Headlines

ಕಂಬಳಸಮಿತಿ ಸಭೆ * 30ನೇವಾರದ ಕ್ಲೀನ್ ಅಪ್ ಮೂಡಬಿದಿರೆ * ಸ್ವಚ್ಛತಾ ದಿನಾಚರಣರೆ * ಶಾಸಕ ಉಮಾನಾಥ್ ಎ.ಕೋಟ್ಯಾನ್ ವಿಶೇಷ ಸಂದರ್ಶನ * ಸಮ್ಮೇಳನದ ಸರ್ವಾಧ್ಯಕ್ಷರಾಗಿ ಡಾ. ಮಲ್ಲಿಕಾ ಎಸ್.ಘಂಟಿ, ಉದ್ಘಾಟಕರಾಗಿ ಡಾ.ಷ. ಶೆಟ್ಟರ್ * ಫಲವಿತರಿಸಿ ಹುಟ್ಟುಹಬ್ಬ ಆಚರಣೆ * ನುಡಿಸಿರಿಯಲ್ಲೊಂದು ಕೃಷಿಸಿರಿ:ಡಾ.ಆಳ್ವ * ಹುಲಿ-ಸ್ವಚ್ಛತೆಯೂ -ಗಣೇಶೋತ್ಸವವೂ-ಪುರಸಭೆಯೂ! * ಗಣೇಶ ದರ್ಶನ… * ಮೂಡಬಿದಿರೆಯಲ್ಲಿ ಗಣೇಶೋತ್ಸವದ ಗೌಜಿ ಶುರು… * 28ನೇ ವಾರದ ಸ್ವಚ್ಛತಾ ಅಭಿಯಾನ * ಈ ಕರ್ಮಕಾಂಡಕ್ಕೆ ಯಾರು ಬಲಿ…? * `ಗುಣಮಟ್ಟದ ಶಿಕ್ಷಣ-ಸೂಕ್ತ ಉದ್ಯೋಗಕ್ಕೆ ಒತ್ತು’ * 27ನೇ ವಾರದ ಕ್ಲೀನ್ ಅಪ್ ಮೂಡಬಿದಿರೆ ಸಂಪನ್ನ * ನಮ್ಮ ಹೆಮ್ಮಕ್ಕಳು ಅದೆಷ್ಟು ಸುರಕ್ಷಿತ…? * ಮನಮೋಹಕ ನೃತ್ಯ ಸಿಂಚನ * ಸ್ವಚ್ಛ ಸರ್ವೇಕ್ಷಣ ಗ್ರಾಮೀಣ 2018 * ಆಧುನಿಕತೆಯೇ ಮುಳುವಾಯಿತೇ…? * ನಾಟ್ಯ ಮಯೂರಿ… * ನವೆಂಬರ್ 16-18: ಆಳ್ವಾಸ್ ನುಡಿಸಿರಿ *

ನಮ್ಮ ಹೆಮ್ಮಕ್ಕಳು ಅದೆಷ್ಟು ಸುರಕ್ಷಿತ…?

