಾಗಿ ಗುರುತಿಸಲ್ಪಟ್ಟಿದ್ದರು. ನೇರ ನಿಷ್ಟುರವಾದಿಯಾದ ಎಂ.ವಿ.ಬಿ. ಅವರ ಪ್ರಕರಬರಹಗಳು ಮಾಧ್ಯಮ ರಂಗದಲ್ಲಿ ಅನೇಕ ಸಂಚಲನವನ್ನೇ ಮೂಡಿಸಿತ್ತು.
ಪುನರ್ಜನ್ಮ: ದಶಕದ ಹಿಂದೆಯೇ ಅನಾರೋಗ್ಯದಿಂದ ಬಳಲುತ್ತಿದ್ದ ಸಂದರ್ಭದಲ್ಲಿ ತನ್ನ ಬದುಕಿನ ಯಾನವನ್ನು ನೆನಪಿಸುವ `ಪುನರ್ಜನ್ಮ’ಕೃತಿಯೊಂದನ್ನು ಹೊರತಂದಿದ್ದ ಎಂ.ವಿ.ಬಿ ಅಪಾರ ಅಭಿಮಾನಿಗಳನ್ನು ಹೊಂದಿದ್ದರು.
ಉಡುಪಿಯ ನಂಟು: ಕಳೆದ ಐದು ವರ್ಷಗಳಿಂದ ಎಂ.ವಿ.ಬಳ್ಳುಳ್ಳಾಯರು ತಮ್ಮ ನಿವೃತ್ತಿ ಜೀವನವನ್ನು ಉಡುಪಿಯಲ್ಲಿ ಕಳೆದಿದ್ದಾರೆ. ಕಾಸರಗೋಡು ಹಾಗೂ ಕೇರಳದಲ್ಲಿಯೇ ಜೀವಿತಾವಧಿಯ ಬಹುಕಾಲವನ್ನು ಕಳೆದಿದ್ದ ಬಳ್ಳುಳ್ಳಾಯರು ತದನಂತರ ದಕ್ಷಿಣ ಕನ್ನಡ ಜಿಲ್ಲೆಯ ನಾರಾವಿಯಲ್ಲಿರುವ ತಮ್ಮ ಸಹೋದರಿ ಲಕ್ಷ್ಮೀ ಅಮ್ಮನವರೊಂದಿಗೆ ನಿರಂತರ ಒಡನಾಟದಲ್ಲಿದ್ದರು. ನಿವೃತ್ತ ಜೀವನದುದ್ದಕ್ಕೂ ವಿವಿಧ ಕ್ಷೇತ್ರದರ್ಶನ, ಹಿರಿಯ, ಅನುಭವಿಗಳೊಂದಿಗೆ ಸಂಪರ್ಕ, ಒಡನಾಟವನ್ನಿರಿಸಿಕೊಂಡಿದ್ದರು.29-11-1939 ಜನಿಸಿದ ಬಳ್ಳುಳ್ಳಾಯರಿಗೆ 2ಮಂದಿ ಸಹೋದರರು, 4ಮಂದಿ ಸಹೋದರಿಯರು.
ಉದ್ದ ಚೀಲವೂ ಕೈಯಲ್ಲೊಂದು ಸಿಗಾರ್ : ಉದ್ದ ಚೀಲವೂ (ಜೋಳಿಗೆ) ಕೈಯಲ್ಲೊಂದು ಸಿಗಾರ್, ಬಿಳಿ ಗಡ್ಡ ಬಿಳಿಯಂಗಿ , ತಪ್ಪದ ನ್ಯೂಸ್ ಪೇಪರ್ ಇದು ಬಳ್ಳುಳ್ಳಾಯರ ಗೆಟಪ್. ಎಲ್ಲೇ ಹೋಗುವುದಾರರೂ ಬಳ್ಳುಳ್ಳಾಯರಲ್ಲಿ ಇವಿಷ್ಟು ವಿಚಾರಗಳಿದ್ದೇ ಇರುತ್ತಿತ್ತು. ತಮ್ಮ ಆತ್ಮೀಯರೊಂದಿಗೆ ನಿಕಟ ಸಂಪರ್ಕಹೊಂದಿದ್ದ ಬಳ್ಳುಳ್ಳಾಯರಿಗೆ ಕಾಸರಗೋಡಿನ ಯಕ್ಷತೂಣೀರ ಸಂಪ್ರತಿಷ್ಠಾನದಿಂದ ಸನ್ಮಾನ ಸೇರಿದಂತೆ ಹಲವು ಸನ್ಮಾನಗಳು ಸಂದಿವೆ.
ದೇಹದಾನದ ಚಿಂತನೆ: ಜೀವಿತಾನಂತರ ತಾನು ಯಾರಿಗೂ ಹೊರೆಯಾಗಿರಬಾರದೆಂಬ ಭಾವನೆ ಬಳ್ಳುಳ್ಳಾಯರಿಗಿತ್ತು. ಈ ಕಾರಣಕ್ಕಾಗಿಯೇ ದೇಹದಾನದ ಚಿಂತನೆಯನ್ನೂ ಅವರು ಮಾಡಿದ್ದರು. ಸತ್ತ ನಂತರವೂ ತಾನು ಇನ್ನೊಬ್ಬರಿಗೆ ಪ್ರಯೋಜನವಾಗಬೇಕೆಂಬ ದೃಷ್ಟಿಯಿಂದ `ಮೆಡಿಕಲ್ ಕಾಲೇಜಿಗೆ’ದೇಹ ದಾನಮಾಡುವ ಇಂಗಿತವನ್ನು ತಮ್ಮ ಆಪ್ತರೊಡನೆ ಹಂಚಿಕೊಂಡಿದ್ದರು.
ಸಂತಾಪ: ಹಿರಿಯ ಪತ್ರಕರ್ತ ಎಂ.ವಿ.ಬಿ ಅವರ ನಿಧನಕ್ಕೆ ಅವರ ಬಾಲ್ಯ ಸ್ನೇಹಿತ ಕಲಾವಿದ ಕೆ.ಚಂದ್ರಶೇಖರ ಭಟ್ ಆದೂರು, ಕೆ.ಗೋಪಾಲಕೃಷ್ಣ ಭಟ್ ಹಾಗೂ ಯಕ್ಷತೂಣೀರ ಸಂಪ್ರತಿಷ್ಠಾನದ ಸರ್ವ ಸದಸ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.