Headlines

ಆಳ್ವಾಸ್ ವಿದ್ಯಾರ್ಥಿಸಿರಿಯ ಹೈಲೈಟ್ಸ್… * ಬಾಲಪ್ರತಿಭೆ ಪ್ರದರ್ಶನ * ಬಸದಿಗಳ ನಾಡಲ್ಲಿ ಕನ್ನಡದ ಬಾವುಟ… ಹೊತ್ತಿತೋ…ಹೊತ್ತಿತು ಕನ್ನಡದ ದೀಪ… * ನುಡಿಸಿರಿಯ ಸರ್ವಾಧ್ಯಕ್ಷರ ಎಕ್ಸ್ ಕ್ಲೂಸಿವ್ ಸಂದರ್ಶನ * ಹನ್ನೆರಡು ಸಾಧಕರಿಗೆ 2018ರ ಆಳ್ವಾಸ್ ನುಡಿಸಿರಿ ಪುರಸ್ಕಾರ * ನುಡಿಸಿರಿಯ ಅಂಗಳದಲ್ಲಿ ಅಚ್ಚರಿಯ ಮೇಲೊಂದಚ್ಚರಿ! * ನುಡಿಸಿರಿಯ ಅಂಗಳದಲ್ಲೊಂದು ಸುದ್ದಿಮನೆ! * ಆಳ್ವಾಸ್ ವಿದ್ಯಾರ್ಥಿಸಿರಿ 2018 ಆರಂಭ * ಕಣ್ಣುತೆರೆಸಿದ ಜವನೆರ್ ಬೆದ್ರ ಸಂಘಟನೆ * ಯೋಧರ ಮನೆಯಲ್ಲಿ ಬೆಳಗಿದ ದೀಪ! * ಯಶಸ್ವೀ 36ನೇವಾರ ಪೂರೈಸಿದ ಕ್ಲೀನ್ ಅಪ್ ಮೂಡಬಿದಿರೆ * ರಾಜ್ಯಮಟ್ಟದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟ ಆರಂಭ * ಅಳಿಯೂರಿನಲ್ಲಿ ಮೇಳೈಸಲಿದೆ ಕ್ರೀಡಾಹಬ್ಬ.! * ರಾಷ್ಟ್ರಮಟ್ಟಕ್ಕೆ ಆಯ್ಕೆಯಾಯ್ತು ಹಳ್ಳಿ ಹುಡುಗರ ಅನ್ವೇಷಣೆ! * ಶಿರ್ಲಾಲು: ಹೊಸ ಶಾಸನ ಪತ್ತೆ * ಸಾವಿರ ಕಂಬದ ಬಸದಿಯ ಸ್ವಚ್ಛತೆ * ಪುರಸಭೆಯ ಕಣ್ಣುತೆರೆಸಿದ ಜವನೆರ್ ಬೆದ್ರ! * ಪುರಸಭೆಗೆ ಸಾರ್ವಜನಿಕರಿಂದ ಹಿಡಿಶಾಪ * ಕಾರ್ಯಾಂಗ,ನ್ಯಾಯಾಂಗ,ಶಾಸಕಾಂಗದ ವೈಫಲ್ಯದ ವಿರುದ್ಧ ಹೋರಾಟ: ಸುದರ್ಶನ್ * ಬೆಸ್ಟ್ ಡ್ರಾಮೇಬಾಜ್ ಖ್ಯಾತಿಯ ಶ್ರೀಶ ಬೆಂಗಳೂರು ಅವರಿಗೆ ಗೌರವ ಸನ್ಮಾನ *

