Headlines

ಕಣ್ಣುತೆರೆಸಿದ ಜವನೆರ್ ಬೆದ್ರ ಸಂಘಟನೆ * ಯೋಧರ ಮನೆಯಲ್ಲಿ ಬೆಳಗಿದ ದೀಪ! * ಯಶಸ್ವೀ 36ನೇವಾರ ಪೂರೈಸಿದ ಕ್ಲೀನ್ ಅಪ್ ಮೂಡಬಿದಿರೆ * ರಾಜ್ಯಮಟ್ಟದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟ ಆರಂಭ * ಅಳಿಯೂರಿನಲ್ಲಿ ಮೇಳೈಸಲಿದೆ ಕ್ರೀಡಾಹಬ್ಬ.! * ರಾಷ್ಟ್ರಮಟ್ಟಕ್ಕೆ ಆಯ್ಕೆಯಾಯ್ತು ಹಳ್ಳಿ ಹುಡುಗರ ಅನ್ವೇಷಣೆ! * ಶಿರ್ಲಾಲು: ಹೊಸ ಶಾಸನ ಪತ್ತೆ * ಸಾವಿರ ಕಂಬದ ಬಸದಿಯ ಸ್ವಚ್ಛತೆ * ಪುರಸಭೆಯ ಕಣ್ಣುತೆರೆಸಿದ ಜವನೆರ್ ಬೆದ್ರ! * ಪುರಸಭೆಗೆ ಸಾರ್ವಜನಿಕರಿಂದ ಹಿಡಿಶಾಪ * ಕಾರ್ಯಾಂಗ,ನ್ಯಾಯಾಂಗ,ಶಾಸಕಾಂಗದ ವೈಫಲ್ಯದ ವಿರುದ್ಧ ಹೋರಾಟ: ಸುದರ್ಶನ್ * ಬೆಸ್ಟ್ ಡ್ರಾಮೇಬಾಜ್ ಖ್ಯಾತಿಯ ಶ್ರೀಶ ಬೆಂಗಳೂರು ಅವರಿಗೆ ಗೌರವ ಸನ್ಮಾನ * ಮಾನವೀಯ ಸ್ಪಂದನೆ ಆಗಲೇಬೇಕಾಗಿದೆ… * 33ನೇ ವಾರ ಪೂರೈಸಿದ ಜವನೆರ್ ಬೆದ್ರದ ಸಾಧನೆ * ಆಧುನಿಕತೆಯಿಂದ ಆಶಾದಾಯಕ ಸ್ಥಿತಿ ಬಂದೊದಗಿದೆ: ಹರೀಶ್ ಶೆಣೈ * ಮೂಡಬಿದಿರೆಯಲ್ಲಿ ಸದ್ಭಾವನಾ ಗೋಷ್ಠಿ * ಭಾರತೀಯ ಜನತಾ ಪಾರ್ಟಿಯಿಂದ ಸ್ವಚ್ಛತೆಯ ಮಂತ್ರ * ಬಸದಿಗಳ ಬೀಡಲ್ಲಿ ಬಸದಿಗಳ ಸ್ವಚ್ಛತೆ * ಕಂಬಳಸಮಿತಿ ಸಭೆ * 30ನೇವಾರದ ಕ್ಲೀನ್ ಅಪ್ ಮೂಡಬಿದಿರೆ *

