Headlines

ವಿಶ್ವ ಜೂನಿಯರ್ ಅಥ್ಲೆಟಿಕ್ಸ್ ಗೆ ಆಳ್ವಾಸ್ ಕ್ರೀಡಾಳುಗಳು * ಜಾಗೃತಿ ಪ್ರಜ್ಞೆ ಮೂಡಿಸಿದ ಜವನೆರ್ ಬೆದ್ರ * ಶಾಸಕರ ಮಾನವೀಯ ಸ್ಪಂದನೆ * ಜವನೆರ್ ಬೆದ್ರದ ಸಾಧನೆ ಇತರರಿಗೂ ಮಾದರಿ * ಕರಾವಳಿಯಲ್ಲಿ ಮತ್ತೆ ಮಳೆಯಾರ್ಭಟ * ಗದ್ದೆಯಲ್ಲಿ ಕುಣಿದು ಕುಪ್ಪಳಿಸಿದರು!! * ಸರ್ಕಾರ ಉಳಿಸಲು ವಿಶೇಷ ಪೂಜೆ! * `ನಾಡ ಪ್ರೇಮಿ’ಖ್ಯಾತಿಯ ಬಳ್ಳುಳ್ಳಾಯ ಇನ್ನಿಲ್ಲ * ಇಳೆಯು ಕಾದಿದೆ ಮಳೆಗಾಗಿ… * ಒತ್ತಡ ನಿರ್ವಹಣೆಗೆ ಆದ್ಯತೆ ಅವಶ್ಯ * ಬೆಳದಿಂಗಳ ಸಮ್ಮೇಳನಾಧ್ಯಕ್ಷತೆಗೆ ಬನ್ನಂಜೆ ಆಯ್ಕೆ * ಕಥೋಲಿಕ್ ಸಮಾಜೋತ್ಸವ * ಅಶ್ವತ್ಥಪುರದಲ್ಲಿ ಡಾ.ಸುಧೀರ್ ಹೆಗ್ಡೆ ನೇತೃತ್ವದಲ್ಲಿ ನೇತ್ರ ಚಿಕಿತ್ಸೆ ಶಿಬಿರ * ರೋಟರಿಯಿಂದ ಗಣರಾಜ್ಯೋತ್ಸವ ಆಚರಣೆ * ರಾಷ್ಟ್ರೀಯ ಐಕ್ಯತೆಗೆ ಯುವಪಡೆ ಸಿದ್ಧವಾಗಲಿ: ವಿನಯ ಹೆಗ್ಡೆ * ಮಹಾಮಜ್ಜನಕ್ಕೆ ಸಿದ್ದತೆ ಪೂರ್ಣ * ಶ್ರೀಬಾಹುಬಲಿ ಅಹಿಂಸಾದಿಗ್ವಿಜಯಂ ಲೋಕಾರ್ಪಣೆ * ಲೋಕಾಯುಕ್ತ ಪ್ರವಾಸ * ರೋಟರಿಯಿಂದ ಸಾಧಕರಿಗೆ ಸನ್ಮಾನ * ಸ್ವರಾಜ್ಯ ಮೈದಾನದ ಮೇಲೆ ತೂಗುಗತ್ತಿ…! *

ಜವನೆರ್ ಬೆದ್ರದ ಸಾಧನೆ ಇತರರಿಗೂ ಮಾದರಿ

7javaner bedra

ಮೂಡಬಿದಿರೆ ಪ್ರತಿನಿಧಿ ವರದಿ

ಮೂಡಬಿದಿರೆಯಲ್ಲಿ ಕಳೆದ ಹದಿನೆಂಟು ವಾರಗಳಿಂದ ನಿರಂತರವಾಗಿ ಸ್ವಚ್ಛತಾ ಅಭಿಯಾನ ಕೈಗೊಳ್ಳುತ್ತಾ ಬಂದಿರುವ ಜವನೆರ್ ಬೆದ್ರದ ಸಂಘಟನೆಯ ಕಾರ್ಯ ನಿಜಕ್ಕೂ ಶ್ಲಾಘನಾರ್ಹ. ಮೂಡಬಿದಿರೆಯ ವಿಜಯನಗರದ ಚರಂಡಿಗಳಲ್ಲಿ ಹೂಳುತುಂಬಿ ಮಳೆನೀರು ಚರಂಡಿಗಳಿಂದ ಮೇಲೆ ಹರಿದು ಅಂಗಡಿಮುಂಗಟ್ಟುಗಳಿಗೆ ಹೋಗುತ್ತಿತ್ತು. ಈ ಸಂಘಟನೆಯ ಕಾರ್ಯಕರ್ತರು ಚರಂಡಿಗಳ ಹೂಳು, ಪ್ಲಾಸ್ಟಿಕ್ ಗಳನ್ನು ತೆಗೆದು ಸ್ವಚ್ಛಗೊಳಿಸಿ ನೀರು ಸರಾಗವಾಗಿ ಹರಿದುಹೋಗಲು ಬೇಕಾದ ವ್ಯವಸ್ಥೆ ಕೈಗೊಂಡರು. ಶುಕ್ರವಾರ-ಶನಿವಾರ ಸುರಿದ ಭಾರೀ ಮಳೆಗೂ ಇಲ್ಲಿ ಯಾವುದೇ ಸಮಸ್ಯೆ ಸಂಭವಿಸಿಲ್ಲ. ಈ ಪ್ರದೇಶದ ನಾಗರೀಕರು ಜವನೆರ್ ಬೆದ್ರ ಸಂಘಟನೆಯ ಸಂಚಾಲಕ ಅಮರ್ ಕೋಟೆ ಹಾಗೂ ಸದಸ್ಯರನ್ನು ಮನಸಾರೆ ಅಭಿನಂದಿಸಿದ್ದಾರೆ.