Headlines

ಹಂತಕರನ್ನು ಕೂಡಲೇ ಬಂಧಿಸಿ: ಸಿ.ಎಂ * ಎದೆಭಾಗಕ್ಕೆ 2;ಹಣೆಗೆ1ಗುಂಡು * ಪರ್ತಕರ್ತೆ ಗೌರಿ ಲಂಕೇಶ್ ಹತ್ಯೆ * ಎಂಟು ಮಂದಿ ಶಿಕ್ಷಕರಿಗೆ ಸನ್ಮಾನ * ಸಾಧಕರಿಗೆ ಸನ್ಮಾನ * ಶಾಲೆ ಶಾಲೆಯಲ್ಲಿ ಗೆಜ್ಜೆಯ ನಿನಾದ! * ಋಣ ತೀರಿಸುವ ಕಾರ್ಯವಾಗಲಿ: ದೇವಿಪ್ರಸಾದ್ ಶೆಟ್ಟಿ * ಸಾರ್ವಜನಿಕ ಗಣೇಶೋತ್ಸವ * ಶ್ರೀ ಸೂರ್ಯನಾರಾಯಣ ಕ್ಷೇತ್ರದಲ್ಲಿ ಗಣೇಶೋತ್ಸವ * ಗ್ರಾಮ-ಪಟ್ಟಣಕ್ಕೆ ಒಂದೇ ಗಣೇಶನಿರಲಿ-ಟಿ.ಆರ್.ಸುರೇಶ್ * 54ನೇ ವರ್ಷದ ಮೂಡಬಿದಿರೆಯ ಗಣೇಶ * ಪೆರಿಂಜೆಯಲ್ಲಿ ಸಂಭ್ರಮದ ಗಣೇಶೋತ್ಸವ * ಕಲ್ಲಬೆಟ್ಟಿನಲ್ಲಿ ಪೂಜಿಸಿದ ವಿಘ್ನವಿನಾಯಕ * ಮೂಡುಬಿದಿರೆಯಲ್ಲಿ ರಕ್ಷಾಂಬಂಧನ * ಪ್ರೊ. ಕೆ.ಇ.ರಾಧಾಕೃಷ್ಣ ಮತ್ತು ಸತ್ಯಮಂಗಲ ಆರ್ ಮಹಾದೇವ ಅವರಿಗೆ ವರ್ಧಮಾನ ಪ್ರಶಸ್ತಿ ಘೋಷಣೆನ * ಇದು ಅತ್ಯಾಧುನಿಕ `ಪಾರಂಪರಿಕ’ಮಾದರಿಯ ಶ್ಯಾವಿಗೆ ಮಣೆ! * ವಿಂಶತಿ ಯಕ್ಷಕಲೋತ್ಸವಕ್ಕೆ ತೆರೆ * ಸಿ.ಐ.ಟಿ.ಯು: 9ನೇ ಬೀಡಿ ಕಾರ್ಮಿಕರ ರಾಜ್ಯ ಸಮ್ಮೇಳನ * ಪದ್ಮಪ್ರಸಾದ್ ಜೈನ್ ನೇಮಕ * ವಿಶೇಷ ಪೂಜೆ-ಅಭಿಷೇಕ *