ನಾಟ್ಯ ಮಯೂರಿ…

#picok#special#vaartenews

 ಸ್ಟೂಡೆಂಟ್ ರಿಪೋರ್ಟ್: ವಿಶೇಷ ಸುದ್ದಿ

ನವಿಲು ನಮ್ಮ ರಾಷ್ಟ್ರಪಕ್ಷಿ. ಇದು ಬಹು ವರ್ಣಮಯವಾದ ಹಕ್ಕಿ ಹಂಸದ ಆಕಾರದಲ್ಲಿರುತ್ತದೆ. ಬೀಸಣಿಗೆಯಾಕಾರದ ಗರಿಗಳ ಗುಂಪು ಹೊಂದಿದೆ. ಕಣ್ಣ ಕೆಳಗೆ ಬಿಳಿ ಮಚ್ಚೆ ಇದೆ.ಉದ್ದವಾದ , ಅದರಲ್ಲೂ ತೆಳುವಾದ ಕೊರಳನ್ನು ಹೊಂದಿದೆ. ಹೆಣ್ಣು ನವಿಲುಗಿಂತ ಗಂಡು ನವಿಲು ತುಂಬಾ ಸುಂದರವಾಗಿರುತ್ತದೆ. ಆಕರ್ಷಕ ಹೊಳೆಯುವ  ನೀಲಿ ಬಣ್ಣದ ಎದೆ ಮತ್ತು ಕೊರಳು, ಆಕರ್ಷಕ ರೂಪ ಆಕಾರ ಹೊಂದಿದ ನೀಳನೆಯ ಪಕ್ಷಿ. ಉದ್ದುದ್ದ ಗರಿಗಳಿಂದೊಡಗೂಡಿದ ಬಾಲ.ನವಿಲಿನ ನೃತ್ಯವೇ ನಯನ ಮನೋಹರ. ಮನಮೋಹಕ ನೃತ್ಯದ ಮೂಲಕ ಎಂತಹವರನ್ನೂ ಮೂಕ ವಿಸ್ಮಿತರನ್ನಾಗಿ ಮಾಡುತ್ತದೆ ಈ ನವಿಲು.  ಮಳೆ ಮೋಡ ಮುಸುಕಿದಾಗ  ಈ ಪಕ್ಷಿ ಸಂತಸದಿಂದ ಕುಣಿಯಲಾರಂಭಿಸುತ್ತದೆ.  ಸಾವಿರ ಕಣ್ಣುಗಳಿರುವ ಗರಿಗಳನ್ನು ಹರಡಿಕೊಂಡು ತನ್ನಷ್ಟಕ್ಕೇ ತಾನು ನಲಿಯುವ ನೋಟದಿಂದಲೇ ನೋಡುಗರಿಗೆ ಆನಂದವನ್ನು ಕೊಡುವ ಪಕ್ಷಿ ಇದು.  ತನ್ನ ನಡಿಗೆಯಿಂದ ಮಯೂರಿ ಎಂದು ಕರೆಯಲ್ಪಡುವ ಸುಂದರ ಪಕ್ಷಿ ನಮ್ಮ ಹೆಮ್ಮೆಯ ರಾಷ್ಟ್ರಪಕ್ಷಿಯೆನಿಸಿದೆ.
a-peacock
ಹಿಂದಿನ ಕಾಲದಲ್ಲಿ ಕಾಡು-ಮೇಡು, ಗದ್ದೆಗಳು ತುಂಬಾ ಇದ್ದುದ್ದರಿಂದ ನವಿಲುಗಳ ಸಮೂಹಗಳು ನೋಡಲು ಬಹಳ ಸಿಗುತ್ತಿತ್ತು. ಆದರೆ ಈಗಿನ ಪರಿಸ್ಥಿತಿಯಲ್ಲಿ ಮಾನವನು ತನ್ನ ಸ್ವಂತ ಅಭಿವೃದ್ಧಿಗಾಗಿ ಅರಣ್ಯಗಳನ್ನೆಲ್ಲಾ ಕಡಿದು, ವಾಣಿಜ್ಯ ಬಳಕೆಗೆ ಬಳಸಲು ಆರಂಬಿಸಿದ್ದರಿಂದಾಗಿ ಈ ಪಕ್ಷಿಯ ಸಂತತಿಯೂ ಕಡಿಮೆಯಾಗತೊಡಗಿದೆ. ಅತ್ಯಾಕರ್ಷಕವಾದ ನವಿಲು ಸಂತತಿ ಅಳಿಯದಂತೆ ಉಳಿಸುವ ಕಾರ್ಯ ಆಗಬೇಕಾಗಿದೆ.  ಗಂಡು ನವಿಲು ಕಾಮನ ಬಿಲ್ಲಿನ ಬಣ್ಣ ಗಳಂತೆ ಆಕರ್ಷಕವಾದ ಗರಿಗಳನ್ನು ಹೊಂದಿರುತ್ತದೆ. ಅವುಗಳಲ್ಲಿ ಮುಖ್ಯವಾಗಿ ನೀಲಿ ಹಸಿರು ಮಿಶ್ರಿತ ಅಥವಾ ಹೊಳಪಿನ ಹಸಿರು ಬಣ್ಣದ ಗರಿ ಗಳನ್ನು ಹೊಂದಿರುತ್ತದೆ. ಉದ್ದನೆಯ ಗರಿಗಳ ಗುಚ್ಛವು ಹೃದಯದ ಆಕಾರದಲ್ಲಿ ಕೊನೆಗೊಂಡಿರುತ್ತದೆ. ಅಲ್ಲದೆ ಅದರ ಮಧ್ಯದಲ್ಲಿ ಕಣ್ಣಿನ ಆಕಾರವಿರುತ್ತದೆ. ಹೆಣ್ಣು ನವಿಲನ್ನು ಆಕರ್ಷಿಸಲು ಗಂಡು ನವಿಲು ಗರಿಗೆದರಿ ನೃತ್ಯ ಮಾಡುವಾಗ ಇದು ಸುಂದರವಾಗಿ ಕಾಣುತ್ತದೆ

ಗಂಡು ನವಿಲು ಬಹಳ ಸುಂದರವಾಗಿ, ಆಕರ್ಷಕವಾಗಿರುತ್ತದೆ. ಹೆಣ್ಣು ನವಿಲು ಗಂಡು ನವಿಲಿನಷ್ಟು ಆಕರ್ಷಕವಾಗಿರುವುದಿಲ್ಲ. ಇವು ಮಸುಕಾದ ಹಸಿರು, ಬೂದು ಮತ್ತು ಕಂದು ಬಣ್ಣ ಮಿಶ್ರಿತ ಗರಿಗಳ ಗುಚ್ಛವನ್ನು ಹೊಂದಿರುತ್ತವೆ. ಆದರೆ ಗಂಡು ಮತ್ತು ಹೆಣ್ಣು ನವಿಲುಗಳೆರಡೂ ತಮ್ಮ ತಲೆಯ ಮೇಲೆ ಮುಕುಟವನ್ನು ಹೊಂದಿರುತ್ತವೆ. ಕೆಲವೊಮ್ಮೆ ಹೆಣ್ಣು ನವಿಲು ತನ್ನ ಮುಕುಟ ಅಥವಾ ಚೊಟ್ಟಿ ಅಥವಾ ಜುಟ್ಟನ್ನು ತನ್ನ ಮರಿಗಳ ರಕ್ಷಣೆಗಾಗಿ ಉಪಯೋಗಿಸುತ್ತದೆ.

 

ಸುಸ್ಮಿತಾ

ಸರಕಾರಿ ಪ್ರಥಮ ದರ್ಜೆ ಕಾಲೇಜು, ಸಿದ್ದಕಟ್ಟೆ