ಜೀವನ ದೃಷ್ಠಿಯ ವೈಶಾಲ್ಯತೆ

shikshana chinthane vaarte logo

ಶಿಕ್ಷಣ ಚಿಂತನೆ: ಅರವಿಂದ ಚೊಕ್ಕಾಡಿ
“ಕುಲವಿಲ್ಲ ಯೋಗಿಗೆ, ಫಲವಿಲ್ಲ ಜ್ಞಾನಿಗೆ, ತೊಲೆಗಂಬವಿಲ್ಲ ಗಗನಕೆ” ಎಂದು ಸರ್ವಜ್ಞ ಕವಿ ಹೇಳುತ್ತಾನೆ. ಸರಳವಾದ ಸಂಗತಿಗಳಂತೆ ತೋರುವ ಸರ್ವಜ್ಞನ ಮಾತುಗಳು ವ್ಯಕ್ತಿತ್ವದ ಆಳವಾದ ತಿಳಿವಳಿಕೆಗಳನ್ನು ಹೊಂದಿದೆ. ಯೋಗಿಯು ಸಾಮಾಜಿಕವಾದ ಕಟ್ಟುಪಾಡುಗಳನ್ನೆಲ್ಲ ಮೀರಿ ಬೆಳೆದಿರುತ್ತಾನೆ. ಅವರು ತನ್ನದೇ ಆದ ಸ್ವತಂತ್ರ್ಯ ನಿಯಮವನ್ನು ಹೊಂದಿರುತ್ತಾನೆ. ಅಂತಹ ಯೋಗಿಗೆ ಜಾತಿ, ಮತ, ಕುಲ, ಪಂಥ-ಈ ಯಾವುದರ ಅಗತ್ಯವೂ ಇರುವುದಿಲ್ಲ. ಹಾಗೆಯೇ ನಮ್ಮ ಯಾವುದೇ ನಡುವಳಿಕೆಗಳ ಪರಿಣಾಮಕ್ಕೆ ಒಂದು ಕಾಲಮಿತಿ ಇರುತ್ತದೆ. ನೀವು ಮೂರನೆಯ ತರಗತಿಯಲ್ಲೋ, ನಾಲಕ್ನೆಯ ತರಗತಿಯಲ್ಲೋ ಇದ್ದಾಗ ಯಾರ ಜೊತೆಯೋ ಜಗಳ ಮನಃಸ್ತಾಪಗಳೆಲ್ಲ ನಡೆದು ಅದಕ್ಕಾಗಿ ಒಂದೆರಡು ತಿಂಗಳುಗಳ ಕಾಲ ತೆಲೆಕೆಡಿಸಿಕೊಂಡು ಯೋಚಿಸುತ್ತಿದ್ದಿರಬಹುದು. ಆದರೆ ಈಗ ಅದಕ್ಕೆಲ್ಲ ಯಾವ ಮಹತ್ವವೂ ಇರುವುದಿಲ್ಲ.

 

 

 

ಹಾಗಿದ್ದರೆ ಅಂದು ಅಷ್ಟೇಲ್ಲ ತಲೆಕೆಡಿಸಿಕೊಂಡಿದ್ದು ಮೂರ್ಖತನವಲ್ಲವೇ. ನಿಜ, ಇಂದಿಗೆ ಅದು ಮೂರ್ಖತನ. ಆದರೆ ಅಂದು ಮೂರ್ಖತನವಾಗಿರಲಿಲ್ಲ. ಅಂದು ಅವಶ್ಯಕತೆಯಾಗಿತ್ತು. ನಿಮ್ಮ ತಂದೆ, ಅಜ್ಜ, ಮುತ್ತಜ್ಜ; ಇನ್ನೂ ಮುಂದೆ ಹೋದರೆ ಅವರ ತಂದೆಯ ಹೆಸರು ನಿಮಗೆ ಗೊತ್ತಿರುತ್ತದೆ. ಆದರೆ ನಿಮ್ಮ ಮುತ್ತಜ್ಜನ ಮುತ್ತಜ್ಜ ಯಾರು ಎಂದು ಕೇಳಿದರೆ ಅವರ ಹೆಸರು ಗೊತ್ತಿರುವುದಿಲ್ಲ. ನಿಮ್ಮ ಮುತ್ತಜ್ಜನ ಮುತ್ತಜ್ಜ ಸುಮಾರು 300-400 ವರ್ಷಗಳ ಹಿಂದೆ ಬದುಕಿರಬಹುದು ಎಂದು ಭಾವಿಸಿ. ಹಾಗಾದರೆ ಇನ್ನು 300-400 ವರ್ಷಗಳ ನಂತರ ನಮ್ಮ ಪರಿಸ್ಥಿತಿ ಏನಾಗಿರುತ್ತದೆ? ನಮ್ಮ ಹೆಸರುಗಳೇ ಗೊತ್ತಿರುವುದಿಲ್ಲ! ಈ ಸತ್ಯ ಸಂಗತಿ ನಮಗೆ ಗೊತ್ತಿರುತ್ತದೆ. ಆದರೆ ಅದು ನಮ್ಮ ನಡುವಿಕೆಯನ್ನು ನಿಯಂತ್ರಿಸುವುದಿಲ್ಲ. ಜ್ಞಾನಿಗೆ ಹಾಗಲ್ಲ. ಜ್ಞಾನಿಯ ನಡವಳಿಕೆಯನ್ನು ಕೂಡ ಈ ಸತ್ಯ ಸಂಗತಿಯೇ ನಿಯಂತ್ರಿಸುತ್ತದೆ. ಆದ್ದರಿಂದ ಜ್ಞಾನಿಯು ತನ್ನ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತಾನೆ. ಆದರೆ ಅವನಲ್ಲಿ ಛಲ ಬರುವುದಿಲ್ಲ.

