Headlines

ರೋಟರಿಯಿಂದ ಸಾಧಕರಿಗೆ ಸನ್ಮಾನ * ಸ್ವರಾಜ್ಯ ಮೈದಾನದ ಮೇಲೆ ತೂಗುಗತ್ತಿ…! * ಡಾ.ಸುಧೀರ್ ಹೆಗ್ಡೆ ನೇತೃತ್ವದಲ್ಲಿಕಣ್ಣಿನತಪಾಸಣಾ ಶಿಬಿರ * ಯುವಶಕ್ತಿಗೆ ಪರಿಸರಪ್ರಜ್ಞೆಯ ಅರಿವು ಮೂಡಿಸಿದ ಮಹಾಕಾರ್ಯ * ಮೂಡಬಿದಿರೆ ಶಿಕ್ಷಣ ಪ್ರೇಮಿಗಳ ನಾಡು: ಅಭಯಚಂದ್ರ ಜೈನ್ * 50ನೇ ವೈದ್ಯಕೀಯ ತಪಾಸಣಾ ಶಿಬಿರ * ಜ.21-25: ಮೂಡಬಿದಿರೆಯಲ್ಲಿ ರಾಷ್ಟ್ರೀಯ ವೈಯ್ಟ್ ಲಿಫ್ಟಿಂಗ್ * ರಾಜ್ಯಮಟ್ಟದ ಟಿ-20 ಕ್ರಿಕೆಟ್ ಟೂರ್ನಿ: ಆಳ್ವಾಸ್‍ಗೆ ಪ್ರಶಸ್ತಿ * ಕವಿಕುಲಗುರು ಕುಮಾರವ್ಯಾಸ * ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳಿಂದ ಒಡ್ಡು ನಿರ್ಮಾಣ * ಕಣ್ಣಿನ ಉಚಿತ ತಪಾಸಣೆಹಾಗೂ ಚಿಕಿತ್ಸಾ ಶಿಬಿರ * ಅಂತರ್ ಕಾಲೇಜು ಸಾಫ್ಟ್ ಬಾಲ್ ಟೂರ್ನಮೆಂಟ್ ಆರಂಭ * ವಿಶೇಷ ವಿದ್ಯಾರ್ಥಿಗಳ ಗಮನಾರ್ಹ ಸಾಧನೆ * ವರ್ಣವೈವಿಧ್ಯ ಚಿತ್ತಾಕರ್ಷದ ಆಳ್ವಾಸ್ ವಿರಾಸತ್ * ವಿರಾಸತ್ ಗೌರವ * ಬೇಲಾಡಿ ರಾಮಚಂದ್ರ ಆಚಾರ್ಯ ನಿಧನ * ವಿವೇಕಾನಂದ ಜಯಂತಿ * 79.5ಕೋಟಿ ಅಭಿವೃದ್ಧಿ ಕಾರ್ಯಗಳ ಲೋಕಾರ್ಪಣೆ, ಶಂಕುಸ್ಥಾಪನೆ * ಆಳ್ವಾಸ್ ರೋಟರಿ ಬ್ಲಡ್ ಬ್ಯಾಂಕ್ ಉದ್ಘಾಟನೆ * ಸೇವೆಯಲ್ಲಿ ಬದಲಾವಣೆ ತಂದ ಹೆಗ್ಗಳಿಕೆ ರೋಟರಿಯದ್ದು – ಡಾ.ಹೆಗ್ಗಡೆ *

`ಕೃಷಿಯೂ ಕನ್ನಡದ ಅಂಗವೇ…’

