Headlines

ಹಂತಕರನ್ನು ಕೂಡಲೇ ಬಂಧಿಸಿ: ಸಿ.ಎಂ * ಎದೆಭಾಗಕ್ಕೆ 2;ಹಣೆಗೆ1ಗುಂಡು * ಪರ್ತಕರ್ತೆ ಗೌರಿ ಲಂಕೇಶ್ ಹತ್ಯೆ * ಎಂಟು ಮಂದಿ ಶಿಕ್ಷಕರಿಗೆ ಸನ್ಮಾನ * ಸಾಧಕರಿಗೆ ಸನ್ಮಾನ * ಶಾಲೆ ಶಾಲೆಯಲ್ಲಿ ಗೆಜ್ಜೆಯ ನಿನಾದ! * ಋಣ ತೀರಿಸುವ ಕಾರ್ಯವಾಗಲಿ: ದೇವಿಪ್ರಸಾದ್ ಶೆಟ್ಟಿ * ಸಾರ್ವಜನಿಕ ಗಣೇಶೋತ್ಸವ * ಶ್ರೀ ಸೂರ್ಯನಾರಾಯಣ ಕ್ಷೇತ್ರದಲ್ಲಿ ಗಣೇಶೋತ್ಸವ * ಗ್ರಾಮ-ಪಟ್ಟಣಕ್ಕೆ ಒಂದೇ ಗಣೇಶನಿರಲಿ-ಟಿ.ಆರ್.ಸುರೇಶ್ * 54ನೇ ವರ್ಷದ ಮೂಡಬಿದಿರೆಯ ಗಣೇಶ * ಪೆರಿಂಜೆಯಲ್ಲಿ ಸಂಭ್ರಮದ ಗಣೇಶೋತ್ಸವ * ಕಲ್ಲಬೆಟ್ಟಿನಲ್ಲಿ ಪೂಜಿಸಿದ ವಿಘ್ನವಿನಾಯಕ * ಮೂಡುಬಿದಿರೆಯಲ್ಲಿ ರಕ್ಷಾಂಬಂಧನ * ಪ್ರೊ. ಕೆ.ಇ.ರಾಧಾಕೃಷ್ಣ ಮತ್ತು ಸತ್ಯಮಂಗಲ ಆರ್ ಮಹಾದೇವ ಅವರಿಗೆ ವರ್ಧಮಾನ ಪ್ರಶಸ್ತಿ ಘೋಷಣೆನ * ಇದು ಅತ್ಯಾಧುನಿಕ `ಪಾರಂಪರಿಕ’ಮಾದರಿಯ ಶ್ಯಾವಿಗೆ ಮಣೆ! * ವಿಂಶತಿ ಯಕ್ಷಕಲೋತ್ಸವಕ್ಕೆ ತೆರೆ * ಸಿ.ಐ.ಟಿ.ಯು: 9ನೇ ಬೀಡಿ ಕಾರ್ಮಿಕರ ರಾಜ್ಯ ಸಮ್ಮೇಳನ * ಪದ್ಮಪ್ರಸಾದ್ ಜೈನ್ ನೇಮಕ * ವಿಶೇಷ ಪೂಜೆ-ಅಭಿಷೇಕ *

