Headlines

ವಿಶ್ವ ಜೂನಿಯರ್ ಅಥ್ಲೆಟಿಕ್ಸ್ ಗೆ ಆಳ್ವಾಸ್ ಕ್ರೀಡಾಳುಗಳು * ಜಾಗೃತಿ ಪ್ರಜ್ಞೆ ಮೂಡಿಸಿದ ಜವನೆರ್ ಬೆದ್ರ * ಶಾಸಕರ ಮಾನವೀಯ ಸ್ಪಂದನೆ * ಜವನೆರ್ ಬೆದ್ರದ ಸಾಧನೆ ಇತರರಿಗೂ ಮಾದರಿ * ಕರಾವಳಿಯಲ್ಲಿ ಮತ್ತೆ ಮಳೆಯಾರ್ಭಟ * ಗದ್ದೆಯಲ್ಲಿ ಕುಣಿದು ಕುಪ್ಪಳಿಸಿದರು!! * ಸರ್ಕಾರ ಉಳಿಸಲು ವಿಶೇಷ ಪೂಜೆ! * `ನಾಡ ಪ್ರೇಮಿ’ಖ್ಯಾತಿಯ ಬಳ್ಳುಳ್ಳಾಯ ಇನ್ನಿಲ್ಲ * ಇಳೆಯು ಕಾದಿದೆ ಮಳೆಗಾಗಿ… * ಒತ್ತಡ ನಿರ್ವಹಣೆಗೆ ಆದ್ಯತೆ ಅವಶ್ಯ * ಬೆಳದಿಂಗಳ ಸಮ್ಮೇಳನಾಧ್ಯಕ್ಷತೆಗೆ ಬನ್ನಂಜೆ ಆಯ್ಕೆ * ಕಥೋಲಿಕ್ ಸಮಾಜೋತ್ಸವ * ಅಶ್ವತ್ಥಪುರದಲ್ಲಿ ಡಾ.ಸುಧೀರ್ ಹೆಗ್ಡೆ ನೇತೃತ್ವದಲ್ಲಿ ನೇತ್ರ ಚಿಕಿತ್ಸೆ ಶಿಬಿರ * ರೋಟರಿಯಿಂದ ಗಣರಾಜ್ಯೋತ್ಸವ ಆಚರಣೆ * ರಾಷ್ಟ್ರೀಯ ಐಕ್ಯತೆಗೆ ಯುವಪಡೆ ಸಿದ್ಧವಾಗಲಿ: ವಿನಯ ಹೆಗ್ಡೆ * ಮಹಾಮಜ್ಜನಕ್ಕೆ ಸಿದ್ದತೆ ಪೂರ್ಣ * ಶ್ರೀಬಾಹುಬಲಿ ಅಹಿಂಸಾದಿಗ್ವಿಜಯಂ ಲೋಕಾರ್ಪಣೆ * ಲೋಕಾಯುಕ್ತ ಪ್ರವಾಸ * ರೋಟರಿಯಿಂದ ಸಾಧಕರಿಗೆ ಸನ್ಮಾನ * ಸ್ವರಾಜ್ಯ ಮೈದಾನದ ಮೇಲೆ ತೂಗುಗತ್ತಿ…! *

ಜಾಗೃತಿ ಪ್ರಜ್ಞೆ ಮೂಡಿಸಿದ ಜವನೆರ್ ಬೆದ್ರ

javaner bedr

 

ನಮ್ಮ ಪ್ರತಿನಿಧಿ ವರದಿ
ಮೂಡಬಿದಿರೆ: `ಇದು ನನ್ನ ನಗರ ಅದರ ಸ್ವಚ್ಛತೆ ಕಾಪಾಡುವುದು ನನ್ನ ಧರ್ಮ’ ಎಂಬ ಧ್ಯೇಯದೊಂದಿಗೆ ಮೂಡಬಿದಿರೆಯಲ್ಲಿ ಸ್ವಚ್ಛತಾ ಅಭಿಯಾನ ಹಾಗೂ ಜಾಗೃತಿ ಕಾರ್ಯವನ್ನು ಜವನೆರ್ ಬೆದ್ರ ಸಂಘಟನೆ ನಡೆಸುತ್ತಿದೆ. ಜುಲೈ 8 ಭಾನುವಾರದಂದು ಈ ಸಂಘಟನೆಯ ಆಶ್ರಯದಲ್ಲಿ 19ನೇ ವಾರದ ಸ್ವಚ್ಛತಾ ಅಭಿಯಾನ ನಡೆಯಿತು. ಮೂಡಬಿದಿರೆ ಸ್ವರಾಜ್ಯ ಮೈದಾನ ರಸ್ತೆಯಲ್ಲಿ ಸ್ವಚ್ಛತಾ ಕಾರ್ಯ ಕೈಗೊಂಡರು. ಈ ಭಾಗದಲ್ಲಿರುವ ಚರಂಡಿ ಸ್ವಚ್ಛತೆ ನಡೆಸಿ ಮಳೆನೀರಿನ ಸರಾಗ ಸಂಚಾರಕ್ಕೆ ಬೇಕಾದ ಅವಕಾಶ ಕಲ್ಪಿಸಿದರು. ಉದ್ಯಮಿ ಅಶೋಕ್ ಜೈನ್ ಚಾಲನೆ ನೀಡಿದರು. ಗಣೇಶ್ ಪೂಜಾರಿ ದುಬೈ ಅತಿಥಿಗಳಾಗಿದ್ದರು. ಜವನೆರ್ ಬೆದ್ರ ಸಂಘಟನೆಯ ರೂವಾರಿ ಅಮರ್ ಕೋಟೆ ಸಹಿತ ಸದಸ್ಯರು ಸ್ವಚ್ಛತಾ ಕಾರ್ಯ ನಡೆಸಿದರು