Headlines

ಕಣ್ಣುತೆರೆಸಿದ ಜವನೆರ್ ಬೆದ್ರ ಸಂಘಟನೆ * ಯೋಧರ ಮನೆಯಲ್ಲಿ ಬೆಳಗಿದ ದೀಪ! * ಯಶಸ್ವೀ 36ನೇವಾರ ಪೂರೈಸಿದ ಕ್ಲೀನ್ ಅಪ್ ಮೂಡಬಿದಿರೆ * ರಾಜ್ಯಮಟ್ಟದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟ ಆರಂಭ * ಅಳಿಯೂರಿನಲ್ಲಿ ಮೇಳೈಸಲಿದೆ ಕ್ರೀಡಾಹಬ್ಬ.! * ರಾಷ್ಟ್ರಮಟ್ಟಕ್ಕೆ ಆಯ್ಕೆಯಾಯ್ತು ಹಳ್ಳಿ ಹುಡುಗರ ಅನ್ವೇಷಣೆ! * ಶಿರ್ಲಾಲು: ಹೊಸ ಶಾಸನ ಪತ್ತೆ * ಸಾವಿರ ಕಂಬದ ಬಸದಿಯ ಸ್ವಚ್ಛತೆ * ಪುರಸಭೆಯ ಕಣ್ಣುತೆರೆಸಿದ ಜವನೆರ್ ಬೆದ್ರ! * ಪುರಸಭೆಗೆ ಸಾರ್ವಜನಿಕರಿಂದ ಹಿಡಿಶಾಪ * ಕಾರ್ಯಾಂಗ,ನ್ಯಾಯಾಂಗ,ಶಾಸಕಾಂಗದ ವೈಫಲ್ಯದ ವಿರುದ್ಧ ಹೋರಾಟ: ಸುದರ್ಶನ್ * ಬೆಸ್ಟ್ ಡ್ರಾಮೇಬಾಜ್ ಖ್ಯಾತಿಯ ಶ್ರೀಶ ಬೆಂಗಳೂರು ಅವರಿಗೆ ಗೌರವ ಸನ್ಮಾನ * ಮಾನವೀಯ ಸ್ಪಂದನೆ ಆಗಲೇಬೇಕಾಗಿದೆ… * 33ನೇ ವಾರ ಪೂರೈಸಿದ ಜವನೆರ್ ಬೆದ್ರದ ಸಾಧನೆ * ಆಧುನಿಕತೆಯಿಂದ ಆಶಾದಾಯಕ ಸ್ಥಿತಿ ಬಂದೊದಗಿದೆ: ಹರೀಶ್ ಶೆಣೈ * ಮೂಡಬಿದಿರೆಯಲ್ಲಿ ಸದ್ಭಾವನಾ ಗೋಷ್ಠಿ * ಭಾರತೀಯ ಜನತಾ ಪಾರ್ಟಿಯಿಂದ ಸ್ವಚ್ಛತೆಯ ಮಂತ್ರ * ಬಸದಿಗಳ ಬೀಡಲ್ಲಿ ಬಸದಿಗಳ ಸ್ವಚ್ಛತೆ * ಕಂಬಳಸಮಿತಿ ಸಭೆ * 30ನೇವಾರದ ಕ್ಲೀನ್ ಅಪ್ ಮೂಡಬಿದಿರೆ *

ಗದ್ದೆಯಲ್ಲಿ ಕುಣಿದು ಕುಪ್ಪಳಿಸಿದರು!!