ದಾಸ್ಯದ ಮೂಲ

shikshana chinthane vaarte logo

ಶಿಕ್ಷಣ ಚಿಂತನೆ: ಅರವಿಂದ ಚೊಕ್ಕಾಡಿ
ಸ್ವಾಮಿ ವಿವೇಕಾನಂದರು ಒಮ್ಮೆ ಹೀಗೆ ಹೇಳಿದ್ದರಂತೆ: ” ನನಗೆ ಅಮೆರಿಕದಲ್ಲಿ ಒಳ್ಳೆಯ ಹೆಸರು ಬಂದರೆ ತಕ್ಷಣ ಭಾರತದಲ್ಲಿ ನನ್ನ ಬಗ್ಗೆ ಅಪಪ್ರಚಾರಗಳು ಪ್ರಾರಂಭವಾಗಿ ಬಿಡುತ್ತದೆ. ಅವನು ಸರಿ ಇಲ್ಲ ಎಂದು ಹೇಳಲು ನನ್ನ ಜನಗಳು ಉತ್ಸುಕರಾಗಿರುತ್ತಾರೆ. ಈ ಪ್ರವೃತ್ತಿಯು ದಾಸ್ಯ ಮನೋಭಾವದ ಲಕ್ಷಣವಾಗಿದೆ. ಯಾಕೆಂದರೆ ಗುಲಾಮರಾದವರ ಮನಸ್ಸಿನಲ್ಲಿ ಮಾತ್ಸರ್ಯ ತುಂಬಿ ತುಳುಕಾಡುತ್ತಿರುತ್ತದೆ. ಆದ್ದರಿಂದ ನೀವೆಲ್ಲರೂ ಮೊದಲು ಸ್ವತಂತ್ರರಾಗಿರಿ”.

 

 

 

 

ವಿವೇಕಾನಂದರ ಈ ವಿಚಾರವು ಈಗಲೂ ಪ್ರಸ್ತುತವಾಗಿದೆ. ಯಾರಾದರೊಬ್ಬರು ಏನಾದರೊಂದು ಕೆಲಸವನ್ನು ಮಾಡಿದ ತಕ್ಷಣ “ಅದೆಲ್ಲ ರಿ, ಆದರೆ ಅವನು/ಳು ಹೀಗಂತೆ” ಎಂದು ಅವರ ಸಾಧನೆಯನ್ನು ಮರೆಗೆ ತಳ್ಳು ಹೇಳಿಕೆಗಳು, ಪಿಸು ಮಾತುಗಳು ಶುರುವಾಗಿ ಬಿಡುತ್ತದೆ. ಇನ್ನೊಬ್ಬರಿಗೆ ಆಗುವ ತೊಂದರೆಯಿಂದ ನಮಗೆ ಸುಖ-ಸಂತೋಷದ ಅನುಭವ ಉಂಟಾಗುವುದಕ್ಕೂ ನಮ್ಮಲ್ಲಿರುವ ಈ ಮನೋ ಪ್ರವೃತ್ತಿಯೇ ಕಾರಣವಾಗಿರುತ್ತದೆ.

 

 

 

ಈ ರೀತಿಯ ಮನೋಭಾವವು ಮಾತ್ಸರ್ಯದಿಂದಲೇ ಸೃಷ್ಠಿಯಾಗುತ್ತದೆ. ಯಾಕೆಂದರೆ ಅವನ/ಳ ಸಾಧನೆಯನ್ನು ಮರೆಗೆ ತಳ್ಳಲು ಮಾತ್ಸರ್ಯವು ನಮ್ಮನ್ನು ಪ್ರೇರೆಪಿಸುತ್ತಿರುತ್ತದೆ. ಇನ್ನೊಬ್ಬರು ಏನನ್ನಾದರೂ ಸಾಧಿಸಿದಾಗ ಅದು ಈ ರೀತಿಯಲ್ಲೆ ಯಾಕೆ ನಮ್ಮನ್ನು ಪ್ರೇರೆಪಿಸಬೇಕು? ಅದು ನಮ್ಮನ್ನು ಕೂಡ ನಮ್ಮದೇ ರೀತಿಯಲ್ಲಿ ಸಾಧನೆಯನ್ನು ಮಾಡಲು ಏಕೆ ಕ್ರಿಯಾಶೀಲಗೊಳಿಸಬಾರದು ಎನ್ನುವುದು ಪ್ರಶ್ನೆ. ಅದಕ್ಕೆ ಉತ್ತರ ದಾಸ್ಯದ ಮನೋಭಾವ. ದಾಸ್ಯದ ಮನೋಭಾವವು ಇನ್ನೊಬ್ಬರು ಮಾಡಿದ ಹಾಗೆ ಮಾಡಲು ಕಲಿಸುತ್ತದೆಯೇ ಹೊರತು ಸ್ವತಂತ್ರವಾಗಿ ಯೋಚಿಸಿ ಕ್ರಿಯಾಶೀಲರಾಗಲು ಕಲಿಸುವುದಿಲ್ಲ. ಇದೇ ದಾಸ್ಯದ ಮನೋವೃತ್ತಿಯು ನಮ್ಮೆಲ್ಲ ಶಕ್ತಿಯನ್ನು ಮುಂದೆ ಚಲಿಸದಂತೆ ಬಿಗಿಯಾಗಿ ಹಿಡಿದಿಟ್ಟುಬಿಟ್ಟಿರುತ್ತದೆ. ಶಕ್ತಿ ಚಲನೆಯಾಗದಿದ್ದರೆ ನಿಷ್ಕ್ರೀಯತೆ ತೀರಾ ಸಹಜವಾಗಿರುತ್ತದೆ. ಇದು ಸರಿಯಾಗಿ ಅರ್ಥ ಆಗಬೇಕಾದರೆ ಯಾವುದಾದರೊಂದು ಭಾಷಣಕಾರನೊಂದಿಗೆ ಒಳ ಒಪ್ಪಂದವನ್ನು ಮಾಡಿಕೊಳ್ಳಿ.