#alvaskrishisiri#alvasnudisiri#krishi

ನುಡಿಸಿರಿಯಲ್ಲಿ ವಾರ್ತೆ ವೈಭವ – 1

ಹರೀಶ್ ಕೆ. ಆದೂರು

ಕನ್ನಡವೆಂದರೆ ಕೇವಲ ಭಾಷೆಯಷ್ಟೇ ಅಲ್ಲ…ಭಾಷೆಯ ಮೂಲಕ ರಚನೆಯಾದ ಸಾಹಿತ್ಯ ಪ್ರಕಾರವೂ ಅಲ್ಲ…ಬದಲಾಗಿ ಅದೊಂದು ಸಮಷ್ಠೀ ಚಿಂತನೆ…ಅದರಲ್ಲಿ ಕಲೆಯಿದೆ, ಕ್ರೀಡೆಯಿದೆ, ಜನಪದವೂ ಇದೆ,ಸಂಸ್ಕೃತಿಯಿದೆ, ಕೃಷಿಯಿದೆ,ಸಂಸ್ಕಾರವಿದೆ,ಸಂಬಂಧವಿದೆ ಎಂಬುದನ್ನು ಮತ್ತೊಮ್ಮೆ ಜನಮಾನಸಕ್ಕೆ ನೆನಪಿಸುವ ತನ್ಮೂಲಕ ಕನ್ನಡವನ್ನು ಉಳಿಸುವ ಬೆಳೆಸುವ ಅದಕ್ಕೊಂದು ಸರಿಯಾದ ಸ್ಪಷ್ಟ `ಗೌರವ’ದೊರಕುವಂತೆ ಮಾಡುವ ಕಾರ್ಯ ಈ ನೆಲದಲ್ಲಿ ನಡೆಯುತ್ತಿದೆ. ಅದು ಡಾ.ಎಂ.ಮೋಹನ ಆಳ್ವ ಎಂಬ ಶಕ್ತಿಯಿಂದ ಸಾಕಾರವಾಗುತ್ತಿದೆ.
ಸರಕಾರೀ ಕೃಪಾ ಪೋಷಿತ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವೋ, ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನವನ್ನೋ ನೋಡಿದರೆ ಅಲ್ಲಿ ಸಾಹಿತ್ಯ,ಸಂಸ್ಕೃತಿ, ಕಲೆಗಳಿಗೆ ಸೀಮಿತವಾಗುತ್ತಿರುವ ಪ್ರಸಕ್ತ ಕಾಲಘಟ್ಟದಲ್ಲಿ ಕನ್ನಡವೆಂದರೆ ಇವಿಷ್ಟೇ ಅಲ್ಲ ಎಂಬುದನ್ನು ಕನ್ನಡದ ವಿರಾಟ್ ಸ್ವರೂಪವನ್ನು ಪ್ರದರ್ಶಿಸುವ ಮೂಲಕ ಜನತೆಯನ್ನು ನಿಬ್ಬೆರಗಾಗಿಸುವ ಕಾರ್ಯ ನುಡಿಸಿರಿಯ ಮೂಲಕ ಸಾಕಾರಗೊಳ್ಳುತ್ತಿದೆ.