#rotary#moodbidri#rotaryschool

ನಮ್ಮ ಪ್ರತಿನಿಧಿ ವರದಿ

ಹೌದು…ಅಲ್ಲಿ ಓಬೇಲೆ ಕೇಳುತ್ತಿತ್ತು…ಕೋಣಗಳು ಗದ್ದೆಗಳಿದಿದ್ದವು…ಮಳೆ ನೀರಿನಿಂದ ತುಂಬಿದ್ದ ಬಾಕಿಮಾರ್ ಗದ್ದೆಯಲ್ಲಿ ನೂರಾರು ವಿದ್ಯಾರ್ಥಿಗಳು…ಮಾಮೂಲಿನ ಪಾಠ ಪ್ರವಚನಗಳಿಂದ ಹೊರತಾಗಿ ವಿಶೇಷವಾಗಿ ದಿನಪೂರ್ತಿ  ಕಾಲ ಕಳೆದಿದ್ದರು… ಅಲ್ಲಿ ನಿಶ್ಚಿಂತೆಯಿಂದ ಮನಬಂದಂತೆ ಕೆಸರಲ್ಲಿ ಮಿಂದೆದ್ದರು…ತಾವುಣ್ಣುವ ಅನ್ನ ಹೇಗೆ ಬೆಳೆಯುತ್ತದೆಂಬ ನೈಜ ಪ್ರಕ್ರಿಯೆನ್ನು ಕಂಡರು…ಒಟ್ಟಾರೆಯಾಗಿ ಗ್ರಾಮೀಣ ಸೊಗಡಿನ ಸಂಪೂರ್ಣ ಪರಿಚಯ ದಿನಪೂರ್ತಿ ಅನುಭವಿಸುವಂತಾದರು.
ಮೂಡಬಿದಿರೆಯ ರೋಟರಿ ವಿದ್ಯಾಸಂಸ್ಥೆ , ರೋಟರಿಕ್ಲಬ್ ಮೂಡಬಿದಿರೆ, ರೋಟರಿ ಟೆಂಪಲ್ ಟೌನ್ ಮೂಡಬಿದಿರೆ ಇದರ ಸಹಭಾಗಿತ್ವದಲ್ಲಿ ರೋಟರಿ ವಿದ್ಯಾಸಂಸ್ಥೆಯ ಮಕ್ಕಳ ಗದ್ದೆಯೆಡೆಗೆ ಮಕ್ಕಳ ಹೆಜ್ಜೆ ಕಾರ್ಯಕ್ರಮ ಮೂಡಬಿದಿರೆ ದೊಡ್ಮನೆ ರಸ್ತೆಯ ತೋಟಮನೆಯಲ್ಲಿ ಗುರುವಾರ ನಡೆಯಿತು.
ವಿದ್ಯಾಥರ್ಿಗಳಿಗೆ ನೇಜಿ ನಾಟಿಯ ಪ್ರಾತ್ಯಕ್ಷಿಕೆ ನೀಡಲಾಯಿತು. ನಿಧಿ ಶೋಧ, ಕೆಸರುಗದ್ದೆ ಓಟ, ಅಡಕೆ ಹಾಳೆ ಓಟ, ಕಬಡ್ಡಿ ಮೊದಲಾದ ಆಟಗಳನ್ನು ಆಡಿಸಲಾಯಿತು. ಕೃಷಿ ಪರಿಕರಗಳ ಪ್ರದರ್ಶನ ಗಮನ ಸೆಳೆಯಿತು. ಸಾಂಪ್ರದಾಯಿಕ ರೀತಿಯ ಉದ್ಘಾಟನೆ ಅಚ್ಚರಿ ಮೂಡಿಸಿತು. ಅಕ್ಕಿ ಮುಡಿ, ಕಳಸಿಗೆ, ಸಿಂಗಾರ, ಮೊರ, ಭತ್ತ ಇವೆಲ್ಲವೂ ಗದ್ದೆಯಂಚಲ್ಲಿದ್ದ ವೇದಿಕೆಯಲ್ಲಿ ಸ್ಥಾನಪಡೆದಿದ್ದವು. ಅತಿಥಿಗಳಿಗೆ ವೀಳ್ಯನೀಡಿ ಸಾಂಪ್ರದಾಯಿಕ ಸ್ವಾಗತ ಕೋರಲಾಯಿತು.
ರೋಟರಿ ಶಿಕ್ಷಣ ಸಂಸ್ಥೆಯ 800ವಿದ್ಯಾರ್ಥಿಗಳು ಈ ಕಾರ್ಯದಲ್ಲಿ ಭಾಗಿಗಳಾದರು.