 

 

 

ಸಭೆಯಲ್ಲಿ ಕುಳಿತವರಿಗೆ ಒಂದು ಹಂತದಲ್ಲಿ ಚೆನ್ನಾಗಿ ಬೈಯಲು ಭಾಷಣಕಾರನಿಗೆ ಹೇಳಿ. ಭಾಷಣಕಾರ ಸಭೆಯಲ್ಲಿದ್ದವರಿಗೆ ಬೈಯುವ ಸಂದರ್ಭಕ್ಕೆ ಸರಿಯಾಗಿ ನೀವು ಗಟ್ಟಿಯಾಗಿ ಎರಡು ಚಪ್ಪಾಳೆ ಕೊಡಿ. ತಕ್ಷಣ ಇಡೀ ಸಭೆಯೇ ಚಪ್ಪಳೆ ಹೊಡೆಯುತ್ತಿರುವುದನ್ನು ನೀವೇ ಗಮನಿಸುವಿರಿ. ಹಾಗಿದ್ದರೆ ಅವರು ಭಾಷಣಕಾರನ ಭಾಷಣವನ್ನು ಕೇಳಿ ಅರ್ಥಮಾಡಿಕೊಂಡು ಚಪ್ಪಾಳೆಯ ಕ್ರಿಯೆಯನ್ನು ಮಾಡಿದ್ದಾರೆಂದು ಅರ್ಥವೋ, ಅಲ್ಲ ನೀವು ಮಾಡಿದ ಹಾಗೆ ಮಾಡಿ ಚಪ್ಪಾಳೆ ಹೊಡೆದಿದ್ದಾರೆಂದು ಅರ್ಥವೋ, ವ್ಯಕ್ತಿಯ ಕ್ರಿಯಾಶೀಲತೆಯನ್ನು ದಾಸ್ಯವು ಕಟ್ಟಿ ಹಾಕಿದ್ದಾಗ ಎಲ್ಲ ವ್ಯಕ್ತಿಗಳ ನಡವಳಿಕೆಯೂ ಹೀಗೆಯೇ ಇರುತ್ತದೆ. ಅವರು ಏನನ್ನೂ ಮಾಡಲಾರರು. ಯಾರೇನೇ ಮಾಡಿದರೂ ಆಕ್ಷೇಪವನ್ನೂ ಮಾತ್ರ ಮಾಡಬಲ್ಲರು. ನಿಮಮ್ಲ್ಲಿ ಇಂತಹ ಪ್ರವೃತ್ತಿ ಇದ್ದರೆ ದಯವಿಟ್ಟು ದಾಸ್ಯ ಮನೋವೃತ್ತಿಯ ಕಟ್ಟುಗಳನ್ನು ಕಡಿದು ಸ್ವತಂತ್ರರಾಗಿರಿ.

ಅರವಿಂದ ಚೊಕ್ಕಾಡಿ

response@vaarte.com