 

 

 

 

ಆದ್ದರಿಂದ ಅವರು ಜಗಳವಾಡಲು, ಬಡಿದಾಡಲು ಹೋಗುವುದಿಲ್ಲ. ಒಳ್ಳೆಯದಾದಾಗ ವಿಪರೀತ ಸಂತೋಷವನ್ನು ಪಡುವುದಿಲ್ಲ, ಕೆಟ್ಟದಾದಾಗ ವಿಪರೀತ ದುಃಖವನ್ನೂ ಪಡುವುದಿಲ್ಲ. ಅದರಿಂದಾಗಿ ಅವನಿಗೆ ವ್ಯಕ್ತಿತ್ವದ ಸ್ಥಿರತೆ ಮತ್ತು ಸ್ಥಿತಪ್ರಜ್ಞತೆ ಬಂದಿರುತ್ತದೆ. ನಮ್ಮ ಮನೆಯಲ್ಲೇ ದುರಂತವಾದಾಗ ವಿಪರೀತ ದುಃಖವಾಗುತ್ತದೆ. ನಮ್ಮೂರಲ್ಲಿ ದುರಂತವಾದಾಗ ನಮ್ಮ ಮನೆಯಲ್ಲಿನ ದುರಂತವನ್ನು ದುರಂತದಷ್ಟು ತೀಕ್ಷ್ಣವಾಗಿ ದುಃಖ ಆಗುವುದಿಲ್ಲ. ರಾಜ್ಯದಲ್ಲಿ ದುರಂತವಾದಾಗ ದುಃಖದ ತೀವ್ರತೆ ಇನ್ನೂ ಕಡಿಮೆ. ಲ್ಯಾಟಿನ್ ಅಮೆರಿಕದಲ್ಲಿ ಒಂದು ದುರಂತವಾದಾಗ ಅದರ ಕುರಿತಾಗಿ ನಾವು ಯೋಚಿಸುವುದೂ ಇಲ್ಲ. ಯಾಕೆಂದರೆ ಇದು ನನ್ನದು ಎಂಬ ಭಾವನೆಯ ತೀವ್ರತೆಯಲ್ಲಿ ವ್ಯತ್ಯಾಸ ಇರುತ್ತದೆ. ಜ್ಞಾನಿಗೆ ಈ ವ್ಯತ್ಯಾಸ ಇಲ್ಲ. ಇಡೀ ಜಗತ್ತು ಅವನಿಗೆ ತನ್ನದೆಂಬ ಭಾವನೆಯಿರುತ್ತದೆ. ಎಲ್ಲೇ ದುರಂತವಾದರೂ ಅವನನ್ನು ಅದು ನೋಯಿಸುತ್ತದೆ. ಆದರೆ ನೋವನ್ನು ಸ್ಥಿರ ಚಿತ್ತದಿಂದ ಸ್ವೀಕರಿಸುತ್ತಾನೆ. ಜೀವನ ಸೃಷ್ಠಿಯ ವೈಶಾಲ್ಯತೆಯು ಆಧ್ಯಾತ್ಮಿಕವಾಗುತ್ತಾ ಹೋಗುವುದು ಹೀಗೆಯೇ. ಜ್ಞಾನವೇ ಅದರ ದಾರಿ.

ಅರವಿಂದ ಚೊಕ್ಕಾಡಿ

response@vaarte.com