#indian#women#safe

ಸ್ಟೂಡೆಂಟ್ ರಿಪೋರ್ಟರ್: ಅಂಕಣ
“ಎಲ್ಲಿ ನಾರಿಯರು ಪೂಜಿಸಲ್ಪಡುತ್ತಾರೋ ಅಲ್ಲಿ ದೇವತೆಗಳು ಒಲಿಯುತ್ತವೆ” ಎಂದು ಸಾರಿದ ನಮ್ಮೀ ಭಾರತದಲ್ಲೇ ನಾವಿಂದು ಹೆಣ್ಣು ಮಕ್ಕಳು/ಮಹಿಳೆಯರ ಸುರಕ್ಷತೆಯ ಕುರಿತು ಯೋಚಿಸಬೇಕಾದ ಅನಿವಾರ್ಯತೆಯಿದೆ. ಹೆಣ್ಣು ಕಾಲ ಕಳೆದಂತೆ  ಸಮಾಜದ ಎಲ್ಲ ಕ್ಷೇತ್ರಗಳಿಗೂ ದಾಪುಗಾಲಿಟ್ಟು ಮುನ್ನಡೆಯಲಾರಂಭಿಸಿದಳು. ಹೀಗಾಗಿ ಇಂದು ಶಿಕ್ಷಣ, ವೈದ್ಯಕೀಯ, ಕ್ರೀಡೆ, ರಾಜಕೀಯ, ಉದ್ಯಮ,ಕೈಗಾರಿಕೆ ,ಚಿತ್ರರಂಗ,ಪತ್ರಿಕೋದ್ಯಮ, ವಿಜ್ಞಾನ, ತಂತ್ರಜ್ಞಾನ- ಮೊದಲಾದ ಕ್ಷೇತ್ರಗಳಲ್ಲಿ ಮಹಿಳೆ ತನ್ನ ಸಾಮರ್ಥ್ಯವನ್ನು ತೋರಿಸುತ್ತಿದ್ದಾಳೆ. ಸ್ವಾಭಿಮಾನ-ಸ್ವಾವಲಂಬನೆಯ ಪ್ರತೀಕವಾಗಿದ್ದಾಳೆ.
ಆದರೂ, ಮಾನಸಿಕವಾಗಿ, ಭಾವನಾತ್ಮಕವಾಗಿ, ನೈತಿಕವಾಗಿ ಸಾಕಷ್ಟು ದೃಢವಾಗಿ ನಿಲ್ಲದಿರುವುದರಿಂದಲೇ ನಿರಂತರ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾಳೇನೋ? ವರದಕ್ಷಿಣೆ, ಆಸ್ತಿ-ಅಂತಸ್ತು, ಅತ್ಯಾಚಾರ, ಅಪಹರಣ, ಲೈಂಗಿಕ ಕಿರುಕುಳ, ದಬ್ಬಾಳಿಕೆ- ಇನ್ನೂ ಅನೇಕ ಕಾರಣಗಳಿಂದಾಗಿ ಮಹಿಳೆ ಇಂದು ಶೋಷಿತೆಯಾಗಿದ್ದಾಳೆ. ತನ್ನ ಮನೆಯಲ್ಲಿ, ಸುತ್ತಮುತ್ತಲಿನ ಸಮಾಜದಲ್ಲಿ, ತಾನು ಕೆಲಸ ಮಾಡುವ ಸ್ಥಳಗಳಲ್ಲಿ, ಒಂದು ಕಡೆಯಿಂದ ಇನ್ನೊಂದು ಕಡೆಗೆ ಬಸ್ಸು, ರೈಲು, ವಿಮಾನ ಹಾಗೂ ಇನ್ನಿತರ ವಾಹನಗಳಲ್ಲಿ ಸಂಚರಿಸುವ ಸಂದರ್ಭದಲ್ಲಿ ಮಹಿಳೆ ಅನೇಕ ಬಾರಿ ದೈಹಿಕ ಕಿರುಕುಳವನ್ನು ಅನುಭವಿಸುತ್ತಾಳೆ. ಎಲ್ಲೋ ಬೆರಳೆಣಿಕೆಯ ಮಹಿಳೆಯರು ಮಾತ್ರ ಅನ್ಯಾಯದ ವಿರುದ್ಧ ಧ್ವನಿ ಎತ್ತುತ್ತಾರೆ.
ಗ್ರಾಮೀಣ ಪ್ರದೇಶಗಳ ಮಹಿಳೆಯರು ಮತ್ತು ಹೆಮ್ಮಕ್ಕಳು ಬಹುತೇಕ ಮನೆಯವರಿಂದಲೇ ಕಿರುಕುಳವನ್ನು ಅನುಭವಿಸುತ್ತಿದ್ದಾರೆ ಎಂದು ತಿಳಿದಾಗ ಮನಸ್ಸು ಭಾರವಾಗುತ್ತದೆ; ಕಂಠ ಗದ್ಗದಿತವಾಗುತ್ತದೆ.

ಮಹಿಳೆಯರೆಲ್ಲ ಶೊಷಿತೆಯರು ಎಂಬ ಭಾವನೆ ಯಾವತ್ತೂ ಸರಿಯಲ್ಲ. ನಿಜ ಹೇಳಬೇಕೆಂದರೆ ಮಹಿಳಾ ದೌರ್ಜನ್ಯದ ಮೂಲವನ್ನು ಹುಡುಕಹೊರಟರೆ ಅಲ್ಲಿ ಪುರುಷರಿಗಿಂತ ಹೆಚ್ಚಾಗಿ ಮಹಿಳೆಯರೇ ಪಾತ್ರ ನಿರ್ವಹಿಸಿದರುವುದನ್ನು ನಾವು ಕಾಣಬಹುದು. ನಮ್ಮ ಹೆಣ್ಣು ಮಕ್ಕಳನ್ನು ನಾವಿಂದು ಮಾನಸಿಕವಾಗಿ, ನೈತಿಕವಾಗಿ, ಭಾವನಾತ್ಮಕವಾಗಿ ಗಟ್ಟಿಗೊಳಿಸಬೇಕಾಗಿದೆ. ಸಮಸ್ಯೆಗಳು, ಅಪಾಯಗಳು ಎದುರಾದಾಗ ಧೃತಿಗೆಡದೆ, ತಮಗೆ ತಾವೇ ರಕ್ಷಣೆ ಮಾಡಿಕೊಳ್ಳಬಲ್ಲ ಆತ್ಮವಿಶ್ವಾಸವನ್ನು ಅವರಲ್ಲಿ ತುಂಬಬೇಕಾಗಿದೆ. ಪ್ರತಿಯೊಂದು ಮನೆಯ ಹೆಣ್ಣು ಮಗಳು ನಮ್ಮ ಮನೆ ಮಗಳು ಎಂದು ತಿಳಿದು ಅವರಲ್ಲಿ ಸುರಕ್ಷತೆಯ ಕುರಿತಾದ ಜಾಗೃತಿ ಮೂಡಿಸೋಣ. ‘ಹೆಣ್ಣು-ಸಂಸಾರದ ಕಣ್ಣು ಮಾತ್ರವಲ್ಲ; ಇಡೀ ಸಮಾಜದ-ಸಮುದಾಯದ ಕಣ್ಣು ಎಂಬ ಸತ್ಯವನ್ನು ಇಡೀ ಜಗತ್ತಿಗೆ ತಿಳಿಸೋಣ.

  • ಕಾವ್ಯ 
  • ಸರಕಾರೀ ಪ್ರಥಮ ದರ್ಜೆ ಕಾಲೇಜು ಸಿದ್ದಕಟ್ಟೆ