Headlines

ಹಂತಕರನ್ನು ಕೂಡಲೇ ಬಂಧಿಸಿ: ಸಿ.ಎಂ * ಎದೆಭಾಗಕ್ಕೆ 2;ಹಣೆಗೆ1ಗುಂಡು * ಪರ್ತಕರ್ತೆ ಗೌರಿ ಲಂಕೇಶ್ ಹತ್ಯೆ * ಎಂಟು ಮಂದಿ ಶಿಕ್ಷಕರಿಗೆ ಸನ್ಮಾನ * ಸಾಧಕರಿಗೆ ಸನ್ಮಾನ * ಶಾಲೆ ಶಾಲೆಯಲ್ಲಿ ಗೆಜ್ಜೆಯ ನಿನಾದ! * ಋಣ ತೀರಿಸುವ ಕಾರ್ಯವಾಗಲಿ: ದೇವಿಪ್ರಸಾದ್ ಶೆಟ್ಟಿ * ಸಾರ್ವಜನಿಕ ಗಣೇಶೋತ್ಸವ * ಶ್ರೀ ಸೂರ್ಯನಾರಾಯಣ ಕ್ಷೇತ್ರದಲ್ಲಿ ಗಣೇಶೋತ್ಸವ * ಗ್ರಾಮ-ಪಟ್ಟಣಕ್ಕೆ ಒಂದೇ ಗಣೇಶನಿರಲಿ-ಟಿ.ಆರ್.ಸುರೇಶ್ * 54ನೇ ವರ್ಷದ ಮೂಡಬಿದಿರೆಯ ಗಣೇಶ * ಪೆರಿಂಜೆಯಲ್ಲಿ ಸಂಭ್ರಮದ ಗಣೇಶೋತ್ಸವ * ಕಲ್ಲಬೆಟ್ಟಿನಲ್ಲಿ ಪೂಜಿಸಿದ ವಿಘ್ನವಿನಾಯಕ * ಮೂಡುಬಿದಿರೆಯಲ್ಲಿ ರಕ್ಷಾಂಬಂಧನ * ಪ್ರೊ. ಕೆ.ಇ.ರಾಧಾಕೃಷ್ಣ ಮತ್ತು ಸತ್ಯಮಂಗಲ ಆರ್ ಮಹಾದೇವ ಅವರಿಗೆ ವರ್ಧಮಾನ ಪ್ರಶಸ್ತಿ ಘೋಷಣೆನ * ಇದು ಅತ್ಯಾಧುನಿಕ `ಪಾರಂಪರಿಕ’ಮಾದರಿಯ ಶ್ಯಾವಿಗೆ ಮಣೆ! * ವಿಂಶತಿ ಯಕ್ಷಕಲೋತ್ಸವಕ್ಕೆ ತೆರೆ * ಸಿ.ಐ.ಟಿ.ಯು: 9ನೇ ಬೀಡಿ ಕಾರ್ಮಿಕರ ರಾಜ್ಯ ಸಮ್ಮೇಳನ * ಪದ್ಮಪ್ರಸಾದ್ ಜೈನ್ ನೇಮಕ * ವಿಶೇಷ ಪೂಜೆ-ಅಭಿಷೇಕ *