ಧರ್ಮದ ಬಗ್ಗೆ ಆಸಕ್ತಿ ಇದ್ದರೆ ಧರ್ಮ ನಮ್ಮನ್ನು ರಕ್ಷಿಸುತ್ತದೆ

#cherkodlu#brahmakalasa#prog

ವರದಿ: ಶ್ಯಾಮ್ ಪ್ರಸಾದ್ ಸರಳಿ

ಬ್ರಹ್ಮ ಅಂದರೆ ಪೂರ್ಣತೆಯನ್ನು ಹೊಂದಿದ ಎಂದು ಅರ್ಥ. ಅಂತಹ ಪೂರ್ಣತ್ವವನ್ನು ಹೊಂದಿದ ಕುಂಭದ ಅಭಿಷೇಕ ಇಲ್ಲಿ ನಡೆಯಲಿದೆ ಎಂದು ಉಡುಪಿ ಕಾಣಿಯೂರು ಮಠದ ಪರಮಪೂಜ್ಯ ಶ್ರೀ ಶ್ರೀ ವಿದ್ಯಾವಲ್ಲಭತೀರ್ಥ ಸ್ವಾಮೀಜಿ ನುಡಿದರು. ಆದಿತ್ಯವಾರ ಬದಿಯಡ್ಕ ಸಮೀಪದ ಚೇರ್ಕೋಡ್ಲು ಶ್ರೀ ವಿಷ್ಣುಮೂರ್ತಿ ಕ್ಷೇತ್ರದ ಅಷ್ಟಬಂಧ ಬ್ರಹ್ಮಕಲಶೋತ್ಸವದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನವನ್ನು ನೀಡಿದರು.
ಮನುಷ್ಯ ಶರೀರ ಎಂಬುದು ದೇವಸ್ಥಾನವಾಗಿದೆ. ದೇಹ ಎಂಬುದು ದೇವಸ್ಥಾನ. ಹೃದಯ ಎಂಬುದು ಗರ್ಭಗುಡಿಯಾಗಿದೆ. ಆ ಗರ್ಭಗುಡಿಯಲ್ಲಿ ಮನಸಾ ದೇವರನ್ನು ನಾವು ಅಚಲವಾಗಿ ಪ್ರತಿಷ್ಠೆ ಮಾಡಬೇಕು. ಧರ್ಮದ ಬಗ್ಗೆ ಆಸಕ್ತಿ ಇದ್ದರೆ ಧರ್ಮ ನಮ್ಮನ್ನು ರಕ್ಷಿಸುತ್ತದೆ ಎಂದರು.
ಕ್ಷೇತ್ರದ ತಂತ್ರಿವರ್ಯ ಬ್ರಹ್ಮಶ್ರೀ ಬಳ್ಳಪದವು ಮಾಧವ ಉಪಾಧ್ಯಾಯ ದೀಪ ಬೆಳಗಿಸಿ ಉದ್ಘಾಟಿಸಿದರು. ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ, ಮಲ್ಲ ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರದ ಆಡಳಿತ ಮೊಕ್ತೇಸರ ಆನೆಮಜಲು ವಿಷ್ಣು ಭಟ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಶಂಕರಾಚಾರ್ಯ ಬ್ರಹ್ಮಾನಂದ ಸರಸ್ವತೀ ಸ್ವಾಮೀಜಿ ಕೊಲ್ಹಾಪುರ ಆಶೀರ್ವಚನವನ್ನು ನೀಡುತ್ತಾ ಅದೆಷ್ಟೋ ಜನ್ಮಗಳ ನಂತರ ಮಾನವ ಜನ್ಮ ಲಭಿಸುತ್ತದೆ. ಆಧ್ಯಾತ್ಮ ಚಿಂತನೆಗೆ ಹೆಚ್ಚಿನ ಒತ್ತನ್ನು ನೀಡಿ ಜನ್ಮಸಾರ್ಥಕಪಡಿಸಿಕೊಬೇಕು ಎಂದರು. ಜೀರ್ಣೋದ್ಧಾರ ಸಮತಿ ಗೌರವಾಧ್ಯಕ್ಷ ಪ್ರಭಾಕರ ಭಟ್ ಪಂಜರಿಕೆ, ಕೃಷ್ಣರಾಜ ಪಂಜರಕೆ, ವಸಂತ ಪೈ ಬದಿಯಡ್ಕ ಮೊದಲಾದವರು ಉಪಸ್ಥಿತರಿದ್ದರು. ಜ್ಯೋತಿಷಿ ಬೇಳ ಪದ್ಮನಾಭ ಶರ್ಮ ಹಾಗೂ ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಸುಬ್ರಹ್ಮಣ್ಯ ಭಟ್ ತಲೇಕ ಮಾತನಾಡಿದರು. ಹಿರಣ್ಯ ವೆಂಕಟೇಶ್ವರ ಭಟ್ ಧಾರ್ಮಿಕ ಉಪನ್ಯಾಸವನ್ನು ನೀಡಿ ಮನಸ್ಸಿಗೆ ಮನಃಶಾಂತಿ ಸಿಗಬೇಕಾದರೆ ದೇವಾಲಯಗಳು ಬೇಕು. ಇಂತಹ ಪ್ರಶಾಂತ ವಾತಾವರಣದಲ್ಲಿ ಇರುವ ದೇವಾಲಯಗಳಲ್ಲಿ ಪ್ರಾರ್ಥಿಸಿದಲ್ಲಿ ಹೆಚ್ಚಿನ ಫಲವಿರುತ್ತದೆ ಎಂದರು.
ಈ ಸಂದರ್ಭದಲ್ಲಿ ಸಿ.ಎಚ್.ಗೋಪಾಲ ಭಟ್ ಚುಕ್ಕಿನಡ್ಕ ವಿರಚಿತ `ವಿಷ್ಣುಮೂರ್ತಿಗೆ ನಮನ’ ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು. ರಾಮಚಂದ್ರ ಭಟ್ ಉಪ್ಪಂಗಳ ಸ್ವಾಗತಿಸಿ ನಿರಂಜನ ರೈ ಪೆರಡಾಲ ವಂದಿಸಿದರು. ಅರವಿಂದ ಕುಮಾರ್ ಅಲೆವೂರಾಯ, ಡಾ| ಶ್ರೀನಿಧಿ ಸರಳಾಯ, ಎಸ್.ಎನ್.ಮಯ್ಯ ಬದಿಯಡ್ಕ, ಬೇ.ಸಿ. ಗೋಪಾಲಕೃಷ್ಣ ಭಟ್, ರವಿಕಾಂತ ಕೇಸರಿ ಕಡಾರು, ರಾಜೇಶ್ ಮಾಸ್ತರ್ ಅಗಲ್ಪಾಡಿ ಕಾರ್ಯಕ್ರಮ ನಿರ್ವಹಣೆಗೆ ಸಹಕರಿಸಿದರು.