ಆಳ್ವಾಸ್ ಕನ್ನಡ ನಾಡು ನುಡಿ ಸಂಸ್ಕೃತಿಯ ಸಾಹಿತ್ಯ ಸಮ್ಮೇಳನದಲ್ಲಿ `ಕೃಷಿ ಸಿರಿ’ಗೆ ಇನ್ನಷ್ಟು ಒತ್ತು ನೀಡಲಾಗುತ್ತಿದೆ. ತುಳುನಾಡಿನ ಜನಪದ ಸಂಸ್ಕೃತಿಯ ಪ್ರತೀಕವಾಗಿ, ದೇಶದ ಬೆನ್ನೆಲುಬಾಗಿರುವ ಕೃಷಿ,ಕೃಷಿಕರ ಸಂಸ್ಕೃತಿ ಸಂಸ್ಕಾರಗಳು, ಹಾಕಿಕೊಟ್ಟ ಅನಘ್ರ್ಯ ಸಂಸ್ಕೃತಿಯ ಹಿರಿಮೆಯನ್ನು ಅನಾವರಣಗೊಳಿಸುವ ಮಹೋನ್ನತ ಕಾರ್ಯ ಈ ಕೃಷಿಸಿರಿ.
ಆರು ಎಕ್ಕರೆ ಪ್ರದೇಶದಲ್ಲಿ ಕೃಷಿ ಸಿರಿಯ ವೈಭವ. ಎರಡೆಕ್ಕರೆ ಪ್ರದೇಶದಲ್ಲಿ ಕೃಷಿ ತೋಟದ ನಿಮರ್ಾಣ. ಅಲ್ಲೂ ಆಧುನಿಕ ಹಾಗೂ ಪಾರಂಪರಿಕ ಕೃಷಿಯ ಪ್ರಾತ್ಯಕ್ಷಿಕೆ. ಎರಡೆಕ್ಕರೆಯನ್ನು ಸಮಪಾಲಾಗಿಸಿ ಆಧುನಿಕ ಮಾದರಿಯ `ಸುಧಾರಿತ’ಕೃಷಿ ಪದ್ಧತಿಯಲ್ಲಿ ಬೆಂಡೆ,ಬದನೆ,ಹೀರೆ,ಪಡುವಲ,ಟೊಮೆಟೋ,ಮೆಣಸು,ಗೊಂಡೆಹೂ,ಮುಳ್ಳುಸೌತೆ,ಸೌತೆ ಹೀಗೆ ಆಯ್ದ ಕೃಷಿಯನ್ನು ಅತ್ಯಾಧುನಿಕ ರೀತಿಯಲ್ಲಿ ಬೆಳೆಸಲಾಗುತ್ತಿದೆ. ಹಸಿರು ಮನೆಯೊಳಗೆ ಮಣ್ಣಿನ ದಿಬ್ಬ ರಚಿಸಿ , ಪ್ರತೀ ಗಿಡದ ಬುಡದಲ್ಲಿ ತೇವಾಂಶ ಆರಂದತೆ ಪ್ಲಾಸ್ಟಿಕ್ ಹೊದಿಕೆ ಹಾಸಿ, ಕಾಲ ಕಾಲಕ್ಕೆ ನೀರು, ರಾಸಾಯನಿಕ ಗೊಬ್ಬರಗಳನ್ನು ನೀಡಿ ಕನಿಷ್ಟ ಅವಧಿಯಲ್ಲಿ ಗರಿಷ್ಠ ಬೆಳೆ ತೆಗೆಯುವ ಕಾರ್ಯ ನಡೆಯುತ್ತಿದೆ. ಇದಕ್ಕೆ ತಾಗಿಕೊಂಡಂತೆಯೇ ಪಾರಂಪರಿಕ ಮಾದರಿಯ ಸಾಮಯವ ಕೃಷಿ ಪದ್ಧತಿಯೂ ಇದೆ. ಈ ಪ್ರದೇಶದಲ್ಲಿ ಅನನಾಸ್, ಬೆಂಡೆ, ತೊಂಡೆ, ಮುಳ್ಳುಸೌತೆ, ನಾಲ್ಕು ವಿಧದ ಬದನೆ, ನಾಲ್ಕು ರೀತಿಯ ಬಸಳೆ, ಹೀರೆ, ಚೀನಿ, ಕುಂಬಳ, ಕ್ಯಾರೆಟ್, ಮೂಲಂಗಿ,ಕೆಸು ಹೀಗೆ ವೈವಿಧ್ಯಮಯ ತರಕಾರಿಗಳನ್ನು ಒಂದೆಕ್ಕರೆಯಲ್ಲಿ ಬೆಳೆದು ತೋರಿಸುವ ಕಾರ್ಯ ನಡೆಯುತ್ತಿದೆ.