ಜೋರಾಯ್ತು ಮಳೆ…

rain in mng

ನಮ್ಮ ಪ್ರತಿನಿಧಿ ವರದಿ

ಮುಂಗಾರು ಮಳೆ ಚುರುಕಾಗಿದೆ. ಅಬ್ಬರದ ಮಳೆ ಶುಕ್ರವಾರ ರಾತ್ರಿಯಿಂದ ತೊಡಗಿ ಶನಿವಾರ ದಿನಪೂರ್ತಿ ಮುಂದುವರಿದಿದೆ. ಸಂಜೆಯಾಗುತ್ತಿದ್ದಂತೆಯೇ ಮಳೆಯಬ್ಬರ ಹೆಚ್ಚಾಗಿದೆ. ಮೋಡ ಕಪ್ಪಿಟ್ಟು ಮಳೆ ಸುರಿಯುತ್ತಿದೆ. ಗುಡುಗು ಸಿಡಿಲಾರ್ಭಟ ಅತಿಯಾಗಿದೆ. ಒಟ್ಟಿನಲ್ಲಿ ಸರಿಯಾದ ಮಳೆಗಾಲದ ವಾತಾವರಣ ಗೋಚರವಾಗುತ್ತಿದೆ. ಜೂನ್ ತಿಂಗಳಾಂತ್ಯವಾಗುತ್ತಿದ್ದಂತೆಯೇ ಮಳೆ ತನ್ನ ಇರುವಿಕೆಯನ್ನು ತೋರಿಸಿದೆ!
ಇಷ್ಟು ದಿನ ವಿರಳವಾಗಿದ್ದ ಮಳೆ ಏಕಾಏಕಿ ಜೋರಾಗಿದೆ. ಬಿರುಸಿನ ಮಳೆ ಕೃಷಿಕರ ಮೊಗದಲ್ಲಿ ಮಂದಹಾಸ ಮೂಡಿಸಿದ್ದಂತೂ ಸುಳ್ಳಲ್ಲ. ಎಡೆಬಿಡದೆ ಸುರಿಯಬೇಕಾಗಿದ್ದ ಮಳೆ ಜೂನ್ ತಿಂಗಳಲ್ಲಿ ಕ್ಷೀಣಗೊಂಡು ರೈತ ಚಿಂತೆಗೀಡಾಗುವಂತೆ ಮಾಡಿತ್ತು. ಆದರೆ ನಿನ್ನೆಯಿಂದ ಸುರಿಯಲಾರಂಭಿಸಿದ ಮಳೆ ಕೊಂಚ ನೆಮ್ಮದಿ ತಂದುಕೊಟ್ಟಿದೆ. ಶುಕ್ರವಾರ ರಾತ್ರಿಪೂರ್ತಿ ಎಡೆಬಿಡೆದ ಜಡಿಮಳೆಸುರಿದಿದೆ.
ಕರೆಂಟ್ ಇಲ್ಲ
ಮಳೆ ಜೋರಾಗುತ್ತಿದಂತೆಯೇ ಎಲ್ಲೆಂದರಲ್ಲಿ ಕರೆಂಟ್ ಕೈಕೊಟ್ಟಿದೆ. ಮೂಡಬಿದಿರೆ ವ್ಯಾಪ್ತಿಯ ಹಲವು ಭಾಗಗಳಲ್ಲಿ ರಾತ್ರಿ ಕರೆಂಟ್ ವ್ಯತ್ಯಯ ಉಂಟಾಗಿತ್ತು. ಶನಿವಾರವೂ ಹಲವು ಬಾರಿ ಕರೆಂಟ್ ಕೈಗೊಟ್ಟಿತ್ತು.
ಹೊರ ಹೋಗುವದೂ ಕಷ್ಟ…
ಮಳೆಯಿಂದಾಗಿ ಹೊರ ಹೋಗುವುದೂ ಕಷ್ಟ ಎಂಬಂತಾಗಿದೆ. ಜೋರಾಗಿ ಸುರಿಯುವ ಮಳೆ ಒಂದೆಡೆಯಾದರೆ ಎಲ್ಲೆಂದರಲ್ಲಿ ನೀರ ಹರಿಯುವಿಕೆಯಿಂದಾಗಿ ಮನೆಯಿಂದ ಹೊರ ಹೋಗಲೂ ಕಷ್ಟದ ವಾತಾವರಣ ಸೃಷ್ಠಿಯಾಗಿತ್ತು. ಬೆಳಗ್ಗೆ, ಮಧ್ಯಾಹ್ನ ಮಳೆ ಜೋರಾಗಿದ್ದ ಕಾರಣ ಶಾಲಾ ಮಕ್ಕಳು ಕೊಂಚ ಸಮಸ್ಯೆ ಅನುಭವಿಸುವಂತಾಯಿತು.
ಮಳೆಯ ನಡುವೆಯೂ ಕುಂದದ ಉತ್ಸಾಹ!
ಮೂಡಬಿದಿರೆಯಲ್ಲಿ ಆಳ್ವಾಸ್ ಎಜುಕೇಷನ್ ಫೌಂಡೇಷನ್ ಆಶ್ರಯದಲ್ಲಿ ಪ್ರಗತಿ ಉದ್ಯೋಗ ಮೇಳ ನಡೆಯುತ್ತಿದೆ. ಧೋ ಎಂದು ಸುರಿಯುವ ಮಳೆಯಲ್ಲೂ ಅಭ್ಯರ್ಥಿಗಳು ಉತ್ಸಾಹದಿಂದ ಪಾಲ್ಗೊಂಡಿದ್ದರು. ಸುಮಾರು ಹತ್ತು ಹದಿನೈದು ಸಾವಿರ ಅಭ್ಯಥರ್ಿಗಳು ಮಳೆಯನ್ನೂ ಲೆಕ್ಕಿಸದೆ ಉದ್ಯೋಗಕ್ಕಾಗಿ ಆಗಮಿಸಿದ್ದರು!