#alvaskrishisiri#alvasnudisiri#krishi
ಕೃಷಿಗೆ ಜೀವಾಮೃತ
ಪಾರಂಪರಿಕ ಮಾದರಿಯ ಸಾವಯವ ಕೃಷಿಗೆ ಯಾವುದೇ ರಸಗೊಬ್ಬರ ಬಳಕೆಯಾಗುತ್ತಿಲ್ಲ. ಬದಲಾಗಿ ಜೀವಾಮೃತ ಉಣಿಸಲಾಗುತ್ತಿದೆ. ಜೀವಾಮೃತದ ಮೂಲಕ ಕೃಷಿಯೂ,ಕೃಷಿ ಭೂಮಿಯೂ ಹಸನಾಗುತ್ತದೆ ಎಂಬುದು ಪ್ರಾಮುಖ್ಯ ವಿಚಾರ.

ಬೆಳೆದ ತರಕಾರಿಯಿಂದ ವಿದ್ಯಾರ್ಥಿಗಳಿಗೆ ಆಹಾರ
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿದ್ಯಾರ್ಥಿ ನಿಲಯಗಳಲ್ಲಿ ವಿದ್ಯಾರ್ಥಿಗಳಿಗೆ ನೀಡುವ ಭೋಜನ ತಯಾರಿಗೆ ಈ ತರಕಾರಿ ಬಳಸಲಾಗುತ್ತದೆ. ಶಿಕ್ಷಣ ಸಂಸ್ಥೆಯೊಂದು ಕೇವಲ ಶಿಕ್ಷಣ ನೀಡುವುದಕ್ಕಷ್ಟೇ ಸೀಮಿತವಾಗದೆ  ವಿದ್ಯಾರ್ಥಿಗಳಲ್ಲಿ ಕೃಷಿಕಾರ್ಯದ ಬಗ್ಗೆಯೂ ಚಿಂತನೆ ಮೂಡಿಸುವ ಕಾರ್ಯ ಶ್ಲಾಘನೀಯ. ಆಳ್ವಾಸ್ ನುಡಿಸಿರಿಗೆ ಬರುವ ಲಕ್ಷಾಂತರ ಮಂದಿಗೆ ಇದೊಂದು ಪ್ರೇರಣೆಯೂ ಹೌದು. ಕೃಷಿ ಸಿರಿಯ ಮೂಲಕ ಕೃಷಿ ಮಾಹಿತಿ, ಅನುಭವ, ಪ್ರಾತ್ಯಕ್ಷಿಕೆ, ಮಾರಾಟ ಹೀಗೆ ಹಲವು ಲಾಭಗಳು ಆಸಕ್ತರಿಗೆ ಲಭ್ಯವಾಗಲಿದೆ.

#alvaskrishisiri#alvasnudisiri#krishi#vidyagiri

ನಮ್ಮದು ಕೃಷಿ ಮೂಲದ ಕುಟುಂಬ. ಯುವ ಜನತೆಯಲ್ಲಿ ಕೃಷಿಯ ಆಸಕ್ತಿ ಕುಂದುತ್ತಿದೆ. ಇಂತಹ ಸಂದರ್ಭದಲ್ಲಿ ಯುವಕರೂ ಕೃಷಿಯತ್ತ ಚಿತ್ತ ನೆಡುವಂತೆ ಮಾಡುವ ಉದ್ದೇಶದಿಂದ ಕೃಷಿ ಸಿರಿ ಆಯೋಜಿಸುತ್ತಿದ್ದೇವೆ. ನಮ್ಮ ವಿದ್ಯಾರ್ಥಿಗಳಲ್ಲೂ ಇದು ಪ್ರೇರಣೆಯಾಗಬೇಕೆಂಬುದು ಮೂಲ ಉದ್ದೇಶ.
– ಡಾ.ಎಂ.ಮೋಹನ ಆಳ್ವ.
ಆಳ್ವಾಸ್ ಎಜುಕೇಷನ್ ಫೌಂಡೇಷನ್ ಅಧ್ಯಕ್ಷ

 

ಕಳೆದ ಮೂರು ವರುಷಗಳಿಂದ ಕೃಷಿಸಿರಿಯ ವ್ಯವಸ್ಥೆಯನ್ನು ಡಾ.ಎಂ.ಮೋಹನ ಆಳ್ವರೊಂದಿಗೆ ಸೇರಿ ನಡೆಸುತ್ತಿದ್ದೇವೆ. ಕೃಷಿಕರಿಗೆ ಅವಶ್ಯಕವಾಗಿ ಬೇಕಾದ ಎಲ್ಲಾ ಮಾಹಿತಿ, ಪ್ರಾತ್ಯಕ್ಷಿಕೆಗಳನ್ನು ಒಂದೆಡೆ ವ್ಯವಸ್ಥಿತವಾಗಿ ನೀಡುವುದು ನಮ್ಮ ಉದ್ದೇಶ.
– ರಾಜವರ್ಮ ಬೈಲಂಗಡಿ
ಪ್ರಗತಿಪರ ಕೃಷಿಕ.